Bigg Boss 9 Telugu ; ತೆಲುಗು ಬಿಗ್ ಬಾಸ್‌ನಲ್ಲಿ ಭಾಗವಹಿಸಲಿದ್ದಾರೆ ಕನ್ನಡದ ಖ್ಯಾತ ನಟಿ ?

ಬಿಗ್ ಬಾಸ್ ಜನಪ್ರಿಯವಾದ ಕಾರ್ಯಕ್ರಮ. ಹಲವರು ಈ ಕಾರ್ಯಕ್ರಮವನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡುತ್ತಾರೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲ ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಮರಾಠಿಯಲ್ಲಿ ಈ ಕಾರ್ಯಕ್ರಮಕ್ಕೆ ಅದ್ರದ್ದೇ ಆದ ಡಿಮ್ಯಾಂಡ್ ಇದೆ. ಇಂತಹ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿ ಮತ್ತೆ ಶುರುವಾಗಲಿದೆ.ಈಗಾಗಲೇ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಬಿಗ್ ಬಾಸ್‌ನ ಕೆಲಸಗಳು ಕೂಡ ..

ತೆರೆಮರೆಯಲ್ಲಿ ನಡೆಯುತ್ತಿವೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಿಂದಿಯ ಬಿಗ್ ಬಾಸ್ 19ನೇ ಸೀಸನ್‌ನಲ್ಲಿ ಯಾರೆಲ್ಲ ಈ ಬಾರಿ ಭಾಗವಹಿಸಲಿದ್ದಾರೆ ಎನ್ನುವ ಕುತೂಹಲ ಈಗಾಗಲೇ ಮನೆ ಮಾಡಿದೆ. ಕೆಲವರ ಹೆಸರುಗಳು ಕೂಡ ಚಾಲ್ತಿಯಲ್ಲಿವೆ.

Bigg Boss Telugu 9 Is Kannada Actress Kavya Shetty the Newest Contestant Of Nagarjuna s Show

ಕೇವಲ ಹಿಂದಿ ಮಾತ್ರವಲ್ಲ ನಾಗಾರ್ಜುನ ಸಾರಥ್ಯದಲ್ಲಿ ಈ ಬಾರಿ ಕೂಡ ತೆಲುಗಿನಲ್ಲಿ ಬಿಗ್ ಬಾಸ್‌ ಕಾರ್ಯಕ್ರಮ ಮೂಡಿ ಬರಲಿದ್ದು ಈ ಬಾರಿ ತೆಲುಗು ಬಿಗ್ ಬಾಸ್ ಮನೆಗೆ ಜ್ಯೋತಿ ರೈ, ಕಲ್ಪಿಕಾ ಗಣೇಶ್, ಕಾವ್ಯಾ, ತೇಜಸ್ವಿನಿ, ಕಿರುತೆರೆ ನಟಿ ನವ್ಯಾ ಸ್ವಾಮಿ, ಶ್ರಾವಣಿ ವರ್ಮಾ, ಆರ್‌ ಜೆ ರಾಜ್, ಸಾಯಿ ಕಿರಣ್, ಮುಖೇಶ್ ಗೌಡ, ಚತ್ರಪತಿ ಶೇಖರ್, ನಿರೂಪಕಿ ಸತ್ಯಶ್ರೀ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಇವರಲ್ಲಿ ಯಾರೆಲ್ಲ ಈ ಬಾರಿ ಬಿಗ್ ಬಾಸ್‌ ಮನೆಯನ್ನು ಪ್ರವೇಶಿಸಲಿದ್ದಾರೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯಕ್ಕೆ ''ಕಾವ್ಯಾ ಶೆಟ್ಟಿ''ಗೆ ಬಿಗ್ ಬಾಸ್ ಆಫರ್ ಬಂದಿದೆ ಎನ್ನುವ ಸುದ್ದಿ ಪಕ್ಕದ ಆಂಧ್ರದಲ್ಲಿ ಕೇಳಿ ಬರುತ್ತಿದೆ.

ಹೌದು. ಕಾವ್ಯಾ ಶೆಟ್ಟಿ.. ಕನ್ನಡದ ನಾಯಕಿ. ''ನಮ್ ದುನಿಯಾ ನಮ್ ಸ್ಟೈಲ್'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಕಾವ್ಯಾ ಆ ನಂತರ ''ಇಷ್ಟಕಾಮ್ಯ''.. ''ಸ್ಮೈಲ್ ಪ್ಲೀಸ್''.. ''ಸಿಲಿಕಾನ್ ಸಿಟಿ''.. ''ಸಂಹಾರ''.. ''ಲಂಕೆ''.. ''ರವಿ ಬೋಪಣ್ಣ'' ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು.

ಇದರ ನಡುವೆ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಒಂದು ಸುತ್ತು ಹಾಕಿಕೊಂಡು ಕೂಡ ಬಂದರು. ಇಂಥಾ ಕಾವ್ಯಾ ಶೆಟ್ಟಿ ಸದ್ಯ ನಾಗಾರ್ಜುನ ಸಾರಥ್ಯದಲ್ಲಿ ಮೂಡಿ ಬರಲಿರುವ ಈ ಬಾರಿಯ ಬಿಗ್‌ ಬಾಸ್‌ನ 9ನೇ ಸೀಸನ್‌ನಲ್ಲಿ ಭಾಗವಹಿಸುವ ಸಾಧ್ಯತೆಯ ಕುರಿತು ''ಡೆಕ್ಕನ್‌ ಕ್ರೋನಿಕಲ್'' ವರದಿಯನ್ನು ಮಾಡಿದೆ.

Bigg Boss Telugu 9 Is Kannada Actress Kavya Shetty the Newest Contestant Of Nagarjuna s Show

ಅಂದ್ಹಾಗೇ ತೆಲುಗಿನಲ್ಲಿ ಕನ್ನಡದ ''ಲವ್ ಮಾಕ್ಟೇಲ್'' ಚಿತ್ರದ ರಿಮೇಕ್‌ನಲ್ಲಿ ಅಭಿನಯಿಸಿರುವ ಕಾವ್ಯಾ ಶೆಟ್ಟಿ, ಟಾಲಿವುಡ್‌ನ ಕಿಂಗ್ ಮತ್ತು ಬಿಗ್ ಬಾಸ್‌ನ ನಿರೂಪಕ ನಾಗಾರ್ಜುನ ಜೊತೆ ''ಕಲ್ಯಾಣ್ ಜ್ಯುವೆಲರ್ಸ್'' ಜಾಹೀರಾತಿನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಕಾವ್ಯಾ ಶೆಟ್ಟಿ ಅವರಿಗೆ ತೆಲುಗು ಬಿಗ್‌ ಬಾಸ್‌ನ ಬಾಗಿಲು ತೆರೆಯಲು ಇದು ಕೂಡ ಒಂದು ಕಾರಣವಾಗಿದ್ದರು ಆಗಿರಬಹುದು ಎನ್ನುವ ಮಾತು ಸದ್ಯ ಇದೇ ವೇಳೆ ಕೇಳಿ ಬರುತ್ತಿದೆ.

ಇದಕ್ಕೆ ಪೂರಕವಾಗಿ ಈ ಬಾರಿ ಬಿಗ್ ಬಾಸ್‌ನ ಸ್ಫರ್ಧಿಗಳನ್ನು ನಾಗಾರ್ಜುನ ಆಯ್ಕೆ ಮಾಡಲಿದ್ದಾರೆ ಎನ್ನುವ ಸುದ್ದಿಯನ್ನು 'OTTPlay' ಪ್ರಕಟಿಸಿದೆ . ಕಾವ್ಯಾ ಶೆಟ್ಟಿ ತೆಲುಗು ಬಿಗ್ ಬಾಸ್‌ನ ಪ್ರಬಲ ಸ್ಫರ್ಧಿಯಾಗಬಹುದು ಎಂದು ಕೂಡ ತೆಲುಗು ಕಿರುತೆರೆ ವಲಯ ಮಾತನಾಡಿಕೊಳ್ಳುತ್ತಿದೆ. ನಿಜಕ್ಕೂ ಕಾವ್ಯಾ ಶೆಟ್ಟಿ ಕನ್ನಡದ ಬಿಗ್ ಬಾಸ್‌ನ ಬಿಟ್ಟು ತೆಲುಗು ಬಿಗ್ ಬಾಸ್‌ಗೆ ಹೋಗ್ತಾರಾ ಎನ್ನುವುದಕ್ಕೆ ಉತ್ತರ ಸದ್ಯದಲ್ಲಿಯೇ ಸಿಗಲಿದೆ.

ಇನ್ನುಳಿದಂತೆ ಹಿಂದಿಯ ಬಿಗ್ ಬಾಸ್ ಆಗಸ್ಟ್ 30ರಿಂದ ಶುರುವಾಗಲಿದೆ. ಕನ್ನಡದಲ್ಲಿ ಸೆಪ್ಟೆಂಬರ್‌ನಲ್ಲಿ ಶುರುವಾಗುವ ನಿರೀಕ್ಷೆ ಇದ್ದು ಹಿಂದಿಯ ಜೊತೆ ಜೊತೆಯಲ್ಲಿಯೇ ತೆಲುಗು ಬಿಗ್ ಬಾಸ್ ಶುರುವಾಗುವ ಸಾಧ್ಯತೆ ಇದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ತೆಲುಗಿನಲ್ಲಿ ಈ ಬಾರಿ ಕೇವಲ ಸೆಲೆಬ್ರೀಟಿಗಳು ಮಾತ್ರವಲ್ಲದೇ ಜನಸಾಮಾನ್ಯರಿಗೆ ಕೂಡ ಭಾಗವಹಿಸುವ ಅವಕಾಶ ನೀಡಲಾಗಿದೆ. ಈಗಾಗಲೇ ಅರ್ಜಿಯನ್ನು ಕೂಡ ಕರೆಯಲಾಗಿದೆ. ಸ್ಟಾರ್ ಮಾ ಮತ್ತು ಡಿಸ್ನಿ + ಹಾಟ್‌ ಸ್ಟಾರ್‌ನಲ್ಲಿ ಈ ವರ್ಷ ಕೂಡ ತೆಲುಗು ಬಿಗ್ ಬಾಸ್ ಪ್ರಸಾರವಾಗಲಿದೆ. ಪ್ರಸಾರದ ದಿನಾಂಕ ಶೀಘ್ರದಲ್ಲಿಯೇ ಅಧಿಕೃತವಾಗಿ ಹೊರ ಬೀಳಲಿದೆ.

More from Filmibeat

English summary
Will Kavya Shetty be the game-changer in Bigg Boss Telugu 9? Learn more about the popular Kannada actress rumored to join Nagarjuna's highly anticipated show this season
Read more about: ಟಿವಿ biggboss bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X