ತೆಲುಗು ಬಿಗ್ ಬಾಸ್‌ನಿಂದ ಕನ್ನಡತಿ ಶೋಭಾ ಶೆಟ್ಟಿ ಔಟ್: ಸಂಭ್ರಮಿಸಿದ ತೆಲುಗು ವೀಕ್ಷಕರು!

ಬಿಗ್ ಬಾಸ್ ತೆಲುಗು ಸೀಸನ್ ಏಳರ 14 ನೇ ವಾರದ ವೀಕೆಂಡ್ ಸಂಚಿಕೆಯಲ್ಲಿ ಕನ್ನಡಿಗರಿಗೆ ಬೇಸವಾಗುವ ಘಟನೆ ನಡೆದಿದೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮಿಂಚಿ ಈಗ ತೆಲುಗು ಕಿರುತೆರೆಯಲ್ಲಿ ಛಾಪು ಮೂಡಿಸುತ್ತಿರುವ ನಟಿ ಶೋಭಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ. ಫೈನಲ್‌ಗೆ ಹೋಗುವ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದ ಅವರು ದೊಡ್ಮನೆಯಿಂದ ಹೊರ ಬಂದಿದ್ದಾರೆ.

ಕನ್ನಡತಿ ಶೋಭಾ ಶೆಟ್ಟಿ ತೆಲುಗು ಬಿಗ್ ಬಾಸ್ ಮನೆಗೆ ಹೋಗುವ ಮೊದಲೇ ಸೆಲಬ್ರಿಟಿಯಾಗಿದ್ದರು. ಹಲವು ಬಾರಿ ಜಗಳ ಮತ್ತು ತಪ್ಪುಗಳಿಂದ ಜನ ಅವರನ್ನು ಹೇಟ್ ಮಾಡಲು ಪ್ರಾರಂಭಿಸಿದ್ದರು. ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಬೇಕು ಎಂಬ ಒತ್ತಡ ಕೂಡ ಇತ್ತು. ಈ ಬಾರಿ ಅವರನ್ನು ಮನೆಯಿಂದ ಎಲಿಮಿನೇಟ್ ಮಾಡಿದ್ದು, ಹಲವರು ಅದನ್ನು ಸಂಭ್ರಮಿಸಿದ್ದಾರೆ.

Bigg Boss Telugu 7 Week 14: Why Actress Shobha Shetty Elimination Being Celebrated

ಬಿಗ್ ಬಾಸ್ ತೆಲುಗಿನಿಂದ ಕನ್ನಡತಿ ಔಟ್!

ಕನ್ನಡ ಬಿಗ್ ಬಾಸ್ ಜೊತೆಗೆ ತೆಲುಗು ಶೋ ಮೇಲೂ ಕನ್ನಡಿಗರ ಗಮನ ಇತ್ತು. ಅದಕ್ಕೆ ಕಾರಣ ನಟಿ ಶೋಭಾ ಶೆಟ್ಟಿ. ಮೊದಲಿನಿಂದಲೂ ನಟಿ ಶೋಭಾ ಶೆಟ್ಟಿ ಫೈನಲ್‌ಗೆ ಹೋಗುತ್ತಾರೆ ಎಂಬ ಭರವಸೆ ಮೂಡಿಸಿದ್ದರು. ಆದರೆ, ಕೆಲವು ತಪ್ಪುಗಳು ಅವರನ್ನು ಮನೆಯಿಂದ ಹೊರ ಹೋಗುವಂತೆ ಮಾಡಿವೆ. ಜೊತೆಗೆ ಅವರ ಸಂಭಾವನೆ ವಿಚಾರ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ.

ಬಿಗ್ ಬಾಸ್ 7 ತೆಲುಗು ಮುಕ್ತಾಯದ ಹಂತದಲ್ಲಿದೆ. ಈಗಾಗಲೇ ಫೈನಲ್‌ಗೆ ಒಬ್ಬ ಸ್ಪರ್ಧಿ ಆಯ್ಕೆಯಾಗಿದ್ದಾರೆ. ಮನೆಯಲ್ಲಿ ಅತ್ಯಂತ ಜನಪ್ರಿಯ ಮತ್ತು ವಿವಾದಾತ್ಮಕ ಸೆಲೆಬ್ರಿಟಿ ಆಗಿದ್ದ ಶೋಭಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ. ಹೀಗಾಗಿ ಉಳಿದ ನಾಲ್ವರಲ್ಲಿ ಮತ್ತೊಬ್ಬರು ಎಲಿಮಿನೇಟ್ ಆಗಲಿದ್ದಾರೆ. ಉಳಿದವರು ಫೈನಲ್‌ಗೆ ಹೋಗಲಿದ್ದಾರೆ.

ನೆಗಟಿವಿಟಿ ಹರಡುತ್ತಿದ್ದರಾ ಶೋಭಾ ಶೆಟ್ಟಿ!?

ನಟಿ ಶೋಭಾ ಶೆಟ್ಟಿ ಬಿಗ್ ಬಾಸ್ ಶೋನಲ್ಲಿನ ತನ್ನ ನಡವಳಿಕೆಯಿಂದ ಅನೇಕರಿಂದ ಇಷ್ಟವಾಗಲಿಲ್ಲ. ಆಕೆ ಮನೆಯಲ್ಲಿ ನೆಗೆಟಿವಿಟಿ ಹರಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿತ್ತು. ಗುಂಪಿನ ಆಟ ಆಡುವಾಗ ಕಿರುಚುತ್ತಾರೆ. ಒರಟು ಒರಟಾಗಿ ಮಾತನಾಡುತ್ತಾರೆ ಎಂದು ಮನೆಯ ಇತರ ಸದಸ್ಯರು ಸೇರಿ ಹೊರಗಡೆ ಕೂಡ ಅವರ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಲಾಗುತ್ತಿತ್ತು.

Bigg Boss Telugu 7 Week 14: Why Actress Shobha Shetty Elimination Being Celebrated

ಒಂದು ಹಂತದ ನಂತರ, ಆಕೆಯನ್ನು ಮನೆಯಿಂದ ಎಲಿಮಿನೇಟ್ ಮಾಡಬೇಕು ಎಂಬ ಗಲಾಟೆ ನಡೆದಿತ್ತು. ಜೊತೆಗೆ ಆಕೆ ಬಿಗ್ ಬಾಸ್ ಪ್ರಸಾರವಾಗುತ್ತಿರುವ 'ಸ್ಟಾರ್ ಮಾ' ವಾಹಿನಿಗೆ ಸೇರಿರುವ ಕಾರಣ ಬಿಗ್ ಬಾಸ್ ಆಯೋಜಕರು ಆಕೆಯನ್ನು ಎಲಿಮಿನೇಟ್ ಮಾಡುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಕೊನೆಗೆ ನಿನ್ನೆ ಎಲಿಮಿನೇಟ್ ಮಾಡಲಾಗಿದೆ.

ಶೋಭಾ ಶೆಟ್ಟಿ ಸಂಭಾವನೆ ಇಷ್ಟೊಂದಾ!?

ಧಾರಾವಾಹಿ ಮತ್ತು ಸೋಶಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಆಗಿರುವ ಶೋಭಾ ಶೆಟ್ಟಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ಜೊತೆಗೆ ತಮ್ಮ ಧಾರಾವಾಹಿಗಳ ಮೂಲಕ ಮನೆ ಮನೆಗಳಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ಅವರಿಗೆ ದೊಡ್ಮನೆಯಲ್ಲಿ ಇರಲು ಉತ್ತಮ ಸಂಭಾವನೆಯನ್ನೇ ನೀಡಲಾಗಿದೆ.

ಶೋಭಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಇರಲು ವಾರಕ್ಕೆ 2.5 ಲಕ್ಷ ರೂಪಾಯಿಯಂತೆ ರಿಯಾಲಿಟಿ ಶೋ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈಗಾಗಲೇ 14 ವಾರಗಳ ಕಾಲ ಮನೆಯಲ್ಲಿ ಉಳಿದಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಇದ್ದ ಎಲ್ಲಾ ಸಮಯಕ್ಕಾಗಿ, ಶೋಭಾ ಶೆಟ್ಟಿ ಸುಮಾರು 35 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎಂಬ ಮಾಹಿತಿಯಿದೆ.

More from Filmibeat

English summary
Bigg Boss Telugu Elimination: Actress Shobha Shetty eliminated
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X