ತೆಲುಗು ಬಿಗ್‌ಬಾಸ್: ಸ್ಪರ್ಧಿಯೊಬ್ಬರ ಅಪಹರಣ, ಮನೆಯೊಳಗೆ ಸಖತ್ ಹೈಡ್ರಾಮಾ
ತೆಲುಗು ಬಿಗ್‌ಬಾಸ್ 4 ಪ್ರಾರಂಭವಾಗಿ 17 ದಿನಗಳಾಗಿವೆ. ಬಿಗ್‌ಬಾಸ್ ಮನೆಯೊಳಗೆ ದಿನೇ-ದಿನೇ ಒತ್ತಡ ಹೆಚ್ಚಾಗುತ್ತಾ ಹೋಗುತ್ತಿದೆ.
ನಿನ್ನೆಯ ಎಪಿಸೋಡ್‌ನಲ್ಲಂತೂ ಬಿಗ್‌ಬಾಸ್ ಮನೆಯಲ್ಲಿ ದೊಡ್ಡ ಗಲಾಟೆಯೇ ಆಗಿಬಿಟ್ಟಿದೆ. ಗಲಾಟೆಗೆ ಕಾರಣ, ಸ್ಪರ್ಧಿಗಳೇ ಸೇರಿಕೊಂಡು ಮತ್ತೊಬ್ಬ ಸ್ಪರ್ಧಿಯನ್ನು ಅಪಹರಣ ಮಾಡಿಬಿಟ್ಟಿದ್ದಾರೆ. ಇದು ದೊಡ್ಡ ಜಗಳಕ್ಕೆ ಕಾರಣವಾಗಿದೆ.
ಬಿಗ್‌ಬಾಸ್ ನ ಮನೆಯ ಸದಸ್ಯರಿಗೆ 'ಉಕ್ಕು ಹೃದಯಂ' (ಉಕ್ಕಿನ ಹೃದಯ) ಎಂಬ ಹೊಸ ಟಾಸ್ಕ್ ಅನ್ನು ಬಿಗ್‌ಬಾಸ್ ನೀಡಿದ್ದರು. ಇದರಂತೆ ಮನುಷ್ಯರು ಹಾಗೂ ರೋಬೋಟ್ ಎಂಬ ಎರಡು ತಂಡಗಳನ್ನು ಮಾಡಿ ಅವರಿಗೆ ಪರಸ್ಪರ ಗೇಮ್ ಒಂದನ್ನು ನೀಡಲಾಗಿತ್ತು. ಈ ತಮಾಷೆಯ ಗೇಮ್ ಎರಡೂ ಗುಂಪುಗಳ ನಡುವೆ ಕಿತ್ತಾಟಕ್ಕೆ ಕಾರಣವಾಯಿತು.

ಭಿನ್ನವಾದ ಟಾಸ್ಕ್ ಕೊಟ್ಟಿದ್ದ ಬಿಗ್‌ಬಾಸ್
ಮನುಷ್ಯ ಗುಂಪಿನಲ್ಲಿರುವವರು ರೋಬೋಟ್ ಗುಂಪಿನಲ್ಲಿರುವ ಒಂದು ಬೆಳ್ಳಿ ಬಣ್ಣದ ಬಾಲ್ ತೆಗೆದುಕೊಂಡು ಒಡೆದುಹಾಕಬೇಕು. ರೋಬೋಟ್ ತಂಡದವರು ಬೆಳ್ಳಿ ಬಣ್ಣದ ಬಾಲ್ ಅನ್ನು ಮನುಷ್ಯ ತಂಡಕ್ಕೆ ಸಿಗದಂತೆ ಕಾಪಾಡಬೇಕು. ಇದರ ಮಧ್ಯೆ ರೋಬೋಟ್‌ಗಳು 'ಚಾರ್ಜ್' ಮಾಡಿಕೊಳ್ಳಬೇಕೆಂದರೆ ಮನುಷ್ಯರ ಸಹಾಯ ಬೇಕೆ ಬೇಕು, ಇದು ಟಾಸ್ಕ್.

ಅಪಹರಣ ಮಾಡುವ ಐಡಿಯಾ ಮಾಡಿದ ಅಭಿಜಿತ್
ರೋಬೋಟ್‌ಗಳಿಗೆ 'ಚಾರ್ಜ್' ಎಂದರೆ ಊಟ, ನೀರು, ಶೌಚಾಲಯದ ಬಳಕೆ ಎಲ್ಲದಕ್ಕೂ ಮನುಷ್ಯರ ತಂಡವೇ ಆಧಾರ ಹಾಗಾಗಿ, ರೋಬೋಟ್ ತಂಡದಲ್ಲಿದ್ದ ಅಭಿಜಿತ್, ಮನುಷ್ಯರ ತಂಡದ ಒಬ್ಬರನ್ನು ಅಪಹರಣ ಮಾಡಿಬಿಡುವ ಐಡಿಯಾವನ್ನು ತಂಡಕ್ಕೆ ಕೊಟ್ಟರು. ಐಡಿಯಾಕ್ಕೆ ಎಲ್ಲರೂ ಒಪ್ಪಿಕೊಂಡರು.

ಶೌಚಾಲಯಕ್ಕೆ ಕರೆದೊಯ್ದು ಲಾಕ್
ಮನುಷ್ಯರ ಗುಂಪಿನ ದೇವಿಗೆ ಶೌಚಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ, ಆಕೆ ಹೊರಗೆ ಬರುತ್ತಿದ್ದಂತೆ ಬಾಗಿಲು ಬಂದ್ ಮಾಡಿ ಆಕೆ ಮರಳಿ ತನ್ನ ಗುಂಪಿನ ಕಡೆಗೆ ಹೋಗದಂತೆ ಮಾಡಿದರು. ರೋಬೋಟ್ ತಂಡದವರು 'ಚಾರ್ಜ್' ಮಾಡಿಕೊಂಡರು.
Recommended Video

ಕೈ-ಕೈ ಮಿಲಾಯಿಸಿದ ತಂಡಗಳು
ಮನುಷ್ಯರ ತಂಡದ ಸದಸ್ಯರು ಬಂಧಿಯಾಗಿದ್ದ ಕಾರಣ, ತಮ್ಮ ತಂಡದ ಸದಸ್ಯೆಯನ್ನು ಉಳಿಸಿಕೊಳ್ಳಲು ಬರಲಾಗಲಿಲ್ಲ. ಮನುಷ್ಯರ ತಂಡದ ಸದಸ್ಯರು ಅವಾಚ್ಯ ಶಬ್ದಗಳಲ್ಲಿ ರೋಬೋಟ್ ತಂಡದವರಿಗೆ ಬೈದರು, ಕೈ-ಕೈ ಸಹ ಮಿಲಾಯಿಸಿದರು. ಟಾಸ್ಕ್ ನ ಫಲಿತಾಂಶ ಇನ್ನೂ ಬಂಧಿಲ್ಲ, ಯಾರು ಟಾಸ್ಕ್ ಗೆಲ್ಲುತ್ತಾರೆ ಕಾದು ನೋಡಬೇಕಿದೆ.


Click it and Unblock the Notifications











