For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್: ಮಹಿಳಾ ಸ್ಪರ್ಧಿಯ ಉಡುಪಿನ ಒಳಗೆ ಕೈ ಹಾಕಿದ ಸ್ಪರ್ಧಿ

  |

  ತೆಲುಗು ಬಿಗ್‌ಬಾಸ್ ಆರಂಭವಾಗಿ ಕೆಲವು ದಿನ ಆಗಿದೆಯಷ್ಟೆ. ಆದರೆ ಈಗಾಗಲೇ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಶೋ ಚೆನ್ನಾಗಿ ನಡೆಯುತ್ತಿದೆ ಜೊತೆಗೆ ಕೆಲವು ಅನುಚಿತ ಘಟನೆಗಳು ಸಹ ಶೋನಲ್ಲಿ ನಡೆಯುತ್ತಿವೆ.

  ಸ್ಪರ್ಧಿ ಪ್ರಿಯಾಂಕಾ ಸಿಂಗ್, ಮತ್ತೊಬ್ಬ ಸ್ಪರ್ಧಿ ಲೋಬೊ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಕೆಲವು ದಿನಗಳ ಹಿಂದಷ್ಟೆ ಮಾಡಿದ್ದರು. ಈಗ ಅದೇ ಪ್ರಿಯಾಂಕಾ ಸಿಂಗ್, ಲೋಬೊ ವಿರುದ್ಧವೇ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

  ನಾಮಿನೇಷನ್ಸ್ ಟಾಸ್ಕ್‌ನಲ್ಲಿ ಲೋಬೊ ಅನ್ನು ನಾಮಿನೇಟ್ ಮಾಡಿದ ಪ್ರಿಯಾಂಕಾ ಸಿಂಗ್, ''ಲೋಬೊ ನನ್ನ ಟೀ ಶರ್ಟ್ ಒಳಗೆ ಕೈ ಹಾಕಿದ'' ಎಂದು ಹೇಳಿದ್ದಾರೆ.

  ''ಈ ಹಿಂದೆ ಒಂದು ಬಾರಿ ನನ್ನ ಬಟ್ಟೆಯ ಒಳಗೆ ನೀನು ಕೈ ಹಾಕಿದೆ ನಾನು ಎಚ್ಚರಿಕೆ ನೀಡಿ ಸುಮ್ಮನಾದೆ. ಆದರೆ ನೀನು ಈಗಲೂ ಅದನ್ನೇ ಮುಂದುವರೆಸಿದ್ದೀಯ. ಹಗ್ ಮಾಡಿಕೊಳ್ಳುವ ನೆಪದಲ್ಲಿ ಉಡುಪಿನ ಒಳಗೆ ಕೈ ಹಾಕುತ್ತೀಯ. ಇದು ನನಗೆ ಸ್ವಲ್ಪವೂ ಹಿಡಿಸಲಿಲ್ಲ'' ಎಂದು ಪ್ರಿಯಾಂಕಾ ಸಿಂಗ್ ಹೇಳಿದ್ದಾರೆ.

  ಈ ಹಿಂದಿನ ಒಂದು ಎಪಿಸೋಡ್‌ನಲ್ಲಿ ಮಾತನಾಡಿದ್ದ ಪ್ರಿಯಾಂಕಾ, ''ನಾನು ಒಮ್ಮೆ ತುಸು ಗ್ಲಾಮರಸ್ ಆದ ಉಡುಪು ತೊಟ್ಟುಕೊಂಡಿದ್ದೆ. ಅದು ಗ್ಲಾಮರಸ್ ಆಗಿತ್ತಾದ್ದರಿಂದ ನಾನು ಕಷ್ಟಪಟ್ಟು ನನ್ನ ಅಂಗಾಂಗಳನ್ನು ಮುಚ್ಚಿಕೊಂಡು ಓಡಾಡುತ್ತಿದ್ದೆ. ನಾನು ಯಾರೊಟ್ಟಿಗೊ ಮಾತನಾಡುತ್ತಿರುವಾಗ ಲೊಬೊ ನನಗೆ ಮೂರು ಬಾರಿ ಸಂಜ್ಞೆ ಮಾಡಿದ. ನನಗೆ ಆವಾಗಲೇ ಅನುಮಾನ ಬಂತು. ಆದರೆ ಲೋಬೊ ಹಠಾತ್ತನೆ ಬಂದು ನನ್ನ ಬಟ್ಟೆಯೊಳಗೆ ಕೈ ಹಾಕಿಬಿಟ್ಟ. ನಾನು ಲೋಬೊಗೆ ಎಚ್ಚರಿಕೆ ನೀಡಿದೆ. ರೂಂಗೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬಂದೆ'' ಎಂದಿದ್ದಾರೆ. ಪ್ರಿಯಾಂಕಾ ಸಿಂಗ್ ಮೊದಲು ಪುರುಷನಾಗಿದ್ದು ಆ ನಂತರ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮಹಿಳೆ ಆಗಿದ್ದಾರೆ.

  ಈ ವಾರದ ನಾಮಿನೇಷನ್ಸ್‌ನಲ್ಲಿ ಲೋಬೊ ಸೇರಿ ಆರು ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.

  English summary
  Bigg Boss Telugu 5: Priyanka Singh alleged that contestant Lobo miss behaved with her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X