BBK12: ಕ್ಯಾಪ್ಟನ್ ಆಗಿ ಗಿಲ್ಲಿ ಎಡವಟ್ಟು? ಕಿಚ್ಚನ ಮುಂದೆ ಗಿಲ್ಲಿ ವಿರುದ್ಧ ತಿರುಗಿ ಬಿದ್ದ ಕಳ್ಳೆಪುಟ್ಟಿ!
ಮತ್ತೊಂದು ವೀಕೆಂಡ್ ಬಂದಿದೆ. ಬಿಗ್‌ಬಾಸ್ ಮನೆಯಲ್ಲಿ ಕಿಚ್ಚ ಪಂಚಾಯ್ತಿಗೆ ವೇದಿಕೆ ಸಿದ್ಧವಾಗಿದೆ. ಕಳೆದ ವೀಕೆಂಡ್ ಶೋಗೆ ಸುದೀಪ್ ಗೈರಾಗಿದ್ದರು. ಜೋಗಿ ಪ್ರೇಮ್, ಅನುಪಮಾ ಗೌಡ ವಿಶೇಷ ಅತಿಥಿಗಳಾ ಬಂದು ಹೋಗಿದ್ದರು. ಆದರೆ ಈ ವಾರ ಕಿಚ್ಚನ ಪಂಚಾಯ್ತಿ ಕಳೆ ಕಟ್ಟಿದೆ.
ಶನಿವಾರದ ಪಂಚಾಯ್ತಿಯ ಪ್ರೋಮೊಗಳು ರಿಲೀಸ್ ಆಗಿದೆ. ಎರಡೂ ಪ್ರೋಮೊಗಳಲ್ಲಿ ಗಿಲ್ಲಿ ಆರ್ಭಟಕ್ಕೆ ಬ್ರೇಕ್ ಬೀಳುವ ಸುಳಿವು ಸಿಕ್ತಿದೆ. ಈ ವಾರ ಕ್ಯಾಪ್ಟನ್ ಆಗಿದ್ದ ಗಿಲ್ಲಿ ಅಬ್ಬರ ಜೋರಾಗಿತ್ತು. ಆದರೆ ಆತನ ವರ್ತನೆ, ಮಾತು, ಅಧಿಕಾರದ ಬಗ್ಗೆ ಮನೆ ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಾರ ಗಿಲ್ಲಿ ಹಾಗೂ ಅಶ್ವಿನಿ ನಡುವೆ ಭಾರೀ ಕಿರಿಕ್ ನಡೆದಿದೆ. ಇದೆಲ್ಲದರ ಬಗ್ಗೆ ಪಂಚಾಯ್ತಿಯಲ್ಲಿ ಚರ್ಚೆ ನಡೀತಿದೆ.

ಇಷ್ಟು ದಿನ ಒಳ್ಳೆ ಆಟದ ಮೂಲಕ ಜನರ ಮನಗೆದ್ದವರು ಇಂತಹ ಸಮಯದಲ್ಲಿ ಈ ಮಾತುಗಳು ಬೇಕಾ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಆಟದಲ್ಲಿ ಗೆದ್ದರೂ ಸಂಭ್ರಮಿಸಲು ಆಗದೇ ಒಬ್ಬರು ನೊಂದಿದ್ದಾರೆ ಎಂದು ಸುದೀಪ್ ಹೇಳಿರುವ ಪ್ರೋಮೊ ವೈರಲ್ ಆಗ್ತಿದೆ. ಮತ್ತೊಂದು ಪ್ರೋಮೊದಲ್ಲಿ ಗಿಲ್ಲಿ ಕ್ಯಾಪ್ಟೆನ್ಸಿ ಬಗ್ಗೆ ಸುದೀಪ್ ಮನೆ ಮಂದಿ ಅಭಿಪ್ರಾಯ ಕೇಳಿದ್ದಾರೆ.
ರಕ್ಷಿತಾ ಮಾತನಾಡಿ "ಗಿಲ್ಲಿ ಕ್ಯಾಪ್ಟನ್ ಅನ್ನಿಸಲೇ ಇಲ್ಲ" ಎಂದಿದ್ದಾರೆ. "ಗಿಲ್ಲಿ ಜವಾಬ್ದಾರಿಯುತವಾಗಿ ಕ್ಯಾಪ್ಟೆನ್ಸಿ ನಿಭಾಯಿಸಲಿಲ್ಲ" ಎಂದು ರಘು ಹೇಳಿದ್ದಾರೆ. ಅಧಿಕಾರ ಕೊಟ್ಟಾಗ ಎಷ್ಟು ಅಹಂಕಾರ ಹೊರ ಬರುತ್ತದೆ ಎನ್ನುವುದಕ್ಕೆ ಗಿಲ್ಲಿ ಸಾಕ್ಷಿ ಎಂದು ಅಶ್ವಿನಿ ಗೌಡ ಬೇಸರ ವ್ಯಕ್ತಪಡಿಸಿರುವುದನ್ನು ನೋಡಬಹುದು. "ಕ್ಯಾಪ್ಟನ್ ಆಗಿ, ಸ್ಪರ್ಧಿ ಆಗಿ, ಗಿಲ್ಲಿ ಆಗಿ ಬಹಳ ಟಾಕ್ಸಿಕ್" ಅನ್ನಿಬಿಡ್ತು ಎಂದು ಸ್ಪಂದನಾ ಹೇಳಿರುವುದು ಅಚ್ಚರಿ ಮೂಡಿಸಿದೆ.
ವಾರವಿಡೀ ಗಿಲ್ಲಿ ಜೊತೆ ನಗು ನಗುತ್ತಾ ಇರುವ ಸ್ಪಂದನಾ ವೀಕೆಂಡ್‌ನಲ್ಲಿ ಸುದೀಪ್ ಮುಂದೆ ಹೀಗೆ ಮಾತನಾಡಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಗಿಲ್ಲಿ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. "ನಾನೇ ಕಪ್ ಗೆದ್ದುಕೊಂಡು ಹೋಗ್ತೀನಿ, ಜೊತೆಗೆ ಇನ್ನೊಬ್ಬರನ್ನು(ಕಾವ್ಯಾ) ಫಿನಾಲೆಗೆ ಕರೆದುಕೊಂಡು ಹೋಗ್ತೀನಿ ಎಂದು ಅಂತ ಗಿಲ್ಲಿ ಸವಾಲು ಹಾಕಿದ್ದಾರೆ" ಎಂದು ಅಶ್ವಿನಿ ಹೇಳಿದ್ದಾರೆ. "ನಾಮಿನೇಷನ್ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ, ಕಾವ್ಯಾ ಅವರನ್ನು ಸೇವ್ ಮಾಡೋಕೆ ಇಡೀ ಪ್ರಕ್ರಿಯೆ ನಡೀತಾ?" ಎಂದು ಸುದೀಪ್ ಕೇಳಿದ್ದಾರೆ. ಹೌದು ಎಂದು ಕೆಲವರು ಹೇಳಿರುವುದು ಪ್ರೋಮೊದಲ್ಲಿ ನೋಡಬಹುದು.
ಪ್ರೋಮೊ ನೋಡಿದರೆ ಗಿಲ್ಲಿಗೆ ಸುದೀಪ್ ಸರಿಯಾಗಿ ಕ್ಲಾಸ್ ತಗೋತ್ತಾರೆ ಎನ್ನುವಂತೆ ಕಾಣುತ್ತಿದೆ. ಆದರೆ ಅದು ನಿಜವಲ್ಲ. ಗಿಲ್ಲಿ ಕ್ಯಾಪ್ಟೆನ್ಸಿ ಬಗ್ಗೆ ಮನೆ ಮಂದಿ ಅಭಿಪ್ರಾಯ ಕೇಳಿದ್ದಾರೆ. ಅವರು ಹೇಳಿದ್ದಾರೆ. ಅಷ್ಟೇ, ಹಾಗಂತ ಗಿಲ್ಲಿಗೆ ಮಾತ್ರ ಕಿಚ್ಚ ಮಾತಿನ ಏಟು ಕೊಡುತ್ತಾರೆ ಎನ್ನುವುದಕ್ಕೆ ಆಗಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಕುತೂಹಲ ಮೂಡಿಸಲು ಈ ರೀತಿ ಪ್ರೋಮೊ ಎಡಿಟ್ ಮಾಡಿರಬಹುದು. ಸಂಜೆ ಸಂಪೂರ್ಣ ಎಪಿಸೋಡ್ ನೋಡಿದ ಮೇಲೆ ಅಸಲಿ ಸಂಗತಿ ಗೊತ್ತಾಗುತ್ತದೆ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.
ಕ್ಯಾಪ್ಟನ್ ಆಗಿ ಗಿಲ್ಲಿ ಕೊಂಚ ಹಳಿ ತಪ್ಪಿದ್ದಾರೆ ಎನ್ನುವ ಆರೋಪ ವೀಕ್ಷಕರಿಂದ ಕೇಳಿಬರ್ತಿದೆ. ಅತಿಯಾದ ಆತ್ಮವಿಶ್ವಾಸ, ಕಾವ್ಯಾಳನ್ನು ಸೇವ್ ಮಾಡಬೇಕು ಎನ್ನುವ ಹಠಕ್ಕೆ ಬಿದ್ದು ಹೀಗೆಲ್ಲಾ ಆಡುತ್ತಿದ್ದಾನೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸುಖಾ ಸುಮ್ಮನೆ ಕಾವ್ಯಾ ಸ್ನೇಹಕ್ಕಾಗಿ ಆಟವನ್ನು ಗಿಲ್ಲಿ ಮರೆಯುತ್ತಿದ್ದಾರೆ ಎನ್ನುವುದು ಬಹಳಷ್ಟು ಜನರ ಆರೋಪ. ಶೋ ಕೊನೆ ಕೊನೆಗೆ ಎಲ್ಲರೂ ಪ್ರಬುದ್ಧರಾಗಿ ಆಡಬೇಕು. ಗಿಲ್ಲಿ ಈ ವಿಚಾರದಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಕಾಮೆಂಟ್ ಮಾಡ್ತಿದ್ದಾರೆ.


Click it and Unblock the Notifications











