ಬಿಗ್ ಬಾಸ್' ಮನೆಗೆ ಬಂದ 15 ಜನ ಯಾರು ? ಇವರ ಹಿನ್ನೆಲೆ ಏನು ? ಕಾಮನ್ ಮ್ಯಾನ್ ಯಾರು ?

ಪ್ರತಿ ವರ್ಷ ''ಬಿಗ್‌ಬಾಸ್'' ಕಾರ್ಯಕ್ರಮದಲ್ಲಿ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಇರದಿದ್ದರೆ ಈ ಶೋ ಅಪೂರ್ಣವೆನಿಸುತ್ತದೆ. ಕಾರ್ಯಕ್ರಮದ ಆಯೋಜಕರಿಗೆ.. ವಾಹಿನಿಯವರಿಗೆ.. ಕೂಡ ಈ ವಿಚಾರ ಚೆನ್ನಾಗೇ ಗೊತ್ತು. ಹೀಗಾಗಿಯೇ ಎಲ್ಲರನ್ನೂ ಇರಿಟೇಟ್ ಮಾಡುವ, ನರಿ ಬುದ್ಧಿ ಪ್ರದರ್ಶಿಸುವ, ಡ್ರಾಮಾ ಮಾಡುವ ವ್ಯಕ್ತಿತ್ವಗಳನ್ನೇ ಹುಡುಕಾಡಿ ಮನೆಯಲ್ಲಿ ಸೇರಿಸಲು ಕಸರತ್ತು ಮಾಡುತ್ತಾರೆ. ಇನ್ನು ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿಯೇ ಹಲವಾರು ಜನ ಬಿಗ್ ಬಾಸ್‌ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ.

ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಯಾಕೆಂದರೆ ''ಬಿಗ್ ಬಾಸ್‌''ನ ನಿಯಮಾವಳಿಯೇ ಹಾಗೇ ಇದೆ. ಮಾನದಂಡಕ್ಕೆ ಕೇವಲ ಹೆಸರು ಮಾತ್ರ ಮುಖ್ಯವಲ್ಲ ಬದಲಿಗೆ ಆ ಹೆಸರಿಗೊಂದು ಸಮ್ಮೋಹಕವಾದ ಶಕ್ತಿ ಇರಬೇಕು.. ಆ ಹೆಸರು ಕೇಳಿದರೆ ಸಾಕು ಜನಸಾಮಾನ್ಯರು.. ಕಾರ್ಯಕ್ರಮ ನೋಡಲು ಬಂದು ಕೂರಬೇಕು.

Bigg Boss Telugu 9 Contestants REVEALED Meet the Cast Their Photos and Shocking Profiles

ಸದ್ಯ ಈ ಎಲ್ಲಾ ಲೆಕ್ಕಾಚಾರಗಳನ್ನು ಹಾಕಿ ತೆಲುಗು ''ಬಿಗ್ ಬಾಸ್'' ಮನೆಗೆ 15ಜನರನ್ನು ಆಯ್ಕೆ ಮಾಡಿ ಕಳುಹಿಸಲಾಗಿದೆ. ಆ 15 ಜನರು ಯಾರು.. ? ಅವರ ಹಿನ್ನೆಲೆ ಏನು ? ಎನ್ನುವುದರ ವಿವರ ಇಲ್ಲಿದೆ.

ಬಿಗ್ ಬಾಸ್ ಮನೆಯಲ್ಲಿ ಕಾಮನ್ ಮ್ಯಾನ್‌ ಗಳ ಅಬ್ಬರ

ತೆಲುಗು ''ಬಿಗ್ ಬಾಸ್‌''ನಲ್ಲಿ ಈ ಬಾರಿ ಕಾಮನ್ ಮ್ಯಾನ್‌ಗಳು ಕೂಡ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿತ್ತು. ಈ ಹಿನ್ನೆಲೆ ಹಲವಾರು ಜನ ''ಬಿಗ್ ಬಾಸ್‌'' ಬಳಿ ತಮ್ಮನ್ನು ಮನೆಯೊಳಗೆ ಸೇರಿಸಿಕೊಳ್ಳುವಂತೆ ಮನವಿಯನ್ನು ಮಾಡಿದ್ದರು. ಆ ಪೈಕಿ 45 ಜನರನ್ನು ಆಯ್ಕೆ ಮಾಡಿ ಅವರಿಗೆ ''ಅಗ್ನಿ ಪರೀಕ್ಷೆ''ಯನ್ನು ಇಡಲಾಗಿತ್ತು. ಈ 45 ಜನರಲ್ಲಿ ಕೊನೆಯಲ್ಲಿ ಆರು ಜನರನ್ನು ಆಯ್ಕೆ ಮಾಡಲಾಗಿದ್ದು ಆ ಆರು ಜನರ ಹೆಸರು ಮತ್ತು ಅವರ ಹಿನ್ನೆಲೆ ಈ ಕೆಳಗಿನಂತೆ ಇದೆ.

1- ಹರಿತಾ ಹರೀಶ್

ಸಾಮಾಜಿಕ ಜಾಲತಾಣ ಅವರ ಬದುಕು ರೂಪಿಸಿದೆ. ಇದಕ್ಕೆ ಮತ್ತೊಂದು ಉದಾಹರಣೆಯೇ ಹರಿತಾ ಹರೀಶ್. ಯೂಟ್ಯೂಬ್ ಮೂಲಕ ಅನೇಕರ ಮನ ಮತ್ತು ಮನೆ ತಲುಪಿರುವ ಹರಿತಾ ತುಂಬಾನೇ ಧೈರ್ಯವಂತ. ಎದ್ದು ಬಂದು ಎದೆಗೆ ಒದ್ದರೂ ಚಿಂತೆ ಇಲ್ಲ. ಇದ್ದಿದ್ದನ್ನು ಇದ್ದಂತೆಯೇ ನೇರವಾಗಿ ಹೇಳುವ ವ್ಯಕ್ತಿತ್ವ ಇವರದ್ದು. 'ಮಾಸ್ಕ್ ಮ್ಯಾನ್' ಎಂದೇ ಇವರು ಚಿರಪರಿಚಿತ.

2. ಶ್ರೀಜಾ ದಮ್ಮು

ಇನ್‌ಸ್ಟಾಗ್ರಾಮ್‌ನ ಪ್ರಭಾವಿ ವ್ಯಕ್ತಿ ಇವರು. 140,578 ಫಾಲೋವರ್ಸ್‌ಗಳನ್ನು ಹೊಂದಿರುವ ಶ್ರೀಜಾ ಪ್ರಮುಖವಾಗಿ ಡ್ಯಾನ್ಸ್ ಮತ್ತು ಲೈಫ್ ಸ್ಟೈಲ್‌ಗೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

3. ಡಿಮಾನ್ ಪವನ್

ತೆಲುಗು ''ಬಿಗ್ ಬಾಸ್‌'' ಪ್ರವೇಶ ಮಾಡಿರುವ ಡಿಮಾನ್ ಪವನ್, ಫಿಟ್ನೆಸ್‌ನತ್ತ ಅಪಾರ ಒಲವು ಹೊಂದಿರುವ ವ್ಯಕ್ತಿ. ಇವರದ್ದು ತುಂಬಾನೇ ಶಾಂತ ಸ್ವಭಾವ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ''ಅಗ್ನಿ ಪರೀಕ್ಷೆ'' ಪ್ರೇಕ್ಷಕರ ಹೃದಯ ಗೆದ್ದು ಸದ್ಯ ಮನೆಗೆ ಬಂದ ಇವರನ್ನು ಇನ್‌ಸ್ಟಾದಲ್ಲಿ 180,091 ಜನ ಹಿಂಬಾಲಿಸುತ್ತಿದ್ದಾರೆ.

4. ಪ್ರಿಯಾ ಶೆಟ್ಟಿ

ಅಭಿನಯದಲ್ಲಿ ಆಸಕ್ತಿ ಹೊಂದಿರುವ ಪ್ರಿಯಾ ಶೆಟ್ಟಿ ವೃತ್ತಿಯಲ್ಲಿ ವ್ಯೆದ್ಯೆ. ಇವರು ಕೂಡ ''ಅಗ್ನಿ ಪರೀಕ್ಷೆ''ಯಲ್ಲಿ ಗಮನ ಸೆಳೆದ ಪ್ರಮುಖ ಸ್ಫರ್ಧಿ.

5. ಕಲ್ಯಾಣ್ ಪದಲ

ಸೇನಾ ಹಿನ್ನೆಲೆಯಿಂದ ಬಂದಿರುವ ಕಲ್ಯಾಣ್ ಪದಲ್ ಈ ಬಾರಿ ''ಬಿಗ್ ಬಾಸ್'' ಮನೆಯನ್ನು ಪ್ರವೇಶ ಮಾಡಿರುವ ಮತ್ತೊಬ್ಬ ಸಾಮಾನ್ಯ ಸ್ಫರ್ಧಿ.ಮನೆಯೊಳಗೆ ಹೋಗುವ ಮೊದಲು ಇವರು ಕೂಡ ''ಅಗ್ನಿ ಪರೀಕ್ಷಾ''ದಲ್ಲಿ ಇವರು ಭಾಗವಹಿಸಿದ್ದರು.

6.ಮರ್ಯಾದ ಮನೀಶ್

"ಫೆಲೋ" ಸ್ಟಾರ್ಟಪ್‌ನ ಸಹ-ಸಂಸ್ಥಾಪಕ ಮತ್ತು ಪ್ರತಿಷ್ಠಿತ ಫೋರ್ಬ್ಸ್ ನ 30 ಜನರ ಲಿಸ್ಟ್‌ನಲ್ಲಿ ಕಾಣಿಸಿಕೊಂಡ ಮರ್ಯಾದ ಮನೀಶ್ ಕೂಡ ಈ ಬಾರಿಯ ''ಬಿಗ್ ಬಾಸ್‌'' ಮನೆಗೆ ಎಂಟ್ರಿ ನೀಡಿದ್ಧಾರೆ.

ಇನ್ನೂ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕನ್ನಡದವರನ್ನು ಕೂಡ ಆಯ್ಕೆ ಮಾಡಲಾಗಿದೆ. ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪರಭಾಷೆಯ ನಟಿಯನ್ನು ಕೂಡ ಮನೆಗೆ ಕಳುಹಿಸಲಾಗಿದೆ. ಹೀಗೆ ಕನ್ನಡದ ಹಿನ್ನೆಲೆಯಿಂದ ಹೋದ ಸ್ಫರ್ಧಿಗಳು ಯಾರ್ಯಾರು ಎಂದು ತಿಳಿಯಲು ಮುಂದೆ ಓದಿ.

1. ಸಂಜನಾ ಗಲ್ರಾನಿ

ಕನ್ನಡದ '' ಬಿಗ್ ಬಾಸ್‌'' ಸೀಸನ್ 1ರಲ್ಲಿ ಕಾಣಿಸಿಕೊಂಡಿದ್ದ ಬಹುಬೇಗನೇ ಮನೆಯಿಂದ ಹೊರಗಡೆ ಕೂಡ ಬಂದಿದ್ದ ಸಂಜನಾ ಗಲ್ರಾನಿ ಈ ಬಾರಿಯ ತೆಲುಗು ''ಬಿಗ್ ಬಾಸ್'' ಮನೆ ಪ್ರವೇಶಿಸಿದ್ದಾರೆ. ತೆಲುಗಿನ ಹಲವು ಚಿತ್ರಗಳಲ್ಲಿ ಇವರು ಅಭಿನಯಿಸಿರುವ ಹಿನ್ನೆಲೆ ಇವರಿಗೆ ಆಯೋಜಕರು ಮಣೆ ಹಾಕಿದ್ಧಾರೆ.

2. ತನುಜಾ ಗೌಡ

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ 6-5=2 ಚಿತ್ರದಲ್ಲಿ ಕಾಣಿಸಿಕೊಂಡಿದ್ದ ತನುಜಾ ಗೌಡ, ''ಮುದ್ಧ ಮಂದಾರಂ'' ಧಾರಾವಾಹಿಯ ಮೂಲಕ ತೆಲುಗಿನಲ್ಲಿ ಜನಪ್ರಿಯರಾದರು. 1500 ಎಪಿಸೋಡ್‌ಗಳ ಈ ಧಾರಾವಾಹಿ ಇವರಿಗೆ ಅಪಾರವಾದ ಹೆಸರು ಕೀರ್ತಿಯನ್ನು ತಂದು ಕೊಡ್ತು.

3. ಫ್ಲೋರಾ ಸೈನಿ

ಫ್ಲೋರಾ ಸೈನಿ ಅಲಿಯಾಸ್ ಆಶಾ ಸೈನಿ. ಚಂಡೀಗಡನ ಚೆಲುವೆ. 1999ರಲ್ಲಿ ತೆಲುಗಿನ ''ಪ್ರೇಮಕೋಸಂ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಫ್ಲೋರಾ ಆ ನಂತರ ನಾಯಕಿಯಾಗಿ ಹೆಚ್ಚು ಕಡಿಮೆ 50 ಚಿತ್ರಗಳನ್ನು ಮಾಡಿದರು. ತೆಲುಗಿನಿಂದ ಆ ನಂತರ ಕನ್ನಡ ಚಿತ್ರರಂಗಕ್ಕೂ ಕೂಡ ವಲಸೆ ಬಂದಿದ್ದ ಫ್ಲೋರಾ ಸೈನಿ, ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಅಭಿನಯದ ''ಕೋದಂಡರಾಮ'' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ''ಸಂಗೀತಾ'' ಪಾತ್ರವನ್ನು ನಿರ್ವಹಿಸಿದ್ದರು. ಆ ನಂತರ ''ಗಿರಿ''.. ''ನಮ್ಮಣ್ಣ''.. ''ವ್ಹಾರೇ ವ್ಹಾ''.. ''ಸಿಐಡಿ ಈಶಾ''.. ಚಿತ್ರಗಳಲ್ಲಿ ಕೂಡ ಫ್ಲೋರಾ ಆಕ್ಟ್ ಮಾಡಿದ್ದರು. ಇಂಥಾ ಫ್ಲೋರಾ ಸೈನಿ ಕೂಡ ಈ ಬಾರಿ ''ಬಿಗ್ ಬಾಸ್‌'' ಮನೆಗೆ ಬಂದಿದ್ಧಾರೆ.

ಕೇವಲ ಇವರಷ್ಟೇ ಅಲ್ಲ ಚಿತ್ರರಂಗದ ಹಿನ್ನೆಲೆ ಇರುವ ಮತ್ತು ಕಾಮಿಡಿ ಕಾರ್ಯಕ್ರಮ ಸೇರಿ ಬೇರೆ ಬೇರೆ ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಂಡಿರುವರನ್ನು ಕೂಡ ಈ ಬಾರಿ ''ಬಿಗ್ ಬಾಸ್‌'' ಮನೆಗೆ ಕಳುಹಿಸಲಾಗಿದೆ. ಅವರ ವಿವರ ತಿಳಿಯಲು ಮುಂದೆ ಓದಿ.

1.ಹರ್ಷಿತ್ ರೆಡ್ಡಿ

ಹರಿತಾ ಹರೀಶ್ ಅವರಿಗೆ ಯೂಟ್ಯೂಬ್ ಕೈ ಹಿಡಿದರೆ ಹರ್ಷಿತ್ ರೆಡ್ಡಿ ಅವರಿಗೆ ಟಿಕ್ ಟಾಕ್ ಕೈ ಹಿಡಿದಿತ್ತು. ಟಿಕ್ ಟಾಕ್ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ ಹರ್ಷಿತ್ ಕಲ್ಕಿ ಮತ್ತು ಶುಭಂನಂತಹ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ

2.ರಿತು ಚೌಧರಿ

ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿರುವ ರಿತು ಚೌಧರಿ ಇತ್ತೀಚೆಗೆ '' ಕುಕು ವಿತ್ ಜಾತಿರತ್ನಲು'' ಎಂವ ಅಡುಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಹಾಸ್ಯ ಪ್ರಜ್ಞೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು.

3.ಜಬರ್ದಸ್ತ್ ಇಮ್ಯಾನುಯೆಲ್

ತೆಲುಗಿನ ಪ್ರಖ್ಯಾತ ಕಾರ್ಯಕ್ರಮಗಳಲ್ಲಿ ಒಂದಾದ ''ಜಬರ್ದಸ್ತ್'' ಮೂಲಕ ಬೆಳಕಿಗೆ ಬಂದ, ತಮ್ಮ ಕಾಮಿಡಿ ಟೈಮಿಂಗ್ ಮತ್ತು ಪಂಚ್ ಡೈಲಾಗ್‌ಗಳ ಮೂಲಕವೇ ಹಲವರ ಹೃದಯ ಗೆದ್ದ ಜಬರ್ದಸ್ತ್ ಇಮ್ಯಾನುಯೆಲ್ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದು ಪ್ರೇಕ್ಷಕರು ಹಾಸ್ಯದ ರಸದೌತಣವನ್ನು ನಿರೀಕ್ಷೆ ಮಾಡಬಹುದು

4. ಭರಣಿ ಶಂಕರ್:

ತೆಲುಗು ಕಿರುತೆರೆಯಲ್ಲಿ ಮೂವತ್ತಕ್ಕೂ ಅಧಿಕ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಭರಣಿ ಶಂಕರ್ ಕೂಡ ಈ ಬಾರಿಯ ಬಿಗ್ ಬಾಸ್ ಸ್ಫರ್ಧಿ.ಕಿರುತೆರೆಯಲ್ಲಿ ರೊಮ್ಯಾಂಟಿಕ್ ಹೀರೋ ಪಾತ್ರವನ್ನು ನಿರ್ವಹಿಸಿರುವ ಭರಣಿ ಶಂಕರ್ ಖಳನಾಯಕನ ಪಾತ್ರದಲ್ಲಿ ಕೂಡ ಸೈ ಎನಿಸಿಕೊಂಡಿದ್ದಾರೆ.

5.ಶ್ರಸ್ತಿ ವರ್ಮಾ

ಬೆಸಿಕಲಿ ಡ್ಯಾನ್ಸರ್ ಆಗಿರುವ ಶ್ರಸ್ತಿ ಶರ್ಮಾ ''ರಂಗಸ್ಥಳಂ'' ಮತ್ತು '' ಪುಷ್ಪ'' ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ಧಾರೆ. ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ತೇಜಾ ಅವರನ್ನು ಕುಣಿಸಿದ್ದಾರೆ.

ಕೇವಲ ಇವರಷ್ಟೇ ಅಲ್ಲ ಇವರ ಜೊತೆ ರಾಮು ರಾಥೋಡ್ ಮತ್ತು ಸುಮನ್ ಶೆಟ್ಟಿ ಕೂಡ ಈ ಬಾರಿಯ ''ಬಿಗ್ ಬಾಸ್'' ಮನೆಯನ್ನು ಪ್ರವೇಶ ಮಾಡಿದ್ದಾರೆ. ಇವರಲ್ಲಿ ಯಾರು ಈ ಬಾರಿ ಪ್ರೇಕ್ಷಕರ ಹೃದಯ ಗೆಲ್ತಾರೆ.. ಟ್ರೋಪಿ ಮುಡಿಗೇರಿಸಿಕೊಳ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
The wait is over! Bigg Boss Telugu 9's new cast is here. Find out who's in the house, from popular celebrities to surprising commoners. Click now for photos, bios, and shocking details about the contestants.
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X