ಬಿಗ್ ಬಾಸ್ ಮನೆಗೆ ಈ ಬಾರಿ ಬರಲಿದ್ದಾರೆ ಈ ಮಾದಕ ಚೆಲುವೆ ? ಲೀಕ್ ಆದ ಲಿಸ್ಟ್‌ನಲ್ಲಿ ಯಾರೆಲ್ಲಾ ಇದ್ದಾರೆ..?
ವರ್ಷಾನುವರ್ಷ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಆಚೀಚೆ, ಈ ಬಾರಿ ಮನೆಯಲ್ಲಿ ಯಾರನ್ನೆಲ್ಲ ಕಣ್ತುಂಬಿಕೊಳ್ಳಬಹುದು ಎನ್ನುವ ಚಿಂತೆ ಕೆಲವರನ್ನು ಕಾಡಲು ಶುರುಮಾಡುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲು ಇನ್ನೂ ಒಂದೆರಡು ತಿಂಗಳು ಬಾಕಿ ಇರುವಾಗಲೇ ಕೆಲ ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಏಕಾಏಕಿ ಸದ್ದು ಮಾಡಲು ಶುರು ಮಾಡುತ್ತವೆ. ಈ ಬಾರಿ ಕೂಡ...
ಇದೇ ತರಹದ ವಾತಾವರಣ ಇದೆ. ಹಿಂದಿಯಲ್ಲಿ ಬಿಗ್ ಬಾಸ್ ಹತ್ತೊಂಬತ್ತನೇ ಸೀಸನ್‌ಗೆ ಈಗಾಗಲೇ ದಿನಗಣನೆ ಆರಂಭವಾಗಿದ್ದು, ಕೆಲ ಹೆಸರುಗಳು ಈ ಬಾರಿಯ ಹಿಂದಿ ಬಿಗ್ ಬಾಸ್ ಮನೆಯ ಸುತ್ತ ಮುತ್ತ ಕೇಳಿ ಬರುತ್ತಿವೆ. ಇದರ ನಡುವೆ ಇದೀಗ ತೆಲುಗಿನಲ್ಲಿ ಕೂಡ ಬಿಗ್ ಬಾಸ್ ಕಲರವ ಶುರುವಾಗಿದೆ.

ಹೌದು, ಹಿಂದಿಯಲ್ಲಿ ಶುರುವಾದಂತೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೆಲುಗಿನಲ್ಲಿ ಕೂಡ ಈಗಿಂದನೇ ತೆರೆಮರೆಯಲ್ಲಿ ಕಸರತ್ತು ಶುರುವಾಗಿದೆ. ಎಂದಿನಂತೆ ಈ ಬಾರಿ ಕೂಡ ತೆಲುಗಿನಲ್ಲಿ ನಾಗಾರ್ಜುನ ಬಿಗ್ ಬಾಸ್ ಸಾರಥ್ಯ ವಹಿಸಿಕೊಂಡಿದ್ದಾರೆ.
ಇನ್ನು ಪ್ರತಿ ಬಾರಿ ಹಿಂದಿ ಬಿಗ್ ಬಾಸ್ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ಗೆ ಶುರುವಾದರೆ ತೆಲುಗಿನಲ್ಲಿ ಬಿಗ್ ಬಾಸ್ ಜುಲೈ ಕೊನೆಯಲ್ಲಿ ಅಥವಾ ಅಗಸ್ಟ್ ಮೊದಲ ವಾರದಲ್ಲಿ ಶುರುವಾಗುತ್ತೆ. ಈ ಬಾರಿ ಕೂಡ ತೆಲುಗಿನಲ್ಲಿ ಅಗಸ್ಟ್ ಕೊನೆಯ ವಾರದಲ್ಲಿ ಬಿಗ್ ಬಾಸ್ ಆರಂಭವಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಇದರ ನಡುವೆ ಇದೀಗ ಕೆಲ ಹೆಸರುಗಳು ಹೈದರಾಬಾದ್‌ನಲ್ಲಿ ಸದ್ದು ಮಾಡುತ್ತಿವೆ. ಆ ಪೈಕಿ ಜ್ಯೋತಿ ಪೂರ್ವಜ್ ಅಲಿಯಾಸ್ ಜ್ಯೋತಿ ರೈ ಅಲಿಯಾಸ್ ಜಯಶ್ರೀ ರೈ ಅವರ ಹೆಸರು ಕೂಡ ಒಂದು. ಹೌದು, ಜ್ಯೋತಿ ರೈ.. 'ಅನುರಾಗ ಸಂಗಮ', 'ಜೋಗುಳ', 'ಗೆಜ್ಜೆಪೂಜೆ', 'ಲವಲವಿಕೆ', 'ಕನ್ಯಾದಾನ', 'ಗೆಜ್ಜೆಪೂಜೆ', 'ಪ್ರೇರಣಾ', 'ಕಿನ್ನರಿ', 'ಮೂರು ಗಂಟು', 'ಕಸ್ತೂರಿ ನಿವಾಸ' ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯ ಮೂಲಕ ಕನ್ನಡಿಗರ ಹೃದಯವನ್ನೂ ಗೆದ್ದವರು.
ಸದ್ಯ ಕನ್ನಡದಿಂದ ಅಂತರವನ್ನು ಕಾಪಾಡಿಕೊಂಡು ಪಕ್ಕದ ತೆಲುಗು ಕಿರುತೆರೆ ಮತ್ತು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಜ್ಯೋತಿ ರೈ ತೆಲುಗು ನಿರ್ದೇಶಕ ಸುಕು ಪೂರ್ವಜ್ ಅವರ ಜೊತೆ ಮದುವೆಯಾಗಿ ಅಲ್ಲಿಯೇ ಬದುಕು ರೂಪಿಸಿಕೊಂಡಿದ್ದಾರೆ.

ಇಂಥಾ ಜ್ಯೋತಿ ರೈ ಅವರ ಹೆಸರು ಪ್ರತಿ ಬಾರಿ ಬಿಗ್ ಬಾಸ್ ಶುರುವಾಗುವ ಆಚೀಚೆ ಕೇಳಿ ಬರಲು ಶುರುವಾಗುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ವರ್ಷ ಕನ್ನಡದ ಬಿಗ್ ಬಾಸ್ ಜ್ಯೋತಿ ರೈ ಅವರನ್ನು ಸಂಪರ್ಕಿಸಿತ್ತು. ಖುದ್ದು ಜ್ಯೋತಿ ರೈ ಈ ವಿಚಾರವನ್ನು ಕಳೆದ ವರ್ಷ ಹಂಚಿಕೊಂಡಿದ್ದರು ಕೂಡ.
ಕನ್ನಡ ಬಿಗ್ ಬಾಸ್‌ನಿಂದ ನನಗೆ ಕರೆ ಬಂದಿದ್ದು ನಿಜಾ. ಆದರೆ.. ನಾನು ಬಂದ ಈ ಅವಕಾಶವನ್ನು ಅಷ್ಟೇ ಗೌರವದಿಂದ ನಾನು ತಿರಸ್ಕರಿಸಿದ್ದೇನೆ ಎಂದು ಹೇಳಿದ್ದರು. ಈಗಾಗಲೇ ಒಪ್ಪಿಕೊಂಡ ಕೆಲಸಗಳ ಕಾರಣದಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದು ಅಭಿಮಾನಿಗಳ ಬೆಂಬಲಕ್ಕೆ ಮತ್ತು ಬಿಗ್ ಬಾಸ್ ನೀಡಿದ ಅವಕಾಶಕ್ಕೆ ನಾನು ಚಿರಋಣಿ ಎಂದು ಜ್ಯೋತಿ ಪೂರ್ವಜ್ ಕಳೆದ ವರ್ಷ ಹೇಳಿದ್ದರು.
ಈಗ ಇದೇ ಜ್ಯೋತಿ ರೈ ಅವರ ಹೆಸರು ಮತ್ತೊಮ್ಮೆ ಚಾಲ್ತಿಯಲ್ಲಿದೆ. ಆದರೆ ಈ ಬಾರಿ ಕನ್ನಡ ಬಿಗ್ ಬಾಸ್‌ಗೆ ಅಲ್ಲ ಬದಲಿಗೆ ತೆಲುಗು ಬಿಗ್ ಬಾಸ್‌ಗೆ. ಯಾರಿಗೆ ಗೊತ್ತು ತೆಲುಗು ನಾಡಿನಲ್ಲಿ ಬಿಡಾರ ಹೂಡಿರುವ ಜ್ಯೋತಿ ರೈ ಈ ಬಾರಿ ತೆಲುಗು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದರು ನೀಡಬಹುದು.
ಜ್ಯೋತಿ ರೈ ಅವರನ್ನು ಹೊರತು ಪಡಿಸಿದರೆ ನಟಿಯರಾದ ಕಲ್ಪಿಕಾ ಗಣೇಶ್, ಕಾವ್ಯಾ, ತೇಜಸ್ವಿನಿ, ಕಿರುತೆರೆ ನಟಿ ನವ್ಯಾ ಸ್ವಾಮಿ, ಶ್ರಾವಣಿ ವರ್ಮಾ, ಆರ್ ಜೆ ರಾಜ್, ಸಾಯಿ ಕಿರಣ್, ಮುಖೇಶ್ ಗೌಡ, ಚತ್ರಪತಿ ಶೇಖರ್ ಅವರ ಹೆಸರು ಸದ್ಯ ಕೇಳಿ ಬರುತ್ತಿದೆ. 'ಡೆಕ್ಕನ್ ಕ್ರೊನಿಕಲ್' ಪತ್ರಿಕೆ ಕೂಡ ಇವರೆಲ್ಲರು ಬಿಗ್ ಬಾಸ್‌ಗೆ ಹೋಗುವ ಸಾಧ್ಯತೆ ಇದೆ ಎಂದು ವರದಿಯನ್ನು ಮಾಡಿದೆ. ನಿಜಕ್ಕೂ ಇವರೆಲ್ಲರಲ್ಲಿ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವುದು ಯಾರು ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ಶೀಘ್ರದಲ್ಲಿ ಸಿಗಲಿದೆ.


Click it and Unblock the Notifications











