Bigg Boss: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಬಿಗ್‌ಬಾಸ್ ಸ್ಪರ್ಧಿಗೆ ಹೃದಯಾಘಾತ

By ಫಿಲ್ಮಿಬೀಟ್ ಡೆಸ್ಕ್

ದೇಶ್ಯಾದ್ಯಂತ ಕಿರುತೆರೆಯಲ್ಲಿ ಬಿಗ್‌ ಬಾಸ್ ರಿಯಾಲಿಟಿ ಶೋನದ್ದೇ ಹವಾ ಶುರುವಾಗಿದೆ. ಬಹುತೇಕ ಎಲ್ಲಾ ಪ್ರಮುಖ ಭಾಷೆಯಲ್ಲಿಯೂ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭ ಆಗಿದೆ. ಈಗಾಗಲೇ ಬಿಗ್ ಬಾಸ್ ಕನ್ನಡ ಮೂರನೇ ವಾರಕ್ಕೆ ಕಾಲಿಟ್ಟಿದೆ. ಅದರಂತೆ, ಬಿಗ್ ಬಾಸ್ ಹಿಂದಿ, ಬಿಗ್ ಬಾಸ್ ತೆಲುಗು, ಬಿಗ್‌ ಬಾಸ್ ತಮಿಳು ಆರಂಭ ಆಗಿವೆ. ಈ ಎಲ್ಲಾ ಶೋಗಳು ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿವೆ.

ಬಿಗ್‌ ಬಾಸ್ ಕನ್ನಡ 11 ಅದ್ಧೂರಿಯಾಗಿ ಆರಂಭ ಆಗಿದೆ. 15 ಮಂದಿ ಸದಸ್ಯರು ಬಿಗ್ ಬಾಸ್ ಮನೆಯೊಳಗಿದ್ದು, ಆಟವನ್ನು ಮುಂದುವರೆಸಿದ್ದಾರೆ. ಲಾಯರ್ ಜಗದೀಶ್, ರಂಜಿತ್ ಇಬ್ಬರೂ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದು ಮೂರನೇ ವಾರದಲ್ಲಿಯೇ ವೀಕ್ಷಕರಿಗೆ ನಿರಾಸೆಯಾಗಿದೆ. ಈ ಮೂರು ವಾರಗಳಲ್ಲಿ ಬಿಗ್‌ ಬಾಸ್ ಕನ್ನಡದ ಜನಪ್ರಿಯ ಸ್ಪರ್ಧಿಗಾಗಿದ್ದಿದ್ದು ಲಾಯರ್ ಜಗದೀಶ್. ಅವರೇ ಮಹಿಳೆಯ ವಿರುದ್ಧ ಕೆಟ್ಟ ಪದ ಬಳಿಕ ಹೊರಬಂದಿದ್ದಾರೆ.

Bigg Boss telugu 8 contestant Gangavva suffers heart attack inside the house

ಕನ್ನಡದಂತೆಯೇ ಬಿಗ್ ಬಾಸ್ ತೆಲುಗು ಕೂಡ ಆರಂಭ ಆಗಿದೆ. ತೆಲುಗಿನಲ್ಲಿ 8ನೇ ಸೀಸನ್ ಆರಂಭ ಆಗಿದೆ. ಅಲ್ಲಿ ಟಾಲಿವುಡ್ ಮನ್ಮಥ ನಾಗಾರ್ಜುನ ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋ ಅನ್ನು ನಡೆಸಿಕೊಡುತ್ತಿದ್ದಾರೆ. ಇದೇ ಮನೆಯೊಳಗೆ ಸ್ಪರ್ಧಿಯಾಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದವರಿಗೆ ದಿಢೀರನೇ ಹೃದಯಾಘಾತವಾಗಿದೆ ಎಂಬ ಸುದ್ದಿ ಆತಂಕ ಹುಟ್ಟಿಸಿದೆ. ಹಾಗಿದ್ದರೆ ಆ ಸ್ಪರ್ಧಿ ಯಾರು? ಈಗ ಅವರ ಆರೋಗ್ಯ ಸ್ಥಿತಿ ಹೇಗಿದೆ? ತಿಳಿಯಲು ಮುಂದೆ ಓದಿ.

ಬಿಗ್ ಬಾಸ್ ತೆಲುಗು ಸೀಸನ್ 8ರಲ್ಲಿ ಈ ಬಾರಿಗೆ 60 ವರ್ಷದ ಮಹಿಳೆಯೊಬ್ಬರು ಎಂಟ್ರಿ ಕೊಟ್ಟಿದ್ದರು. ತೆಲುಗಿನ ಜನಪ್ರಿಯ ಯೂಟ್ಯೂಬರ್ ಗಂಗಮ್ಮ ಅವರನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಕೊಡಿಸಲಾಗಿತ್ತು. ಇದೇ ಸ್ಪರ್ಧಿ ಮನೆಯೊಳಗೆ ಇರುವಾಗಲೇ ಹೃದಯಾಘಾತವಾಗಿದೆ ಎಂಬ ಸುದ್ದಿ ಬಂದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತೆಲುಗು ರಾಜ್ಯಗಳಲ್ಲಿ ಗಂಗವ್ವ ಸಿಕ್ಕಾಪಟ್ಟೆ ಫೇಮಸ್. ಈ ಕಾರಣಕ್ಕೆ 60 ವರ್ಷದ ಗಂಗವ್ವರನ್ನು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಯೊಳಗೆ ಕಳುಹಿಸಿಕೊಡಲಾಗಿತ್ತು. ಉಳಿದ ಸ್ಪರ್ಧಿಗಳಿಗೆ ಪೈಪೋಟಿ ಕೊಡುತ್ತಿದ್ದ ಗಂಗವ್ವಗೆ ಸೋಮವಾರ ರಾತ್ರಿ (ಅಕ್ಟೋಬರ್ 21) ಹೃದಯಾಘಾತವಾಗಿದೆ ಎಂದು ವರದಿಯಾಗಿದೆ. ಕೂಡಲೇ ಅವರನ್ನು ಶೋ ನಿಂದ ಹೊರಗೆ ಕರೆದುಕೊಂಡು ಬಂದಿದ್ದು ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್ ಸ್ಪರ್ಧಿ ಗಂಗವ್ವಗೆ ಚಿಕಿತ್ಸೆ ಕೊಡಿಸಿದ ಬಳಿಕ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಕಿರುತೆರೆ ವೀಕ್ಷಕರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಗಂಗವ್ವ ಬಿಗ್ ಬಾಸ್ ಮನೆಯೊಳಗೆ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದರು. ಬಿಗ್ ಬಾಸ್ ತೆಲುಗು ಸೀಸನ್ 4ರಲ್ಲಿ ಭಾಗವಹಿಸಿದ್ದರು. ಆದರೆ, 7ನೇ ವಾರಕ್ಕೆ ಮನೆಯಿಂದ ಹೊರಬಿದ್ದಿದ್ದರು. ಆರೋಗ್ಯ ಹದಗೆಟ್ಟಿದ್ದರಿಂದ ವೈದ್ಯರು ಸಲಹೆ ಮೇರೆಗೆ ಮನೆಯಿಂದ ಹೊರಗೆ ಕಳುಹಿಸಲಾಗಿತ್ತು.

ಗಂಗವ್ವ ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. 'ಮೈ ವಿಲೇಜ್ ಶೋ' ಅನ್ನೋ ಯೂಟ್ಯೂಬ್ ಚಾನೆಲ್ ಮೂಲಕ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಫೇಮಸ್ ಆಗಿದ್ದರು. ಇದೂವರೆಗೂ ಬಿಗ್ ಬಾಸ್ ಮನೆಯೊಳಗೆ ಗಂಗವ್ವ ಅವರನ್ನು ಸ್ಪರ್ಧಿಗಳು ನಾಮಿನೇಟ್ ಮಾಡಿಲ್ಲ. ಕಿರುತೆರೆ ವೀಕ್ಷಕರಿಗೆ ಇದು ಅಚ್ಚರಿ ಮೂಡಿಸಿತ್ತು. ಅಷ್ಟರೊಳಗೆ ಹೃದಯಾಘಾತವಾಗಿದೆ. ಸದ್ಯಕ್ಕೀಗ ಚೇತರಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Bigg Boss contestant suffers heart attack inside the house:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X