ಬಿಗ್‌ಬಾಸ್ ತೆಲುಗು ಸೀಸನ್ 05 ಗೆದ್ದ ಸನ್ನಿ: ವೇದಿಕೆ ಮೇಲೆ ತಾರೆಗಳ ಸಮಾಗಮ

ತೆಲುಗು ಬಿಗ್‌ಬಾಸ್ ಸೀಸನ್ 05 ನಿನ್ನೆಯಷ್ಟೆ ಅಂತ್ಯವಾಗಿದ್ದು, ಸನ್ನಿ ಈ ಸೀಸನ್‌ನ ವಿಜೇತರಾಗಿದ್ದಾರೆ. ಬರೋಬ್ಬರಿ 50 ಲಕ್ಷ ರುಪಾಯಿ ಬಹುಮಾನವನ್ನು ಟ್ರೋಫಿಯೊಂದಿಗೆ ಪಡೆದುಕೊಂಡಿದ್ದಾರೆ ಸನ್ನಿ.

ಸನ್ನಿ ಮತ್ತು ಷಣ್ಮುಖ್ ಕೊನೆಯ ಇಬ್ಬರು ಸ್ಪರ್ಧಿಗಳಾಗಿ ಮನೆಯಲ್ಲಿ ಉಳಿದಿದ್ದರು. ನಟ ನಾಗಾರ್ಜುನ ಇಬ್ಬರನ್ನೂ ವೇದಿಕೆಗೆ ಕರೆದುಕೊಂಡು ಬಂದು, ಸನ್ನಿ ವಿಜೇತರೆಂದು ಘೋಷಿಸಿದರು. ಅದಕ್ಕೂ ಮುನ್ನಾ ಬಿಗ್‌ಬಾಸ್ ಮನೆಯ ಮಾಜಿ ಸ್ಪರ್ಧಿಗಳು ಅಂತಿಮವಾಗಿ ಉಳಿದ ಸನ್ನಿ ಹಾಗೂ ಷಣ್ಮುಖ್ ಅವರಿಗೆ ಮತ ಚಲಾಯಿಸಿದರು. ಅದರಲ್ಲಿ ಹೆಚ್ಚಿನ ಮತ ಸನ್ನಿ ಅವರಿಗೆ ಬಿದ್ದಿತ್ತು.

ಈ ಬಾರಿ ಬಿಗ್‌ಬಾಸ್ ತೆಲುಗು ಗ್ರ್ಯಾಂಡ್ ಫಿನಾಲೆ ಬಹಳ ಅದ್ಧೂರಿಯಾಗಿತ್ತು. ಹಲವು ಸ್ಟಾರ್ ನಟ-ನಟಿಯರು ತೆಲುಗು ಬಿಗ್‌ಬಾಸ್ ವೇದಿಕೆಗೆ ಬಂದರು. ಆಲಿಯಾ ಭಟ್, ರಣಬೀರ್ ಕಪೂರ್ ತಮ್ಮ 'ಬ್ರಹ್ಮಾಸ್ತ್ರ' ಸಿನಿಮಾದ ಪ್ರಚಾರಕ್ಕೆ ಬಂದಿದ್ದರು. ನಿರ್ದೇಶಕ ರಾಜಮೌಳಿ 'ಆರ್ಆರ್ಆರ್' ಸಿನಿಮಾದ ಪ್ರಚಾರಕ್ಕೆ ಬಂದಿದ್ದರು. ನಟ ನಾನಿ, ಸಾಯಿ ಪಲ್ಲವಿ, ಕೃತಿ ಶೆಟ್ಟಿ ಅವರುಗಳು 'ಶ್ಯಾಮ್ ಸಿಂಘ ರಾಯ್' ಸಿನಿಮಾದ ಪ್ರಚಾರಕ್ಕಾಗಿ ಬಿಗ್‌ಬಾಸ್ ವೇದಿಕೆಗೆ ಆಗಮಿಸಿದ್ದರು. ಇವರ ಜೊತೆಗೆ ನಟಿ ಶ್ರೆಯಾ ಶಿರಿನ್ ಅದ್ಭುತ ಡ್ಯಾನ್ಸ್ ಮಾಡಿ ರಂಜಿಸಿದರು.

ಆಲಿಯಾ ಭಟ್ ತೆಲುಗಿನಲ್ಲಿ ಡೈಲಾಗ್ ಹೊಡೆದಿದ್ದು ಅದ್ಭುತವಾಗಿತ್ತು. ಇನ್ನು ನಿರ್ದೇಶಕ ರಾಜಮೌಳಿ, ಬಿಗ್‌ಬಾಸ್ ಮನೆಯಲ್ಲಿದ್ದ ಸದಸ್ಯರಿಗೆ 'ಆರ್ಆರ್ಆರ್' ಸಿನಿಮಾ ಬಿಡುಗಡೆ ಆಗಿಬಿಟ್ಟಿದೆ ಎಂದು ಹೇಳಿ ಶಾಕ್ ನೀಡಿದರು. ಸಾಯಿ ಪಲ್ಲವಿ, ಕೃತಿ ಶೆಟ್ಟಿ ಅವರುಗಳು ಬಿಗ್‌ಬಾಸ್ ಮನೆ ಒಳಗೆ ಪ್ರವೇಶಿಸಿ ಸ್ಪರ್ಧಿಗಳೊಟ್ಟಿಗೆ ಡ್ಯಾನ್ಸ್ ಮಾಡಿ ರಂಜಿಸಿದರು. ನಟ ನಾನಿ ಸೂಟ್‌ ಕೇಸ್ ತೆಗೆದುಕೊಂಡು ಹೋಗಿ ಬಿಗ್‌ಬಾಸ್ ಫೈನಲಿಸ್ಟ್‌ಗಳಿಗೆ ಹಣದ ಆಫರ್ ಮಾಡಿದರು. ಆದರೆ ಅದನ್ನು ಫೈನಲಿಸ್ಟ್‌ಗಳು ಸ್ವೀಕರಿಸಲಿಲ್ಲ.

ಕಳೆದ ಬಾರಿಯಂತೆ ನಾಗಾರ್ಜುನ ಈ ಬಾರಿಯೂ ಸಹ ಚಿನ್ನದ ಸೂಟ್‌ಕೇಸ್‌ನಲ್ಲಿ ದೊಡ್ಡ ಮೊತ್ತದ ಹಣವನ್ನು ಉಳಿದ ಕೊನೆಯ ಮೂರು ಸ್ಪರ್ಧಿಗಳಿಗೆ ಆಫರ್ ಮಾಡಿದರು. ಹಣವನ್ನು ತೆಗೆದುಕೊಂಡು ಆಟವನ್ನು ಬಿಟ್ಟು ಹೋಗಬಹುದು ಎಂದು ಹೇಳಿದರು. ಆದರೆ ಈ ಬಾರಿ ಯಾರೂ ಆ ಸೂಟ್‌ಕೇಸ್‌ ಅನ್ನು ತೆಗೆದುಕೊಳ್ಳಲಿಲ್ಲ.

Bigg Boss Telugu Season 05 Winner Is Sunny

ಸೆಪ್ಟೆಂಬರ್ 05 ರಂದು ಪ್ರಾರಂಭವಾದ ಬಿಗ್‌ಬಾಸ್ ತೆಲುಗು ಸೀಸನ್ 05, 105 ದಿನಗಳ ವರೆಗೆ ನಡೆಯಿತು. 105ನೇ ದಿನ ಬಿಗ್‌ಬಾಸ್ ಮನೆಯಲ್ಲಿ ಸನ್ನಿ, ಷಣ್ಮುಖ್, ಶ್ರೀರಾಮ್, ಮಾನಸ್ ಮತ್ತು ಸಿರಿ ಅವರುಗಳು ಉಳಿದುಕೊಂಡಿದ್ದರು. ಅವರಲ್ಲಿ ಸಿರಿ ನಾಲ್ಕನೇ ರನ್ನರ್ ಅಪ್ ಆದರು. ಮಾನಸ್ ಮೂರನೇ ರನ್ನರ್ ಅಪ್, ಶ್ರೀರಾಮ್ ಎರಡನೇ ರನ್ನರ್ ಅಪ್, ಷಣ್ಮುಖ್ ಮೊದಲನೇ ರನ್ನರ್ ಅಪ್ ಹಾಗೂ ಸನ್ನಿ ವಿಜೇತರಾದರು.

ಬಿಗ್‌ಬಾಸ್ ತೆಲುಗು ಸೀಸನ್ 6 ಕೆಲವೇ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಎಂದು ನಾಗಾರ್ಜುನ ಘೋಷಿಸುವ ಮೂಲಕ ಬಿಗ್‌ಬಾಸ್ ಸೀಸನ್ 05 ಮುಕ್ತಾಯವಾಯಿತು.

More from Filmibeat

English summary
Telugu Bigg Boss season 05 winner is Sunny. He take home 50 lakh rs with trophy. 1st runner up is Shanmukh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X