ಸದ್ದಿಲ್ಲದೇ ತಮ್ಮ ಬಹುಕಾಲದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಬಿಗ್ ಬಾಸ್ ಸ್ಫರ್ಧಿ

ಕೇವಲ ಎರಡು ಅಕ್ಷರದಲ್ಲಿ ಪ್ರೀತಿಯನ್ನು ನಿರೂಪಿಸುವುದು ಕಷ್ಟ. ಯಾಕೆಂದರೆ.. ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯ ಇಲ್ಲ. ಈ ಪ್ರೀತಿಯನ್ನು ಅನುಭವಿಸಿಯೇ ತೀರಬೇಕು. ಅದರಲ್ಲಿಯೂ ನಿಜವಾದ ಪ್ರೀತಿ ಅಂದರೆ ಯಾವುದು ? ನಿಜವಾದ ಪ್ರೀತಿ ಅಂದರೇನು ? ನಿಜವಾದ ಪ್ರೀತಿಯನ್ನು ಗುರುತಿಸುವುದು ಹೇಗೆ ? ಎಂಬೆಲ್ಲಾ ಪ್ರಶ್ನೆಗಳು ಪ್ರೀತಿಸಿದವರ ಮನದಲ್ಲಿ ಮೂಡುವುದು ಸಹಜ.

ಆದರೆ ನಿಜವಾದ ಪ್ರೀತಿ.. ಎನ್ನುವುದು ಹೃದಯದ ಬಡಿತ ಅಲ್ಲ. ನನ್ನ ಹೃದಯದ ಬಡಿತ ಅನುಕ್ಷಣ ನಿನ್ನದೇ ಹೆಸರು ಹೇಳುತ್ತಿದೆ ಎಂದರೆ ಅದು ನಿಜವೂ ಅಲ್ಲ. ನಿಜವಾದ ಪ್ರೀತಿ ಅನ್ನೋದು ಪರಿಪೂರ್ಣ ಪ್ರಣಯವದು ಎನ್ನುವುದು ಹಲವರ ಅಭಿಪ್ರಾಯ. ಇಂತಹ ಪ್ರೀತಿಯಲ್ಲಿ ಬಿದ್ದಿರುವ ಬಿಗ್ ಬಾಸ್ ಸ್ಫರ್ಧಿ ಅರ್ಚನಾ ರವಿಚಂದ್ರನ್ ಸದ್ಯ ಸದ್ದಿಲ್ಲದೇ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್‌ಫ್ರೈಸ್ ನೀಡಿದ್ದಾರೆ.

bigg-boss-winner-archana-ravichandran-is-engaged-who-is-her-fianc-arun-prasath

ಹೌದು, ಅರ್ಚನಾ ರವಿಚಂದ್ರನ್.. ''ಬಿಗ್ ಬಾಸ್'' ಚೆಲುವೆ. ತಮಿಳಿನ ''ಬಿಗ್ ಬಾಸ್ 7''ನೇ ಸೀಸನ್‌ನಲ್ಲಿ ಭಾಗವಹಿಸಿದ್ದ ಅರ್ಚನಾ ಮನೆಯಿಂದ ಆಕರ್ಷಕ ಟ್ರೋಪಿಯೊಂದಿಗೆ ಹೊರ ಬಂದಿದ್ದರು. ''ರಾಜಾ ರಾಣಿ ಸೀಸನ್ 2''.. ''ಇಂದಿರಾ''.. ಅಂತಹ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಂಡಿರುವ ಅರ್ಚನಾ ''ಡೆಮೊಂಟೆ ಕಾಲೋನಿ'' ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲ ''ಕಣವೇ ಕಣವೇ''.. ''ಅವಲ್ ಎನ್ನವಲ್''.. ವೆಬ್ ಸರಣಿಗಳಲ್ಲಿ ಕೂಡ ಅಭಿನಯಿಸಿ ಸೈ ಎನಿಸಿಕೊಂಡವರು ಅರ್ಚನಾ.

ಇಂಥಾ ಅರ್ಚನಾ ರವಿಚಂದ್ರನ್ ಇದೀಗ ತಮ್ಮ ಬಹುಕಾಲದ ಗೆಳೆಯ ಅರುಣ್ ಪ್ರಸಾತ್ ಅವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ಧಾರೆ. ಹೊಸ ಬದುಕಿಗೆ ಕಾಲಿಡಲು ಸಿದ್ಧರಾಗಿದ್ದಾರೆ. ಸದ್ಯ ಅರ್ಚನಾ ಅವರಿಗೆ ಅನೇಕರು ಶುಭಾಶಯವನ್ನು ಕೋರುತ್ತಿದ್ದಾರೆ.

ಅಂದ್ಹಾಗೇ ಅರ್ಚನಾ ಅವರ ಕೈ ಹಿಡಿಯುತ್ತಿರುವ ಅರುಣ್ ಕೂಡ ''ಬಿಗ್ ಬಾಸ್'' ಮನೆಯ ಸ್ಫರ್ಧಿ. ಅರ್ಚನಾ ತಮಿಳಿನ ''ಬಿಗ್ ಬಾಸ್'' ಸೀಸನ್ 7ರಲ್ಲಿ ಭಾಗವಹಿಸಿದ್ದರೆ ಅರುಣ್ ಕಳೆದ ವರ್ಷ ''ಬಿಗ್ ಬಾಸ್ 8''ರಲ್ಲಿ ಭಾಗವಹಿಸಿದ್ದರು. ಅರುಣ್ ಆ ಮನೆಯಲ್ಲಿದ್ದಾಗ ಅರ್ಚನಾ ಅತಿಥಿಯಾಗಿ ಕೂಡ ಮನೆಗೆ ಹೋಗಿದ್ದರು. ಆಗ ಎಲ್ಲರೆದುರು ತಮ್ಮ ಪ್ರೀತಿಯ ವಿಚಾರವನ್ನು ಇವರು ಇಬ್ಬರು ಬಹಿರಂಗಗೊಳಿಸಿದ್ದರು.

''ಸ್ಟಾರ್ಸ್ ಅನ್‌ಫೋಲ್ಡ್'' ವರದಿಯ ಪ್ರಕಾರ ಮೂಲತಃ ತಮಿಳುನಾಡಿನ ಸೇಲಂನವರಾದ ಅರುಣ್ ಅವರಿಗೆ ರನ್ನಿಂಗ್ ರೇಸ್, ಡ್ಯಾನ್ಸ್ ಮತ್ತು ಮಾಡೆಲಿಂಗ್‌ನಲ್ಲಿ ವಿಪರೀತವಾದ ಆಸಕ್ತಿ ಇದೆ. ''ನಿಗಲ್ ಕಾಲಂ'' ಎಂಬ ಕಿರುಚಿತ್ರದಲ್ಲಿ ಕಾಣಿಸಿಕೊಂಡಿರುವ ಅರುಣ್ ''ಮೆಯ್ಯಾದ್ ಮಾನ್‌'' ಎಂಬ ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ.

ಇನ್ನುಳಿದಂತೆ ಈ ವರ್ಷದ ಫೆಬ್ರವರಿಯಲ್ಲಿ ''ಟೈಮ್ಸ್‌ ಆಫ್ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಅರುಣ್ ಈ ವರ್ಷದ ಅಂತ್ಯದಲ್ಲಿ ನಮ್ಮ ಮದುವೆ ನಡೆಯಲಿದೆ ಎಂದು ಹೇಳಿದ್ದರು. ಸುಮಾರು 5 ವರ್ಷಗಳಿಂದ ನಾವು ಜೊತೆಯಲ್ಲಿದ್ದೇವೆ ಮದುವೆಯಾಗಲು ಇದು ಸೂಕ್ತ ಸಮಯ ಎಂದು ನಾವು ಅಂದುಕೊಂಡಿದ್ದೇವೆ ಹೀಗಾಗಿ ಮುಂದಿನ ವರ್ಷದ ಪ್ರೇಮಿಗಳ ದಿನಕ್ಕೆ ನಮ್ಮನ್ನು ನೀವು ಸತಿ ಪತಿಗಳಾಗಿ ನೋಡಬಹುದು ಎಂದು ಹೇಳಿದ್ದರು.

ಇನ್ನೂ ತಮ್ಮ ಲವ್ ಸ್ಟೋರಿಯ ಕುರಿತು ಮಾತನಾಡಿದ್ದ ಅರ್ಚನಾ ಕಾಲೇಜ್‌ನ ಫೈನಲ್ ಇಯರ್‌ನಲ್ಲಿ ನಾನು ಇವರನ್ನು ಒಂದು ಕಿರುಚಿತ್ರದಲ್ಲಿ ನೋಡಿದ್ದೇ ಆ ನಂತರ ಮ್ಯಾಚ್ ಮೇಕಿಂಗ್‌ ರಿಯಾಲಿಟಿ ಶೋನಲ್ಲಿ ಇಬ್ಬರು ಭಾಗವಹಿಸಿದ್ದೆವು ಆಗ ನಾನೇ ಇವರ ಫೋನ್ ನಂಬರ್ ಕೇಳಿ ಪಡೆದಿದ್ದೇ ಎಂದು ಹೇಳಿದ್ದರು. ಅಲ್ಲಿಂದ ನಮ್ಮ ಸಂಬಂಧ ಶುರುವಾಯ್ತು ಈಗ ಮದುವೆಯ ಹಂತಕ್ಕೆ ಬಂದಿದೆ ಎಂದು ಹೇಳಿದ್ದರು. ಸದ್ಯ ಅರ್ಚನಾ ರವಿಚಂದ್ರನ್ ಮತ್ತು ಅರುಣ್ ಅವರಿಗೆ ಹಲವಾರು ಜನ ಶುಭಾಶಯವನ್ನು ಕೋರುತ್ತಿದ್ದಾರೆ. ಈ ಡಿಸೆಂಬರ್‌ನಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆಯುವ ಸಾಧ್ಯತೆ ಇದೆ.

More from Filmibeat

English summary
From co-contestants to fiancés! Bigg Boss 7's Archana Ravichandran and Arun Prasath have announced their engagement. Read their full love story and see all the photos.
Read more about: biggboss bigg boss engagement
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X