'ಬಿಗ್ ಬಾಸ್ ಕನ್ನಡ' ಪ್ರೋಮೋದಲ್ಲೊಂದು ವಿಶೇಷ.!

'ಬಿಗ್ ಬಾಸ್ ಕನ್ನಡ' ಆರನೇ ಆವೃತ್ತಿಯ ಪ್ರೋಮೋಗಳು ಬಿಡುಗಡೆಯಾಗಿದ್ದು, ಸಂಚಿಕೆ ಸದ್ಯದಲ್ಲೇ ಪ್ರಾರಂಭವಾಗಲಿದೆ. ಈ ಬಾರಿಯ ಬಿಗ್ ಬಾಸ್ ನಲ್ಲೊಂದು ವಿಶೇಷ ಕಂಡುಬಂದಿದೆ.

ಏನಪ್ಪಾ ಅಂತಹ ವಿಶೇಷ ಅಂದ್ರಾ. ಬಿಗ್ ಬಾಸ್ ಪ್ರೋಮೋವನ್ನ ಗಂಭೀರವಾಗಿ ನೋಡಿದ್ರೆ ನಿಮಗೆ ಗೊತ್ತಾಗ್ತಿತ್ತು. ಹೋಗ್ಲಿ ಬಿಡಿ ನಾವೇ ಹೇಳ್ತಿವಿ. 'ಬಿಗ್ ಬಾಸ್' ಶೀರ್ಷಿಕೆಯನ್ನ ಕನ್ನಡ ಅಕ್ಷರದಲ್ಲಿ ಬಳಸಲಾಗಿದೆ. ಇದಕ್ಕೂ ಮುಂಚಿನ ಆವೃತ್ತಿಯ ಪ್ರೋಮೋಗಳಲ್ಲಿ ಬಿಗ್ ಬಾಸ್ ಎನ್ನುವುದು ಇಂಗ್ಲೀಷ್ ನಲ್ಲಿ ಇರ್ತಿತ್ತು. ಈ ಬಾರಿ ಕನ್ನಡದಲ್ಲಿ ಕಂಡು ಬರುತ್ತಿದೆ.

ಇದು ಕನ್ನಡ ಅಭಿಮಾನಿಗಳಿಗೆ, ಕನ್ನಡ ಕಲಾರಸಿಕರಿಗೆ ಸಹಜವಾಗಿ ಖುಷಿ ನೀಡಿದೆ. ಇಂತಹದೊಂದು ಬೇಡಿಕೆಯನ್ನ ಕಳೆದ ಐದು ಆವೃತ್ತಿಗಳಿಂದಲೂ ಪ್ರೇಕ್ಷಕರು ಬಿಗ್ ಬಾಸ್ ಆಯೋಜಕರ ಮುಂದಿಟ್ಟಿದ್ದರು. ಇದು ಆರನೇ ಆವೃತ್ತಿಯಲ್ಲಿ ನೆರವೇರಿದೆ.

Bigg boss title in kannada

ಅಂದ್ಹಾಗೆ, ಕಳೆದ ಆವೃತ್ತಿ ಮುಗಿಸಿದ ನಂತರ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಕಾರಣ, 'ಬಿಗ್ ಬಾಸ್' ಮನೆ ಸುಟ್ಟು ಭಸ್ಮವಾಗಿತ್ತು. ಇದೀಗ ಅದೇ ಜಾಗದಲ್ಲಿ ಬೃಹತ್ ಮನೆ ತಲೆಯೆತ್ತಿದೆ. ಹೊಸ ಮನೆಯಲ್ಲಿ, ಹೊಸ ಶೈಲಿಯ ಮನೆಯಲ್ಲಿ ಶೋ ನಡೆಯಲಿದೆ.

ಇನ್ನು ಕಳೆದ ಆವೃತ್ತಿಯಂತೆ ಈ ಆವೃತ್ತಿಯಲ್ಲೂ ಜನಸಾಮಾನ್ಯರು ಮತ್ತು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಮೂಲಗಳ ಪ್ರಕಾರ, ಸೆಪ್ಟೆಂಬರ್ ಅಂತ್ಯದಲ್ಲಿ ಕನ್ನಡದ ಬಿಗ್ ಬಾಸ್ ಆರಂಭವಾಗಲಿದೆ. ಮತ್ತೊಂದೆಡೆಯಲ್ಲಿ ಹಿಂದಿಯಲ್ಲಿ ಇದೇ ವಾರದಿಂದ ಬಿಗ್ ಬಾಸ್12 ನೇ ಆವೃತ್ತಿ ಆರಂಭವಾಗುತ್ತಿದೆ.

More from Filmibeat

English summary
Bigg Boss Kannada is back with Kannada title for the first time. Kiccha Sudeep's first promo for Bigg Boss Kannada 6 reality show is out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X