For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ 4: ವಿಜೇತ ಸ್ಪರ್ಧಿಗಿಂತ ಹೆಚ್ಚು ಗಳಿಸಿದ್ದಾನೆ ಈ ಸ್ಪರ್ಧಿ

  By ಜೇಮ್ಸ್ ಮಾರ್ಟಿನ್
  |

  ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ ಬಿಗ್ ಬಾಸ್ ತೆಲುಗು 4ನೇ ಸೀಸನ್ ಇನ್ನೇನು ಫಿನಾಲೆ ಹಂತದಲ್ಲಿದೆ. ಈ ನಡುವೆ ಟಾಪ್ ಸ್ಪರ್ಧಿಗಳ ಗಳಿಕೆ ಮೊತ್ತದ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ನಡುವೆ ಟಾಪ್ 5ರಲ್ಲಿರುವ ಸ್ಪರ್ಧಿಯೊಬ್ಬ ಈಗಾಗಲೇ ಪ್ರಶಸ್ತಿ ಮೊತ್ತಕ್ಕಿಂತಲೂ ಅಧಿಕ ಗಳಿಕೆ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಬಹಿರಂಗಗೊಂಡಿದೆ.

  ಇತ್ತೀಚೆಗೆ ಮನೆಯಿಂದ ಔಟ್ ಆದ ಗುಜರಾತ್ ಮೂಲದ ತೆಲುಗು ನಟಿ ಮೋನಲ್ ಗಜ್ಜರ್ ಹಾಗೂ ಫಿನಾಲೆಗೆ ಆಯ್ಕೆಯಾದ ಲೈಫ್ ಇಸ್ ಬ್ಯೂಟಿಫುಲ್ ಖ್ಯಾತಿ ನಟ ಅಭಿಜಿತ್ ಇಬ್ಬರನ್ನು ಅತ್ಯಂತ ಜನಪ್ರಿಯ ಸ್ಪರ್ಧಿಗಳು ಎಂದು ಕೆಲವು ಘೋಷಿಸಿದರೆ, ಮತ್ತೆ ಕೆಲವರು ಅಭಿಜಿತ್ ಅಥವಾ ಸೊಹೆಲ್ ಇಬ್ಬರಲ್ಲಿ ಒಬ್ಬರು ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಬೆಟ್ ಕಟ್ಟುತ್ತಿದ್ದಾರೆ. ಈ ನಡುವೆ ಮೋನಲ್ ಗಜ್ಜರ್ ಗಳಿಸಿದ ಮೊತ್ತದ ಬಗ್ಗೆ ವರದಿ ಬಂದ ಬಳಿಕ ಮತ್ತೊಂದು ಹುಬ್ಬೇರಿಸುವಂಥ ವಿಷಯ ಬಹಿರಂಗವಾಗಿದೆ.

  ತೆಲುಗು ಬಿಗ್‌ಬಾಸ್-4 ಆರಂಭ: ಇಲ್ಲಿದೆ ಸ್ಪರ್ಧಿಗಳ ವಿವರತೆಲುಗು ಬಿಗ್‌ಬಾಸ್-4 ಆರಂಭ: ಇಲ್ಲಿದೆ ಸ್ಪರ್ಧಿಗಳ ವಿವರ

  ತೆಲುಗು ಬಿಗ್ ಬಾಸ್ ಆರಕ್ಕೇರದ ಮೂರಕ್ಕಿಳಿದ ಸ್ಥಿತಿಯಲ್ಲಿದ್ದು, ಮೊದಲ ಆವೃತ್ತಿಯಲ್ಲಿ ಜ್ಯೂ. ಎನ್ಟಿಆರ್, ನಾನಿ ನಿರೂಪಕರಾಗಿದ್ದರು. ಮೂರು ಹಾಗೂ ನಾಲ್ಕನೇ ಆವೃತ್ತಿಯಲ್ಲಿ ಅಕ್ಕಿನೇನಿ ನಾಗಾರ್ಜುನ ನಿರೂಪಕರಾಗಿದ್ದಾರೆ. ರಮ್ಯಾಕೃಷ್ಣ, ಸಮಂತಾ ಗೆಸ್ಟ್ ಆಕರಿಂಗ್ ಮಾಡಿ ಮಿಂಚಿದ್ದಾರೆ ಕೂಡಾ.. 4ನೇ ಆವೃತ್ತಿ ಫಿನಾಲೆಗೆ ಸಜ್ಜಾಗಿದ್ದು, ಕೊವಿಡ್ 19 ನಡುವೆ ಯಶಸ್ವಿಯಾಗಿ ರಿಯಾಲಿಟಿ ಶೋ ಪೂರೈಸಿದ ನೆಮ್ಮದಿ ನಾರ್ಗಾಜುನ ಹೊಂದಲಿದ್ದಾರೆ.

  ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಯಾರಿರಲಿದ್ದಾರೆ? ಇಲ್ಲಿದೆ ಸಂಭಾವ್ಯ ಪಟ್ಟಿಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಯಾರಿರಲಿದ್ದಾರೆ? ಇಲ್ಲಿದೆ ಸಂಭಾವ್ಯ ಪಟ್ಟಿ

  ಆರಂಭದಿಂದಲೂ ಡಲ್ ಹೊಡೆಯುತ್ತಿದ್ದ ಬಿಗ್ ಬಾಸ್

  ಆರಂಭದಿಂದಲೂ ಡಲ್ ಹೊಡೆಯುತ್ತಿದ್ದ ಬಿಗ್ ಬಾಸ್

  ಆರಂಭದಿಂದಲೂ ಡಲ್ ಹೊಡೆಯುತ್ತಿದ್ದ ಬಿಗ್ ಬಾಸ್ 4 ಸೀಸನ್ ಕೊನೆ ಹಂತದಲ್ಲಿ ಕುತೂಹಲ ಮೂಡಿಸಿದೆ.ಹೈದರಾಬಾರಿನಲ್ಲಿ ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋದಲ್ಲಿ ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿದ್ದ ಕಿಚ್ಚ ಸುದೀಪರನ್ನು ಬಿಗ್ ಬಾಸ್ ವೇದಿಕೆಗೆ ಕರೆತರುವ ಐಡಿಯಾ ಕ್ಲಿಕ್ ಆಗಿದ್ದು, ಟಿ ಆರ್ ಪಿ ಏರಿಕೆಗೆ ಕಾರಣವಾಗಿದೆ. ಈಗ ಕೊನೆ ಕೆಲ ದಿನಗಳಲ್ಲಿ ಸ್ಪರ್ಧಿಗಳ ಜರ್ನಿ ನೆನಪಿಸಲಾಗುತ್ತಿದೆ. ಹಳೆ ಸೀಸನ್ ನ ಜನಪ್ರಿಯ ಸ್ಪರ್ಧಿಗಳಾದ ಹರಿತೇಜ, ಶ್ರೀಮುಖಿ, ಅಲಿ, ಗೀತಾ ಮಾಧುರಿ ಕಾಣಿಸಿಕೊಂಡು ಸ್ಪರ್ಧಿಗಳನ್ನು ಚೆನ್ನಾಗಿ ಕೆಣಕಿದ್ದು, ಮತ್ತೆ ಪ್ರೇಕ್ಷಕರನ್ನು ಸೆಳೆದಿದೆ.

  ಬಿಗ್ ಬಾಸ್ ಸ್ಪರ್ಧಿ ಮೋನಲ್ ಗಜ್ಜರ್ ಸಂಭಾವನೆ ಎಷ್ಟು?

  ಬಿಗ್ ಬಾಸ್ ಸ್ಪರ್ಧಿ ಮೋನಲ್ ಗಜ್ಜರ್ ಸಂಭಾವನೆ ಎಷ್ಟು?

  ಬಿಗ್ ಬಾಸ್ ಸ್ಪರ್ಧಿ ಮೋನಲ್ ಗಜ್ಜರ್ ಸಂಭಾವನೆ ಎಷ್ಟು? ಎಂಬ ಮಾಹಿತಿ ಕೆಲ ದಿನಗಳ ಹಿಂದೆ ಬಹಿರಂಗವಾಗಿದ್ದು, ಸಾಕಷ್ಟು ಚರ್ಚೆಗೀಡು ಮಾಡಿದೆ. ಬಿಗ್ ಬಾಸ್ ಮನೆಯಲ್ಲಿ 14 ವಾರ ಕಳೆದ ಮೋನಲ್ ಅವರು ಟಾಪ್ 5 ಸ್ಪರ್ಧಿಗಳಿಗೇನು ಕಡಿಮೆ ಇಲ್ಲದಂಥ ಮೊತ್ತವನ್ನು ತಮ್ಮ ಖಾತೆಗೆ ಪಡೆದುಕೊಂಡಿದ್ದಾರಂತೆ. ವಾರದ ಲೆಕ್ಕದಲ್ಲಿ ಪೇಮೆಂಟ್ ಆಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಂತೆ, ವಾರಕ್ಕೆ ಸುಮಾರು 3.5 ಲಕ್ಷ ರು ಪ್ಲಸ್ ಮೋನಲ್‌ಗೆ ದಕ್ಕಿದೆ. ಅದರಂತೆ ಸುಮಾರು 50 ಲಕ್ಷ ರು ನಷ್ಟು ಪಡೆದಿರುವ ಮೋನಲ್ ಅವರು ಬಿಗ್ ಬಾಸ್ ವಿಜೇತ ಸ್ಪರ್ಧಿಯಷ್ಟೇ ಮೊತ್ತ ಗಳಿಸಿದ್ದಾರೆ ಜೊತೆಗೆ ಅಭಿಮಾನಿ ವರ್ಗವನ್ನು ಸಂಪಾದಿಸಿದ್ದಾರೆ.

  ತೆಲುಗು ಬಿಗ್‌ಬಾಸ್ ವೇದಿಕೆ ಮೇಲೆ ಕನ್ನಡ ಮಾತನಾಡಿದ ಸುದೀಪ್ತೆಲುಗು ಬಿಗ್‌ಬಾಸ್ ವೇದಿಕೆ ಮೇಲೆ ಕನ್ನಡ ಮಾತನಾಡಿದ ಸುದೀಪ್

  ವಿಜೇತರಿಗೂ ಸಿಗದಷ್ಟು ಮೊತ್ತ ಗಳಿಸಿದ ಸ್ಪರ್ಧಿ

  ವಿಜೇತರಿಗೂ ಸಿಗದಷ್ಟು ಮೊತ್ತ ಗಳಿಸಿದ ಸ್ಪರ್ಧಿ

  ಬಿಗ್ ಬಾಸ್ 4 ವಿಜೇತರಿಗೂ ಸಿಗದಷ್ಟು ಮೊತ್ತ ಗಳಿಸಿದ ಸ್ಪರ್ಧಿ ಎಂದರೆ ಅಭಿಜಿತ್. ಮನೆಯಲ್ಲಿ ಕೂಲ್ ಸ್ಪರ್ಧಿಯೆಂದೇ ಜನಪ್ರಿಯವಾಗಿರುವ ಅಭಿಜಿತ್ ವಾರವೊಂದಕ್ಕೆ 4 ಲಕ್ಷ ಕ್ಕೂ ಅಧಿಕ ಮೊತ್ತ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 15 ವಾರದಲ್ಲಿರುವ ಅಭಿಜಿತ್ ಸುಮಾರು 60 ಲಕ್ಷ ರು ಪಡೆದುಕೊಳ್ಳುವುದು ಖಚಿತವಾಗಿದೆ. ಬಿಗ್ ಬಾಸ್ ತೆಲುಗು 4ರ ಪ್ರಶಸ್ತಿ ಮೊತ್ತವೇ 50 ಲಕ್ಷ ರು ಇದೆ. ಹೀಗಾಗಿ ವಿಜೇತರಿಗಿಂತ ಅಭಿಜಿತ್ ಹೆಚ್ಚು ಗಳಿಸಿದ್ದಾಗಿದೆ. ಜೊತೆಗೆ ಒಂದು ವೇಳೆ ಬಿಗ್ ಬಾಸ್ ಟ್ರೋಫಿ ಗೆದ್ದರೆ 1 ಕೋಟಿ ಜಾಕ್ ಪಾಟ್ ಹೊಡೆದಂತಾಗುತ್ತದೆ.

  ಫಿನಾಲೆಗೆ ಆಯ್ಕೆಯಾದ ಐವರು ಸ್ಪರ್ಧಿಗಳ್ಯಾರು

  ಫಿನಾಲೆಗೆ ಆಯ್ಕೆಯಾದ ಐವರು ಸ್ಪರ್ಧಿಗಳ್ಯಾರು

  ಕೊವಿಡ್ 19 ಸಾಂಕ್ರಾಮಿಕದ ನಡುವೆ ಬಿಗ್ ಬಾಸ್ 4 ಆವೃತ್ತಿ ಆಯೋಜನೆಗೊಂಡು ಗ್ರ್ಯಾಂಡ್ ಫಿನಾಲೆ ಹಂತ ತಲುಪಿದೆ. ಅಂತಿಮ ಹಂತದಲ್ಲಿ ಅಖಿಲ್ ಸಾರ್ಥಕ್, ಸೈಯದ್ ಸೊಹೆಲ್, ಅಭಿಜಿತ್ ದುದ್ದಲ, ಅರಿಯನಾ ಗ್ಲೋರಿ ಹಾಗೂ ''ದೇತ್ತಡಿ'' ಹಾರಿಕಾ ಇದ್ದಾರೆ. ಸಾಮಾಜಿಕ ಜಾಲ ತಾಣಗಳ ಫ್ಯಾನ್ಸ್ ಅಭಿಮತದಂತೆ ಅಖಿಲ್ ಅಥವಾ ಸೊಹೆಲ್ ಗೆಲ್ಲುವ ಸಾಧ್ಯತೆಯಿದೆ. ಕಳೆದ ಬಾರಿ ಚಿರಂಜೀವಿ ಅವರು ಪ್ರಶಸ್ತಿ ಪ್ರದಾನಕ್ಕೆ ಆಗಮಿಸಿದ್ದರು. ಗಾಯಕ ರಾಹುಲ್ ವಿಜೇತರಾಗಿದ್ದರು. ಈ ಬಾರಿ ಆಯ್ಕೆ ಅಷ್ಟು ಸುಲಭವಾಗಿಲ್ಲ, ಅಖಿಲ್, ಸೊಹೆಲ್ ಹಾಗೂ ಅಭಿಜಿತ್ ನಡುವೆ ತೀವ್ರ ಪೈಪೋಟಿ ಇದೆ.

  English summary
  Bigg Boss Telugu 4: Abhijeet earned more money than winner cash prize says reports.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X