For Quick Alerts
  ALLOW NOTIFICATIONS  
  For Daily Alerts

  Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!

  By ಜೇಮ್ಸ್ ಮಾರ್ಟಿನ್
  |

  ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ನಿರೂಪಣೆಯ ಬಿಗ್ ಬಾಸ್ ತಮಿಳು 4ನೇ ಆವೃತ್ತಿಯ ಅಂತಿಮ ಫಲಿತಾಂಶ ಇಂದು ರಾತ್ರಿ ಹೊರ ಬರಲಿದೆ, ಸಂಜೆ 6ರಿಂದ ಫಿನಾಲೆ ಕಾರ್ಯಕ್ರಮಗಳು ಮನತಣಿಸಲಿವೆ. ಒಟ್ಟು 5 ಫೈನಲಿಸ್ಟ್‌ಗಳಿಗೆ ಇದು ಒಂದು ದೊಡ್ಡ ದಿನವಾಗಿದೆ.

  ಈ ನಡುವೆ 106 ದಿನಗಳ ನಂತರ ಬಿಗ್ ಬಾಸ್ ಮನೆಯ ಟ್ರೋಫಿಯನ್ನು ಗೆದ್ದವರು ಯಾರು ಎಂಬುದು ಸಾಮಾಜಿಕ ಜಾಲ ತಾಣಗಳಲ್ಲಿ ಬಹಿರಂಗವಾಗಿದೆ. ಪ್ರಸಕ್ತ ಸೀಸನ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ಈ ಬಾರಿ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ ಎಂಬ ಪೋಸ್ಟರ್ ಗಳು ಹರಿದಾಡುತ್ತಿವೆ. ಇದಕ್ಕೆ ಉತ್ತರ ಇಂದು ರಾತ್ರಿ ಸಿಗಲಿದೆ.

  ಈ ನಡುವೆ ಎಲ್ಲಾ ಬಿಗ್ ಬಾಸ್ ಕಾರ್ಯಕ್ರಮದಂತೆ ಅಂತಿಮ ಸುತ್ತಿನಲ್ಲಿ ಅತಿ ಹೆಚ್ಚು ವೋಟ್ ಪಡೆದ ಇಬ್ಬರು ಸ್ಪರ್ಧಿಗಳನ್ನು ವೇದಿಕೆಗೆ ಕಮಲ್ ಕರೆತರಲಿದ್ದು, ಪ್ರಶಸ್ತಿ ವಿಜೇತರನ್ನು ಘೋಷಿಸುತ್ತಾರೆ. ಜೊತೆಗೆ ಅತಿ ಹೆಚ್ಚು ವೋಟ್ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಕಮಲ್ ತಿಳಿಸಲಿದ್ದು, ಜನಪ್ರಿಯ ಸ್ಪರ್ಧಿ ಯಾರು ಎಂಬುದು ತಿಳಿದು ಬರಲಿದೆ.

  ಬಿಗ್ ಬಾಸ್ ತಮಿಳು 4 ರ ಐದು ಫೈನಲಿಸ್ಟ್‌

  ಬಿಗ್ ಬಾಸ್ ತಮಿಳು 4 ರ ಐದು ಫೈನಲಿಸ್ಟ್‌

  ಬಿಗ್ ಬಾಸ್ ತಮಿಳು 4 ರ ಐದು ಫೈನಲಿಸ್ಟ್‌ಗಳೆಂದರೆ ಆರಿ ಅರ್ಜುನ, ಬಾಲಾಜಿ ಮುರುಗದಾಸ್, ರಮ್ಯಾ ಪಾಂಡಿಯನ್, ಸೋಮ್ ಶೇಖರ್ ಮತ್ತು ರಿಯೊ ರಾಜ್. ಈ ಪೈಕಿ 2005 ರಿಂದ ತಮಿಳು ಚಿತ್ರರಂಗದಲ್ಲಿರುವ ಆರಿ ಈ ಬಾರಿ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ ಎಂಬ ಸುದ್ದಿ ಹೆಚ್ಚು ಓಡಾಡುತ್ತಿದೆ. ಜೊತೆಗೆ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಕೂಡಾ ಆರಿ ಎಂಬುದು ವಿಶೇಷ. ಆರಿಗೆ ಸಂಭಾವನೆ 28-30 ಲಕ್ಷ ರು ಇದ್ದರೆ, ಬಾಲಾಜಿಗೆ ವಾರಕ್ಕೆ 1.5 ಲಕ್ಷ ರು ನಂತೆ 23 ಲಕ್ಷ ರು ಸಿಗಲಿದೆ.

  ದಾಖಲೆಯ ಮತ ಪಡೆದ ಆರಿ ಅರ್ಜುನನ್

  ದಾಖಲೆಯ ಮತ ಪಡೆದ ಆರಿ ಅರ್ಜುನನ್

  ವರದಿಗಳ ಪ್ರಕಾರ ಬಿಗ್ ಬಾಸ್ ತಮಿಳು ಇತಿಹಾಸದಲ್ಲೇ ಆರಿ ಅರ್ಜುನನ್ ದಾಖಲೆ ಸಂಖ್ಯೆಯ ಮತಗಳನ್ನು ಪಡೆದಿದ್ದಾರೆ. ಹಲವು ವಾರಗಳ ಕಾಲ ನಾಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಗ್ರೂಪಿಸಂ ಚಟುವಟಿಕೆಯಲ್ಲಿ ತೊಡಗಿಕೊಳ್ಳದೆ ತನ್ನದೇ ಆದ ಮಾರ್ಗದಲ್ಲಿ ಫೈನಲ್ ತಲುಪಿರುವ ಆರಿ ಬಗ್ಗೆ ಕಮಲ್ ಹಾಸನ್ ಅವರು ಅನೇಕ ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವೀಕ್ಷಕರ ಮತಗಳಿಂದಲೇ ಹಲವು ವಾರ ಸೇಫ್ ಆಗಿರುವ ಆರಿಯನ್ನು ಜನರೇ ಆಯ್ಕೆ ಮಾಡಿ ಟ್ರೋಫಿಯನ್ನು ಗೆಲ್ಲುವಂತೆ ಮಾಡಿದ್ದಾರೆ ಎಂಬ ಸುದ್ದಿಯಿದೆ.

  ಗೆಲುವಿನ ಹಾದಿಯಲ್ಲಿ ಎಡವಿದ ಬಾಲಾಜಿ

  ಗೆಲುವಿನ ಹಾದಿಯಲ್ಲಿ ಎಡವಿದ ಬಾಲಾಜಿ

  ಮತ್ತೊಂದೆಡೆ, ಬಿಗ್ ಬಾಸ್ ತಮಿಳು 4 ರ ಪ್ರಥಮ ರನ್ನರ್ ಅಪ್ ಆಗಿ ಬಾಲಾಜಿ ಮುರುಗದಾಸ್ ಅವರನ್ನು ಘೋಷಿಸಲಾಗುವುದು ಎಂದು ವರದಿಗಳು ಬಂದಿವೆ. ಗೆಲುವಿನ ಹಾದಿಯಲ್ಲಿ ಸ್ವಲ್ಪದರಲ್ಲಿ ಬಾಲಾಜಿ ಎಡವಿದ್ದಾರೆ, ಅವರ ಕೋಪ ತಾಪ, ಅನಗತ್ಯ ಭಾವುಕತೆ ಎಲ್ಲವೂ ಅವರಿಗೆ ಪ್ಲಸ್ ಹಾಗೂ ಮೈನಸ್ ಅಂಶವಾಗಿವೆ. ಎರಡನೇ ರನ್ನರ್ ಆಪ್ ಆಗಿ ನಟ ರಿಯೋ ರಾಜ್ ಹೊರ ಹೊಮ್ಮಿದ್ದಾರೆ.

  ಮಿಕ್ಕಂತೆ ಫಿನಾಲೆಗೆ ಮೊದಲ ಟಿಕೆಟ್ ಪಡೆದ ಸೋಮ್ ಅವರು ನಾಲ್ಕನೇ ರನ್ನರ್ ಅಪ್ , ಸದಾ ಹಸನ್ಮುಖಿ ರಮ್ಯಾ ಮಹಿಳಾ ಸ್ಪರ್ಧಿಯಾಗಿ ಮೂರನೇ ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

  ಟ್ರೋಫಿಯ ಜೊತೆಗೆ ಆರಿಗೆ ಸಿಗಲಿದೆ 70 ಲಕ್ಷ

  ಟ್ರೋಫಿಯ ಜೊತೆಗೆ ಆರಿಗೆ ಸಿಗಲಿದೆ 70 ಲಕ್ಷ

  ಸದ್ಯದ ಟ್ರೆಂಡ್ ನಿಜವಾದರೆ ಆರಿ ಅರ್ಜುನನ್ ಅವರಿಗೆ ಬಿಗ್ ಬಾಸ್ ಸೀಸನ್ 4ರ ಟ್ರೋಫಿಯ ಜೊತೆಗೆ 50 ಲಕ್ಷ ರೂ ಪ್ರಶಸ್ತಿ ಮೊತ್ತ ಜೊತೆಗೆ 106 ದಿನ ಮನೆಯಲ್ಲಿ ಕಾಲ ಕಳೆದಿದ್ದಕ್ಕೆ ವಾರಕ್ಕೆ 2 ಲಕ್ಷ ರು ನಂತೆ 28 ಪ್ಲಸ್ ಲಕ್ಷ ಸಿಗಲಿದೆ. ಒಟ್ಟಾರೆ 70 ರಿಂದ 80 ಲಕ್ಷ ರು ಬಹುಮಾನದ ಮೊತ್ತ ಗಳಿಸುವ ಸಾಧ್ಯತೆಯಿದ್ದು, ಅತಿ ದೊಡ್ಡ ಮೊತ್ತ ಗೆದ್ದ ಸ್ಪರ್ಧಿ ಎನಿಸಿಕೊಳ್ಳಲಿದ್ದಾರೆ.

  ಫಿನಾಲೆಗೆ ಮುನ್ನ ಮನೆ ತೊರೆದಿದ್ದ ಗ್ಯಾಬ್ರಿಯೆಲ್ಲಾ

  ಫಿನಾಲೆಗೆ ಮುನ್ನ ಮನೆ ತೊರೆದಿದ್ದ ಗ್ಯಾಬ್ರಿಯೆಲ್ಲಾ

  ಫಿನಾಲೆಗೆ ಮುನ್ನ ಫೈನಲ್ 5ರಲ್ಲಿದ್ದ ಸ್ಪರ್ಧಿ ಗ್ಯಾಬ್ರಿಯೆಲ್ಲಾ ಚಾರ್ಲ್ಟನ್ ಅವರು 102 ದಿನಗಳ ನಂತರ ಮನೆಗೆ ಬಂದ 5 ಲಕ್ಷ ಮೊತ್ತದ ಸೂಟ್ ಕೇಸ್ ಪಡೆದು ಮನೆಯಿಂದ ನಿರ್ಗಮಿಸಿ ಎಲ್ಲರನ್ನು ಅಚ್ಚರಿಗೆ ದೂಡಿದ್ದರು. ಸದಾಕಾಲ ಬಾಲಾಜಿ, ಸನಂ ಶೆಟ್ಟಿ, ಅನಿತಾ ಸಂಪತ್ ಜೊತೆ ವಾಕ್ಸಮರ ನಡೆಸುತ್ತಾ ಬಂದ ಆರಿ ಅವರು ಮನೆಯಲ್ಲಿ ಎಲ್ಲರಿಗೂ ನೀತಿ ಪಾಠದ ಬೋಧನೆ ಮಾಡುವುದರಲ್ಲೇ ಕಾಲ ಕಳೆದಿದ್ದರು. ಆದರೆ, ಜನಕ್ಕೆ ಆರಿ ನೀತಿ ಪಾಠ, ತಾಳ್ಮೆಯಿಂದ ಸಮಯ ಸಾಧಕನಾಗಿ ಫಿನಾಲೆಗೆ ಬಂದಿದ್ದು ಮೆಚ್ಚುಗೆಯಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

  English summary
  Bigg Boss Tamil 4: Highest paid Aari Arjuna set to lify Trophy? It is said that Kamal Haasan will be announcing the massive votes while declaring him as the title winner of the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X