'ಬಿಗ್ ಬಾಸ್'ಗೆ ಶುರುವಾಯ್ತು ಕೊರೊನಾ 3ನೇ ಅಲೆಯ ಭಯ

By ಫಿಲ್ಮಿಬೀಟ್ ಡೆಸ್ಕ್

ಕೊರೊನಾ ನಡುವೆಯೂ ಹಿಂದಿ ಮತ್ತು ತೆಲುಗು ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಯಶಸ್ವಿಯಾಗಿ ಮುಗಿಸಿರುವ ಆಯೋಜಕರು ಆಗಲೇ ಮುಂದಿನ ಸೀಸನ್‌ಗೆ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಹಿಂದಿಯಲ್ಲಿ ಒಟಿಟಿ ಬಿಗ್ ಬಾಸ್‌ ಪ್ರಾರಂಭವಾಗಿದ್ದು, ಸ್ಪರ್ಧಿಗಳು ಬಿಗ್ ಮನೆ ಸೇರಿದ್ದಾರೆ. ಒಟಿಟಿ ಬಿಗ್ ಬಾಸ್ ಈ ಬಾರಿಯ ವಿಭಿನ್ನ ಪ್ರಯತ್ನವಾಗಿದ್ದು, ಕರಣ್ ಜೋಹರ್ ಇದನ್ನು ನಡೆಸಿಕೊಡುತ್ತಿದ್ದಾರೆ.

ಇನ್ನು ಸದ್ಯದಲ್ಲೇ ಸಲ್ಮಾನ್ ಖಾನ್ ನಡೆಸಿಕೊಡುವ ಟಿವಿ ಬಿಗ್ ಬಾಸ್ ಕೂಡ ಪ್ರಾರಂಭವಾಗಲಿದೆ. ಇತ್ತ ದಕ್ಷಿಣದ ಕಡೆ ಬಂದರೆ ತೆಲುಗು ಬಿಗ್ ಬಾಸ್ 4ನೇ ಸೀಸನ್ ಮುಗಿಸಿ 5ನೇ ಸೀಸನ್ ಪ್ರಾರಂಭ ಮಾಡಲು ಎಲ್ಲಾ ತಯಾರಿ ನಡೆಯುತ್ತಿದೆ. ಈಗಾಗಲೇ ಸ್ಪರ್ಧಿಗಳ ಹೆಸರುಗಳು ಸಹ ವೈರಲ್ ಆಗುತ್ತಿವೆ. ಮುಂದಿನ ತಿಂಗಳು ತೆಲುಗು ಬಿಗ್ ಬಾಸ್-5ನೇ ಸೀಸನ್‌ಗೆ ಅದ್ದೂರಿ ಚಾಲನೆ ಸಿಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಬಿಗ್ ಬಾಸ್‌ಗೆ ಕೊರೊನಾ 3ನೇ ಅಲೆಯ ಭಯ ಶುರುವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಕೊರೊನಾ ಮೊದಲನೇ ಅಲೆ ಮುಗಿಯುತ್ತಿದ್ದಂತೆ ತೆಲುಗು ಬಿಗ್ ಬಾಸ್ ಪ್ರಾರಂಭ ಮಾಡಿ ಯಾವುದೇ ತೊಂದರೆ ಇಲ್ಲದೆ ಯಶಸ್ವಿಯಾಗಿ ಮುಗಿಸಲಾಗಿತ್ತು. ಆದರೆ ಕೊಂಚ ತಡವಾಗಿ ಪ್ರಾರಂಭವಾಗಿದ್ದ ಮಲಯಾಳಂ ಬಿಗ್ ಬಾಸ್ ಕೊರೊನಾ 2ನೇ ಅಲೆಯ ಹೊಡೆತಕ್ಕೆ ಸಿಲುಕಿ ಲೆಕ್ಕಾಚಾರ ಎಲ್ಲಾ ತಲೆಕೆಳಗೆ ಮಾಡಿತ್ತು. ಮಲಯಾಳಂ ಬಿಗ್ ಬಾಸ್ ಚೆನ್ನೈನಲ್ಲಿ ನಡೆದಿತ್ತು. ಮೊದಲು ಚಂಡಮಾರುತದ ಹೊಡೆತಕ್ಕೆ ಸಿಲುಕಿ ತಪ್ಪಿಸಿಕೊಂಡಿದ್ದ ಬಿಗ್ ಬಾಸ್ ಕೊರೊನಾ 2ನೇ ಅಲೆ ಎದುರಿಸಬೇಕಾಯಿತು. ಇದರಿಂದ ಬಿಗ್ ಬಾಸ್ ಅನ್ನು ಅರ್ಧಕ್ಕೆ ನಿಲ್ಲಿಸಿ ಸ್ಪರ್ಧಿಗಳನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು.

 Bigg Boss Telugu 5: Fear of the Covid third wave worrying the makers

2ನೇ ಅಲೆಯ ಭೀಕರತೆ ಮುಗಿಯುತ್ತಿದ್ದಂತೆ ಮತ್ತೆ ಪ್ರಾರಂಭ ಮಾಡಿ ಬಿಗ್ ಬಾಸ್ ಮುಗಿಸಿದರು. ಇದೀಗ ಕೊರೊನಾ 3ನೇ ಅಲೆಯ ಭಯ ತೆಲುಗು ಬಿಗ್ ಬಾಸ್ ಗೆ ಕಾಡುತ್ತಿದೆ. ಈಗಾಗಲೇ ತಜ್ಞರು 3ನೇಯ ಅಲೆಯ ಸೂಚನೆ ನೀಡಿದ್ದಾರೆ. ದೇಶದ ಕೆಲವು ಕಡೆ ಕೊರೊನಾ ಇನ್ನು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕೇರಳದಲ್ಲಿ ಕೊರೊನಾ ಪರಿಸ್ಥಿತಿ ಭೀಕರವಾಗಿದೆ. ಅಲ್ಲದೇ ಕೆಲವು ರಾಜ್ಯಗಳಲ್ಲಿ ರಾತ್ರಿ ಮತ್ತು ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಒಂದು ವೇಳೆ ಕೊರೊನಾ ಸಂಖ್ಯೆ ಮತ್ತೆ ಜಾಸ್ತಿಯಾದರೆ ಲಾಕ್ ಡೌನ್ ಆಗುವ ಸಾಧ್ಯತೆಯೂ ಇದೆ. ಇಂಥ ಸಮಯದಲ್ಲಿ ಬಿಗ್ ಬಾಸ್ ಪ್ರಾರಂಭ ಮಾಡುವುದು ಆಯೋಜಕರಿಗೆ ದೊಡ್ಡ ಸವಾಲ್ ಆಗಿದೆ.

ಈಗಾಗಲೇ ಸಾಕಷ್ಟು ಮುನ್ನಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಬಿಗಿ ಬಾಸ್ ನಡೆಯಲು ಆಯೋಜಕರು ಪ್ಲಾನ್ ಮಾಡಿದ್ದಾರೆ. ಹೊರಗಿನ ಚಟುವಟಿಕೆಗಳು ಮನೆಯೊಳಗಿರುವ ಸ್ಪರ್ಧಿಗಳವರೆಗೂ ಬರದೆ ಇರುವಹಾಗೆ ನೋಡಿಕೊಳ್ಳಲು ಸಾಕಷ್ಟು ಕಾರ್ಯಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಆಯೋಜಕರು ಸಾಕಷ್ಟು ಪ್ಲಾನ್ ಗಳನ್ನು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಸಾಕಷ್ಟು ಸವಾಲುಗಳ ನಡುವೆ ತೆಲಗು ಬಿಗ್ ಬಾಸ್-5 ನಡೆಸಲು ತಯಾರಿ ನಡೆಯುತ್ತಿದೆ. ಇನ್ನು ಬಾರಿಯ ಬಿಗ್ ಬಾಸ್ ಅನ್ನು ಸಹ ತೆಲುಗಿನ ಸ್ಟಾರ್ ನಟ ನಾಗಾರ್ಜುನ ನಡೆಸಿಕೊಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸುಳಿವು ನೀಡಿಲ್ಲ ಬಿಗ್ ಬಾಸ್. ಇತ್ತೀಚಿಗಷ್ಟೆ ಬಿಗ್ ಬಾಸ್-5 ಟೈಟಲ್ ಟೀಸರ್ ರಿವೀಲ್ ಮಾಡುವ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದರು.

 Bigg Boss Telugu 5: Fear of the Covid third wave worrying the makers

ಇನ್ನು ಸದ್ಯ ವೈರಲ್ ಆಗಿರುವ ಸಂಭಾವ್ಯ ಪಟ್ಟಿಯಲ್ಲಿ ಕನ್ನಡದ ನಟಿಯ ಹೆಸರು ಕೂಡ ಇದೆ. ಕನ್ನಡ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನವ್ಯಾ ಹೆಸರು ಈ ಬಾರಿಯ ತೆಲುಗು ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್ ನಲ್ಲಿದೆ. ಮೈಸೂರು ಮೂಲದ ನವ್ಯಾ ಕನ್ನಡದ ಲಕುಮಿ, ತಂಗಾಳಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಜತೆಗೆ ಕಿರಿತೆರೆಯ ಕಾರ್ಯಕ್ರಮಗಳಲ್ಲಿ ನಿರೂಪಣೆ ಕೂಡ ಮಾಡಿದ್ದರು.

ಬಳಿಕ ಅವಕಾಶಕ್ಕಾಗಿ ತೆಲುಗು ಕಿರುತೆರೆ ಪ್ರವೇಶಿಸಿದ್ದರು. ತೆಲುಗಿನಲ್ಲಿ ನಾ ಪೇರು ಮೀನಾಕ್ಷಿ ಧಾರಾವಾಹಿ ಮೂಲಕ ಪ್ರೇಕ್ಷಕರ ಮನೆಮಾತಾಗಿದ್ದಾರೆ. 'ವಾಣಿ ರಾಣಿ', 'ಅರಣ್ಮಣೈ ಕಿಲಿ', 'ರನ್' ಮತ್ತು ಆಮೆ ಕಥಾ ಮುಂತಾದ ಧಾರಾವಾಹಿಗಳಲ್ಲಿ ನವ್ಯಾ ನಟಿಸಿದ್ದಾರೆ. ಇದೀಗ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುತ್ತಾರಾ ಎಂದು ಕಾದುನೋಡಬೇಕು.

More from Filmibeat

English summary
Bigg Boss Telugu 5: Fear of the Covid third wave worrying the makers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X