ಬಿಗ್‌ಬಾಸ್ ಗೆಲ್ಲಲು ಕಾರಣವಾದ ದೈವಕ್ಕೆ ನಮಿಸಿ ಹರಕೆ ತೀರಿಸಿದ ರೂಪೇಶ್ ಶೆಟ್ಟಿ

By ಮಂಗಳೂರು ಪ್ರತಿನಿಧಿ

ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಬಿಗ್ ಬಾಸ್ ಗೆದ್ದ ಬಳಿಕ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದ್ದಾರೆ. ಅಭಿಮಾನಿಗಳ‌ ಭರ್ಜರಿ ಸ್ವಾಗತದ ಬಳಿಕ ಹೊಸ ಘೋಷಣೆ ಮಾಡಿದ ರೂಪೇಶ್ ಶೆಟ್ಟಿ, ''ಬಿಗ್ ಬಾಸ್‌ನಲ್ಲಿ ಗೆದ್ದ ಬಹುಮಾನ ಮೊತ್ತದ ಅರ್ಧದಷ್ಟು ಹಣವನ್ನು ಬಡವರಿಗೆ ಮನೆ ಕಟ್ಟಲು ನೆರವು ನೀಡೋದಾಗಿ ಹೇಳಿದ್ದಾರೆ. ಅಲ್ಲದೇ ತಾನು ಬಿಗ್ ಬಾಸ್ ಗೆಲ್ಲಲು ತುಳುನಾಡಿನ ಕಾರಣಿಕ ದೈವ ಕೊರಗಜ್ಜ‌ನೇ ಕಾರಣ ಅಂತಾ ರೂಪೇಶ್ ಶೆಟ್ಟಿ ಹೇಳಿದ್ದಾರೆ.

"ಬಿಗ್ ಬಾಸ್ ನಲ್ಲಿ ಪ್ರತೀ ಟಾಸ್ಕ್ ಆಡುವಾಗಲೂ ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನ ಸ್ಮರಣೆಯಲ್ಲಿಯೇ ಇದ್ದೆ. ಫೈನಲ್ ವೇಳೆ ಟಾಪ್ ಫೈವ್ ನಲ್ಲಿ ಬಂದರೆ ಕುತ್ತಾರುವಿನ ಆದಿಸ್ಥಳ ಕೊರಗಜ್ಜನ ಕಟ್ಟೆಗೆ ಬರುವುದಾಗಿ ಹರಕೆ ಹೊತ್ತಿದ್ದೆ'' ಎಂದು ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಹೇಳಿದ್ದಾರೆ.

ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಹೊರಹೊಮ್ಮಿರುವ ರೂಪೇಶ್ ಶೆಟ್ಟಿ ತಮ್ಮ ತವರು ನೆಲಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ ಈ ಮಾತುಗಳನ್ನು ಹೇಳಿದ್ದಾರೆ. ಬಿಗ್ ಬಾಸ್‌ನಲ್ಲಿ ವಿನ್ನರ್ ಆಗಿ ಹೊರಹೊಮ್ಮಿರುವ ರೂಪೇಶ್ ಶೆಟ್ಟಿ ಮಂಗಳೂರಿಗೆ ಕಾಲಿಟ್ಟ ತಕ್ಷಣ ಅವರು ಕೊರಗಜ್ಜನ ಕಟ್ಟೆಗೆ ಹೋಗಿ ಕೊರಗಜ್ಜ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದರು.

ರೂಪೇಶ್‌ಗೆ ಸಿಕ್ಕಿತು ಅದ್ಧೂರಿ ಸ್ವಾಗತ

ರೂಪೇಶ್‌ಗೆ ಸಿಕ್ಕಿತು ಅದ್ಧೂರಿ ಸ್ವಾಗತ

ಬೆಂಗಳೂರಿನಿಂದ ವಿಮಾನದ ಮೂಲಕ ಆಗಮಿಸಿದ ಅವರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಈ ವೇಳೆ ಅವರಿಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರಕಿತು. ‌ಆ ಬಳಿಕ ನಗರದ ನೆಹರೂ ಮೈದಾನದ ಬಳಿಯ ಎ.ಬಿ.ಶೆಟ್ಟಿ ವೃತ್ತದಿಂದ ಕುತ್ತಾರುವಿನ ಕೊರಗಜ್ಜನ ಕಟ್ಟೆಯವರೆಗೆ ಅವರು ವಾಹನ ಜಾಥಾದಲ್ಲಿ ವಿಜಯಯಾತ್ರೆ ನಡೆಯಿತು. ಈ ವಿಜಯಯಾತ್ರೆಯಲ್ಲಿ ರೂಪೇಶ್ ಶೆಟ್ಟಿಯವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಅಭಿಮಾನಿಗಳು ಬೈಕ್, ಸ್ಕೂಟರ್, ಕಾರುಗಳಲ್ಲಿ ರೂಪೇಶ್ ಶೆಟ್ಟಿಯವರಿಗೆ ಸಾಥ್ ನೀಡಿದರು.

ಹರಕೆ ಹೊತ್ತಿದ್ದ ರೂಪೇಶ್ ಶೆಟ್ಟಿ

ಹರಕೆ ಹೊತ್ತಿದ್ದ ರೂಪೇಶ್ ಶೆಟ್ಟಿ

ತಾವು ಬಿಗ್ ಬಾಸ್ ನಲ್ಲಿರುವಾಗಲೇ ರೂಪೇಶ್ ಶೆಟ್ಟಿಯವರು ತಾವು ಟಾಪ್ ಪೈವ್ ನಲ್ಲಿ ಬಂದಲ್ಲಿ ಮೊದಲಿಗೆ ಕುತ್ತಾರುವಿನ ಕೊರಗಜ್ಜನ ಕಟ್ಟೆಗೆ ಬರುವುದಾಗಿ ಹರಕೆ ಹೊತ್ತಿದ್ದರಂತೆ. ಆದರೆ ಇದೀಗ ಅವರು ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಆದ್ದರಿಂದ ರೂಪೇಶ್ ಶೆಟ್ಟಿ ತಮ್ಮ ತವರಿಗೆ ಕಾಲಿಟ್ಟ ತಕ್ಷಣ ಕುತ್ತಾರುವಿನ ಕೊರಗಜ್ಜನ ಕಟ್ಟೆಗೆ ತೆರಳಿದ್ದಾರೆ‌. ಅಲ್ಲದೆ ತಮಗೆ ಬಿಗ್ ಬಾಸ್ ನಿಂದ ದೊರೆತ ಹಣದಲ್ಲಿ ಅರ್ಧದಷ್ಟು ಬಡವರಿಗೆ ಮನೆ ಕಟ್ಟಲು ವಿನಿಯೋಗಿಸಲಾಗುತ್ತದೆ ಎಂದು ರೂಪೇಶ್ ಶೆಟ್ಟಿ ಹೇಳಿಕೊಂಡಿದ್ದಾರೆ.

ಅರವತ್ತು ಲಕ್ಷ ಹಣ ಗೆದ್ದ ರೂಪೇಶ್ ಶೆಟ್ಟಿ

ಅರವತ್ತು ಲಕ್ಷ ಹಣ ಗೆದ್ದ ರೂಪೇಶ್ ಶೆಟ್ಟಿ

ರೇಡಿಯೋ ಜಾಕಿ ಹಾಗೂ ತುಳು ಸಿನಿಮಾ ನಟರೂ ಆಗಿರುವ ರೂಪೇಶ್ ಶೆಟ್ಟಿ, ಬಿಗ್‌ಬಾಸ್ ಒಟಿಟಿಯ ಸ್ಪರ್ಧಿಯಾಗಿ ಬಂದವರು. ಅಲ್ಲಿ ಮೊದಲ ನಾಲ್ಕರಲ್ಲಿ ಒಬ್ಬರಾದ ರೂಪೇಶ್, ಚಾಂಪಿಯನ್ ಎನಿಸಿಕೊಂಡರು ಸಹ. ಬಳಿಕ ಅಲ್ಲಿಂದ ಟಿವಿಗೆ ಬಂದ ರೂಪೇಶ್ ಅಲ್ಲಿಯೂ ಚೆನ್ನಾಗಿ ಆಡಿ ಚಾಂಪಿಯನ್ ಆದರು. ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಅವರುಗಳು ಫೈನಲ್‌ಗೆ ಬಂದಿದ್ದರು. ಆದರೆ ಬಿಗ್‌ಬಾಸ್ ಗೆದ್ದಿದ್ದು ರೂಪೇಶ್ ಶೆಟ್ಟಿ. ಅವರಿಗೆ ಒಟ್ಟು ಅರವತ್ತು ಲಕ್ಷ ರುಪಾಯಿ ಬಹುಮಾನ ನೀಡಲಾಯಿತು.

More from Filmibeat

English summary
Bigg Boss season 09 winner Roopesh Shetty visits his home town for the first time after winning bigg boss reality show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X