Bigg Boss: ತೆಲುಗು ಬಿಗ್‌ಬಾಸ್-7ರ ವಿಜೇತ ಪಲ್ಲವಿ ಪ್ರಶಾಂತ್ ಅರೆಸ್ಟ್, 14 ದಿನ ನ್ಯಾಯಾಂಗ ವಶಕ್ಕೆ
ತೆಲುಗು ಬಿಗ್ ಬಾಸ್ ಸೀಸನ್- 7ರ ವಿನ್ನರ್ ಪಲ್ಲವಿ ಪ್ರಶಾಂತ್ ಬಂಧನವಾಗಿದೆ. ಪ್ರಶಾಂತ್‌ನನ್ನು ಸಿದ್ದಿಪೇಟೆಯ ಗಜ್ವೇಲ್‌ನಲ್ಲಿರುವ ನಿವಾಸದಲ್ಲಿ ಬಂಧಿಸಲಾಗಿದೆ. ಭಾನುವಾರ ರಾತ್ರಿ ಅನ್ನಪೂರ್ಣ ಸ್ಟುಡಿಯೋ ಬಳಿ ನಡೆದ ಹೊಡೆದಾಟದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗ್ತಿದೆ.
ಪಲ್ಲವಿ ಪ್ರಶಾಂತ್ ಅವರನ್ನು ಠಾಣೆಗೆ ಕರೆದೊಯ್ಯುವ ಬದಲು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಆತನಿಗೆ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪಲ್ಲವಿ ಪ್ರಶಾಂತ್ ವಿರುದ್ಧ 9 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಪ್ರಶಾಂತ್ ಸಹೋದರ ರವಿರಾಜು ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಗ್ ಬಾಸ್ ಫಿನಾಲೆ ಬಳಿಕ ಪಲ್ಲವಿ ಪ್ರಶಾಂತ್ ಅಭಿಮಾನಿಗಳು ಜುಬಿಲಿ ಹಿಲ್ಸ್‌ನಲ್ಲಿ ದಾಂಧಲೆ ನಡೆಸಿದ್ದರು. ಆ ವೇಳೆ ನಡೆದ ಮಾರಾಮಾರಿಯಲ್ಲಿ ಆರ್‌ಟಿಸಿಬಸ್ ಗಾಜು, ಸೇರಿದಂತೆ ಹಲವು ಕಾರುಗಳು ಮೇಲೆ ಕಲ್ಲು ತೂರಾಟ ನಡೆದಿತ್ತು.

ಭಾನುವಾರ ಸಂಜೆ ಕುತೂಹಲಭರಿತವಾಗಿ ಸಾಗಿದ ಬಿಗ್‌ಬಾಸ್ ತೆಲುಗು ಸೀಸನ್ 7ರ ಫಿನಾಲೆಯಲ್ಲಿ ರೈತನ ಮಗ ಪಲ್ಲವಿ ಪ್ರಶಾಂತ್ ವಿಜೇತರಾಗಿ ಹೊರಹೊಮ್ಮಿದರು. ಕಿರುತೆರೆ ನಟ ಅಮರದೀಪ್ ರನ್ನರ್ ಅಪ್ ಆಗಿದ್ದರೆ, ನಟ ಶಿವಾಜಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಗ್ರ್ಯಾಂಡ್ ಫಿನಾಲೆ ನಂತರ ನಡೆದ ಘಟನೆಗಳು ಟಾಲಿವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅನ್ನಪೂರ್ಣ ಸ್ಟುಡಿಯೋದಲ್ಲಿ ಭಾನುವಾರ ಬಿಗ್‌ಬಾಸ್ ಶೋ ಫಿನಾಲೆ ನಡೀತು. ಈ ವೇಳೆ ಸೆಟ್ ಸುತ್ತಾ ವಿನ್ನರ್ ಪಲ್ಲವಿ ಪ್ರಶಾಂತ್ ಹಾಗೂ ರನ್ನರ್ ಅಪ್ ಅಮರದೀಪ್ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಜಮಾಯಿಸಿದ್ದರು. ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಜೈಕಾರ ಹಾಕುತ್ತಿದ್ದಾರೆ. ಈ ವೇಳೆ ಇಬ್ಬರ ಅಭಿಮಾನಿಗಳ ನಡುವೆ ವಾಗ್ವಾದ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಗಲಾಟೆ ತಾರಕಕ್ಕೇರಿದೆ. ಕೆಲ ಕಿಡಿಗೇಡಿಗಳು ಬಿಗ್ ಬಾಸ್ ಸ್ಪರ್ಧಿಗಳ ಕಾರಿನ ಗಾಜುಗಳನ್ನು ಧ್ವಂಸಗೊಳಿಸಿದ್ದರು. ಅಮರ್‌ದೀಪ್ ತನ್ನ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿದ್ದಾಗ, ಅಭಿಮಾನಿಗಳು ದಾಳಿ ಮಾಡಿ ಕಾರಿನ ಗಾಜುಗಳನ್ನು ಒಡೆದಿದ್ದಾರೆ. ಕಿರಿಕ್ ಅಮರ್ ದೀಪ್ ಕುಟುಂಬಸ್ಥರನ್ನು ಅವಮಾನಿಸುವವರೆಗೂ ಹೋಗಿತ್ತು. ಅಭಿಮಾನಿಯ ಈ ಕೃತ್ಯ ಭಾರೀ ಚರ್ಚೆ ಹುಟ್ಟಾಕಿದೆ. ಈ ಬಗ್ಗೆ ಮಾತನಾಡಿದ ಅಮರ್‌ದೀಪ್, ನನ್ನ ಜೊತೆ ಗಲಾಟೆ ಮಾಡಿ, ನಾನು ಎಲ್ಲದಕ್ಕೂ ಸಿದ್ಧ. ಕುಟುಂಬ ಸದಸ್ಯರನ್ನು ಎಳೆದು ತರಬೇಡಿ ಎಂದಿದ್ದರು.
ಇನ್ನು ಪಲ್ಲವಿ ಪ್ರಸಾದ್ ಬಂಧನದ ಬಗ್ಗೆ ಎಸಿಪಿ ಹರಿ ಪ್ರಸಾದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಅನ್ನಪೂರ್ಣ ಸ್ಟುಡಿಯೋ ಬಳಿ ನಡೆದ ಜಗಳದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ಪಲ್ಲವಿ ಪ್ರಶಾಂತ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರ ಮಾತಿಗೆ ಕಿವಿಗೊಡದೆ ದೊಡ್ಡ ಮಟ್ಟದ ರ್ಯಾಲಿಗಳನ್ನು ಪಲ್ಲವಿ ಪ್ರಶಾಂತ್ ನಡೆಸಿದರು ಎಂದಿದ್ದಾರೆ. ಈ ರ್ಯಾಲಿ ಹಿನ್ನೆಲೆಯಲ್ಲಿ ಬಂದೋಬಸ್ತ್‌ಗೆ ತೆರಳಿದ ಪೊಲೀಸ್ ಕಾರುಗಳ ಜೊತೆ ಆರ್‌ಟಿಸಿ ಬಸ್ ಗಾಜನ್ನು ಪಲ್ಲವಿ ಪ್ರಶಾಂತ್ ಅಭಿಮಾನಿಗಳು ಧ್ವಂಸಗೊಳಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಪಲ್ಲವಿ ಪ್ರಶಾಂತ್ ಹಾಗೂ ಇತರರ ವಿರುದ್ಧ 9 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೊದಲು ಪಲ್ಲವಿ ಪ್ರಶಾಂತ್ ಕಾರು ಚಾಲಕರಾದ ಸಾಯಿಕಿರಣ್ ಮತ್ತು ರಾಜು ಅವರನ್ನು ಬಂಧಿಸಲಾಯಿತು. ಬುಧವಾರ ರಾತ್ರಿ ಪಲ್ಲವಿ ಪ್ರಶಾಂತ್ ಹಾಗೂ ಆತನ ಸಹೋದರ ಮಹಾವೀರನ್‌ನನ್ನು ವಶಕ್ಕೆ ಪಡೆಯಲಾಯಿತು. ಪ್ರಶಾಂತ್‌ನನ್ನು ಠಾಣೆಗೆ ಕರೆತರುವ ಬದಲು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಈ ಆದೇಶದಲ್ಲಿ ಮ್ಯಾಜಿಸ್ಟ್ರೇಟ್ ಪಲ್ಲವಿ ಪ್ರಶಾಂತ್ ಅವರನ್ನು 14 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ತನಿಖೆ ನಡೆಸಿ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ವಿವರಿಸಿದ್ದಾರೆ. ಯುವಕರು ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.


Click it and Unblock the Notifications











