ಗೊಂಬೆ ನಿವೇದಿತಾ ಗೌಡಗೆ ಟಕ್ಕರ್ ಕೊಟ್ಟ ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ

ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಮಂಡ್ಯ ಹೈದನ ಹವಾ ಮುಂದುವರೆದಿದೆ. ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಜೈಕಾರ ಹಾಕುತ್ತಿದ್ದಾರೆ. ದೊಡ್ಡ ದೊಡ್ಡ ಸಮಾರಂಭಗಳಿಗೆ ಅತಿಥಿಯಾಗಿ ಗಿಲ್ಲಿಗೆ ಆಮಂತ್ರಣ ಸಿಗುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ. ಗಿಲ್ಲಿ ಹಾಕುವ ಪ್ರತಿ ಪೋಸ್ಟ್ ಲಕ್ಷ ಲಕ್ಷ ಲೈಕ್ಸ್ ಗಿಟ್ಟಿಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕನ್ನಡದ ಖ್ಯಾತ ಸೆಲೆಬ್ರೆಟಿಗಳಿಗೂ ಇಲ್ಲದ ಕ್ರೇಜ್ ಗಿಲ್ಲಿ ನಟನಿಗೆ ಇದೆ ಎನ್ನುವುದು ಅಚ್ಚರಿ ಮೂಡಿಸುತ್ತದೆ. ಬಿಗ್‌ಬಾಸ್ ಮನೆ ಳಗೆ ಹೋಗುವಾಗ ಗಿಲ್ಲಿ ಫಾಲೋವರ್ಸ್ ಸಂಖ್ಯೆ ಲಕ್ಷಗಳಲ್ಲಿ ಇತ್ತು. ಶೋ ಮುಗಿಸಿ ಹೊರಬರುವ ವೇಳೆಗೆ ಕೋಟಿಗೆ ಜಿಗಿದಿತ್ತು. ಸದ್ಯ 2 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಪಡೆದು ಗಿಲ್ಲಿ ಕಮಾಲ್ ಮಾಡ್ತಿದ್ದಾರೆ.

Bigg Boss Winner Gilli s Instagram Craze Soars Past 2M Amid Nivedita Gowda Comparison

ಬಿಗ್‌ಬಾಸ್ ಕನ್ನಡ ಸೀಸನ್ 5ರಲ್ಲಿ ನಿವೇದಿತಾ ಗೌಡ ಸ್ಪರ್ಧಿಯಾಗಿ ಹೋಗಿದ್ದರು. ಆಕೆಗೂ ಇನ್‌ಸ್ಟಾಗ್ರಾಮ್‌ನಲ್ಲಿ ಒಳ್ಳೆ ಫಾಲೋಯಿಂಗ್ ಇದೆ. ಅದನ್ನು ಮೀರಿ ಗಿಲ್ಲಿ ಸದ್ದು ಮಾಡ್ತಿದ್ದಾರೆ. ನಿವಿ ಇನ್‌ಸ್ಟಾ ರೀಲ್ಸ್‌ಗೆ ಒಳ್ಳೆ ಫಾಲೋಯಿಂಗ್ ಇದೆ. ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡ್ತಾರೆ. ಅದಕ್ಕೆಲ್ಲಾ ಆಕೆ ತಲೆ ಕೆಡಿಸಿಕೊಳ್ಳಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ನಿವೇದಿತಾಗೆ 2.1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇದೀಗ 2.2 ಮಿಲಿಯನ್ ಫಾಲೊವರ್ಸ್ ಗಳಿಸಿ ಗಿಲ್ಲಿ ಸದ್ದು ಮಾಡ್ತಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿದ್ದಾಗ ಗಿಲ್ಲಿ ನನಗೆ ಒಂದು ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಆಗಿದ್ರೆ ಸಾಕು ಎಂದಿದ್ದರು. ಆದರೆ ಶೋ ಗೆಲ್ಲುವ ವೇಳೆಗೆ ಆ ಸಂಖ್ಯೆ ದಾಟಿ ಆಗಿತ್ತು. ಬಳಿಕ ಕೆಲವೇ ದಿನಗಳಲ್ಲಿ 2 ಮಿಲಿಯನ್ ದಾಟಿದೆ. ನಿವೇದಿತಾ ಗೌಡ ಬಿಗ್‌ಬಾಸ್ ಮನೆಗೆ ಹೋಗಿ ಬಂದಮೇಲೆ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಂಡಿದ್ದರು. ಆದರೆ ಗಿಲ್ಲಿ ತಮ್ಮ ಆಟದಿಂದ ಮನೆಯಲ್ಲಿ ಇದ್ದಾಗಲೇ ಜಾದೂ ಮಾಡಿದ್ದರು.

Bigg Boss Winner Gilli s Instagram Craze Soars Past 2M Amid Nivedita Gowda Comparison

ಅತಿಹೆಚ್ಚು ಇನ್‌ಸ್ಟಾಗ್ರಾಮ್‌ ಫಾಲೋವರ್ಸ್ ಹೊಂದಿರುವ ಕನ್ನಡ ಸೆಲೆಬ್ರೆಟಿಗಳ ಲಿಸ್ಟ್‌ನಲ್ಲಿ ಈಗ ಗಿಲ್ಲಿ ಹೆಸರು ಸೇರಿಕೊಂಡಿದೆ. ಸುದೀಪ್ ಹಾಗೂ ದರ್ಶನ್ ನಂತರದ ಸ್ಥಾನದಲ್ಲಿ ಗಿಲ್ಲಿ ಹೆಸರಿದೆ. ಇನ್ನು ಪ್ಯಾನ್ ಇಂಡಿಯಾ ಸ್ಟಾರ್ ಯಶ್ 14.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಪತ್ನಿ ರಾಧಿಕಾ ಪಂಡಿತ್‌ ಅವರಿಗೆ 4.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಧ್ರುವ ಸರ್ಜಾ ಇನ್‌ಸ್ಟಾ ಅಕೌಂಟ್ ಅನ್ನು 3.2 ಮಿಲಿಯನ್ ಮಂದಿ ಫಾಲೋ ಮಾಡ್ತಿದ್ದಾರೆ. ಅಚ್ಚರಿ ಅಂದರೆ ನಟಿ ರಮ್ಯಾಗೆ 1 ಮಿಲಿಯನ್ ಫಾಲೋವರ್ಸ್ ಮಾತ್ರ ಇದ್ದಾರೆ.

ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸುದೀಪ್‌ಗೆ 2.9 ಮಿಲಿಯನ್‌ ಹಾಗೂ ದರ್ಶನ್‌ಗೆ 2.6 ಮಿಲಿಯನ್‌ ಫಾಲೋವರ್ಸ್‌ ಇರೋದು ವಿಶೇಷ. ನಟಿ ಶ್ರೀನಿಧಿ ಶೆಟ್ಟಿ ಅವರಿಗೆ 5.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಬಿಗ್‌ಬಾಸ್ ಮನೆಯಿಂದ ಹೊರ ಬಂದ ದಿನದಿಂದ ಗಿಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕೆಲ ಅಭಿಮಾನಿಗಳು ಗಿಲ್ಲಿ ನಮ್ಮನ್ನು ಭೇಟಿ ಮಾಡುತ್ತಿಲ್ಲ ಎಂದು ಮಾಧ್ಯಮಗಳ ಮುಂದೆ ಅಸಮಾಧಾನ ಹೊರ ಹಾಕಿದ್ದು ಆಯ್ತು. ನಮ್ಮ ಸಿನಿಮಾ ಪ್ರಚಾರ ಮಾಡದೇ ಗಿಲ್ಲಿ ನಟ ಕೈಕೊಟ್ಟಿದ್ದಾರೆ ಎಂದು 'ಸರ್ಕಾರಿ ಶಾಲೆ ಎಚ್‌8' ಎಂಬ ಚಿತ್ರತಂಡ ಫಿಲ್ಮ್‌ ಚೇಂಬರ್‌ನಲ್ಲಿ ದೂರು ಕೊಟ್ಟಿದೆ. ಬಿಗ್‌ಬಾಸ್ ಮನೆಗೆ ಹೋಗುವ ಮುನ್ನ ಗಿಲ್ಲಿ ನಮ್ಮ ಚಿತ್ರದಲ್ಲಿ ನಟಿಸಿದ್ದರು. ಆದರೆ ಈಗ ಪ್ರಚಾರಕ್ಕೆ ಬರ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಒಂದು ಪೋಸ್ಟ್ ಕೂಡ ಮಾಡಿಲ್ಲ ಎಂದು ಬೇಸರ ತೋಡಿಕೊಂಡಿದೆ. ಕೊನೆಗೂ ವಿಡಿಯೋ ಮಾಡಿ ಗಿಲ್ಲಿ ಮಾತನಾಡಿದ್ದಾರೆ.

More from Filmibeat

Read more about: gilli bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X