For Quick Alerts
  ALLOW NOTIFICATIONS  
  For Daily Alerts

  ತೆಲುಗು 'ಬಿಗ್ ಬಾಸ್' ಶುರು: ಯಾರೆಲ್ಲಾ ಇದ್ದಾರೆ ನೋಡಿ

  By Bharath Kumar
  |

  ಬಿಗ್ ಬಾಸ್ ಕನ್ನಡ ಸೀಸನ್ 6 ಈ ವರ್ಷಾಂತ್ಯಕ್ಕೆ ಆರಂಭವಾಗುತ್ತೆ. ಈ ಬಾರಿ ಬಿಗ್ ಮನೆಗೆ ಯಾರೆಲ್ಲಾ ಹೋಗಬಹುದು ಎಂಬ ಕುತೂಹಲ ಕಾಡುವುದು ಸಹಜ. ಈ ಮಧ್ಯೆ ನಮ್ ಪಕ್ಕದ ರಾಜ್ಯದಲ್ಲಿ ಬಿಗ್ ಬಾಸ್ ಶೋ ಶುರುವಾಗಿಬಿಟ್ಟಿದೆ.

  ತೆಲುಗು ಬಿಗ್ ಬಾಸ್ ಸೀಸನ್ 2 ಆರಂಭವಾಗಿದ್ದು, 16 ಜನ ಸ್ಪರ್ಧಿಗಳು ಬಿಗ್ ಮನೆ ಪ್ರವೇಶ ಮಾಡಿದ್ದಾರೆ. ಕನ್ನಡದಲ್ಲಿ ಐದನೇ ಸೀಸನ್ ನಲ್ಲಿ ಮಾಡಿದ್ದ ಐಡಿಯಾವನ್ನ ತೆಲುಗಿನಲ್ಲಿ ಎರಡನೇ ಆವೃತ್ತಿಯಲ್ಲೇ ಮಾಡಿದ್ದಾರೆ. ಹೌದು, ಈ ಸಲ ತೆಲುಗು ಮನೆಯಲ್ಲಿ ಜನಸಾಮಾನ್ಯರು ಮತ್ತು ಕಾಮನ್ ಮ್ಯಾನ್ ಗಳು ಎಂಟ್ರಿಯಾಗಿದ್ದಾರೆ.

  ಇನ್ನು ಕಳೆದ ಆವೃತ್ತಿಯಲ್ಲಿ ಜೂನಿಯರ್ ಎನ್.ಟಿ.ಆರ್ ನಿರೂಪಕರಾಗಿದ್ದರು. ಈ ಬಾರಿ ನ್ಯಾಚುರಲ್ ಸ್ಟಾರ್ ನಾನಿ ಆಂಕರ್ ಆಗಿದ್ದಾರೆ. ಹಾಗಿದ್ರೆ, ಬಿಗ್ ಬಾಸ್ 2ನಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನ ನೋಡೋಣ ಬನ್ನಿ....

  ಗೀತಾ ಮಾಧರಿ

  ಗೀತಾ ಮಾಧರಿ

  ತೆಲುಗಿನ ಹಿನ್ನಲೆ ಗಾಯಕಿ, ಡಬ್ಬಿಂಗ್ ಕಲಾವಿದೆ ಗೀತಾ ಮಾಧುರಿ ಎರಡನೇ ಆವೃತ್ತಿಯಲ್ಲಿ ಬಿಗ್ ಮನೆಯನ್ನ ಪ್ರವೇಶ ಮಾಡಿದ್ದಾರೆ. ತೆಲುಗು ನಟ ನಂದ ಅವರ ಜೊತೆ ವಿವಾಹವಾಗಿರುವ ಗೀತಾ ಮಾಧುರಿ, ಐಟಂ ಹಾಡುಗಳನ್ನ ಹಾಡಿರೋದ್ರಲ್ಲಿ ಹೆಚ್ಚು ಖ್ಯಾತಿ.

  ವಿಲನ್ ಅಮಿತ್

  ವಿಲನ್ ಅಮಿತ್

  ತೆಲುಗು ಸೇರಿದಂತೆ ಇತರೆ ಭಾಷೆಗಳಲ್ಲಿ ಖಳನಾಯಕನಾಗಿ ಅಭಿನಯಿಸಿರುವ ನಟ ಅಮಿತ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ತೆರೆಮೇಲೆ ವಿಲನ್ ಆಗಿ ಮಿಂಚಿರುವ ಅಮಿತ್ ನಿಜಜೀವನದಲ್ಲಿ ಹೇಗಿರ್ತಾರೆ ಎಂಬುದನ್ನ ಈ ಕಾರ್ಯಕ್ರಮದಲ್ಲಿ ನೋಡಬಹುದು.

  'ಬಿಗ್ ಬಾಸ್' ಮನೆಯಿಂದ ಆಚೆ ಬಂದ್ಮೇಲೆ ಕೃಷಿ ರಿಜೆಕ್ಟ್ ಮಾಡಿದ ಚಿತ್ರಗಳೆಷ್ಟು?'ಬಿಗ್ ಬಾಸ್' ಮನೆಯಿಂದ ಆಚೆ ಬಂದ್ಮೇಲೆ ಕೃಷಿ ರಿಜೆಕ್ಟ್ ಮಾಡಿದ ಚಿತ್ರಗಳೆಷ್ಟು?

  ಟಿವಿ ನಿರೂಪಕಿ

  ಟಿವಿ ನಿರೂಪಕಿ

  ತೆಲುಗಿನ ಖ್ಯಾತ ಸುದ್ದಿ ವಾಹಿನಿ ಟಿವಿ 9 ನಿರೂಪಕಿ ದೀಪ್ತಿ ಅವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸುದ್ದಿ ನಿರೂಪಣೆ ಮೂಲಕ ಜನಪ್ರಿಯತೆ ಗಳಿಸಿರುವ ದೀಪ್ತಿಯ ಅಸಲಿ ಮುಖ ಈ ಮನೆಯಲ್ಲಿ ಬಯಲಾಗಲಿದೆ.

  ಯುವ ನಟ ತನೀಷ್

  ಯುವ ನಟ ತನೀಷ್

  ಸೆಲೆಬ್ರಿಟಿ ವಿಭಾಗದಲ್ಲಿ ಬಿಗ್ ಮನೆಗೆ ಬಂದ ಮತ್ತೋರ್ವ ಸ್ಪರ್ಧಿ ಯುವ ನಟ ತನೀಶ್. ಹಲವು ಚಿತ್ರಗಳಲ್ಲಿ ನಟಿಸಿರುವ ತನೀಶ್, ನಟ ಹಾಗೂ ನಿರೂಪಕ ನಾನಿ ಅವರ ಜೊತೆಯಲ್ಲೂ ಅಭಿನಯಿಸಿದ್ದಾರೆ.

  ನಟಿ ಭಾನುಶ್ರೀ

  ನಟಿ ಭಾನುಶ್ರೀ

  ಬಿಗ್ ಬಾಸ್ ಮನೆಗೆ ಬಂದ ಇನ್ನೊಬ್ಬ ನಟಿ ಭಾನುಶ್ರೀ. 'ಬಾಹುಬಲಿ' ಚಿತ್ರದಲ್ಲಿ ತಮನ್ನ ಅಭಿನಯಿಸಿದ್ದ ಅವಂತಿಕಾ ಪಾತ್ರಕ್ಕೆ ಡೂಪ್ ಮಾಡಿದ್ದ ನಟಿ ಭಾನುಶ್ರೀ. ಇದರ ಜೊತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  Rap ಸಿಂಗರ್

  Rap ಸಿಂಗರ್

  ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳನ್ನ ಕರೆದುಕೊಂಡು ಬಂದಿರುವ ಬಿಗ್ ಬಾಸ್ ಮನೆ ಈ ಬಾರಿ Rap ಸಿಂಗರ್ ರಾಹುಲ್ ಕುಮಾರ್. ಯೂಟ್ಯೂಬ್ ಆಲ್ಬಂ ಮೂಲಕ ಖ್ಯಾತಿ ಗಳಿಸಿಕೊಂಡಿರುವ ರಾಹುಲ್ ಈ ಸಲ ಬಿಗ್ ಮನೆಯಲ್ಲಿ ಹಾಡುಗಳಿಂದ ಧೂಳೆಬ್ಬಿಸಲಿದ್ದಾರೆ.

  ಟೀಕೆಗೆ ಗುರಿಯಾದ 'ಬಿಗ್ ಬಾಸ್' ಸ್ಪರ್ಧಿಯ ವಿಚಿತ್ರ ಉಡುಪುಟೀಕೆಗೆ ಗುರಿಯಾದ 'ಬಿಗ್ ಬಾಸ್' ಸ್ಪರ್ಧಿಯ ವಿಚಿತ್ರ ಉಡುಪು

  ಆಂಕರ್ ಶ್ಯಾಮಲ

  ಆಂಕರ್ ಶ್ಯಾಮಲ

  ತೆಲುಗು ಚಿತ್ರರಂಗದಲ್ಲಿ ನಟಿಸುವ ಜೊತೆಗೆ ಆಂಕರ್ ಆಗಿ ಗುರುತಿಸಿಕೊಂಡಿರುವ ಶ್ಯಾಮಲ ಕೂಡ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳನ್ನ ನಿರೂಪಣೆ ಮಾಡಿರುವ ಹೆಗ್ಗಳಿಕೆ ಇವರದ್ದು.

  ಧರ್ಮರಾಜು

  ಧರ್ಮರಾಜು

  ಸೆಲೆಬ್ರಿಟಿ ವಿಭಾಗದಲ್ಲಿ ಮನೆಗೆ ಎಂಟ್ರಿ ನಟ ಕೀರ್ತಿ ಧರ್ಮರಾಜು. 'ಎವಡೇ ಸುಬ್ರಮಣ್ಯಂ' ಚಿತ್ರದ ಮೂಲಕ ನಟಿಸಿ ಖ್ಯಾತಿ ಗಳಿಸಿಕೊಂಡಿದ್ದರು. ಇನ್ನು ಸ್ಟಾರ್ ನಟರ ಜೊತೆ ಸ್ನೇಹಿತನಾಗಿ ಹಲವು ಸಿನಿಮಾ ಮಾಡಿದ್ದಾರೆ. ಹೈದ್ರಾಬಾದ್ ಮೂಲದವರಾಗಿದ್ದರೂ, ಬೆಂಗಳೂರಿನಲ್ಲಿ ನೆಲೆಸಿದ್ದರು.

  ಸೋಶಿಯಲ್ ಮೀಡಿಯಾ ಸ್ಟಾರ್

  ಸೋಶಿಯಲ್ ಮೀಡಿಯಾ ಸ್ಟಾರ್

  ಸಾಮಾಜಿಕ ಜಾಲತಾಣದಲ್ಲಿ ಯುವರಾಣಿಯಾಗಿರುವ ಸುನೈನಾ ಕೂಡ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸುನೈನಾ 20 ವರ್ಷದವರಾಗಿರುವುದು ವಿಶೇಷ.

  ತೇಜಸ್ವಿ ಮದಿವಾ

  ತೇಜಸ್ವಿ ಮದಿವಾ

  ಸಿನಿತಾರೆಯರ ಜೊತೆ ತೇಜಸ್ವಿ ಮದಿವಾ ಕೂಡ ಬಿಗ್ ಬಾಸ್ ಗೆ ಎಂಟ್ರಿ ಕೊಟ್ದಿದ್ದಾರೆ. ಐಸ್ ಕ್ರೀಮ್, ಸೀತಮ್ಮ ವಾಕಿಟ್ಲು ಚೆಟ್ಲು ಸಿರೆಮಲ್ಲು ಚಟ್ಟು, ಅನುಕ್ಷಣಂ, ಮನಂ, ಮಳ್ಳಿ ಮಳ್ಳಿ ಇದಿ ರಾನಿ ರೋಜು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  ಕ್ರಿಕೆಟರ್ ಸಾಮ್ರಾಟ್

  ಕ್ರಿಕೆಟರ್ ಸಾಮ್ರಾಟ್

  ಇನ್ನು ಯುವ ನಟ ಹಾಗೂ ಕ್ರಿಕೆಟರ್ ಸಾಮ್ರಾಟ್ ರೆಡ್ಡಿ ಕೂಡ ಬಿಗ್ ಬಾಸ್ ಗೆ ಬಂದಿದ್ದಾರೆ. ಪತ್ನಿ ಜೊತೆ ವಿವಾದ ಮಾಡಿಕೊಂಡಿರುವ ಸಾಮ್ರಾಟ್ ಸುದ್ದಿಯಾಗಿದ್ದರು. ತಮಿಳು ಮತ್ತು ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  ಉಳಿದವರು ಸಾಮಾನ್ಯರು

  ಉಳಿದವರು ಸಾಮಾನ್ಯರು

  ಇನ್ನುಳಿದಂತೆ ಜನಸಾಮಾನ್ಯರ ವಿಭಾದಲ್ಲಿ ಗಣೇಶ್, ಸಂಜನಾ, ನೂತನ್ ನಾಯುಡು, ಸಾಮಾಜಿಕ ಕಾರ್ಯಕರ್ತ ಬಾಬು ಗೋಗಿನೇನಿ ಅವರು ಕೂಡ ಮನೆ ಪ್ರವೇಶ ಮಾಡಿದ್ದಾರೆ. ಇವರ ಜೊತೆಯಲ್ಲಿ ಯುವ ನಟ ಕೌಹಾಲ್ ಕೂಡ ಇದ್ದಾರೆ.

  English summary
  Bigg Boss Telugu Season 2 premiered June 10th. In the first episode, the reality show introduced its contestants to the viewers. here is the final list of Bigg Boss Telugu Season 2 contestants.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X