ವಿಭಿನ್ನ ಪಾತ್ರದೊಂದಿಗೆ ಕಿರುತೆರೆಗೆ ಸೂಪರ್ ಎಂಟ್ರಿ ಕೊಡತ್ತಿದ್ದಾರೆ ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್!

By ಅನಿತಾ ಬನಾರಿ

ಬಿಗ್ ಬಾಸ್ ಖ್ಯಾತಿಯ ಹಾಸ್ಯ ನಟ ಮಂಜು ಪಾವಗಡ ಅವರು ಪ್ರಪ್ರಥಮ ಬಾರಿಗೆ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಸ್ಪರ್ಧಿ ಹಾಗೂ ವಿನ್ನರ್ ಮಂಜು ಪಾವಗಡ ತಮ್ಮ ಸ್ವಭಾವ ಹಾಗೂ ಹಾಸ್ಯ ಮನೋಭಾವದಿಂದ ಎಲ್ಲರಿಗೂ ಅಚ್ಚುಮೆಚ್ಚು. ಅದಕ್ಕೂ ಮೊದಲು ಹಲವಾರು ಕಾಮಿಡಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಜು ಪಾವಗಡ ಅವರು ಬಿಗ್ ಬಾಸ್ ಗೆ ಬಂದ ನಂತರ ಮತ್ತಷ್ಟು ಪ್ರಖ್ಯಾತಿಯನ್ನು ಪಡೆದರು. ಅಷ್ಟೇ ಅಲ್ಲದೆ 'ರೈಡರ್', 'ನಾನು ನನ್ ಜಾನು', 'ಲವ್ ಯು 2' ಇತ್ಯಾದಿ ಚಿತ್ರಗಳಲ್ಲೂ ನಟಿಸಿದ್ದಾರೆ. 'ಡವ್ ಮಂಜ' ಎಂಬ ಯೌಟ್ಯೂಬ್ ಸೀರಿಸ್ ಮೂಲಕವೂ ಬಹಳಷ್ಟು ಪಾಪುಲರಿಟಿ ಪಡೆದರು.

ಇದೀಗ ಅವರು ಕಿರುತೆರೆಗೆ ಕಾಲಿಡುತ್ತಿದ್ದು ಒಂದು ವಿಶೇಷ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಸಂತೋಷ ತಂದಿದೆ. ಯಾವ ಧಾರಾವಾಹಿ ಎಂದು ನೀವು ಯೋಚಿಸುತ್ತಿರಬಹುದು. ಇತ್ತೀಚಿಗಂತೂ ಕನ್ನಡ ಕಿರುತೆರೆಯಲ್ಲಿ ಭರ್ಜರಿ ಕಾಂಪಿಟೇಶನ್ ಶುರುವಾಗಿದ್ದು ಹೊಸ ಹೊಸ ಕಥೆಗಳು ಹೊಸ ಹೊಸ ಮುಖಗಳು ಇಂಡಸ್ಟ್ರಿಗೆ ಪರಿಚಯವಾಗುತ್ತಾನೇ ಇದೆ.

Bigg Boss Winner Manju Pavagada is appearing on serial in a different role for the first time

'ಅಂತರಪಟ'ದ ಮೂಲಕ ಕಿರುತೆರೆಗೆ ಎಂಟ್ರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭಗೊಳ್ಳಲಿರುವ 'ಅಂತರಪಟ' ಎಂಬ ಹೊಚ್ಚ ಹೊಸ ಧಾರಾವಾಹಿಯಲ್ಲಿ ನಟಿ ತನ್ವಿ ಬಾಲರಾಜ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೋಮೋ ಹೊರ ಬಿದ್ದಿದೆ. ಸದ್ಯಕ್ಕಂತೂ ಬಹಳಷ್ಟು ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿರುವ ಈ ಧಾರಾವಾಹಿಯ ಕಥೆ ಆರಾಧನಾ ಎಂಬ ಸ್ವಾಭಿಮಾನಿ ಹೆಣ್ಣು ಮಗಳ ಜೀವನದ ಸುತ್ತ ಸುತ್ತುತ್ತದೆ.

ಆರಾಧನಾ ಚಿಕ್ಕವಳಿದ್ದಾಗ ತಂದೆಯನ್ನು ಕಳೆದುಕೊಂಡಿರುತ್ತಾಳೆ. ಅವಳ ತಾಯಿ ಮಗಳಿಗೆ ತಂದೆಯ ಪ್ರೀತಿ ದೊರಕಬೇಕೆಂದು ಎರೆಡನೇ ಮದುವೆಯಾಗುತ್ತಾರೆ. ಆದರೆ ಆತ ಆಕೆಗೆ ಎಂದೂ ತಂದೆಯ ಪ್ರೀತಿ ತೋರಿಸದೆ ತನ್ನ ಸಾಲದ ಭಾರವನ್ನೆಲ್ಲ ಮಗಳ ಹೆಗಲಿಗೆ ಹಾಕುತ್ತಾನೆ. ಈ ರೀತಿಯ ಬ್ಯಾಗ್ರೌಂಡ್ ಇರುವ ಕಥೆಯೇ. ಕಾಸು ಕನಸುಗಳ ನಡುವೆ ಕಣ್ಣ ಮುಚ್ಛಾಲೆಯೇ 'ಅಂತರಪಟ'. ಇದರಲ್ಲಿ ನಾಯಕಿ ಆರಾಧನಾಳ ತಾಯಿಯ ಪಾತ್ರದಲ್ಲಿ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಶಾಂಭವಿ ಪಾತ್ರದ ಮೂಲಕ ಖ್ಯಾತಿ ಪಡೆದ ನಟಿ ಜ್ಯೋತಿ ಅವರು ಕಾಣಿಸಿಕೊಳ್ಳಲಿದ್ದಾರೆ. ಹಾಗೆ ಆರಾಧನಾಳ ಎರಡನೇ ತಂದೆ ಪಾತ್ರದಲ್ಲಿ ಮಂಜು ಪಾವಗಡ ಅವರು ಕಾಣಿಸಿಕೊಳ್ಳುತ್ತಿರುವುದು ಬಹಳ ವಿಶೇಷವಾಗಿದೆ. ಕಾಮಿಡಿ ಪಾತ್ರಗಳಿಂದ ಹೊರತಾಗಿ ಇದೀಗ ಮಂಜು ಅವರ ಅಭಿನಯವನ್ನು ನಿಶ್ಪ್ರಯೊಜಕ ಖಳನಾಯಕನಂತಿರುವ ತಂದೆಯ ಪಾತ್ರದಲ್ಲಿ ನೋಡುವ ಹೊಸ ಅವಕಾಶ ಕಿರುತೆರೆ ಪ್ರೇಕ್ಷಕರಿಗೆ ಸಿಕ್ಕಂತಿದೆ.

Bigg Boss Winner Manju Pavagada is appearing on serial in a different role for the first time

ವಿಭಿನ್ನ ಪಾತ್ರದ ಮೂಲಕ ಸೆಳೆಯಲಿದ್ದಾರೆ ಮಂಜು ಪಾವಗಡ

ಕಿರುತೆರೆ ವೀಕ್ಷಕರು ಇಲ್ಲಿಯ ತನಕ ಮಂಜು ಪಾವಗಡರನ್ನು ಕಾಮಿಡಿ ಪಾತ್ರಗಳೆಲ್ಲಷ್ಟೇ ನೋಡಿದ್ದು. ಇಷ್ಟು ದಿನಗಳ ಕಾಲ ತಮ್ಮ ಕಾಮಿಡಿಯ ಮೂಲಕ ವೀಕ್ಷಕರ ಮನ ಸೆಳೆಯುತ್ತಿದ್ದ ಮಂಜು ಪಾವಗಡ ಅವರು ವಿಭಿನ್ನ ಪಾತ್ರದ ಮೂಲಕ ಕಿರುತೆರೆಗೆ ಕಾಲಿಡುತ್ತಿರುವುದು ಬಹಳ ಸಂತಸ ತಂದಿದೆ. ಬಹಳಷ್ಟು ಕುತೂಹಲ ಕೆರಳಿಸಿರುವ ಈ ಪಾತ್ರ ಹಾಗೂ ಕಥೆಗೆ ಕಿರುತೆರೆ ಪ್ರೇಕ್ಷಕರೆಲ್ಲರೂ ಕಾಯುತ್ತಿದ್ದಾರೆ.

More from Filmibeat

English summary
Comedian Manju Pavagada is appearing on television in a different role for the first time,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X