»   » 'ತೆಲುಗು ಬಿಗ್ ಬಾಸ್' ಫೈನಲ್ ಗೆ ಲಗ್ಗೆಯಿಟ್ಟ ಕನ್ನಡತಿ ಹರಿತೇಜ

'ತೆಲುಗು ಬಿಗ್ ಬಾಸ್' ಫೈನಲ್ ಗೆ ಲಗ್ಗೆಯಿಟ್ಟ ಕನ್ನಡತಿ ಹರಿತೇಜ

Posted By:
Subscribe to Filmibeat Kannada

'ತೆಲುಗು ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಕನ್ನಡ ಮಾತನಾಡಿ ಗಮನ ಸೆಳೆದಿದ್ದ ನಟಿ ಹರಿತೇಜ ಈಗ ಫೈನಲ್ ತಲುಪಿದ್ದಾರೆ. ಯಶಸ್ವಿ 10 ವಾರಗಳ ನಂತರ 'ಬಿಗ್ ಬಾಸ್' ತೆಲುಗು ಫಿನಾಲೆ ಹಂತಕ್ಕೆ ಬಂದು ತಲುಪಿದ್ದು, ಹರಿತೇಜ ಬಿಗ್ ಬಾಸ್ ಕಿರೀಟ ಗೆಲ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.

ಒಟ್ಟು 14 ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು. ಜೂನಿಯರ್ ಎನ್.ಟಿ.ಆರ್ ಈ ಕಾರ್ಯಕ್ರಮದ ನಿರೂಪಕರಾಗಿದ್ದು, ಒಟ್ಟು 5 ಜನ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಅಷ್ಟಕ್ಕೂ, ನಟಿ ಹರಿತೇಜ ಯಾರು? ಹರಿತೇಜ ಜೊತೆ ಮತ್ಯಾರೆಲ್ಲಾ ಫಿನಾಲೆ ತಲುಪಿದ್ದಾರೆ? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ......

'ಬಿಗ್ ಬಾಸ್'ನಲ್ಲಿ ಕನ್ನಡತಿ ಹರಿತೇಜ

ತೆಲುಗಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿನ 14 ಸ್ಪರ್ಧಿಗಳಲ್ಲಿ ನಟಿ ಹರಿತೇಜ ಕೂಡ ಒಬ್ಬರು. ಆದ್ರೆ, ಅವರು ಕನ್ನಡತಿ ಎಂಬ ಸಂಗತಿ ಶೋ ಮಧ್ಯೆ ಅವರೇ ಹೇಳುವವರೆಗೂ ಯಾರಿಗೂ ಗೊತ್ತಿರಲಿಲ್ಲ.

ಕಲರ್ಸ್ ಕನ್ನಡ ವಾಹಿನಿಯಲ್ಲಿಲ್ಲ 'ಬಿಗ್ ಬಾಸ್ ಕನ್ನಡ-5' ಪ್ರಸಾರ.!

ಎನ್.ಟಿ.ಆರ್ ಜೊತೆ ಕನ್ನಡದಲ್ಲಿ ಮಾತನಾಡಿದ್ದ ನಟಿ

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಹಸ್ಫರ್ದಿಗಳ ಜೊತೆ ಕನ್ನಡದಲ್ಲಿ ಮಾತನಾಡಿದ್ದ ಹರಿತೇಜ ಅವರ ಜೊತೆ, ನಿರೂಪಕ ಎನ್.ಟಿ.ಆರ್ ಕೂಡ ಕನ್ನಡದಲ್ಲಿಯೇ ಮಾತನಾಡಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ವಿಡಿಯೋ ಇಲ್ಲಿದೆ ನೋಡಿ

ವಿಡಿಯೋ:'ಬಿಗ್ ಬಾಸ್ ಕನ್ನಡ-5' ಪ್ರೋಮೋ ರಿಲೀಸ್ ಆಯ್ತು ನೋಡಿ

ಹರಿತೇಜ ಕನ್ನಡದವರಂತೆ!

ಜೂನಿಯರ್ ಎನ್.ಟಿ.ಆರ್ ಜೊತೆ ಮಾತನಾಡುವಾಗ ಸ್ವತಃ ಹರಿತೇಜ ಅವರೇ ನಾನು ಕನ್ನಡತಿ, ಆದ್ರೆ, ಹೈದರಾಬಾದ್ ನಲ್ಲಿ ಉಳಿದುಕೊಂಡಿದ್ದೇನೆ ಎಂದಿದ್ದರು.

'ಬಿಗ್ ಬಾಸ್' ಕಾರ್ಯಕ್ರಮದ ಮೊದಲ ಸ್ಪರ್ಧಿಯ ಫೋಟೋ ಬಹಿರಂಗ.!

ಕನ್ನಡದಲ್ಲೇ ಮಾತನಾಡಿದ ಪತಿ-ಪತ್ನಿ

ಬಿಗ್ ಬಾಸ್ ಮನೆಯೊಳಗೆ ಹರಿತೇಜ ಅವರ ಪತಿ ಬಂದಾಗಲೂ ಅವರ ಜೊತೆ ಸಂಪೂರ್ಣವಾಗಿ ಕನ್ನಡದಲ್ಲೇ ಮಾತನಾಡಿದ್ದರು. ಈ ಮೂಲಕ ತೆಲುಗು ಬಿಗ್ ಬಾಸ್ ಮನೆಯಲ್ಲಿ ಕನ್ನಡ ಮಾತನಾಡಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಈ ವಿಡಿಯೋ ಇಲ್ಲಿದೆ ನೋಡಿ

ಕನ್ನಡದ ಹರಿತೇಜ ಗೆಲುವಿನ ನಗೆ ಬೀರುತ್ತಾರಾ?

ಹೀಗೆ, ತೆಲುಗು ಬಿಗ್ ಬಾಸ್ ನಲ್ಲಿ ಕನ್ನಡ ಮಾತನಾಡಿ ಕನ್ನಡತಿ ಎನಿಸಿಕೊಂಡಿರುವ ಹರಿತೇಜ ಅವರು ಈಗ ಫೈನಲ್ ತಲುಪಿದ್ದಾರೆ. ಈಕೆಯ ಜೊತೆ ನಟ ನವದೀಪ್, ಶಿವ ಬಾಲಾಜಿ, ಅರ್ಚನಾ, ಆದರ್ಶ್ ಕೂಡ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಐವರಲ್ಲಿ ಯಾರಿಗೆ ಅತಿ ಹೆಚ್ಚು ವೋಟ್ ಬರುತ್ತೋ ಅವರು ಈ ಮೊದಲ ಆವೃತ್ತಿಯ ವಿನ್ನರ್ ಆಗಲಿದ್ದಾರೆ.

ಫೈನಲ್ ಯಾವಾಗ?

ಸೆಪ್ಟೆಂಬರ್ 24 ರಂದು 'ತೆಲುಗು ಬಿಗ್ ಬಾಸ್' ಫೈನಲ್ ನಡೆಯಲಿದ್ದು, ಚೊಚ್ಚಲ ಕಿರೀಟ ಯಾರಿಗೆ ಸಿಗುತ್ತೆ ಎಂಬ ಕುತೂಹಲ ಹೆಚ್ಚಾಗಿದೆ. ಅಂದ್ಹಾಗೆ, ಪವನ್ ಕಲ್ಯಾಣ್ ಅಭಿನಯದ 'ಅತ್ತಾರಿಂಟಿಕಿ ದಾರೇದಿ', ಎನ್.ಟಿ.ಆರ್ ಅಭಿನಯದ 'ಧಮ್ಮು' ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹರಿತೇಜ ಅಭಿನಯಿಸಿದ್ದರು.

English summary
Adarsh Balakrishna, Navdeep, Siva Balaji, Hari Teja and Archana are the finalists of Bigg Boss Telugu season 1 and the winner of the show will be announced at the grand finale episode on Sunday

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada