'ಬಿಗ್ ಬಾಸ್'ನಲ್ಲಿ ಸ್ಪರ್ಧಿಗಳಿಗೆ ಪ್ರೆಗ್ನೆನ್ಸಿ ಪರೀಕ್ಷೆ ಕಡ್ಡಾಯ.!
''ಬಿಗ್ ಬಾಸ್ ಗೆ ನಿಮ್ಮನ್ನು ಆಯ್ಕೆ ಮಾಡಿದ್ರೆ ನೀವು 'ಬಿಗ್ ಬಾಸ್'ನ ಹೇಗೆ ಸಂತೃಪ್ತಿ ಪಡಿಸುತ್ತೀರಾ.......''
''ಬಿಗ್ ಬಾಸ್ ಮನೆಯಲ್ಲಿ ನೂರು ದಿನ ಸೆಕ್ಸ್ ಇಲ್ಲದೇ ಹೇಗೆ ಇರ್ತೀರಾ....''
ತೆಲುಗು ಬಿಗ್ ಬಾಸ್ ಆಯ್ಕೆ ತಂಡದ ಸದಸ್ಯರು ಸ್ಪರ್ಧಿಗಳನ್ನ ಆಯ್ಕೆ ಮಾಡುವಾಗ ಇಂತಹ ಪ್ರಶ್ನೆಗಳನ್ನ ಕೇಳುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಕೆಲವು ನಟಿಯರು ಆರೋಪಿಸಿದ್ದರು. ಇಂತಹ ಶೋ ಪ್ರಸಾರ ಮಾಡಬಾರದು, ಇದರಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ ಎಂದು ಗಾಯಿತ್ರಿ ಗುಪ್ತಾ ಮತ್ತು ಶ್ವೇತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಆ ನಟಿಯರ ಹೇಳಿಕೆ ನೋಡಿದ್ಮೇಲೆ ಬಿಗ್ ಬಾಸ್ ನಲ್ಲಿ ಹೀಗೆಲ್ಲ ಕೇಳ್ತಾರಾ ಎಂದು ಜನಸಾಮಾನ್ಯರು ಚಿಂತಿಸುವಂತಾಗಿತ್ತು. ಇದೀಗ, ತೆಲುಗು ಬಿಗ್ ಬಾಸ್ ಮೂರನೇ ಆವೃತ್ತಿಯಲ್ಲಿ ಮೊದಲ ವಾರ ಎಲಿಮಿನೇಟ್ ಆದ ಹೇಮಾ ಅವರು ಇನ್ನೊಂದು ಸತ್ಯವನ್ನ ಹೊರಹಾಕಿದ್ದಾರೆ. ಏನದು?

ಪ್ರೆಗ್ನೆನ್ಸಿ ಪರೀಕ್ಷೆ ಮಾಡಿಸಿಕೊಳ್ಳಿ.!
ಬಿಗ್ ಬಾಸ್ ಶೋಗೆ ಆಯ್ಕೆಯಾಗಬೇಕಾದರೇ ಯಾವೆಲ್ಲ ಮಾನದಂಡಗಳಿವೆ ಎಂಬುದು ಸಾರ್ವಜನಿಕರಿಗೆ ಗೊತ್ತಿಲ್ಲ. ಆಯೋಜಕರ ಜೊತೆ ಸಂದರ್ಶನಕ್ಕೆ ಒಳಗಾದವರಿಗೆ ಮಾತ್ರ ಈ ಬಗ್ಗೆ ಅರಿವಿರುತ್ತೆ. ಇದೀಗ, ಇದರಲ್ಲಿ ಒಂದು ಅಂಶವನ್ನ ನಟಿ ಹೇಮಾ ಬಹಿರಂಗಪಡಿಸಿದ್ದಾರೆ. ಬಿಗ್ ಬಾಸ್ ಗೆ ಹೋಗುವ ಮುನ್ನ ಪ್ರೆಗ್ನೆನ್ಸಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತೆ ಎಂಬ ಅಚ್ಚರಿ ವಿಷ್ಯವನ್ನ ಹೊರಹಾಕಿದ್ದಾರೆ.

ಅದಕ್ಕೂ ಕಾರಣವಿದೆ
ಬಿಗ್ ಬಾಸ್ ಮನೆಗೆ ಹೋಗುವ ಹುಡುಗಿ, ಮಹಿಳೆಯರಿಗೆ ಇದು ಅನ್ವಯವಾಗುತ್ತಾ ಅಥವಾ ಕೆಲವರಿಗೆ ಮಾತ್ರನಾ ಎಂಬುದು ಗೊತ್ತಿಲ್ಲ. ಆದರೆ, ತೆಲುಗು ಬಿಗ್ ಬಾಸ್ ಮೂರನೇ ಆವೃತ್ತಿಯ ಸ್ಪರ್ಧಿಯಾಗಿದ್ದ ಹೇಮಾ ಅವರಿಗೆ ಪ್ರೆಗ್ನೆನ್ಸಿ ಪರೀಕ್ಷೆ ಮಾಡಿಸಿ ಎಂದು ಆಯ್ಕೆ ತಂಡದವರು ಕೇಳಿದ್ದರಂತೆ. ಅದಕ್ಕೆ ಕಾರಣ ಕೂಡ ತಿಳಿಸಿದ್ದರಂತೆ.

ಯಾಕೆ ಪ್ರೆಗ್ನೆನ್ಸಿ ಪರೀಕ್ಷೆ ಮಾಡಿಸಬೇಕು?
ಒಂದು ವೇಳೆ ಬಿಗ್ ಮನೆಗೆ ಹೋಗುವ ಸ್ಪರ್ಧಿ ಗರ್ಭಿಣಿ ಆಗಿದ್ದು, ಅದನ್ನ ಬಿಗ್ ಬಾಸ್ ಆಯೋಜಕರಿಂದ ಮುಚ್ಚಿಟ್ಟು ಭಾಗವಹಿಸಿ, ಮನೆಯಲ್ಲಿ ಏನಾದರೂ ಅನಾಹುತ ಸಂಭವಿಸಿದರೇ ಅದಕ್ಕೆ ನೇರ ಹೊಣೆ ಶೋ ಆಯೋಜಕರು ಆಗಬೇಕಾಗುತ್ತೆ. ಅಂದ್ರೆ, ದೈಹಿಕ ಟಾಸ್ಕ್ ಗಳು ಇರುತ್ತೆ, ಕೆಳಗೆ ಬೀಳುವುದು, ಪೆಟ್ಟಾಗುವುದು ಹೀಗೆ ಅನಾಹುತ ಸಂಭವಿಸಬಾರದು ಎಂದು ಕಾರಣಕ್ಕೆ ಈ ಮಾನದಂಡ ಬಳಸಲಾಗುತ್ತೆ ಎಂದು ಎಲಿಮಿನೇಟ್ ಆದ ಸ್ಪರ್ಧಿ ಹೇಮಾ ತಿಳಿಸಿದ್ದಾರೆ.

ಎಲ್ಲ ಭಾಷೆಯಲ್ಲೂ ಆಗುತ್ತಾ?
ತೆಲುಗು ಬಿಗ್ ಬಾಸ್ ನಲ್ಲಿ ಪ್ರೆಗ್ನೆನ್ಸಿ ಪರೀಕ್ಷೆ ಮಾಡಿಸಿ ಎಂದು ಹೇಳಿದ್ದರು ಎನ್ನುವುದಾಗಿ ಎಲಿಮಿನೇಟ್ ಆದ ಸ್ಪರ್ಧಿ ಹೇಮಾ ಅವರ ಹೇಳಿಕೆಯಿಂದ ಬಹಿರಂಗವಾಗಿದೆ. ಆದ್ರೆ, ಇದು ಇತರೆ ಭಾಷೆಗಳ ಬಿಗ್ ಬಾಸ್ ನಲ್ಲೂ ಈ ಪರೀಕ್ಷೆಗೆ ಸೂಚಿಸುತ್ತಾರಾ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಮತ್ತು ಬಿಗ್ ಬಾಸ್ ಮನೆಗೆ ಹೋಗುವ ಎಲ್ಲ ಹುಡುಗಿ, ಮಹಿಳೆಯರಿಗೆ ಈ ಪರೀಕ್ಷೆ ಮಾಡಿಸಿ ಎಂದು ತೆಲುಗು ಬಿಗ್ ಬಾಸ್ ಸೂಚಿಸಿದ್ದರಾ ಮಾಹಿತಿ ಇಲ್ಲ.


Click it and Unblock the Notifications











