ಬೆಂಗಳೂರಿನಲ್ಲಿ ಮನೆ ಖರೀದಿಸಿದ ಬಿಗ್‌ಬಾಸ್ ವಿನ್ನರ್ ಮಂಜು ಪಾವಗಡ; ಈಡೇರಿತು ಬಹುದಿನಗಳ ಕನಸು

By ಅನಿತಾ ಬನಾರಿ

ಹಾಸ್ಯ ನಟ ಮಂಜು ಪಾವಗಡ ಅವರು ಕಿರುತೆರೆ ವೀಕ್ಷಕರ ನೆಚ್ಚಿನ ನಟರಲ್ಲಿ ಒಬ್ಬರು. ತಮ್ಮ ಸರಳತೆ, ಹಾಸ್ಯ ಪ್ರಜ್ಞೆಯಿಂದಲೇ ಮನೆ ಮಾತಾಗಿರುವ ನಟ ಮಂಜು ಪಾವಗಡ ಬಿಗ್ ಬಾಸ್ ಮೂಲಕ ಬಹಳಷ್ಟು ಜನಪ್ರಿಯತೆಯನ್ನು ಗಳಿಸಿದರು. 'ಮಜಾ ಭಾರತ' ಎಂಬ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟವರು ಹಾಸ್ಯ ನಟ ಮಂಜು ಪಾವಗಡ.

ರಿಯಾಲಿಟಿ ಶೋಗಳು ಅಷ್ಟೇ ಅಲ್ಲದೆ 'ಯಲಾ ಕುನ್ನಿ', 'ಕಥಾ ಲೇಖನ', 'ವಾಸಂತಿ ನಲಿದಾಗ', 'ಲವ್ ಯು ಟೂ', 'ವೇಷ', 'ರೈಡರ್','ಯದಾ ಯದಾ ಹಿ', 'ನಾನು ನನ್ ಜಾನು', 'ಜಾರ್ಡನ್' ಮುಂತಾದ ಸಿನಿಮಾಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಒಂದಷ್ಟು ವೆಬ್ ಸೀರೀಸ್‌ನಲ್ಲಿಯೂ ನಟಿಸಿರುವ ನಟ ಮಂಜು ಪಾವಗಡ 'ಡವ್ ಮಂಜ' ಎಂಬ ವೆಬ್ ಸೀರೀಸ್‌ನಲ್ಲಿ ಬಹಳ ಕಾಮಿಡಿ ಪಾತ್ರವನ್ನು ಮಾಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

Bigg Boss winner Manju Pavagada is happy to have bought his own house

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ರಲ್ಲಿ ಅತ್ಯುತ್ತಮವಾಗಿ ಸ್ಪರ್ಧಿಸಿ ಕೊನೆಗೆ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡ ನಟ ಮಂಜು ಪಾವಗಡ ಅವರು ನಂತರ ಕಿರುತೆರೆಯಲ್ಲಿ ಬಹಳಷ್ಟು ಬೇರೆ ಬೇರೆ ರೀತಿಯ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಂತರಪಟ' ಧಾರಾವಾಹಿಯಲ್ಲಿ ವಿಲನ್ ಪಾತ್ರವನ್ನು ಅದ್ಭುತವಾಗಿ ನಿಭಾಯಿಸುತ್ತಿರುವ ನಟ ಮಂಜು ಪಾವಗಡ ಅವರು ತಮ್ಮ ನಟನೆಗೆ ಪ್ರೇಕ್ಷಕರಿಂದ ಸೈ ಎನಿಸಿಕೊಡಿದ್ದಾರೆ. ಇದರ ಜೊತೆಗೆ ಗಿಚ್ಚಿ ಗಿಲಿ ಗಿಲಿ ಕೆಲಸ ಮಾಡುತ್ತಿದ್ದಾರೆ ನಟ ಮಂಜು ಪಾವಗಡ.

ಸದ್ಯಕ್ಕಿರುವ ವಿಶೇಷವೆಂದರೆ, ನಟ ಮಂಜು ಪಾವಗಡ ಅವರು ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿರುವ ಸಂಭ್ರಮದಲ್ಲಿದ್ದಾರೆ. ಹೌದು ಸ್ವಂತ ಮನೆ ಒಂದನ್ನು ಖರೀದಿ ಮಾಡಬೇಕೆಂದು ಬಹಳ ದೊಡ್ಡ ಕನಸು ಹೊತ್ತಿದ್ದ ಮಂಜು ಪಾವಗಡ ಅವರು ಇದೀಗ ಅದನ್ನು ನನಸು ಮಾಡಿದ್ದಾರೆ.

ಬೆಂಗಳೂರಲ್ಲಿ ಸ್ವಂತ ಮನೆ ಒಂದನ್ನು ಖರೀದಿ ಮಾಡಿರುವ ನಟ ಮಂಜು ಪಾವಗಡ ಅದ್ಧೂರಿಯಾಗಿ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ನಟರಾದ ರಾಜೀವ್, ಅಂಕಿತ ಜಯರಾಮ್ ಮುಂತಾದವರು ಆಗಮಿಸಿ ತಮ್ಮ ಗೆಳೆಯ ಮಂಜು ಪಾವಗಡ ಅವರಿಗೆ ಶುಭ ಹಾರೈಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಮಂಜು ಪಾವಗಡ ಅವರ ಅಭಿಮಾನಿಗಳು ಪ್ರೇಕ್ಷಕರು, ಇನ್‌ಸ್ಟಾಗ್ರಾಂನಲ್ಲಿ ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸಿದ್ದಾರೆ.

Bigg Boss winner Manju Pavagada is happy to have bought his own house

ಸದ್ಯಕ್ಕೆ ನಟ ಮಂಜು ಪಾವಗಡ ಅವರ ಹೊಸ ಮನೆಯ ಫೋಟೋಗಳು ಒಂದಷ್ಟು ವೈರಲ್ ಆಗಿದ್ದು, ಅದರಲ್ಲಿ ಮಂಜು ಪಾವಗಡ ಅವರ ಕುಟುಂಬಸ್ಥರು, ಗೆಳೆಯರು, ಸ್ನೇಹಿತರು ಹಾಜರಿದ್ದು ಮಂಜು ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

More from Filmibeat

English summary
Bigg Boss winner Manju Pavagada is happy to have bought his own house
Read more about: tv anitha banari ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X