ತೆಲುಗು ಬಿಗ್ ಬಾಸ್‌ನಲ್ಲಿ ಇರಲು ಕನ್ನಡತಿ ಶೋಭಾ ಶೆಟ್ಟಿ ತೆಗೆದುಕೊಳ್ಳುತ್ತಿರುವುದು ಲಕ್ಷ ಲಕ್ಷ ಸಂಭಾವನೆ!

ಬಿಗ್ ಬಾಸ್ ತೆಲುಗು ಸೀಸನ್ ಏಳರ 14 ನೇ ವಾರದ ವೀಕೆಂಡ್ ಸಂಚಿಕೆ ನಡೆಯುತ್ತಿದೆ. ಇಬ್ಬರು ಕನ್ನಡತಿಯರು ಇರುವ ಈ ಶೋ ಮೇಲೆ ಕನ್ನಡಿಗರ ಗಮನವು ಇದೆ. ಮೊದಲಿನಿಂದಲೂ ನಟಿ ಶೋಭಾ ಶೆಟ್ಟಿ ಫೈನಲ್‌ಗೆ ಹೋಗುತ್ತಾರೆ ಎಂಬ ಭರವಸೆ ಮೂಡಿಸಿದ್ದರು. ಈಗ ಅವರ ಸಂಭಾವನೆ ವಿಚಾರ ಕೇಳಿ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಬಿಗ್ ಬಾಸ್ ತೆಲುಗಿನ ನಿರೂಪಕ ನಟ ನಾಗಾರ್ಜುನ ಕಳೆದ ವಾರದಲ್ಲಿ ಸ್ಪರ್ಧಿಗಳ ಪ್ರದರ್ಶನ ಮತ್ತು ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು ಮನೆ ಸದಸ್ಯರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡೊದ್ದಾರೆ. ಮತಗಳ ಆಧಾರದಲ್ಲಿ ನೋಡುವುದಾದರೇ, ಈ ವಾರ, ಕನ್ನಡತಿ ಶೋಭಾ ಶೆಟ್ಟಿ ಮನೆಯಿಂದ ಹೊರ ಹೋಗುವ ಎಲ್ಲಾ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Bigg Boss Telugu 7: Kannada and telugu serial Actress Shobha Shettys Remuneration

ಕನ್ನಡ, ತೆಲುಗು ನಟಿ ಶೋಭಾ ಶೆಟ್ಟಿ ಸಂಭಾವನೆ

ಬಿಗ್ ಬಾಸ್ ಸೀಸನ್ 7 ನಲ್ಲಿರುವ ಶೋಭಾ ಶೆಟ್ಟಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ಜೊತೆಗೆ ತಮ್ಮ ಧಾರಾವಾಹಿಗಳ ಮೂಲಕ ಮನೆ ಮನೆಗಳಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಶೋಭಾ ಶೆಟ್ಟಿ ಅವರಿಗೆ ಉತ್ತಮ ಸಂಭಾವನೆಯನ್ನೇ ಬಿಗ್‌ ಬಾಸ್‌ಗೆ ಬರಲು ನೀಡಲಾಗಿದೆ.

ವರದಿಯ ಪ್ರಕಾರ, ಶೋಭಾ ಶೆಟ್ಟಿ ಅವರಿಗೆ ಈ ವರ್ಷ ಬಿಗ್ ಬಾಸ್ ಕನ್ನಡದ ಸೀಸನ್ ಹತ್ತರಲ್ಲಿ ಬರುವ ಅವಕಾಶ ನೀಡಲಾಗಿತ್ತು. ಆದರೆ, ಸದ್ಯ ಅವರು ತೆಲುಗು ಧಾರಾವಾಹಿಗಳ ಮೂಲಕ ಎರಡು ತೆಲುಗು ರಾಜ್ಯಗಳಲ್ಲಿ ಹೆಚ್ಚಿನ ಜನಪ್ರಿಯತೆ ಹೊಂದಿರುವ ಕಾರಣ ಬಿಗ್ ಬಾಸ್ ತೆಲುಗು ಸೀಸನ್‌ 7 ರಲ್ಲಿ ಭಾಗವಹಿಸಲು ಇಷ್ಟ ಪಟ್ಟರು.

ಕೆಲವು ಒಳಗಿನವರು ಹೇಳುವ ಪ್ರಕಾರ ನಟಿ ಶೋಭಾ ಶೆಟ್ಟಿ ಬಿಗ್ ಬಾಸ್ ಒಪ್ಪಂದದ ಸಮಯದಲ್ಲಿ ಮನೆಯೊಳಗೆ ಕನಿಷ್ಠ ಹತ್ತು ವಾರಗಳವರೆಗೆ ಇರುವುದಾಗಿ ಸಹಿ ಹಾಕಿದ್ದಾರೆ. ಶೋಭಾ ಶೆಟ್ಟಿ ಅವರು ವಾರಕ್ಕೆ 2.5 ಲಕ್ಷ ರೂಪಾಯಿಯಂತೆ ರಿಯಾಲಿಟಿ ಶೋ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈಗಾಗಲೇ 14 ವಾರಗಳ ಕಾಲ ಮನೆಯಲ್ಲಿ ಉಳಿದಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಇದ್ದ ಎಲ್ಲಾ ಸಮಯಕ್ಕಾಗಿ, ಶೋಭಾ ಶೆಟ್ಟಿ ಸುಮಾರು 35 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದಿದ್ದಾರೆ.

Bigg Boss Telugu 7: Kannada and telugu serial Actress Shobha Shettys Remuneration

ಬಿಗ್ ಬಾಸ್ ತೆಲುಗು: 14ನೇ ವಾರದ ವೋಟಿಂಗ್ ರಿಸಲ್ಟ್

14ನೇ ವಾರದ ಮತದಾನ ಫಲಿತಾಂಶದಲ್ಲಿ ಪಲ್ಲವಿ ಪ್ರಶಾಂತ್ಮುನ್ನಡೆ ಕಾಯ್ದುಕೊಂಡಿದ್ದಾರೆ. ನಂತರ ಅವರನ್ನು ಶಿವಾಜಿ ಮತ್ತು ಪ್ರಿನ್ಸ್ ಯವರ್ ಇದ್ದಾರೆ. ನಾಮಿನೇಟ್ ಆಗಿರುವ ಆರು ಸ್ಪರ್ಧಿಗಳ ಪೈಕಿ ಕೊನೆಯ ಎರಡು ಸ್ಥಾನಗಳಲ್ಲಿ ಪ್ರಿಯಾಂಕಾ ಮತ್ತು ಶೋಭಾ ಶೆಟ್ಟಿ ಇದ್ದಾರೆ. ಕೊನೆಯ ಸ್ಥಾನದಲ್ಲಿ ಶೋಭಾ ಶೆಟ್ಟಿಯಿದ್ದು, ಈ ವಾರ ಎಲಿಮಿನೇಟ್ ಆಗುವ ಸಾಧ್ಯತೆಯಿದೆ.

ಬಿಗ್ ಬಾಸ್ ತೆಲುಗು ಸೀಸನ್ 7 ಅಂತಿಮ ಹಂತಕ್ಕೆ ಬಂದಿದ್ದು, ಲಭ್ಯವಿರುವ ಮಾಹಿತಿಯ ಪ್ರಕಾರ, ಬಿಗ್ ಬಾಸ್ ಆಯೋಜಕರು ವಾರಾಂತ್ಯದ ಎಲಿಮಿನೇಷನ್ ಜೊತೆಗೆ ವಾರದ ಮಧ್ಯದಲ್ಲಿಯೂ ಎಲಿಮಿನೇಷನ್‌ಗೆ ಪ್ಲ್ಯಾನ್ ಮಾಡುತ್ತಿದ್ದಾರೆ. ಹಾಗಾಗಿ, ಫೈನಲ್‌ಗೆ ಟಾಪ್ ಐವರು ಸ್ಪರ್ಧಿಗಳು ಮಾತ್ರ ಉಳಿದಿದ್ದಾರೆ.

ಅರ್ಜುನ್ ಈಗಾಗಲೇ ಸೀಸನ್‌ನ ಮೊದಲ ಫೈನಲಿಸ್ಟ್ ಆಗಿದ್ದಾರೆ. ಉಳಿದವರು ಹಲವಾರು ಟಾಸ್ಕ್‌ಗಳನ್ನು ಆಡುವ ಮೂಲಕ ಫೈನಲ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿಯವರೆಗೆ ಕಿರಣ್ ರಾಥೋಡ್, ಶಕೀಲಾ, ದಾಮಿನಿ, ರಥಿಕಾ, ಸುಭಾಶ್ರೀ ರಾಯಗುರು, ಆಟ ಸಂದೀಪ್, ಟೇಸ್ಟಿ ತೇಜಾ, ಪೂಜಾ ಮೂರ್ತಿ, ನಯನಿ ಪಾವನಿ, ಮತ್ತು ಅಶ್ವಿನಿ ಶ್ರೀ ಎಲಿಮಿನೇಟ್ ಆಗಿದ್ದಾರೆ.

More from Filmibeat

English summary
Shobha Shetty's remuneration for Bigg Boss Telugu 7.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X