ಬಿಗ್ ಬಾಸ್‌ನಲ್ಲಿ ಈ ಬಾರಿ ದಶಾವತಾರ ; ಅಖಾಡಕ್ಕಿಳಿಯುವ ಆರು ಸ್ಫರ್ಧಿಗಳು ಇವರೇನಾ ?
ಇನ್ನೇನು ಕೆಲವೇ ಕೆಲ ದಿನಗಳು ಮಾತ್ರ ಬಾಕಿ. ಎಲ್ಲಾ ಭಾಷೆಯಲ್ಲಿ ಹಲವರ ನೆಚ್ಚಿನ ''ಬಿಗ್ ಬಾಸ್'' ಕಾರ್ಯಕ್ರಮ ಶುರುವಾಗಲಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡದಲ್ಲಿ ಸುದೀಪ್.. ಹಿಂದಿಯಲ್ಲಿ ಸಲ್ಮಾನ್ ಖಾನ್.. ತೆಲುಗಿನಲ್ಲಿ ನಾಗಾರ್ಜುನ ಮತ್ತು ಮಲಯಾಳಂನಲ್ಲಿ ಮೋಹನ್ ಲಾಲ್ ಸಾರಥ್ಯದಲ್ಲಿ ಮೂಡಿ ಬರುವ ಈ ಶೋದ ಸುತ್ತಮುತ್ತ ಹಲವು ಸುದ್ದಿಗಳು ಈಗಾಗಲೇ ಗಿರಕಿ ಹೊಡೆಯಲು ಶುರುವಾಗಿವೆ.
ಯಾರೆಲ್ಲ ಈ ಬಾರಿ ''ಬಿಗ್ ಬಾಸ್'' ಮನೆಯನ್ನು ಪ್ರವೇಶಿಸಲಿದ್ದಾರೆ ಎನ್ನುವ ಕುತೂಹಲ ಕೂಡ ಒಂದು ವರ್ಗದ ಪ್ರೇಕ್ಷಕರನ್ನು ಕಾಡಲು ಶುರುವಾಗಿದೆ. ಆ ಭಾಷೆ ಈ ಭಾಷೆ ಅಲ್ಲ. ಎಲ್ಲಾ ಭಾಷೆಯಲ್ಲಿ ಕೂಡ ಈಗಾಗಲೇ ಹಲವರ ಹೆಸರುಗಳು ಸಂಭಾವ್ಯ ಸ್ಫರ್ಧಿಗಳ ಲಿಸ್ಟ್‌ನಲ್ಲಿ ಕಾಣಿಸುತ್ತಿವೆ.

ಹೀಗೆ ಕಾಣಿಸಿಕೊಂಡಿರುವ.. ಕೇಳಿ ಬರುತ್ತಿರುವ ಹೆಸರುಗಳಲ್ಲಿ ಯಾರು ನಿಜಕ್ಕೂ ''ಬಿಗ್ ಬಾಸ್'' ಮನೆಗೆ ಹೋಗುತ್ತಾರೆ ಎನ್ನುವುದಕ್ಕೆ ಉತ್ತರ ಕಾರ್ಯಕ್ರಮ ಶುರುವಾದ ದಿನದಂದೇ ಅಧಿಕೃತವಾಗಿ ಸಿಗಲಿದೆಯಾದರೂ ಸದ್ಯ ತೆಲುಗಿನಲ್ಲಿ ''ಬಿಗ್ ಬಾಸ್'' ಸಂಭ್ರಮಕ್ಕೆ ಮುನ್ನುಡಿ ಬರೆಯಲಾಗಿದೆ. ಬಾರಿ ಕೂಡ ನಿರೂಪಣೆಯ ಜವಾಬ್ಧಾರಿಯನ್ನು ನಾಗಾರ್ಜುನಗೆ ವಹಿಸಲಾಗಿದೆ. ಈ ಬಾರಿ ಈ ಸ್ಫರ್ಧೆಯಲ್ಲಿ ಯಾರೆಲ್ಲಾ ಭಾಗವಹಿಸಬಹುದು ಎನ್ನುವ ಚರ್ಚೆ ಕೂಡ ಹೈದರಾಬಾದ್ ನಲ್ಲಿ ಶುರುವಾಗಿದೆ.
ಬಿಗ್ ಬಾಸ್ ದಶಾವತಾರ
ಬಿಗ್ ಬಾಸ್ ಕಾರ್ಯಕ್ರಮದ ಹತ್ತನೇ ಸೀಸನ್‌ನ ಹೊಚ್ಚ ಹೊಸ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿಯ ಥೀಮ್ ಕೂಡ ಅನಾವರಣ ಮಾಡಲಾಗಿದೆ. ಹತ್ತನೇ ಸೀಸನ್ ಆದ ಹಿನ್ನೆಲೆ ''ದಶಾವತಾರ'' ಎಂಬ ಥೀಮ್‌ನ್ನು ಈ ಬಾರಿ ವಿನ್ಯಾಸ ಮಾಡಲಾಗಿದ್ದು, ಆಟದಲ್ಲಿ ಸವಾಲಿಲ್ಲ, ಆಟವೇ ಸವಾಲು ಎಂಬ ಘೋಷವಾಕ್ಯ ಈ ಬಾರಿಯ ''ಬಿಗ್ ಬಾಸ್''ಗೆ ಇದೆ.
ಸಂಭಾವ್ಯ ಸ್ಫರ್ಧಿಗಳು
ಆಗಲೇ ಹೇಳಿದಂತೆ ಕಾರ್ಯಕ್ರಮ ಇನ್ನು ಶುರುವಾಗಿಲ್ಲ. ಆದರೆ, ಎಂದಿನ ಸಂಪ್ರದಾಯದಂತೆ ಸ್ಫರ್ಧಿಗಳ ಕುರಿತು ಚರ್ಚೆ ಶುರುವಾಗಿದೆ. ಆ ಪ್ರಕಾರ ನಾಲ್ಕೈದು ಜನರ ಹೆಸರನ್ನು ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಡಲಾಗಿದೆ. ಅವರು ಯಾರು..? ಎಂದು ತಿಳಿಯಲು ಮುಂದೆ ಓದಿ.
ವರ್ಷಾ
ತೆಲುಗು ಕಿರುತೆರೆಯ ಚಿರಪರಿಚಿತ ಮುಖ ವರ್ಷಾ ಅವರಿಗೆ ಈ ಬಾರಿ ''ಬಿಗ್ ಬಾಸ್'' ಮಣೆ ಹಾಕಿದೆ ಎಂಬ ಸುದ್ದಿ ಸದ್ಯ ಹಬ್ಬಿದೆ. ಖ್ಯಾತ ಕಾರ್ಯಕ್ರಮ ''ಜಬರದಸ್ತ್'' ಮೂಲಕ ಆಂಧ್ರದ ಮನೆ ಮತ್ತು ಮನ ತಲುಪಿದ ವರ್ಷಾ ಅವರದ್ದು ನಗಿಸುವುದರಲ್ಲಿ ಎತ್ತಿದ ಕೈ. ಸೋಶಿಯಲ್ ಮೀಡಿಯಾದಲ್ಲಿ ಅಪಾರವಾದ ಅಭಿಮಾನಿಗಳು ಇವರಿಗಿದ್ಧಾರೆ.

ಹರಿತಾ
ತೆಲುಗು ಕಿರುತೆರೆಯ ಖ್ಯಾತ ಹಿರಿಯ ನಟಿ ಹರಿತಾ ಅವರ ಹೆಸರು ಕೂಡ ಮುಂಚೂಣಿಯಲ್ಲಿದೆ. ''ರಾಧಾ ಮಧು''.. ''ಮುದ್ದ ಮಂದಾರಂ''.. ಮೂಲಕ ತೆಲುಗು ಪ್ರೇಕ್ಷಕರ ಹೃದಯ ಗೆದ್ದ ಹರಿಯಾ ಅತ್ತೆ ಮತ್ತು ತಾಯಿ ಪಾತ್ರಗಳಿಗೆ ಹೆಸರುವಾಸಿ.
ದೀಪಿಕಾ ಪಿಲ್ಲೆ
ಸೋಶಿಯಲ್ ಮೀಡಿಯಾ ಸ್ಟಾರ್, ಮಾಡೆಲ್ ಮತ್ತು ಟಿವಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ದೀಪಿಕಾ ಪಿಲ್ಲೆ ಕೂಡ ಈ ಬಾರಿ ''ಬಿಗ್ ಬಾಸ್'' ಮನೆಗೆ ಬರುತ್ತಾರೆ ಎನ್ನುವ ಸುದ್ದಿ ಇದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಇದ್ದು, ಸೀಸನ್ 10ರ ಪ್ರಮುಖ ಗ್ಲಾಮರ್ ಅಟ್ರಾಕ್ಷನ್ ಇವರಗಾಲಿದ್ದಾರೆ ಎನ್ನುವುದು ತೆಲುಗು ಕಿರುತೆರೆಯ ಪ್ರೇಮಿಗಳ ಅಭಿಪ್ರಾಯ.
ಉಪ್ಪಲ್ ಬಾಲು
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮತ್ತು ಟಿಕ್‌ಟಾಕ್ ಮೂಲಕ ಬೆಳಕಿಗೆ ಬಂದ ಉಪ್ಪಲ್ ಬಾಲು ಕೂಡ ಈ ಬಾರಿ ''ಬಿಗ್ ಬಾಸ್'' ಸ್ಫರ್ಧಿ ಎನ್ನುವ ಮಾತು ಸದ್ಯ ಹೈದರಾಬಾದ್ ನಲ್ಲಿ ಕೇಳಿ ಬರುತ್ತಿದೆ. ತಮ್ಮ ಡ್ಯಾನ್ಸ್ ಸ್ಟೆಪ್ಸ್, ಮ್ಯಾನರಿಸಂ ಮತ್ತು ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಇವರು ಟ್ರೋಲ್ ಕೂಡ ಆಗಿದ್ಧಾರೆ. ಟ್ರೆಂಡ್ ಕೂಡ ಆಗಿದ್ಧಾರೆ.
ಕಲ್ಯಾಣ್
ಆಂಧ್ರದ ಖ್ಯಾತ ಯೂಟ್ಯೂಬರ್ ಕಲ್ಯಾಣ್ ಹೆಸರು ಕೂಡ ''ಬಿಗ್ ಬಾಸ್'' ಮನೆಯ ಸುತ್ತ ಕೇಳಿ ಬರುತ್ತಿದೆ. ವಿಶೇಷ ಅಂದರೆ ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿರುವ ಇವರಿಗೆ ಮಹಿಳಾ ಅಭಿಮಾನಿಗಳ ದೊಡ್ಡ ದಂಡೇ ಇದೆ. ''ಬಿಗ್ ಬಾಸ್'' ಇವರ ವೃತ್ತಿ ಬದುಕಿಗೆ ತಿರುವು ನೀಡುತ್ತೆ ಎನ್ನುವ ವಿಶ್ವಾಸ ಹಲವರದ್ದು.
ಪಲ್ಲವಿ
ತೆಲುಗಿನಲ್ಲಿ ಒಂದಾದ ಮೇಲೊಂದು ಧಾರಾವಾಹಿಗಳನ್ನು ಮಾಡುವ ಮೂಲಕ, ಹಲವರ ಹೃದಯ ಗೆದ್ದ ಪಲ್ಲವಿ ಅವರ ಹೆಸರು ಕೂಡ ''ಬಿಗ್ ಬಾಸ್'' ಸಂಭಾವ್ಯ ಸ್ಫರ್ಧಿಗಳ ಲಿಸ್ಟ್‌ನಲ್ಲಿದೆ.
ಫೋಟೊಗಳು ವೈರಲ್
ತೆಲುಗು ''ಬಿಗ್ ಬಾಸ್'' ಮನೆ ನಿರ್ಮಾಣದ ಕೆಲಸ ಈಗಾಗಲೇ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಶೂಟಿಂಗ್ ಸೆಟ್‌ನ ಕೆಲ ಫೋಟೊಗಳು ಹರಿದಾಡುತ್ತಿದ್ದು, ಆಗಸ್ಟ್ ಕೊನೆಯಲ್ಲಿ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಈ ಶೋ ಶುರುವಾಗುವ ಸಾಧ್ಯತೆ ಇದೆ.
ಎಂಡೆಮೋಲ್ ಶೈನ್ ಇಂಡಿಯಾ ಈ ಕಾರ್ಯಕ್ರಮವನ್ನು ನಿರ್ಮಾಣ ಮಾಡುತ್ತಿದ್ದು ಜಿಯೋ ಹಾಟ್‌ಸ್ಟಾರ್ ಮತ್ತು ಸ್ಟಾರ್ ಮಾ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.
''ಬಿಗ್ ಬಾಸ್'' ತೆಲುಗು ಕಾರ್ಯಕ್ರಮದ 9 ಸೀಸನ್ ವಿಜೇತರ ಪಟ್ಟಿ
| ಸೀಸನ್ | ವರ್ಷ | ವಿಜೇತರು | ರನ್ನರ್-ಅಪ್ | ಬಹುಮಾನ |
|---|---|---|---|---|
| 1 | 2017 | ಶಿವ ಬಾಲಾಜಿ | ಆದರ್ಶ ಬಾಲಕೃಷ್ಣ | 50 ಲಕ್ಷ ರೂ. |
| 2 | 2018 | ಕೌಶಲ್ ಮಂದ | ಗೀತಾ ಮಾಧುರಿ | 50 ಲಕ್ಷ ರೂ. |
| 3 | 2019 | ರಾಹುಲ್ ಸಿಪ್ಲಿಗುಂಜ್ | ಶ್ರೀಮುಖಿ | 50 ಲಕ್ಷ ರೂ. |
| 4 | 2020 | ಅಭಿಜಿತ್ | ಅಖಿಲ್ ಸಾರ್ಥಕ್ | 25 ಲಕ್ಷ ರೂ. |
| 5 | 2021 | ವಿಜೆ ಸನ್ನಿ | ಷಣ್ಮುಖ್ ಜಸ್ವಂತ್ | 50 ಲಕ್ಷ ರೂ. |
| 6 | 2022 | ಎಲ್.ವಿ. ರೇವಂತ್ | ಶ್ರೀಹಾನ್ ಶೇಖ್ | 10 ಲಕ್ಷ ರೂ. |
| 7 | 2023 | ಪಲ್ಲವಿ ಪ್ರಶಾಂತ್ | ಅಮರ್ದೀಪ್ ಚೌಧರಿ | 35 ಲಕ್ಷ ರೂ. |
| 8 | 2024 | ನಿಖಿಲ್ ಮಲಿಯಕ್ಕಲ್ | ಗೌತಮ್ ಕೃಷ್ಣ | 55 ಲಕ್ಷ ರೂ. |
| 9 | 2025 | ಕಲ್ಯಾಣ್ ಪಡಾಲ | ತನುಜ | 35 ಲಕ್ಷ ರೂ. |


Click it and Unblock the Notifications