For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ ತೆಲುಗು-3'ಗಾಗಿ ಜೂ.ಎನ್.ಟಿ.ಆರ್ ಗೆ ಇಷ್ಟೊಂದು ಸಂಭಾವನೆನಾ.?

  |

  ತೆಲುಗು ಕಿರುತೆರೆಯಲ್ಲಿ 'ಬಿಗ್ ಬಾಸ್' ಕಾರ್ಯಕ್ರಮದ 2 ಸೀಸನ್ ಗಳು ಈಗಾಗಲೇ ಪ್ರಸಾರವಾಗಿವೆ. ಮೊದಲನೇ ಸೀಸನ್ ನ ಜೂ.ಎನ್.ಟಿ.ಆರ್ ನಡೆಸಿಕೊಟ್ಟಿದ್ದರೆ, ಎರಡನೇ ಆವೃತ್ತಿಗೆ ನಾನಿ ಹೋಸ್ಟ್ ಆಗಿದ್ದರು.

  ಸದ್ಯದಲ್ಲೇ 'ಬಿಗ್ ಬಾಸ್ ತೆಲುಗು' ಮೂರನೇ ಆವೃತ್ತಿಯ ಪ್ರೀ-ಪ್ರೊಡಕ್ಷನ್ ಕಾರ್ಯಗಳಿಗೆ ಚಾಲನೆ ಸಿಗಲಿದ್ದು, ನಿರೂಪಕರ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಿದೆ.

  ವರದಿಗಳ ಪ್ರಕಾರ ಸ್ಟಾರ್ ಮಾ ವಾಹಿನಿ 'ಬಿಗ್ ಬಾಸ್ ತೆಲುಗು-3'ನೇ ಸೀಸನ್ ಗೆ ಜೂ.ಎನ್.ಟಿ.ಆರ್ ರನ್ನೇ ನಿರೂಪಕರನ್ನಾಗಿ ಕರೆತರಲು ನಿರ್ಧರಿಸಿದೆ. ಇದಕ್ಕಾಗಿ ಬೃಹತ್ ಸಂಭಾವನೆಯನ್ನೇ ಕೋಟ್ ಮಾಡಿದೆ. ಜೂ.ಎನ್.ಟಿ.ಆರ್ ಗಾಗಿ 'ಬಿಗ್ ಬಾಸ್' ಟೀಮ್ ಕೊಡಲು ಮುಂದಾಗಿರುವ ಸಂಭಾವನೆ ಎಷ್ಟು ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ.. ನಿಮಗೆ ಗೊತ್ತಾಗುತ್ತದೆ..

  ಜೂ.ಎನ್.ಟಿ.ಆರ್ ಗೆ ಆಫರ್ ಮಾಡಿರುವ ಸಂಭಾವನೆ ಎಷ್ಟು.?

  ಜೂ.ಎನ್.ಟಿ.ಆರ್ ಗೆ ಆಫರ್ ಮಾಡಿರುವ ಸಂಭಾವನೆ ಎಷ್ಟು.?

  ವರದಿಗಳ ಪ್ರಕಾರ ಜೂ.ಎನ್.ಟಿ.ಆರ್ ಗೆ ದೊಡ್ಡ ಮೊತ್ತವನ್ನೇ ಸಂಭಾವನೆ ರೂಪದಲ್ಲಿ ನೀಡಲು ಸ್ಟಾರ್ ಮಾ ವಾಹಿನಿ ಸಜ್ಜಾಗಿದೆ. 'ಬಿಗ್ ಬಾಸ್' ಮೇಕರ್ಸ್ ಜೂ.ಎನ್.ಟಿ.ಆರ್ ಗೆ 20 ಕೋಟಿ ರೂಪಾಯಿ ನೀಡಲು ಮನಸ್ಸು ಮಾಡಿದ್ದಾರಂತೆ.

  ತೆಲುಗು 'ಬಿಗ್ ಬಾಸ್'ನಲ್ಲಿ ಕನ್ನಡ ಪ್ರೇಮ ಮೆರೆದ ಜೂನಿಯರ್ NTR..!

  6 ಕೋಟಿ ಹೆಚ್ಚು

  6 ಕೋಟಿ ಹೆಚ್ಚು

  'ಬಿಗ್ ಬಾಸ್' ತೆಲುಗು ಮೊದಲ ಸೀಸನ್ ನಾ ಹೋಸ್ಟ್ ಮಾಡಲು ಜೂ.ಎನ್.ಟಿ.ಆರ್ ಬರೋಬ್ಬರಿ 14 ಕೋಟಿ ಸಂಭಾವನೆ ಪಡೆದಿದ್ದರು. ಇದೀಗ ಮೂರನೇ ಸೀಸನ್ ಗೆ ಜೂ.ಎನ್.ಟಿ.ಆರ್ 6 ಕೋಟಿ ಹೆಚ್ಚಿಗೆ ಪಡೆಯುವ ಸಾಧ್ಯತೆ ಇದೆ.

  ತೆಲುಗು 'ಬಿಗ್ ಬಾಸ್'ಗೆ ಯಂಗ್ ಟೈಗರ್ ಸಾರಥಿ

  ಮೊದಲ ಸೀಸನ್ ಸೂಪರ್ ಹಿಟ್

  ಮೊದಲ ಸೀಸನ್ ಸೂಪರ್ ಹಿಟ್

  'ಬಿಗ್ ಬಾಸ್ ತೆಲುಗು' ಮೊದಲ ಸೀಸನ್ ಜೂ.ಎನ್.ಟಿ.ಆರ್ ನಿರೂಪಣೆಯಿಂದ ಸೂಪರ್ ಡೂಪರ್ ಹಿಟ್ ಆಗಿತ್ತು. ಆದರೆ ಎರಡನೇ ಆವೃತ್ತಿಯಲ್ಲಿ ಜೂ.ಎನ್.ಟಿ.ಆರ್ ಇಲ್ಲದೆ ಎಲ್ಲವೂ ಪೇಲವಗೊಂಡಿತ್ತು. ಹೀಗಾಗಿ ಮೂರನೇ ಸೀಸನ್ ಗೆ ಜೂ.ಎನ್.ಟಿ.ಆರ್ ಬೆಸ್ಟ್ ಎಂಬುದು 'ಬಿಗ್ ಬಾಸ್' ಮೇಕರ್ಸ್ ನಿರ್ಧಾರ.

  'ತೆಲುಗು ಬಿಗ್ ಬಾಸ್' ಫೈನಲ್ ಗೆ ಲಗ್ಗೆಯಿಟ್ಟ ಕನ್ನಡತಿ ಹರಿತೇಜ

  ಜೂ.ಎನ್.ಟಿ.ಆರ್ ಸಿಕ್ಕಾಪಟ್ಟೆ ಬಿಜಿ

  ಜೂ.ಎನ್.ಟಿ.ಆರ್ ಸಿಕ್ಕಾಪಟ್ಟೆ ಬಿಜಿ

  ಜೂ.ಎನ್.ಟಿ.ಆರ್ ಸದ್ಯ ರಾಜಮೌಳಿ ನಿರ್ದೇಶನದ RRR ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ 'ಬಿಗ್ ಬಾಸ್' ಕಡೆಯಿಂದ ಬಂದಿರುವ ಆಫರ್ ನಾ ಜೂ.ಎನ್.ಟಿ.ಆರ್ ಒಪ್ಪಿಕೊಳ್ಳುತ್ತಾರಾ ನೋಡಬೇಕು.

  English summary
  Bigg Boss Telugu 3: Jr NTR has been offered whopping amount as remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X