Bigg Boss: ಬಿಗ್‌ಬಾಸ್ ತೆಲುಗು ಸೀಸನ್ 8ರ ಸ್ಪರ್ಧಿಯಾಗಿರುವ ಕನ್ನಡತಿ ಪ್ರೇರಣಾ ಕಂಬಂ ಹಿನ್ನೆಲೆಯೇನು?

By ಅನಿತಾ ಬನಾರಿ

ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ತೆಲುಗು ಬಿಗ್ ಬಾಸ್‌ನ ಹೊಸ ಸೀಸನ್ ಶುರುವಾಗಿದೆ‌. ಯಶಸ್ವಿ 7 ಸೀಸನ್ ಗಳನ್ನು ಪೂರೈಸಿರುವ ಈ ಶೋ ಇದೀಗ 8 ನೇ ಸೀಸನ್ ಅನ್ನು ಶುರು ಮಾಡಿದೆ. ಸಂತೋಷದ ವಿಚಾರವೆಂದರೆ ಈ ಶೋವಿನಲ್ಲಿ ಕನ್ನಡ ಕಿರುತೆರೆ ಕಲಾವಿದರು ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮ ನಟನೆಯ ಮೂಲಕ ತೆಲುಗು ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಕನ್ನಡ ನಟ ನಟಿಯರು ಇದೀಗ ಬಿಗ್ ಬಾಸ್ ಮೂಲಕ ತೆಲುಗು ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಲಿದ್ದಾರೆ.

ಅಂದ ಹಾಗೇ ತೆಲುಗು ಬಿಗ್ ಬಾಸ್ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟವರ ಪೈಕಿ ಪ್ರೇರಣಾ ಕಂಬಂ ಕೂಡಾ ಒಬ್ಬರು. ಬೆಳ್ಳಿತೆರೆಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿದ್ದ ಪ್ರೇರಣಾ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದು ಮಾತ್ರ ಕಿರುತೆರೆಯಿಂದ ಎಂದರೆ ತಪ್ಪಾಗಲಾರದು. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಂಗನಾಯಕಿ' ಧಾರಾವಾಹಿಯಲ್ಲಿ ನಾಯಕಿ ನಕ್ಷತ್ರಳಾಗಿ ಈಕೆ ಅಭಿನಯಿಸಿದರು. ಜೊತೆಗೆ ‌ಆ ಪಾತ್ರದ ಮೂಲಕ ಕನ್ನಡ ಕಿರುತೆರೆಯಲ್ಲಿ ಈಕೆ ಮಿಂಚಿದರು.

Bigg Boss telugu season 8 Contestant actress Prerna Kambam

ಅಂದ ಹಾಗೇ ಪ್ರೇರಣಾ ಕಂಬಂ ಅವರು ನಟನೆಗೆ ಕಾಲಿಡಲು ಅವರ ದೂರದ ಸಂಬಂಧಿ ರಮ್ಯಾ ಅವರು ಮುಖ್ಯ ಕಾರಣ ಎನ್ನಬಹುದು. ರಮ್ಯಾ 'ಯಶೋಧೆ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಆ ಸಮಯದಲ್ಲಿ 'ಯಶೋಧೆ' ಧಾರಾವಾಹಿಯ ಸಣ್ಣ ಪಾತ್ರದಲ್ಲಿ ನಟಿಸುವ ಅವಕಾಶ ಪ್ರೇರಣಾಗೆ ಒದಗಿ ಬಂತು. ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ 'ಹರಹರ ಮಹಾದೇವ' ಧಾರಾವಾಹಿಯಲ್ಲಿಯೂ ಈಕೆ ಕಾಣಿಸಿಕೊಂಡಿದ್ದರು.

ಹೌದು, 'ಹರಹರ ಮಹಾದೇವ' ಧಾರಾವಾಹಿಯಲ್ಲಿ ನಾಯಕಿ ಸತಿಯ ಅಕ್ಕ, ಚಂದ್ರನ ಪತ್ನಿ ರೇವತಿಯಾಗಿ ಪ್ರೇರಣಾ ಕಂಬಂ ಅಭಿನಯಿಸಿದ್ದರು. ನಂತರ ಹಿರಿತೆರೆಗೆ ಹಾರಿದ ಪ್ರೇರಣಾ 'ಚೂರಿಕಟ್ಟೆ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ನಂತರ 'ಆನ', 'ಫಿಸಿಕ್ಸ್' ಸಿನಿಮಾದಲ್ಲಿ ಈಕೆ ಅಭಿನಯಸಿ ಸೈ ಎನಿಸಿಕೊಂಡಿರುವ ಪ್ರೇರಣಾ ತೆಲುಗು ಕಿರುತೆರೆಗೂ ಕಾಲಿಟ್ಟ ಬೆಡಗಿ.

Bigg Boss telugu season 8 Contestant actress Prerna Kambam

ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ಮುಕುಂದ ಮುರಾರಿ' ಧಾರಾವಾಹಿಯಲ್ಲಿ ನಾಯಕಿ ಕೃಷ್ಣಳಾಗಿ ಪ್ರೇರಣಾ ಕಂಬಂ ನಟಿಸಿದರು. ಆ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಈಕೆ ಪಸರಿಸಿದ್ದರು. ಇದೀಗ ಬಿಗ್ ಬಾಸ್ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿರುವ ಈಕೆ ಈ ಸಂತಸದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

"ನಾನು ಬಿಗ್ ಬಾಸ್ 8 ತೆಲುಗು ನಲ್ಲಿ ಸ್ಪರ್ಧಿಯಾಗುತ್ತೇನೆ ಎಂದು ಘೋಷಿಸಲು ಉತ್ಸುಕನಾಗಿದ್ದೇನೆ. ನೀವೆಲ್ಲರೂ ನನಗೆ ನೀಡಿದ ನಂಬಲಾಗದ ಬೆಂಬಲ ಮತ್ತು ಪ್ರೋತ್ಸಾಹವಿಲ್ಲದೆ ಇದ್ದಿದ್ದರೆ ಈ ಅವಕಾಶವು ಸಾಧ್ಯವಾಗುತ್ತಿರಲಿಲ್ಲ. ಪ್ರತಿ ಹಂತದಲ್ಲೂ ನಾನು ನಿಮಗೆ ಮನರಂಜನೆ ನೀಡುತ್ತೇನೆ. ನಿಮ್ಮ ಬೆಂಬಲವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ನಿಮ್ಮ ಮತಗಳನ್ನು ಹಾಕುವ ಮೂಲಕ ನೀವು ನನ್ನನ್ನು ಹುರಿದುಂಬಿಸುವುದನ್ನು ಮುಂದುವರಿಸುತ್ತೀರಿ ಎಂದು ಭಾವಿಸುತ್ತೇನೆ. ಒಟ್ಟಿಗೆ ಈ ಪ್ರಯಾಣವನ್ನು ಅದ್ಭುತಗೊಳಿಸೋಣ. ನನ್ನ ಸ್ಫೂರ್ತಿಯಾಗಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

More from Filmibeat

English summary
Bigg Boss telugu season 8 Contestant actress Prerna Kambam journey and bio
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X