ಬಿಗ್‌ಬಾಸ್ ಮನೆಯಲ್ಲಿ ಹುಡುಗಿಯರ ಥಾಯ್ ಮಸಾಜ್: ದುಡ್ಡಿಗಾಗಿ ಇನ್ನು ಏನೇನೋ ಮಾಡ್ತಿದ್ದಾರೆ!
ತೆಲುಗು ಬಿಗ್ ಬಾಸ್ ಸೀಸನ್ 6 ಯಶಸ್ವಿಯಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಕಿಂಗ್ ನಾಗಾರ್ಜುನ ಈ ಶೋ ನಡೆಸಿಕೊಡುತ್ತಿದ್ದು, ಸದ್ಯ 21 ಸ್ಪರ್ಧಿಗಳ ಪೈಕಿ 18 ಮಂದಿ ಮನೆಯಲ್ಲಿ ಉಳಿದಿದ್ದಾರೆ. ಮೊದಲ ವಾರದಲ್ಲಿ ಯಾವುದೇ ಎಲಿಮಿನೇಷನ್ ಇಲ್ಲ. ಆದರೆ ಎರಡನೇ ವಾರದಲ್ಲಿ ಇಬ್ಬರನ್ನು ಹೊರಗೆ ಕಳುಹಿಸಲಾಯಿತು. ಷಾನಿ ಮತ್ತು ಅಭಿನಯಶ್ರೀ ಎಲಿಮಿನೇಟ್ ಆಗಿದ್ದರು. ಮೂರನೇ ವಾರ ನೇಹಾ ಚೌಧರಿ ಮನೆಯಿಂದ ಹೊರಹೋಗಬೇಕಾಯಿತು. ಇವತ್ತು ಕ್ಯಾಪ್ಟನ್ ಟಾಸ್ಕ್ ನಡೀತಿದ್ದು, ಮನೆಯ ಸದಸ್ಯರನ್ನು 2 ಭಾಗವಾಗಿ ವಿಭಾಗಿಸಿ ಟಾಸ್ಕ್ ನೀಡಿದ್ದಾರೆ.
ಹೋಟೆಲ್ ವರ್ಸಸ್ ಹೋಟೆಲ್ ಟಾಸ್ಕ್‌ನ ಭಾಗವಾಗಿ ಮನೆಯ ಸದಸ್ಯರನ್ನು ಹೋಟೆಲ್ ಸೇವಕರು ಮತ್ತು ಗ್ರಾಹಕರು ಎಂದು ವಿಂಗಡಿಸಲಾಗಿದೆ. ಸೇವಕರು ತಮ್ಮ ಸೇವೆಯಿಂದ ಅತಿಥಿಗಳನ್ನು ತೃಪ್ತಿಪಡಿಸಬೇಕು ಮತ್ತು ಹಣವನ್ನು ಸಂಪಾದಿಸಬೇಕು. ಸೇವೆಗಳನ್ನು ಪಡೆಯಲು ಗ್ರಾಹಕರು ಸೇವಕರಿಗೆ ಹಣವನ್ನು ನೀಡಬೇಕು.ಈ ಟಾಸ್ಕ್ ನಲ್ಲಿ ಹುಡುಗಿಯರು ಹಣಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅದರಲ್ಲೂ ಹೋಟೆಲ್ ಸೇವಕಿಯಾಗಿರುವ ವಸಂತಿ, ಥಾಯ್ ಮಾಡಲು ರೆಡಿ ಆಗಿದ್ದಾಳೆ. ಪುರುಷ ಸ್ಪರ್ಧಿ ರಾಜ್ ಕೈಗಳನ್ನು ಒತ್ತಿ ಮಸಾಜ್ ಮಾಡಿದ್ದಾಳೆ. ಆಕೆಯ ಮಸಾಜ್ ಅನ್ನು ರಾಜ್ ಎಂಜಾಯ್ ಮಾಡಿದ್ದಾನೆ.

ಮತ್ತೊಬ್ಬ ಸ್ಪರ್ಧಿ, ಶ್ರೀಸತ್ಯ ಸೇವಕರಾಗಿ ಗ್ರಾಹಕರಾಗಿದ್ದ ಅರ್ಜುನ್ ಕಲ್ಯಾಣ್ ಅವರಿಗೆ ಸೇವೆ ಮಾಡಿದ್ದಾಳೆ. ಆತ ಆಕೆಯನ್ನು ಊಟ ಕೇಳಿದ್ದಾನೆ. ಊಟವನ್ನು ತಿನ್ನಿಸಬೇಕು ಎಂದಾಗ ಅದಕ್ಕೆ ಶ್ರೀಸತ್ಯ ಒಪ್ಪಿದ್ದಾಳೆ. ಊಟ ತಿನ್ನಿಸಿದ್ದಾಳೆ.
ಟಾಸ್ಕ್‌ನಲ್ಲಿ ಗೆಲ್ಲಲು ಥಾಯ್ ಮಸಾಜ್ ಮತ್ತು ಊಟ ಮಾಡಿಸೋದು ಕೊಂಚ ಅತಿಯಾಯ್ತು ಅನ್ನಿಸುತ್ತಿದೆ. ಆದರೆ ಇದೆಲ್ಲಾ ಟಾಸ್ಕ್ ಆಗಿರುವುದರಿಂಧ ಸ್ಪರ್ಧಿಗಳು ಮಾಡದೇ ಬೇರೆ ವಿಧಿಯಿಲ್ಲ. ಇನ್ನು ವೀಕೆಂಡ್‌ನಲ್ಲಿ ನಾಗಾರ್ಜುನ ಜೊತೆ ವಾರದ ಕಥೆ ಬಾಕಿಯಿದೆ. ನಾಗಾರ್ಜುನಾ ಬಂದು ತರಾಟೆ ತೆಗೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಟಾಸ್ಕ್ ಮಾಡಲೇಬೇಕಾಗಿದೆ.

ಇನ್ನು ಸೋಮವಾರದಿಂದಲೇ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಎಂದಿನಂತೆ ಸ್ಪರ್ಧಿಗಳ ನಡುವೆ ಬಿಸಿ ಬಿಸಿ ಚರ್ಚೆ ನಡೆಯಿತು. ಆರೋಪ ಪ್ರತ್ಯಾರೋಪ ಜೋರಾಗಿತ್ತು. ಈ ವಾರ ಒಟ್ಟು 10 ಮಂದಿ ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದಾರೆ. ಆಟ ಸರಿಯಾಗಿ ಆಡುತ್ತಿಲ್ಲ ಎನ್ನುವ ಕಾರಣಕ್ಕೆ ನಾಗಾರ್ಜುನ ನೇರವಾಗಿ ಅರ್ಜುನ್ ಕಲ್ಯಾಣ್ ಮತ್ತು ಕೀರ್ತಿ ಅವರನ್ನು ನಾಮಿನೇಟ್ ಮಾಡಿರುವುದು ಗೊತ್ತೇಯಿದೆ. ಇವರಿಬ್ಬರ ಜೊತೆಗೆ ಇನಾಯಾ, ರೇವಂತ್, ಸುದೀಪ, ಶ್ರೀಹಾನ್, ಗೀತು, ಸೂರ್ಯ, ರಾಜ್ ಮತ್ತು ಆರೋಹಿ ರಾವ್ ನಾಮಿನೇಟ್ ಆಗಿದ್ದರು. ಈ ಹತ್ತು ಜನರಲ್ಲಿ ಒಬ್ಬರು ಮುಂದಿನ ಭಾನುವಾರ ಎಲಿಮಿನೇಟ್ ಆಗುತ್ತಾರೆ.


Click it and Unblock the Notifications











