For Quick Alerts
  ALLOW NOTIFICATIONS  
  For Daily Alerts

  ಕೆಲವೇ ಕ್ಷಣಗಳಲ್ಲಿ ಟಿವಿ ಬಿಗ್‌ಬಾಸ್ ಸೀಸನ್ ಗ್ರ್ಯಾಂಡ್ ಓಪನಿಂಗ್: ಸೆಲೆಬ್ರಿಟಿಗಳ ಜೊತೆ ಕಾಮನ್‌ಮ್ಯಾನ್ ಎಂಟ್ರಿ!

  |

  ಒಂದ್ಕಡೆ ಬಿಗ್‌ಬಾಸ್‌ ಕನ್ನಡ ಓಟಿಟಿ ಮೊದಲ ಸೀಸನ್ ಸದ್ದು ಮಾಡ್ತಿದೆ. ಮತ್ತೊಂದ್ಕಡೆ ತೆಲುಗು ಬಿಗ್‌ಬಾಸ್‌ ಸೀಸನ್ 6ಕ್ಕೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಕೆಲವೇ ನಿಮಿಷಗಳಲ್ಲಿ ಗ್ರ್ಯಾಂಡ್ ಓಪನಿಂಗ್ ಮೂಲಕ ತೆಲುಗು ಬಿಗ್‌ಬಾಸ್ ಹೊಸ ಶೋಗೆ ಚಾಲನೆ ಸಿಗಲಿದೆ. ಈ ಬಾರಿ ಅಕ್ಕಿನೇನಿ ನಾಗಾರ್ಜುನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈಗಾಗಲೇ ಸೀಸನ್‌ 6 ಗ್ರ್ಯಾಂಡ್ ಲಾಂಚ್ ಪ್ರೋಮೊ ರಿಲೀಸ್ ಆಗಿ ಸದ್ದು ಮಾಡ್ತಿದೆ.

  ಬಿಗ್‌ಬಾಸ್ ಮನೆಗೆ ಯಾರು ಹೋಗುತ್ತಾರೆ ಎನ್ನುವ ಕುತೂಹಲ ಪ್ರತಿಬಾರಿಯೂ ಇದ್ದೇ ಇರುತ್ತದೆ. ಕಡೆ ಕ್ಷಣದವರೆಗೂ ಈ ಸೀಕ್ರೆಟ್ ರಿವೀಲ್ ಆಗದಂತೆ ಆಯೋಜಕರು ನೋಡಿಕೊಳ್ಳುತ್ತಾರೆ. ಕೆಲವೊಮ್ಮೆ ಸಂಭಾವ್ಯ ಪಟ್ಟಿಯಲ್ಲಿರುವವರೇ ದೊಡ್ಮನೆಯ ದೊಡ್ಡಾಟಕ್ಕೆ ಹೋಗುತ್ತಾರೆ. ಈ ಬಾರಿ ಟಿವಿ ಬಿಗ್‌ಬಾಸ್‌ಗೆ ಯಾರೆಲ್ಲಾ ಹೋಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಇನ್ನು ಸಂಭಾವ್ಯರ ಲಿಸ್ಟ್‌ ಕೂಡ ಕೆಲ ದಿನಗಳಿಂದ ಸೋಶಿಯಲ್ ಹರಿದಾಡ್ತಿದೆ. ಆದರೆ ಗ್ರ್ಯಾಂಡ್ ಲಾಂಚ್ ಈವೆಂಟ್‌ನಲ್ಲಿ ಕೆಲವರ ಹೆಸರುಗಳು ರಿವೀಲ್ ಆಗಿದೆ. ಇನ್ನು ಈ ಬಾರಿ ಸೆಲೆಬ್ರೆಟಿಗಳ ಜೊತೆ ಕಾಮನ್‌ಮ್ಯಾನ್‌ಗೂ ದೊಡ್ಮನೆಗೆ ಎಂಟ್ರಿ ಕೊಡುವ ಅವಕಾಶ ಇದೆ ಎನ್ನಲಾಗ್ತುತ್ತಿದೆ.

  Bigg Boss Kannada OTT : 'ಸಾನ್ಯಾ'ಯಿಂದ 'ನಂದಿನಿ- ಜಸ್ವಂತ್' ನಡುವೆ ಪದೇ, ಪದೇ ಜಗಳ!Bigg Boss Kannada OTT : 'ಸಾನ್ಯಾ'ಯಿಂದ 'ನಂದಿನಿ- ಜಸ್ವಂತ್' ನಡುವೆ ಪದೇ, ಪದೇ ಜಗಳ!

  ತೆಲುಗು ಕಿರುತೆರೆಯಲ್ಲಿ ಈಗಾಗಲೇ 5 ಬಿಗ್‌ಬಾಸ್ ಸೀಸನ್ ಯಶಸ್ವಿಯಾಗಿ ನಡೆದು ವೀಕ್ಷಕರನ್ನು ರಂಜಿಸಿದೆ. ಹಿಂದಿ ಹಾಗೂ ಕನ್ನಡದಲ್ಲಿ ಬಿಗ್‌ಬಾಸ್ ಶೋ ಸಕ್ಸಸ್ ಆದಮೇಲೆ ತೆಲುಗಿನಲ್ಲಿ 2017ರಲ್ಲಿ ಶುರುವಾಯಿತು. ಜ್ಯೂ. ಎನ್‌ಟಿಆರ್‌ ಮೊದಲ ಸೀಸನ್ ಹೋಸ್ಟ್ ಆಗಿ ನಡೆಸಿಕೊಟ್ಟರು. ನಂತರ ನಾನಿ ಒಂದು ಸೀಸನ್ ನಿರೂಪಣೆ ಮಾಡಿದರೆ ಉಳಿದ 3 ಸೀಸನ್‌ ಜವಾಬ್ದಾರಿ ನಾಗಾರ್ಜುನ ವಹಿಸಿಕೊಂಡಿದ್ದರು. ನಾಗ್ ಅನುಪಸ್ಥಿತಿಯಲ್ಲಿ ಸಮಂತಾ ಕೂಡ ಒಂದೆರಡು ವಾರ ನಿರೂಪಕಿಯಾಗಿ ವೀಕ್ಷಿಕರನ್ನು ರಂಜಿಸಿದ್ದರು. 6 ಸೀಸನ್ ಮತ್ತೆ ನಾಗಾರ್ಜುನ ಹೆಗಲೇರಿದೆ.

  ಬಿಗ್‌ಬಾಸ್ ತೆಲುಗು ಸೀಸನ್ 6ಕ್ಕೆ ಯಾರೆಲ್ಲಾ ಸ್ಪರ್ಧಿಗಳಾಗಿ ಹೋಗುತ್ತಾರೆ ಎನ್ನುವುದನ್ನು ನೋಡಿವುದಾದರೆ ಗಾಯಕ್ ರೇವಂತ್, ಕಾಮಿಡಿಯನ್ ಚಂಟಿ, ಆಂಕರ್ ನೇಹಾ ಚೌಧರಿ, ಆರ್‌ಜೆ ಸೂರ್ಯ, ನಟ ಬಾಲಾದಿತ್ಯ, ನಟಿ ಸುದೀಪ, ಆಂಕರ್ ಆರೋಹಿ ರಾವ್, ಸೀರಿಯಲ್ ನಟಿ ಶ್ರೀಸತ್ಯ, ಲೇಡಿ ಕಾಮಿಡಿಯನ್ ಫೈಮಾ, ಗೀತು ರಾಯಲ್, ಶಾಲಿ ಸಾಲ್ಮನ್, ವಸಂತಿ ಕೃಷ್ಣನ್ ಸೇರಿದಂತೆ 16 ಜನ ಸ್ಪರ್ಧಿಗಳು 100 ದಿನಗಳಳ ದೊಡ್ಡಮನೆ ಆಟಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ಕಾಮನ್‌ಮ್ಯಾನ್ ಆದಿ ರೆಡ್ಡಿ ಕೂಡ ತೆಲುಗು ಬಿಗ್‌ಬಾಸ್ ಮನೆ ಪ್ರವೇಶಿಸುವ ಸುಳಿವು ಸಿಗುತ್ತಿದೆ. ಕೆಲವೇ ನಿಮಿಷಗಳಲ್ಲಿ ಅಧಿಕೃತ ಸ್ಪರ್ಧಿಗಳ ಪಟ್ಟಿ ಸಿಗಲಿದೆ. ಸದ್ಯ ರಿಲೀಸ್ ಆಗಿರುವ ಪ್ರೋಮೊದಲ್ಲಿ ಕಾಮಿಡಿಯನ್ ಚಂಟಿ ಬಿಗ್‌ ಬಾಸ್ ಮನೆಗೆ ಹೋಗುವುದ ಪಕ್ಕಾ ಆಗಿದೆ.

  English summary
  Bigg Boss Telugu Season 6 Contestants List. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X