ಬಿಗ್ ಬಾಸ್ ತೆಲುಗು: ಫೈನಲ್‌ಗೆ ಹೋಗಬೇಕಿದ್ದ ಕನ್ನಡತಿ ಶೋಭಾ ಶೆಟ್ಟಿ, ಈ ವಾರವೇ ಮನೆಯಿಂದ ಔಟ್!?
ಬಿಗ್ ಬಾಸ್ ತೆಲುಗು 7 ಸೀಸನ್ ಕೊನೆಯ ತಿಂಗಳಿನಲ್ಲಿದ್ದು, ಕೆಲವೇ ಮಂದಿ ಉಳಿದುಕೊಂಡಿದ್ದಾರೆ. ಇದರಲ್ಲಿ ಕನ್ನಡತಿಯರು ಇದ್ದಾರೆ. ಮನೆಯೊಳಗೆ ಏಳು ಸದಸ್ಯರ ಪೈಕಿ ಆರು ಮಂದಿ 14ನೇ ವಾರದಲ್ಲಿ ಎಲಿಮಿನೇಷನ್‌ಗೆ ಬಂದಿದ್ದಾರೆ. ಆದರೆ, ವೋಟಿಂಗ್ ಲಿಸ್ಟ್ ನೋಡಿದರೇ ಕನ್ನಡತಿಯೊಬ್ಬರು ಈ ವಾರ ಮನೆಯಿಂದ ಹೊರ ಬರುವುದು ಖಚಿತ ಎನಿಸುತ್ತಿದೆ.
ಬಿಗ್ ಬಾಸ್ ತೆಲುಗು ಸೀಸನ್ 7ರಲ್ಲಿ ಸಕತ್ ಸ್ಟ್ರಾಂಗ್ ಕ್ಯಾಂಡಿಡೇಟ್ ಆಗಿರುವ ಅಮರ್‌ದೀಪ್‌ಗೂ ಯಾವುದೇ ವಿನಾಯಿತಿ ನೀಡಲಾಗಿಲ್ಲ. ಹೀಗಾಗಿ 14 ನೇ ವಾರಕ್ಕೆ ನಾಮಿನೇಟ್ ಆಗಿದ್ದಾರೆ. ಜೊತೆಗೆ, ಏಳು ಮಂದಿಯ ಪೈಕಿ ಅರ್ಜುನ್ ಮಾತ್ರ ನಾಮಿನೇಷನ್‌ನಿಂದ ಪಾರಾಗಿದ್ದಾರೆ.

ಉಳಿದಂತೆ ಪಲ್ಲವಿ ಪ್ರಶಾಂತ್, ಶಿವಾಜಿ, ಪ್ರಿನ್ಸ್ ಯವರ್, ಅಮರದೀಪ್, ಪ್ರಿಯಾಂಕಾ, ಶೋಭಾ ಶೆಟ್ಟಿ ನಾಮಿನೇಟ್ ಪಟ್ಟಿಯಲ್ಲಿದ್ದಾರೆ. ಕನ್ನಡತಿಯಾದ ನಟಿ ಶೋಭಾ ಶೆಟ್ಟಿ ಈ ಬಾರಿ ಮನೆಯಿಂದ ಹೊರಬಲಿದ್ದಾರೆ ಎನ್ನಲಾಗುತ್ತಿದೆ.
ಫೈನಲ್‌ಗೆ ಹೋಗಲ್ವಾ ಶೋಭಾ ಶೆಟ್ಟಿ?
13ನೇ ವಾರದ ವೋಟಿಂಗ್‌ನಲ್ಲಿ ಫಸ್ಟ್ ಇದ್ದ ಪಲ್ಲವಿ ಪ್ರಶಾಂತ್ ಈ ವಾರವೂ ಮುನ್ನಡೆ ಕಾಯ್ದುಕೊಂಡಿದ್ದಾರೆ. ನಂತರ ಅವರನ್ನು ಶಿವಾಜಿ ಮತ್ತು ಪ್ರಿನ್ಸ್ ಯವರ್ ಇದ್ದಾರೆ. ಅಮರದೀಪ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ತಿಂಗಳ ನಾಮನಿರ್ದೇಶನದಲ್ಲಿ ಆರು ಸ್ಪರ್ಧಿಗಳ ಪೈಕಿ ಕೊನೆಯ ಎರಡು ಸ್ಥಾನಗಳಲ್ಲಿ ಪ್ರಿಯಾಂಕಾ ಮತ್ತು ಶೋಭಾ ಶೆಟ್ಟಿ ಇದ್ದಾರೆ. ಈ ಇಬ್ಬರು ಕನ್ನಡದ ಧಾರಾವಾಹಿಗಳ ಮೂಲಕ ತೆಲುಗು ಧಾರಾವಾಹಿಗಳಿಗೆ ಕಾಲಿಟ್ಟವರು.
ಈ ವಾರದ ಫಲಿತಾಂಶಗಳ ಪ್ರಕಾರ, 14 ನೇ ವಾರದಲ್ಲಿ ಪ್ರಿಯಾಂಕಾ ಜೈನ್ ಮತ್ತು ಶೋಭಾ ಶೆಟ್ಟಿ ನಡುವೆ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಅದರಲ್ಲೂ ಮೊದಲಿನಿಂದ ಹೆಚ್ಚು ಸ್ಟ್ರಾಂಗ್ ಮತ್ತು ಸಾಕಷ್ಟು ವಿವಾದ ಮಾಡಿಕೊಂಡಿದ್ದ 'ಅಗ್ನಿಸಾಕ್ಷಿ'ಯ ನಟಿ ಶೋಭಾ ಶೆಟ್ಟಿ ಎಲಿಮಿನೇಟ್ ಆಗುವ ಸಾಧ್ಯತೆಯಿದೆ.

ತೆಲುಗು ಬಿಗ್ ಬಾಸ್ 14 ನೇ ವಾರದ ವೋಟಿಂಗ್ ಪರ್ಸಂಟೆಜ್
ಪಲ್ಲವಿ ಪ್ರಶಾಂತ್- 36.95 %
ಶಿವಾಜಿ- 19.05 %
ಪ್ರಿನ್ಸ್ ಯವರ್- 18.83%
ಅಮರದೀಪ್- 17.7 %
ಪ್ರಿಯಾಂಕಾ - 5.63 % ಎಸ್
ಶೋಭಾ ಶೆಟ್ಟಿ- 2.47 %
ಇನ್ನು, ಮಾಹಿತಿ ಪ್ರಕಾರ ಬಿಗ್ ಬಾಸ್ ತೆಲುಗು ಸೀಸನ್ 7 ಕುರಿತು ಕೆಲಸ ಮಾಡುವ ಸಾಮಾಜಿಕ ಮಾಧ್ಯಮ ಪುಟಗಳು ಶೋಭಾ ಶೆಟ್ಟಿ ಕನ್ನಡ ಬಿಗ್ ಬಾಸ್ ಅನ್ನು ತಿರಸ್ಕರಿಸಿ, ತೆಲುಗು ಬಿಗ್ ಬಾಸ್ ಸಂಘಟಕರೊಂದಿಗೆ ಮನೆಯೊಳಗೆ ಕನಿಷ್ಠ ಹತ್ತು ವಾರಗಳವರೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಇದೀಗ 14ನೇ ವಾರಕ್ಕೆ ಮನೆಯವರು ಕಾಲಿಟ್ಟಿದ್ದು ಶೋಭಾ ಶೆಟ್ಟಿ ಎಲಿಮಿನೇಟ್ ಆಗುವ ಸಾಧ್ಯತೆ ಶೇ.90 ರಷ್ಟು ಇದೆ.
ಇದರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಪಕ್ಷಪಾತ ನಡೆಯುತ್ತಿದೆ ಎಂದು ಹಲವರು ದೂರುತ್ತಿದ್ದಾರೆ. ಕೆಲವರನ್ನು ಬೇಕು ಎಂದತಲೇ ಉಳಿಸಿಕೊಳ್ಳಲಾಗುತ್ತಿದೆ. ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರು ಮೊದಲಿನಿಂದಲೂ ಸ್ಟಾರ್ ಮಾ ಬ್ಯಾಚ್ ಅಂದರೆ ಧಾರಾವಾಹಿ ನಟರಿಗೆ ಬೆಂಬಲ ನೀಡುತ್ತಿದ್ದಾರೆ. ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಹಾಗೆಯೇ 13ನೇ ವಾರದಲ್ಲಿ ಅಂಬಟಿ ಅರ್ಜುನ್ ಗೆ ಫಿನಾಲೆ ಅಸ್ತ್ರ ನೀಡಿ ರಕ್ಷಿಸಿದ್ದಾರೆ. ಸದ್ಯ ಮನೆಯಲ್ಲಿ ನಾಲ್ವರು ಸೀರಿಯಲ್ ನಟರಿದ್ದಾರೆ.


Click it and Unblock the Notifications