ಧರಧರನೆ ಎಳೆದೊಯ್ದ ಪೊಲೀಸರು; ಕಳ್ಳನ ತರ ಕರ್ಕೊಂಡ್ ಹೋಗ್ತೀರ ಎಂದ ಗಿಲ್ಲಿ

ಬಿಗ್‌ಬಾಸ್ ಶೋ ವಿನ್ನರ್ ಗಿಲ್ಲಿ ಕ್ರೇಜ್ ಹೇಗಿದೆ ಎನ್ನುವುದು ಗೊತ್ತೇಯಿದೆ. ಹೋದಲ್ಲಿ ಬಂದಲ್ಲಿ ಜನ ಮುತ್ತಿಕೊಳ್ಳುತ್ತಾರೆ. ಪೊಲೀಸರಿಗೆ ಭದ್ರತೆ ಒದಗಿಸುವುದು ಕಷ್ಟ ಎನ್ನುವಂತಾಗಿದೆ. ಇತ್ತೀಚೆಗೆ ಕನಕರಪುರದದಲ್ಲಿ ನಡೆದ 'ಕನಕೋತ್ಸವ' ಕಾರ್ಯಕ್ರಮದಲ್ಲಿ ಗಿಲ್ಲಿ, ಕಾವ್ಯಾ ಸೇರಿ ಕೆಲ ಬಿಗ್‌ಬಾಸ್ ಸ್ಪರ್ಧಿಗಳು ಭಾಗಿ ಆಗಿದ್ದರು.

ವೇದಿಕೆ ಏರಿ ಗಿಲ್ಲಿ ತಮ್ಮ ಕಾಮಿಡಿ ಡೈಲಾಗ್‌ಗಳ ಮೂಲಕ ಜನರನ್ನು ರಂಜಿಸಿದರು. ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಚಿವ ಡಿಕೆ ಸುರೇಶ್, ಶಾಸಕರಾದ ಸಿ.ಪಿ ಯೋಗೇಶ್ವರ್ ಸೇರಿ ಸಾಕಷ್ಟು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅಲ್ಲಿ ಕೂಡ ಗಿಲ್ಲಿ ಕಾಮಿಡಿ ಕಚಗುಳಿ ಜೋರಾಗಿತ್ತು. ಭದ್ರತೆಗಾಗಿ ಪೊಲೀಸರು ಗಿಲ್ಲಿಯನ್ನು ಕೈಹಿಡಿದು ಪೊಲೀಸರು ಕರೆತಂದರು.

Bigg Boss Winner Gilli Steals the Show with Comedy at Kanakotsava 2026 in Kanakapura

"ಏನ್ ನನ್ನ ಕಳ್ಳನ ತರ ಎಳ್ಕೊಂಡ್ ಹೋಗ್ತಿದ್ದೀರಾ" ಎಂದು ಗಿಲ್ಲಿ ಕಾಮಿಡಿ ಮಾಡಿದ್ದಾರೆ. ಅಂತಹ ಸಮಯದಲ್ಲಿ ಕೂಡ ಗಿಲ್ಲಿ ಕಾಮಿಡಿ ಟೈಮಿಂಗ್ ಮಿಸ್ ಮಾಡಲಿಲ್ಲ ಎಂದು ಅಭಿಮಾನಿಗಳು ವೀಡಿಯೋ ವೈರಲ್ ಮಾಡುತ್ತಿದ್ದಾರೆ.

ಇನ್ನು ವೇದಿಕೆ ಏರಿ ಗಂಡುಮಕ್ಕಳ ಜೀವನ ಎಷ್ಟು ಕಷ್ಟ ಎಂದು ತಮ್ಮದೇ ಕಾಮಿಡಿ ಡೈಲಾಗ್ ಅನ್ನು ಮತ್ತೊಮ್ಮೆ ವೇದಿಕೆಯಲ್ಲಿ ಹೇಳಿ ಗಿಲ್ಲಿ ಚಪ್ಪಾಳೆ ಗಿಟ್ಟಿಸಿದರು. ಬಿಗ್‌ಬಾಸ್ ಮನೆಯಲ್ಲಿದ್ದಾಗ ಏನೋ ಫ್ಲೋನಲ್ಲಿ 'ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು' ಹಾಡಿದ್ದೆ. ಅದು ನೋಡಿದ್ರೆ ಫುಲ್ ವೈರಲ್ ಆಗಿಬಿಟ್ಟಿದೆ, ಏನ್ ಕಾವು ಎಂದು ಅಲ್ಲೇ ಇದ್ದ ಕಾವ್ಯಾ ಶೈವ ಅವರನ್ನು ಕೇಳಿದ್ದಾರೆ.

ರಘು ಅವರನ್ನು ಕರೆದು ಗಿಲ್ಲಿ ತಮಾಷೆ ಮಾಡಿದ್ದಾರೆ. "ನಮ್ಮ ಮನೆಗೆ ಊಟಕ್ಕೆ ಕರಿತ್ತಿದ್ದೀನಿ, ಗಿಲ್ಲಿ ಬರ್ತಿಲ್ಲ" ಎಂದು ರಘು ಹೇಳಿದ್ದಾರೆ. ನಾನು ಅವರ ಮನೆಗೆ ಊಟಕ್ಕೆ ಹೋಗಲ್ಲ, ಹೋದ್ರೆ ಊರಿಗೆಲ್ಲಾ ತಿಥಿ ಊಟ ಹಾಕಿಸಿಬಿಡ್ತಾರೆ, ಅಷ್ಟು ಕೋಪ ಇದೆ ನನ್ನ ಮೇಲೆ ರಘು ಅಣ್ಣಂಗೆ ಎಂದು ಗಿಲ್ಲಿ ನಗೆ ಚಟಾಕಿ ಹಾರಿಸಿದ್ದಾರೆ.

ಕಾವ್ಯಾ ಮಾತನಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಡಿಸಿಎಂ ಡಿಕೆ ಶಿವಕುಮಾರ್ ಅವರೊಟ್ಟಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದರು. ಇದೇ ವೇಳೆ ಗಿಲ್ಲಿ ಮಾತನಾಡಿ ಕಾವ್ಯಾ ಅವ್ರು ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ, ಸಾಂಗ್ ಹಾಕ್ರಪ್ಪ ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ.

ಕನಕಪುರದಲ್ಲಿ ಕನಕೋತ್ಸವ ಪ್ರಯುಕ್ತ ನಡೆದ ಮೆಹಂದಿ ಹಾಗೂ ರಂಗೋಲಿ, ಟೆನ್ನಿಸ್ ಬಾಲ್ ಕ್ರಿಕೆಟ್ ಸೇರಿ ಸಾಕಷ್ಟು ಪಂದ್ಯಾವಳಿಗಳು ನಡೆದಿವೆ. ಒಟ್ಟಾರೆ ಕಾರ್ಯಕ್ರಮದಲ್ಲಿ ಗಿಲ್ಲಿ ಅಂಡ್ ಟೀಮ್ ಕ್ರೇಜ್ ಜೋರಾಗಿತ್ತು. ಅಭಿಮಾನಿಗಳು ಗಿಲ್ಲಿ, ಗಿಲ್ಲಿ, ಕಾವು ಕಾವು ಎಂದು ಕೂಗಿ ಸಂಭ್ರಮಿಸಿದ್ದಾರೆ. ಮಾಜಿ ಸಚಿವ ಡಿಕೆ ಸುರೇಶ್ ಮಾತನಾಡುವ ವೇಳೆಯೂ ಗಿಲ್ಲಿ, ಕಾವ್ಯಾ ಎಂದು ಕೂಗುವವರ ಸಂಖ್ಯೆ ಜಾಸ್ತಿ ಇತ್ತು.

ಬಿಗ್‌ಬಾಸ್ ಸೀಸನ್ 12ರಲ್ಲಿ ಗಿಲ್ಲಿ ಗೆದ್ದು ಬೀಗಿದ್ದರು. 112 ದಿನ ದೊಡ್ಮನೆ ಒಳಗೆ ಇದ್ದರು. ತಮ್ಮ ಎಂಟರ್‌ಟೈನ್‌ಮೆಂಟ್ ಮೂಲಕ ವೀಕ್ಷಕರನ್ನು ರಂಜಿಸಿದರು. ಅಶ್ವಿನಿ, ಧನುಷ್, ಧ್ರುವಂತ್ ರೀತಿಯ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಟ್ರೋಫಿ ಎತ್ತಿ ಹಿಡಿದಿದ್ದರು. 50 ಲಕ್ಷ ರೂ. ನಗದು ಬಹುಮಾನದ ಜೊತೆಗೆ ಒಂದು ಕಾರ್ ಬಹುಮಾನವಾಗಿ ಸಿಕ್ಕಿತ್ತು. ಕಿಚ್ಚ ಸುದೀಪ್ ವೈಯಕ್ತಿವಾಗಿ 10 ಲಕ್ಷ ರೂ. ಗಿಲ್ಲಿಗೆ ನೀಡಿದ್ದಾರೆ.

ರಕ್ಷಿತಾ ರನ್ನರ್ ಅಪ್ ಆಗಿದ್ದರೆ ಅಶ್ವಿನಿ ಸೆಕೆಂಡ್ ರನ್ನರ್ ಅಪ್ ಎನಿಸಿಕೊಂಡರು. ಕಾವ್ಯಾ 3ನೇ ರನ್ನರ್ ಅಪ್ ಆಗಿ ನಿರಾಸೆ ಅನುಭವಿಸಿದರು. ಬಿಗ್‌ ಬಾಸ್ ಶೋ ಮುಗಿದ ಬಳಿಕ ಕೂಡ ಗಿಲ್ಲಿ, ಕಾವ್ಯಾ ಸ್ನೇಹ ಮುಂದುವರೆದಿದೆ. ನಮ್ಮ ಊರಿನ ಸಿಡಿ ಹಬ್ಬಕ್ಕೆ ಕಾವ್ಯಾ ಅವರನ್ನು ಆಹ್ವಾನಿಸುತ್ತೀನಿ ಎಂದು ಗಿಲ್ಲಿ ಹೇಳಿದ್ದಾರೆ.

More from Filmibeat

Read more about: bigg boss 12 bigg boss gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X