BBK12: "ಬನಿಯನ್ ಹಾಕ್ಕೊಂಡಿದ್ರು ಗಿಲ್ಲಿ ರಾಜನಂತೆ ಬಾಳ್ತಿದ್ದಾನೆ"- ಸುದೀಪ್ ಮಾತಿಗೆ ಎಲ್ರೂ ಶಾಕ್

ಈ ವೀಕೆಂಡ್ ಕಿಚ್ಚನ ಪಂಚಾಯ್ತಿಯಲ್ಲಿ ಗಿಲ್ಲಿಯದ್ದೇ ಸದ್ದು ಜೋರಾಗಿತ್ತು. ಕ್ಯಾಪ್ಟನ್ ಆಗಿ ಗಿಲ್ಲಿ ಮಾಡಿದ ತಪ್ಪುಗಳಿಗೆ ಸುದೀಪ್ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ. ಜೊತೆಗೆ ಗಿಲ್ಲಿ ರೀತಿ ಯಾರು ಕೂಡ ಬಿಗ್‌ಬಾಸ್ ಆಟ ಅರ್ಥ ಮಾಡಿಕೊಂಡಿಲ್ಲ, ಆಟಕ್ಕೆ ಪ್ರಿಪೇರ್ ಆಗಿ ಬಂದಿಲ್ಲ ಎಂದು ಸುದೀಪ್ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಈ ವಾರ ಗಿಲ್ಲಿ ಕ್ಯಾಪ್ಟನ್ ಆಗಿದ್ದು ಗೊತ್ತೇಯಿದೆ. ಆದರೆ ನಾಮಿನೇಷನ್ ವೇಳೆ ಫೇವರಿಸಂ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹಲವು ಬಾರಿ ಕಾವ್ಯಾ ಹೆಸ್ರು ಬಂದ್ರು, ಗಿಲ್ಲಿ ಪದೇ ಪದೇ ಸೇವ್ ಮಾಡಿದ್ದರು. ನಾಮಿನೇಷನ್ ಒಂದರ್ಥದಲ್ಲಿ ತಮಾಷೆ ಎನ್ನುವಂತಾಗಿತ್ತು. ಇದೇ ವಿಚಾರ ಶನಿವಾರ ಪಂಚಾಯ್ತಿಯಲ್ಲಿ ದೊಡ್ಡದಾಗಿ ಚರ್ಚೆಗೆ ಬಂದಿದೆ.

Bigg Boss Weekend Panchayat Sudeep Schools Housemates Backs Gilli s Game Strategy

ನಾಮಿನೇಷನ್ ವೇಳೆ ಯಾಕೆ ಗಿಲ್ಲಿಯನ್ನು ಕೇಳಲಿಲ್ಲ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ವಾದ ಮಾಡುವ ಸಮಯದಲ್ಲಿ ಯಾಕೆ ಮಾಡಲಿಲ್ಲ ಎಂದು ಬೇರೆ ಸ್ಪರ್ಧಿಗಳನ್ನು ಕೇಳಿದ್ದಾರೆ. ಆ ಮೂಲಕ ಗಿಲ್ಲಿ ಮಾತ್ರವಲ್ಲ ಎಲ್ಲರೂ ಮಾಡಿದ್ದು ತಪ್ಪು ಎಂದು ಸುದೀಪ್ ಹೇಳಿದ್ದಾರೆ.

ಸುದೀಪ್ ವೇದಿಕೆಯಲ್ಲಿ ಮಾತನಾಡಿ ಕಾವ್ಯಾನ ನಾಮಿನೇಟ್ ಮಾಡೋಕೆ 5 ಕಾರಣ ಕೊಡಿ ಎಂದಾಗಲೂ ಗಿಲ್ಲಿ ಮಾತನಾಡಲಿಲ್ಲ. ಆಗ ಗಿಲ್ಲಿಗೆ ನಯವಾಗಿಯೇ ತಿವಿದರು. "ಒಂದು ವೇಳೆ ಈಗ 3 ಕಾರಣ ನೀವು ಕೊಟ್ಟಿದ್ದರೆ ನೀವು ಸರಿ, ಉಳಿದರೆಲ್ಲಾ ತಪ್ಪು ಎನ್ನುವುದು ಸಾಬೀತಾಗುತ್ತಿತ್ತು" ಎಂದು ಸುದೀಪ್ ಹೇಳಿದ್ದಾರೆ. ಅದಕ್ಕೂ ಗಿಲ್ಲಿ ಪ್ರತಿಕ್ರಿಯಿಸಲಿಲ್ಲ. ಒಂದು ವೇಳೆ ಕಾವ್ಯಾನ ಗಿಲ್ಲಿ ಸೇಫ್ ಮಾಡಲು ಬಯಸಿದ್ದರೆ ನೀವೆಲ್ಲಾ ಯಾಕೆ ಕೇಳಲಿಲ್ಲ ಎಂದು ಸುದೀಪ್ ಇತರೆ ಸ್ಪರ್ಧಿಗಳಿಗೆ ಕೇಳಿದ್ದಾರೆ. ನಾಮಿನೇಷನ್ ಅನ್ನು ಇಷ್ಟು ತಮಾಷೆಯಾಗಿ ತೆಗೆದುಕೊಳ್ಳಬಾರದು. ಫಿನಾಲೆಗೆ ಎರಡು ವಾರ ಇರುವಾಗ ಇದು ಸರಿಯಲ್ಲ ಎಂದು ಎಲ್ಲರಿಗೂ ಚಾಟಿ ಬೀಸಿದ್ದಾರೆ. ಗಿಲ್ಲಿ ಮಾಡಿದ್ದು ತಪ್ಪಲ್ಲ, ಅದು ಅವರಿಗೆ ಬಿಟ್ಟಿದ್ದು ಎಂದು ಸುದೀಪ್ ಹೇಳಿ ಅಚ್ಚರಿ ಮೂಡಿಸಿದರು.

ಬಳಿಕ ಗಿಲ್ಲಿ ಕ್ಯಾಪ್ಟನ್ ಆಗಿ ಹೇಗೆ ಅಧಿಕಾರ ಬಳಸಿದ್ರು ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಮನೆಮಂದಿ ಎಲ್ಲರೂ ಗಿಲ್ಲಿ ಹೇಳುವ ಮುನ್ನ ಎಲ್ಲಾ ಕೆಲಸ ಮಾಡಿದ್ದಾಗಿ ಹೇಳಿದ್ದಾರೆ. ಆ ಮೂಲಕ ಗಿಲ್ಲಿ ಕ್ಯಾಪ್ಟೆನ್ಸಿ ಸುಲಭ ಮಾಡಿದ್ದಾರೆ. ಆದರೆ ಬೇರೆಯವರ ಕ್ಯಾಪ್ಟೆನ್ಸಿಯಲ್ಲಿ ಗಿಲ್ಲಿ ಹೇಳಿದ ಕೆಲಸ ಸರಿಯಾಗಿ ಮಾಡುತ್ತಿರಲಿಲ್ಲ. ಆ ಮೂಲಕ ಗಿಲ್ಲಿ ಎಲ್ಲರನ್ನು ಆಡಿಸುತ್ತಿದ್ದಾನೆ ಎಂದು ಸುದೀಪ್ ಹೇಳಿದ್ದಾರೆ. ಮನೆ ಮಂದಿಯೆಲ್ಲಾ ಅದಕ್ಕೆ ತಲೆ ತೂಗುವಂತಾಗಿದೆ.

ಗಿಲ್ಲಿ ಹಿಂದಿನ ಬಿಗ್‌ಬಾಸ್ ಸೀಸನ್ ಎಲ್ಲಾ ನೋಡಿದ್ದೀರಾ? ಯಾವುದನ್ನು ಚೆನ್ನಾಗಿ ನೋಡಿದ್ದೀರಾ ಎಂದಾಗ ಪ್ರಥಮ್ ಇದ್ದ ಸೀಸನ್ ಹಾಗೂ ಹನುಮಂತ ಇದ್ದ ಸೀಸನ್ ಎಂದು ಗಿಲ್ಲಿ ಉತ್ತರಿಸಿದ್ದಾರೆ. ಅದನ್ನು ಕೇಳುತ್ತಿದ್ದಂತೆ ಸುದೀಪ್ ಚಪ್ಪಾಳೆ ತಟ್ಟಿದ್ದಾರೆ. ಗಿಲ್ಲಿ ಪಾತ್ರದಲ್ಲಿ ಸ್ವಲ್ಪ ಪ್ರಥಮ್, ಸ್ವಲ್ಪ ಹನುಮಂತ ಇಬ್ಬರೂ ಇದ್ದರು. ಈ ಸುಳಿವು ಬಹಳ ಸಲ ಕೊಟ್ಟೆ. "ಗಿಲ್ಲಿ ಹಾಕಿರೋದು ಬನಿಯನ್ ಇರ್ಬೋದು, ಆದರೆ ರಾಜನ ರೀತಿ ಬಾಳುತ್ತಿದ್ದಾರೆ" ಎಂದು ಸುದೀಪ್ ಹೇಳಿ ನಕ್ಕಿದ್ದಾರೆ.

ಗಿಲ್ಲಿ ಗೇಮ್ ಅರ್ಥ ಮಾಡಿಕೊಂಡಿರುವುದಕ್ಕೂ ನೀವೆಲ್ಲಾ ಗೇಮ್ ಅರ್ಥ ಮಾಡಿಕೊಂಡಿರುವುದಕ್ಕೂ ವ್ಯತ್ಯಾಸ ಇದೆ ಎಂದು ಸುದೀಪ್ ಹೇಳಿದ್ದಾರೆ. ಅಂತಿಮವಾಗಿ ನಾಮಿನೇಷನ್ ವಿಚಾರಕ್ಕೆ ಬಂದ ಕಿಚ್ಚ ಈ ವಾರ ಮೊದಲು ಯಾರು ಸೇಫ್ ಆಗಿದ್ದಾರೆ ಎಂದು ಹೇಳಿದ್ದಾರೆ. ಅಶ್ವಿನಿಗೆ ಮತ್ತೊಂದು ವಾರ ಮನೆಯಲ್ಲಿ ಉಳಿಯುವ ಅವಕಾಶ ಸಿಕ್ಕಿದೆ. ಆದರೆ ನಾಳೆ ಒಬ್ಬರು ಎಲಿಮಿನೇಟ್ ಆಗುವ ಸಾಧ್ಯತೆ ದಟ್ಟವಾಗಿದೆ.

More from Filmibeat

Read more about: bigg boss bigg boss 12 gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X