twitter
    For Quick Alerts
    ALLOW NOTIFICATIONS  
    For Daily Alerts

    ಕೋಟ್ಯಾಧಿಪತಿ Vs ಬಿಗ್ ಬಾಸ್ ಗೆದ್ದದ್ದು ಯಾರು?

    By ಉದಯರವಿ
    |

    ಈ ರೀತಿಯ ಪ್ರಶ್ನೆಯೊಂದು ಬಹಳ ದಿನಗಳಿಂದ ಎರಡೂ ಕಾರ್ಯಕ್ರಮಗಳನ್ನು ಗಮನಿಸುತ್ತಿರುವ ಪ್ರೇಕ್ಷಕ ವರ್ಗವನ್ನು ಕಾಡುತ್ತಿದೆ. ಎರಡೂ ಕಾರ್ಯಕ್ರಮಗಳ ನಿರೂಪಕರು ಸ್ಟಾರ್ ನಟರೇ ಆಗಿರುವುದರಿಂದ ಈ ಪ್ರಶ್ನೆ ಉದ್ಭವಿಸಿದೆ. ಕಡೆಗೆ ವೀಕ್ಷಕರನ್ನು ಸೆಳೆದದ್ದು 'ಕನ್ನಡದ ಕೋಟ್ಯಾಧಿಪತಿ'ಯೇ ಅಥವಾ 'ಬಿಗ್ ಬಾಸಾ?

    ಒಂದೇ ಮಾತಿನಲ್ಲಿ ಹೇಳುವುದಾದರೆ 'ಕನ್ನಡದ ಕೋಟ್ಯಾಧಿಪತಿ' ಜನಮನ ಗೆದ್ದಿದೆ. ಅದ್ಯಾಕೋ ಏನೋ ಆರಂಭದಲ್ಲಿ 'ಬಿಗ್ ಬಾಸ್' ಕಾರ್ಯಕ್ರಮವನ್ನು ಬಹಳಷ್ಟು ಜನ ಮುಗಿಬಿದ್ದರಾದರೂ ಬರುಬರುತ್ತಾ ಈ ಕಾರ್ಯಕ್ರಮದ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ ಎಂಬುದು ಸಾಬೀತಾಗಿದೆ.

    'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ನೋಡಿದರೆ ಜನರಲ್ ನಾಲೆಡ್ಜ್ ಆದರೂ ಸುಧಾರಿಸಿಕೊಳ್ಳಬಹುದು. 'ಬಿಗ್ ಬಾಸ್' ಕಾರ್ಯಕ್ರಮ ನೋಡುವುದರಿಂದ ಏನು ಪ್ರಯೋಜನ ಎಂಬ ಪ್ರಶ್ನೆಗಳೂ ತಲೆಯೆತ್ತಿವೆ.

    ಬಿಗ್ ಬಾಸ್ ಆರಂಭದಲ್ಲಿ ನಂಬರ್ ಒನ್ ಈಗ?

    ಬಿಗ್ ಬಾಸ್ ಆರಂಭದಲ್ಲಿ ನಂಬರ್ ಒನ್ ಈಗ?

    ಬಿಗ್ ಬಾಸ್ ರಿಯಾಲಿಟಿ ಶೋ ಆರಂಭದ ವಾರ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿತ್ತು. ಬಿಗ್ ಬಾಸ್ ಕಾರ್ಯಕ್ರಮ ಎರಡನೇ ವಾರಕ್ಕೆ ಟಿಆರ್ ಪಿ ಡೌನ್ ಆಗಿದೆ. ಕಡೆಗೆ 'ಕೋಟ್ಯಾಧಿಪತಿ' ಕಾರ್ಯಕ್ರಮವೇ ನಂಬರ್ ಒನ್ ಸ್ಥಾನವನ್ನು ಕೈವಶ ಮಾಡಿಕೊಂಡಿದೆ.

    ರೇಟಿಂಗ್ ನಲ್ಲಿ ಮುಂದಿರುವ ಕೋಟ್ಯಾಧಿಪತಿ

    ರೇಟಿಂಗ್ ನಲ್ಲಿ ಮುಂದಿರುವ ಕೋಟ್ಯಾಧಿಪತಿ

    ಈಗ ಸುವರ್ಣ ಹಾಗೂ ಈಟಿವಿ ಕನ್ನಡ ವಾಹಿನಿಗಳ ನಡುವೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿದೆ. ನಾನಾ ನೀನ ಎಂಬಂತಹ ಪರಿಸ್ಥಿತಿ ನೆಲೆಸಿದೆ. 'ಕನ್ನಡದ ಕೋಟ್ಯಾಧಿಪತಿ' ಶೋ 10 ಪಾಯಿಂಟ್ ಗಳಲ್ಲಿ 'ಬಿಗ್ ಬಾಸ್' ಶೋಗಿಂತಲೂ ಮುಂದಿದೆ.

    ರೇಟಿಂಗ್ ನಲ್ಲಿ ಬಿಗ್ ಬಾಸ್ ಕೆಳಕ್ಕೆ

    ರೇಟಿಂಗ್ ನಲ್ಲಿ ಬಿಗ್ ಬಾಸ್ ಕೆಳಕ್ಕೆ

    ಮಾರ್ಚ್ ಕೊನೆಯ ವಾರದಲ್ಲಿ ಕೋಟ್ಯಾಧಿಪತಿ ಕಾರ್ಯಕ್ರಮದ ಜಿಆರ್ ಪಿ (ಗ್ರಾಸ್ ರೇಟಿಂಗ್ ಪಾಯಿಂಟ್) 85 ಪಾಯಿಂಟ್ ಗಳಿದ್ದರೆ ಬಿಗ್ ಬಾಸ್ ರಿಯಾಲಿಟಿ ಶೋ 75 ಪಾಯಿಂಟ್ ಗಳಲ್ಲಿದೆ. ಆರಂಭದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಜಿಆರ್ ಪಿ 103.54 ರಷ್ಟಿದ್ದದ್ದು ಕೊನೆಯ ವಾರದಲ್ಲಿ 75.16ಕ್ಕೆ ಬಂದು ನಿಂತಿದೆ.

    ಶುಕ್ರವಾರ, ಶನಿವಾರ ಸುದೀಪ್ ಬೆಸ್ಟ್

    ಶುಕ್ರವಾರ, ಶನಿವಾರ ಸುದೀಪ್ ಬೆಸ್ಟ್

    ಆದರೆ ಶುಕ್ರವಾರ ಹಾಗೂ ಶನಿವಾರಗಳಂದು 'ಬಿಗ್ ಬಾಸ್' ಕಾರ್ಯಕ್ರಮದ ರೇಟಿಂಗ್ ನಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡಿದೆ. ಇದಕ್ಕೆ ಕಾರಣ ಸುದೀಪ್ ನಿರೂಪಣೆ. 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮ ಬಿಗ್ ಬಾಸ್ ಶೋಗೆ ಒಂದಷ್ಟು ಸತುವು ತುಂಬಿದೆ.

    ನಿರೂಪಣೆಯಲ್ಲಿ ಇಬ್ಬರೂ ಬೆಸ್ಟ್

    ನಿರೂಪಣೆಯಲ್ಲಿ ಇಬ್ಬರೂ ಬೆಸ್ಟ್

    ಇನ್ನು ಮಾತು, ನಿರೂಪಣೆಯಲ್ಲಿ ಅತ್ತ ಪುನೀತ್ ಇತ್ತ ಸುದೀಪ್ ಇಬ್ಬರೂ ಎಲ್ಲರ ಮನಗೆದ್ದಿದ್ದಾರೆ. ಆದರೆ ಕಾರ್ಯಕ್ರಮದ ವಿಚಾರಕ್ಕೆ ಬಂದರೆ ಜನ ಕೋಟ್ಯಾಧಿಪತಿಯನ್ನೇ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ ಅನ್ನಿಸುತ್ತದೆ. ಇದಕ್ಕೆ ಜಿಆರ್ ಪಿ ಯೇ ಸಾಕ್ಷಿ.

    English summary
    The tug of war between Etv Kannada's 'Bigg Boss' and Suvarna channels 'Kannadada Kotyadhipati' continues. Now there is a neck to neck fight between the two shows. However Kotyadhipati show ahead by 10 points. Kotyadhipati has 85 GRP points for the week to 75 for Bigg Boss.
    Monday, April 15, 2013, 19:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X