For Quick Alerts
  ALLOW NOTIFICATIONS  
  For Daily Alerts

  ಕ್ವಾರಂಟೈನ್ ನಲ್ಲಿದ್ದ 'ಬಿಗ್ ಬಾಸ್' ಸ್ಪರ್ಧಿಗೆ ಕೊರೊನಾ ಪಾಸಿಟಿವ್?

  By ಫಿಲ್ಮಿಬೀಟ್ ಡೆಸ್ಕ್
  |

  ಕೊರೊನಾ ನಡುವೆಯೂ ಹಿಂದಿ ಮತ್ತು ತೆಲುಗು ಬಿಗ್ ಬಾಸ್ ರಿಯಾಲಿಟಿ ಶೋ ಯಶಸ್ವಿಯಾಗಿ ಮುಗಿಸಿರುವ ಆಯೋಜಕರು ಆಗಲೇ ಮುಂದಿನ ಸೀಸನ್ ಗೆ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಹಿಂದಿಯಲ್ಲಿ ಒಟಿಟಿ ಬಿಗ್ ಬಾಸ್‌ ಪ್ರಾರಂಭವಾಗಿದೆ. ಈ ನಡುವೆ ಟಿವಿಯಲ್ಲಿ ಪ್ರಸಾರವಾಗುವ ಹಿಂದಿ ಬಿಗ್ ಬಾಸ್ ಶೋ ಕೂಡ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿ. ಈ ನಡುವೆ ತೆಲುಗು ಬಿಗ್ ಬಾಸ್ ಸೀಸನ್ 5 ಕೂಡ ಪ್ರಾರಂಭವಾಗುತ್ತಿದೆ.

  ಈಗಾಗಲೇ ತೆಲುಗು ಬಿಗ್ ಬಾಸ್ ಸೀಸನ್ 5 ಸ್ಪರ್ಧಿಗಳ ಸಂಭಾವ್ಯ ಪಟ್ಟಿ ವೈರಲ್ ಆಗಿದೆ. ಬಿಗ್ ಬಾಸ್ ಪ್ರಾರಂಭಕ್ಕೂ ಮುನ್ನ ತೊರೊನಾ ನಿಯಮದ ಪ್ರಕಾರ ಸ್ಪರ್ಧಿಗಳನ್ನು ಕ್ವಾರಂಟೈನ್ ಮಾಡಿದ್ದು, ಬಿಗ್ ಮನೆಯೊಳಗೆ ಹೋಗುವ ಸ್ಪರ್ಧಿಗಳು ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿದ್ದಾರೆ ಎನ್ನುವ ಮಾಹಿತಿ ಇದೆ. ಈ ನಡುವೆ ಕ್ವಾರಂಟೈನ್ ಆಗಿರುವ ಸ್ಪರ್ಧಿಗಳಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎನ್ನುವ ವರದಿಯಾಗಿದೆ. ಆದರೆ ಈ ಬಗ್ಗೆ ಬಿಗ್ ಬಾಸ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

  ಕರಣ್ ಜೋಹರ್ ಸಲ್ಮಾನ್ ಖಾನ್‌ಗಿಂತಲೂ ಅದ್ವಾನ: ನಟಿ ಸೋಫಿಯಾ ಹಯಾತ್ಕರಣ್ ಜೋಹರ್ ಸಲ್ಮಾನ್ ಖಾನ್‌ಗಿಂತಲೂ ಅದ್ವಾನ: ನಟಿ ಸೋಫಿಯಾ ಹಯಾತ್

  ಅಂದಹಾಗೆ ಬಿಗ್ ಬಾಸ್ ತೆಲುಗು ಸೀಸನ್ 5 ಸೆಪ್ಟಂಬರ್ ಮೊದಲ ವಾರದಿಂದ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ಇದೆ. ಮೂಲಗಳ ಪ್ರಕಾರ 5ರಂದು ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ಬಿಗ್ ಬಾಸ್ 5ನೇ ಸೀಸನ್ ಟೀಸರ್ ಬಿಡುಗಡೆ ಮಾಡಲಾಗಿದೆ. ಆದರೆ ಯಾವತ್ತಿಂದ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ಬಹಿರಂಗಪಡಿಸಿಲ್ಲ ಬಿಗ್ ಬಾಸ್ ಟೀಂ.

  ಕಳೆದ ಸೀಸನ್ ಹಾಗೆ ಈ ಬಾರಿಯೂ ಟಾಲಿವುಡ್ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಬಿಗ್ ಬಸ್ ನಡೆಸಿಕೊಡುತ್ತಿದ್ದಾರೆ. ಅಂದಹಾಗೆ ಈ ಬಾರಿ ತೆಲುಗು ಬಿಗ್ ಬಾಸ್ ಸೀಸನ್ 5ಕ್ಕೆ ಕೊರೊನಾ ಭಯ ಪ್ರಾರಂಭವಾಗಿದೆ. ಕಳೆದ ಬಾರಿ ಯಶಸ್ವಿಯಾಗಿ ಬಿಗ್ ಬಾಸ್ ನಡೆದಿತ್ತು. ಆದರೆ ಈ ಬಾರಿ ಈಗ 3ನೇ ಅಲೆಯ ಆತಂಕ ಪ್ರಾರಂಭವಾಗಿದೆ. ಹಾಗಾಗಿ ಬಿಗ್ ಬಾಸ್ ಪ್ರಾರಂಭವಾದ ಮೇಲೆ 3ನೇ ಅಲೆ ಭೀಕರತೆ ಹೆಚ್ಚಾದರೆ ಬಿಗ್ ಬಾಸ್ ಸ್ಥಗಿತಗೊಳಿಸಿ ಸ್ಪರ್ಧಿಗಳನ್ನು ಮನೆಯಿಂದ ವಾಪಸ್ ಕರೆಸಿಕೊಳ್ಳಬೇಕಾಗುತ್ತದೆ.

  ಕೊರೊನಾ 2ನೇ ಅಲೆಯ ಸಮಯದಲ್ಲಿ ಮಲಯಾಳಂ ಬಿಗ್ ಬಾಸ್ ಸಂಕಷ್ಟಕ್ಕೆ ಸಿಲುಕಿತ್ತು. ಲಾಕ್ ಡೌನ್ ಆಗುತ್ತಿದ್ದಂತೆ ಸ್ಪರ್ಧಿಗಳನ್ನು ಮನೆಯಿಂದ ವಾಪಸ್ ಕರೆಸಿಕೊಂಡು ಬಿಗ್ ಬಾಸ್ ಸ್ಥಿಗಿತಗೊಳಿಸಲಾಗಿತ್ತು. ಬಳಿಕ ಕೊರೊನಾ ಭೀಕರತೆ ಕಡಿಮೆಯಾದಮೇಲೆ ಮತ್ತೆ ಪ್ರಾರಂಭ ಮಾಡಿ ಯಶಸ್ವಿಯಾಗಿ ಮುಗಿಸಿದ್ದರು. ಇದೀಗ ಅದೆ ಭಯ ತೆಲುಗು ಬಿಗ್ ಬಾಸ್ ಗೂ ಕಾಡುತ್ತಿದೆ.

  ಈಗಾಗಲೇ ಸಾಕಷ್ಟು ಮುನ್ನಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಬಿಗಿ ಬಾಸ್ ನಡೆಯಲು ಆಯೋಜಕರು ಪ್ಲಾನ್ ಮಾಡಿದ್ದಾರೆ. ಹೊರಗಿನ ಚಟುವಟಿಕೆಗಳು ಮನೆಯೊಳಗಿರುವ ಸ್ಪರ್ಧಿಗಳವರೆಗೂ ಬರದೆ ಇರುವಹಾಗೆ ನೋಡಿಕೊಳ್ಳಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಆಯೋಜಕರು ಸಾಕಷ್ಟು ಪ್ಲಾನ್ ಗಳನ್ನು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

  ಇನ್ನು ಸದ್ಯ ವೈರಲ್ ಆಗಿರುವ ಸಂಭಾವ್ಯ ಪಟ್ಟಿಯಲ್ಲಿ ಕನ್ನಡದ ನಟಿಯ ಹೆಸರು ಕೂಡ ಇದೆ. ಕನ್ನಡ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನವ್ಯಾ ಹೆಸರು ಈ ಬಾರಿಯ ತೆಲುಗು ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್ ನಲ್ಲಿದೆ. ಇನ್ನು ಖ್ಯಾತ ಗಾಯಕಿ ಮಂಗ್ಲಿ ಹೆಸರು ಕೂಡ ಕೇಳಿಬಂದಿತ್ತು. ಆದರೆ ಮಂಗ್ಲಿ ಬಿಗ್ ಮನೆಯ ಎಂಟ್ರಿಯನ್ನು ತಳ್ಳಿ ಹಾಕಿದ್ದಾರೆ. ಸದ್ಯ ಭಾರಿ ಕುತೂಹಲಕ್ಕೆ ಕಾರಣವಾಗಿರುವ ಬಿಗ್ ಬಾಸ್ ಯಾವಾಗ ಪ್ರಾರಂಭವಾಗಲಿದೆ ಎನ್ನುವ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ.

  English summary
  Bigg Boss Telugu season 5: Quarantine contestant tests positive for coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X