Pallavi Prashanth: ಯುವ ರೈತನಿಗೆ ಒಲಿದ ತೆಲುಗು ಬಿಗ್ ಬಾಸ್ ವಿನ್ನರ್ ಪಟ್ಟ: ಟ್ರೋಫಿಗೆ ಮುತ್ತಿಟ್ಟ ಪಲ್ಲವಿ ಪ್ರಶಾಂತ್

ಬಿಗ್ ಬಾಸ್ ತೆಲುಗಿನ 7 ಉಲ್ಟಾ-ಪುಲ್ಟಾ ಸೀಸನ್ ಕೊನೆಯಾಗಿದ್ದು, ಅದ್ಧೂರಿಯಾಗಿ ಕಾರ್ಯಕ್ರಮ ಮುಗಿದಿದೆ. ರೈತ ಮಗನಾಗಿ ದೊಡ್ಮನೆಗೆ ಕಾಲಿಟ್ಟಿದ್ದ ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಇನ್ನು, ಅಮರ್ ದೀಪ್ ಎರಡನೇ ಸ್ಥಾನಕ್ಕೆ ಬಂದು ರನ್ನರ್ ಅಪ್ ಆಗಿದ್ದಾರೆ.

ಬಿಗ್ ಬಾಸ್ ತೆಲುಗು ಸೀಸನ್ 7 ರ ಗ್ರ್ಯಾಂಡ್ ಫಿನಾಲೆ ಸಂಚಿಕೆ ಭಾನುವಾರ ಪ್ರಸಾರವಾಯಿತು. ಪಲ್ಲವಿ ಪ್ರಶಾಂತ್ ವಿನ್ನರ್ ಆಗಿದ್ದು, ಹಲವರಿಗೆ ಖುಷಿ ನೀಡಿದೆ. ಆದರೆ ಮೊದಲಿನಿಂದಲೂ ಶಿವಾಜಿ ವಿನ್ನರ್ ಎಂದುಕೊಂಡಿದ್ದ ಹಲವರಿಗೆ ಬೇಸರವಾಗಿದೆ. ಅದರಲ್ಲೂ ನಟ ಶಿವಾಜಿ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಶಿವಾಜಿ ಎಲಿಮಿನೇಷನ್ ಎಂದು ಹೇಳಿದಾಗಲೇ ಪಲ್ಲವಿ ಪ್ರಶಾಂತ್ ಕಣ್ಣೀರಿಟ್ಟಿದ್ದಾರೆ. ಅಳು ತಡೆಯದೆ ಶಿವಾಜಿಯ ಕಾಲಿಗೆ ಬಿದಿದ್ದಾರೆ.

Bigg Boss Telugu 7: Pallavi Prashanth Becomes Bigg Boss Telugu 7 Winner

ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ತೆಲುಗು 7 ವಿನ್ನರ್

ಇನ್ನು, ಇಬ್ಬರು ಫೈನಲಿಸ್ಟ್‌ಗಳನ್ನು ಬಿಗ್ ಬಾಸ್ ವೇದಿಕೆಗೆ ಕರೆತರಲು ಸೀಸನ್‌ನ ನಿರೂಪಕ, ನಟ ನಾಗಾರ್ಜುನ ದೊಡ್ಮನೆಗೆ ಕಾಲಿಟ್ಟಿದ್ದರು. ವೇದಿಕೆಗೆ ಬಂದ ನಂತರ ಮತ್ತು ಕೆಲವು ಆತಂಕದ ಕ್ಷಣಗಳ ನಂತರ, ಪಲ್ಲವಿ ಪ್ರಶಾಂತ್ ಅವರನ್ನು ಉಲ್ಟಾ-ಪುಲ್ಟಾ ಸೀಸನ್‌ನ ವಿಜೇತ ಎಂದು ಘೋಷಿಸಲಾಯಿತು.

ಪಲ್ಲವಿ ಪ್ರಶಾಂತ್

ಪಲ್ಲವಿ ಪ್ರಶಾಂತ್ ಬಿಗ್ ಬಾಸ್ 7 ತೆಲುಗು ಮನೆಗೆ ಜನ ಸಾಮಾನ್ಯನಾಗಿ ಪ್ರವೇಶಿಸಿದ್ದಾರೆ. ಆದರೆ, ಅವರು ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮೊದಲೇ ಸೋಶಿಯಲ್ ಮಿಡಿಯಾದಲ್ಲಿ 'ರೈತರ ಮಗ' (ರೈತು ಬಿಡ್ಡಾ) ಎಂದು ಫೇಮಸ್ ಆಗಿದ್ದಾರೆ. ಬಿಗ್ ಬಾಸ್‌ಗೆ ಹೋಗುವ ಮೊದಲು ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 555k ಫಾಲೋವರ್ಸ್ ಇದ್ದರು. ಈ ಯುವ ರೈತ 1 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.

Bigg Boss Telugu 7: Pallavi Prashanth Becomes Bigg Boss Telugu 7 Winner

ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ಶೋನ ಅಭಿಮಾನಿಯಾಗಿದ್ದು, ಈ ರಿಯಾಲಿಟಿ ಶೋ ಬಗ್ಗೆ ತಿಳಿದಾಗಿನಿಂದ, ಅವರು ಬಿಗ್ ಬಾಸ್ ಮನೆಗೆ ಕರೆಯುವಂತೆ ಹಲವು ವೀಡಿಯೊಗಳನ್ನು ಮಾಡಿದ್ದರು. ಅದೃಷ್ಟವಶಾತ್ ಅವರಿಗೆ ಈ ಅವಕಾಶ ಬಂದಿತ್ತು. ಅದನ್ನು ಸರಿಯಾಗಿ ಬಳಸಿಕೊಂಡ ಪಲ್ಲವಿ ಪ್ರಶಾಂತ್ ಇಂದು ಬಿಗ್ ಬಾಸ್ ಟ್ರೋಫಿ ಜೊತೆಗೆ ಲಕ್ಷಾಂತ ರೂಪಾಯಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಬಿಗ್ ಬಾಸ್ 7 ತೆಲುಗು ಸೀಸನ್‌ನ ವಿನ್ನರ್ ಆಗಿದ್ದಕ್ಕಾಗಿ, ಪಲ್ಲವಿ ಪ್ರಶಾಂತ್ ರೂ 35 ಲಕ್ಷ ನಗದು ಬಹುಮಾನವನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ.

More from Filmibeat

English summary
Bigg Boss Telugu 7: Pallavi Prashanth Winner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X