BBK 11: ಇದು ತೆಲುಗು ಕಾದು ಪಕ್ಕಾ ಕನ್ನಡ; ಶೋಭಾಗೆ ಕಿಚ್ಚ ಹಿಂಗೇಳಿದ್ಯಾಕೆ?
ಬಿಗ್ ಬಾಸ್ ಕನ್ನಡ ಸೀಸನ್ 11 ಈಗಾಗಲೇ ಐವತ್ತು ದಿನದ ಜರ್ನಿ ಮುಗಿಸಿದೆ. ಅರ್ಧ ಜರ್ನಿಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಲಾಯರ್ ಜಗದೀಶ್ ಒಳ್ಳೆ ಮನರಂಜನೆಯನ್ನ ನೀಡುತ್ತಾ ಇದ್ರು. ಆದ್ರೆ ಸ್ವಯಂಕೃತ ತಪ್ಪಿನಿಂದಾಗಿ ಮನೆಯಿಂದ ಹೊರಗೆ ಬಂದರು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬರ್ತಾರೆ ಎಂದುಕೊಂಡಿದ್ದರು. ಹನುಮಂತನ ಬಳಿಕ ಈಗ ಬಿಗ್ ಬಾಸ್ ಮನೆಗೆ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ತೆಲುಗು ಸೀಸನ್ 7 ಶುರುವಾದಾಗಲೇ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಹವಾ ಎಬ್ಬಿಸಿದ್ದು, ಕನ್ನಡ ನಟಿ ಶೋಭಾ ಶೆಟ್ಟಿ. ವಾಯ್ಸ್‌ನಲ್ಲಾಗಲೀ, ಧೈರ್ಯದಲ್ಲಾಗಲೀ ಸೌಂಡ್ ಮಾಡಿದ್ದು, ಇದೇ ಶೋಭಾ ಶೆಟ್ಟಿ. ಕನ್ನಡದ ಚೆಲುವೆ ತೆಲುಗಿನಲ್ಲಿ ಹವಾ ಎಬ್ಬಿಸಿದ್ದಕ್ಕೆ ಭಾರೀ ಬೆಂಬಲ ಸಿಕ್ಕಿತ್ತು. ಆದರೆ ಅನಿರೀಕ್ಷಿತ ತಿರುವಿನಲ್ಲಿ ಫಿನಾಲೆಗೆ ಐದು ದಿನ ಇರುವಾಗಲೇ ಶೋಭಾ ಔಟ್ ಆಗಿ ಹೊರಗೆ ಬಂದರು. ಈಗ ಕನ್ನಡ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿ ಕಪ್ ಗೆಲ್ತಾರಾ..? ಅರ್ಧಕ್ಕೆ ಬರ್ತಾರಾ ನೋಡೋಣಾ.

ಬಿಗ್‌ಬಾಸ್ ಮನೆಗೆ ಶೋಭಾ
'ನಾನು ಪಕ್ಕಾ ಕರ್ನಾಟಕದ ಹುಡುಗಿ. ಕನ್ನಡದಲ್ಲಿ ಕಮ್ ಬ್ಯಾಕ್ ಮಾಡಬೇಕು ಎಂದುಕೊಂಡಿದ್ದೆ. ಸಾಕಷ್ಟು ಆಫರ್‌ಗಳು ಬಂದವು. ಆದರೆ ಕಮ್ ಬ್ಯಾಕ್ ಮಾಡುವುದಕ್ಕೆ ಬಿಗ್ ಬಾಸ್‌ಗಿಂತ ದೊಡ್ಡ ವೇದಿಕೆ ಮತ್ತೊಂದಿಲ್ಲ ಎನಿಸ್ತು. ಅದಕ್ಕೆ ಕೇಳಿದ ಕೂಡಲೇ ಒಪ್ಪಿಕೊಂಡೆ. ನಂಗೆ ಈ ಶೋ ಬಹಳ ಮುಖ್ಯ'
ನಿಮ್ಮನ್ನ ಜನ ಒಪ್ಪುತ್ತಾರಾ..?
'ಹೌದು ಈಗಾಗಲೇ ಐವತ್ತು ದಿನದಿಂದ ಮನೆಯಲ್ಲಿರುವ ಜನರ ಆಟವನ್ನ ನೋಡಿರುತ್ತಾರೆ, ಅವರ ಅಭಿಮಾನಿಗಳಾಗಿರುತ್ತಾರೆ. ಹಾಗಂತ ನಾನು ತಡವಾಗಿ ಬಂದೆ ಎಂದು ನನ್ನನ್ನು ರಿಜೆಕ್ಟ್ ಮಾಡಲ್ಲ. ನನ್ನನ್ನು ಅಬ್ಸರ್ವ್ ಮಾಡ್ತಾರೆ. ಬಿಗ್ ಬಾಸ್ ನೋಡುಗರಿಗೆ ನನ್ನಲ್ಲಿ ಯಾವುದಾದರೂ ಒಂದು ಗುಣ ಇಷ್ಟವಾದರೇ ಅರ್ಧಕ್ಕೆ ಬಂದರೂ ನಮ್ಮನ್ನ ಸೇವ್ ಮಾಡುತ್ತಾರೆ. ಸಪೋರ್ಟ್ ಮಾಡುತ್ತಾರೆ ಎಂದು ಶೋಭಾ ಹೇಳಿದ್ದಾರೆ.
ತೆಲುಗು ಕಾದು..ಪಕ್ಕಾ ಕನ್ನಡ
ಇನ್ನು ಶೋಭಾಗೆ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆಯೊಳಗಿನ ಪ್ರಶ್ನೆಯನ್ನು ಕೇಳುತ್ತಾರೆ. ನಿಮ್ಮ ಫೇವರಿಟ್ ಕಂಟೆಸ್ಟೆಂಟ್ ಯಾರು ಅಂತ. ಆದರೆ ಆ ಪ್ರಶ್ನೆಯನ್ನು ಎರಡು ಬಾರಿ ಕೇಳಿದರೂ, ಉತ್ತರ ಬೇರೆನೇ ಹೇಳುತ್ತಾ ಇದ್ದರು. ಸುದೀಪ್ ಅವರಿಗೇನೆ ಯಾಮಾರಿಸಿದರು. ಆಗ ನಗು ಮುಖದಲ್ಲಿಯೇ ಸುದೀಪ್ ತಿರುಗೇಟು ನೀಡಿದ್ದಾರೆ. ಇದು ತೆಲುಗು ಕಾದು ಪಕ್ಕಾ ಕನ್ನಡ ಎಂದು ತೆಲುಗು ಬಿಗ್ ಬಾಸ್‌ನಿಂದ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಶೋಭಾಗೆ ಹೇಳಿದ್ದಾರೆ.

ಶೋಭಾಗಿದೆ ಹಲವು ಫೋಬಿಯಾ!
ಮನೆಯೊಳಗೆ ಭಯ ಪಡಿಸುತ್ತಾರಾ ಬಿಗ್ ಬಾಸ್
ಶೋಭಾ ಅವರಿಗೆ ಹಲವು ಫೋಬಿಯಾ ಇದೆ. ಅದನ್ನ ಬಿಗ್ ಬಾಸ್ ಕೂಡ ರಿಸರ್ಚ್ ಮಾಡಿದ್ದಾರೆ. ಅದನ್ನೇ ಸುದೀಪ್ ಅವರು ವೇದಿಕೆ ಮೇಲೆಯೇ ತಿಳಿಸಿದ್ದಾರೆ. ಕತ್ತಲು, ನೀರು, ಎತ್ತರ ಅಂದ್ರೆ ಆಗಲ್ಲ, ಈರುಳ್ಳಿ ಸ್ಮೆಲ್ ಆಗಲ್ಲ. ಬಿಗ್ ಬಾಸ್ ಮನೆಯೊಳಗೆ ಇದೆಲ್ಲದರಿಂದ ಬಚಾವ್ ಆಗ್ತೀರಾ? ಎಂದು ಕೇಳಿದ್ದಾರೆ. ಫೋಬಿಯಾ ಇದೆ. ಆದರೆ ಬಿಗ್ ಬಾಸ್ ಮನೆಯೊಳಗೆ ನಾನು ಧೈರ್ಯವಾಗಿ ಇರುತ್ತೀನಿ ಎಂದು ಶೋಭಾ ಉತ್ತರಿಸಿದ್ದಾರೆ.


Click it and Unblock the Notifications











