ಬಿಗ್ ಬಾಸ್ ಶೋ ಮೇಲೆ ಹೈಕೋರ್ಟ್‌ನಲ್ಲಿ ಕೇಸ್; ವಿಧ್ವಂಸಕ ಕೃತ್ಯಕ್ಕೆ ನಾಗಾರ್ಜುನ ಹೊಣೆ?

By ಫಿಲ್ಮಿಬೀಟ್ ಡೆಸ್ಕ್

ತೆಲುಗು ಬಿಗ್ ಬಾಸ್ ಸೀಸನ್ 7 ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ತೆಲುಗು ಬಿಗ್ ಬಾಸ್ ರಿಯಾಲಿಟಿ ಶೋ ಇತಿಹಾಸದಲ್ಲಿಇದೇ ಮೊದಲ ಬಾರಿಗೆ ಸಾಮಾನ್ಯ ರೈತ ಗೆದ್ದು ಬೀಗಿದ್ದಾನೆ. ಆದರೆ, ಬಿಗ್ ಬಾಸ್ ತೆಲುಗು ಫಿನಾಲೆ ಬಳಿಕ ಕೆಲವು ಕಿಡಿಗೇಡಿಗಳು ಕೆಲವು ತಾರೆಯರ ಕಾರುಗಳು ಹಾಗೂ ಸರ್ಕಾರಿ ಬಸ್‌ಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದ್ದರು.

Bigg boss telugu 7 nagarjuna

ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ಸೀಸನ್ 7 ಗೆದ್ದಿರುವ ವಿಷಯ ಲೀಕ್ ಆಗಿತ್ತು. ಹೀಗಾಗಿ ಬಿಗ್ ಬಾಸ್ ಸೆಟ್ಟು ಇರುವ ಅನ್ನಪೂರ್ಣ ಸ್ಟುಡಿಯೋ ಮುಂದೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಪಲ್ಲವಿ ಪ್ರಶಾಂತ್ ಹೆಸರು ಅನೌನ್ಸ್ ಆಗುತ್ತಿದ್ದಂತೆ ಸಂಭ್ರಮ ಮಾಡುವ ನೆಪದಲ್ಲಿ ಆ ದಾರಿ ಸಾಗುತ್ತಿದ್ದ ಸರ್ಕಾರಿ ಬಸ್ ಹಾಗೂ ಸೆಲೆಬ್ರೆಟಿಗಳ ಕಾರುಗಳ ಮೇಲೆ ದಾಳಿ ಮಾಡಿದ್ದರು.

ಈ ಕೃತ್ಯಕ್ಕೆ ತೆಲಂಗಾಣದಲ್ಲಿ ವ್ಯಾಪಕ ಟೀಕೆ ಎದುರಾಗುತ್ತಿದೆ. ಈ ಸಂಬಂಧ ಪಲ್ಲವಿ ಪ್ರಶಾಂತ್ ಹಾಗೂ ಅವರ ಅಭಿಮಾನಿಗಳ ಮೇಲೆ ಸುಮೋಟೊ ಕೇಸ್ ದಾಖಲಾಗಿದೆ ಎಂದು ವರದಿಯಾಗಿದೆ. ಇದೇ ವೇಳೆ ತೆಲಂಗಾಣದ ಹೈ ಕೋರ್ಟ್ ವಕೀಲರಾಗಿರುವ ಅರುಣ್ ಕುಮಾರ್ ಎಂಬುವವರು ಟಾಲಿವುಡ್ ನಟ ಹಾಗೂ ಅನ್ನಪೂರ್ಣ ಸ್ಟುಡಿಯೋ ಮುಖ್ಯಸ್ಥ ನಾಗಾರ್ಜುನ ಅಕ್ಕಿನೇನಿ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಬಿಗ್ ಬಾಸ್ ತೆಲುಗು 7 ನೇ ಸೀಸನ್ ಫೈನಲ್ ವೇಳೆ ಕೆಲವು ಅಭಿಮಾನಿಗಳು ಸರ್ಕಾರಿ ಆಸ್ತಿಗಳ ಮೇಲೆ ದಾಳಿ ಮಾಡಿದ್ದಾರೆ. ಇದರಿಂದ ಸರ್ಕಾರಿ ಆಸ್ತಿಗೆ ಹಾನಿಯಾಗಿದೆ. ಈ ಬಗ್ಗೆ ಬಿಗ್ ಬಾಸ್ ತೆಲುಗು 7 ರ ಆಡಳಿತ ಮಂಡಳಿ ಯಾವುದೇ ಹೇಳಿಕೆ ನೀಡಿಲ್ಲ. ಇದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಇದೆಲ್ಲವನ್ನೂ ನ್ಯಾಯಾಲಯದ ಗಮನಕ್ಕೆ ತರುತ್ತಿದ್ದೇವೆ ಎಂದು ವಕೀಲರಾದ ಅರುಣ್ ಕುಮಾರ್ ಹೇಳಿದ್ದಾರೆ.

ಇಷ್ಟೇ ಅಲ್ಲದೆ ಬಿಗ್ ಬಾಸ್ ತೆಲುಗು 7 ವಿನ್ನರ್ ಪಲ್ಲವಿ ಪ್ರಶಾಂತ್ ಒಬ್ಬ ಸಾಮಾನ್ಯ ವ್ಯಕ್ತಿ. ಆತ ತಮ್ಮ ಪ್ರತಿಭೆಯಿಂದ ಬಿಗ್ ಬಾಸ್ ಶೋ ಗೆದ್ದಿದ್ದಾರೆ. ಅಂತಹವರ ವಿರುದ್ಧ ಹೇಗೆ ಪ್ರಕರಣ ದಾಖಲಿಸಲು ಸಾಧ್ಯವೆಂದು ಪ್ರಶ್ನೆ ಮಾಡಿದ್ದಾರೆ. ಸರ್ಕಾರದ ಆಸ್ತಿ ನಷ್ಟ ಆಗಿದ್ದಕ್ಕೆ ಆತ ಹೇಗೆ ಹೊಣೆಗಾರನಾಗುತ್ತಾನೆ? ಈ ಗಲಭೆಯಲ್ಲಿ ಸುಮಾರು 8 ಬಸ್‌ಗಳು ಜಖಂಗೊಂಡಿವೆ. ಆ ನಷ್ಟವನ್ನು ತುಂಬೋದು ಯಾರು? ಎಂದು ಅರುಣ್ ಕುಮಾರ್ ಪ್ರಶ್ನೆ ಮಾಡಿದ್ದಾಗಿ ವರದಿಯಾಗಿದೆ.

ಬಿಗ್ ಬಾಸ್ ರಿಯಾಲಿಟಿ ಶೋ ಹೆಸರಿನಲ್ಲಿ ಹುಡುಗಿಯರನ್ನು 100 ದಿನಗಳವರೆಗೆ ಲಾಕ್ ಮಾಡುವ ಕಾರ್ಯಕ್ರಮ ಆಕ್ಷೇಪಾರ್ಹ. ಈ ಎಲ್ಲಾ ವಿಷಯಗಳ ಬಗ್ಗೆ ಮಾನವ ಹಕ್ಕುಗಳ ಆಯೋಗ ಹಾಗೂ ಲೋಕಾಯುಕ್ತಗೆ ದೂರು ನೀಡುವುದಾಗಿ ವಕೀಲ ಅರುಣ್ ಕುಮಾರ್ ತಿಳಿಸಿದ್ದಾರೆ. ಇದರೊಂದಿಗೆ ಬಿಗ್ ಬಾಸ್ ತೆಲುಗು 7 ಫಿನಾಲೆಯಂದು ನಡೆದ ಗಲಭೆಗೆ ಅಕ್ಕಿನೇನಿ ನಾಗಾರ್ಜುನ ಅವರೇ ಹೊಣೆ. ಬಸ್ ದಾಳಿ ಘಟನೆಯಲ್ಲಿ ಅಮಾಯಕ ಪಲ್ಲವಿ ಪ್ರಶಾಂತ್ ಮೇಲೆ ಹೇಗೆ ಕೇಸ್ ಹಾಕುತ್ತಾರೆ? ಈ ಘಟನೆಗೆ ಕಾರಣರಾದ ನಾಗಾರ್ಜುನ, ಬಿಗ್ ಬಾಸ್ ನಿರ್ಮಾಪಕರನ್ನು ಬಂಧಿಸಬೇಕು ಎಂದು ವಕೀಲ ಅರುಣ್ ಕುಮಾರ್ ಹೈಕೋರ್ಟ್‌ಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

More from Filmibeat

English summary
Bigg Boss telugu 7 facing legal problem advocate demands Nagarjuna Akkineni arrest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X