ಐದನೇ ಮಗುವಿನ ನಿರೀಕ್ಷೆಯಲ್ಲಿ ಬಿಗ್ ಬಾಸ್ ಸ್ಫರ್ಧಿ ; ಟ್ರೋಲಿಗರಿಗೆ ಆಹಾರವಾದ ಇಬ್ಬರು ಹೆಂಡತಿಯರ ಮುದ್ದಿನ ಗಂಡ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ನಾವು ಇಬ್ಬರು ನಮಗೆ ಇಬ್ಬರು ಎಂಬ ಘೋಷವಾಕ್ಯ ಮೊಳಗುತ್ತಿತ್ತು. ಆ ನಂತರ ಕಾಲ ಬದಲಾಯ್ತು. ಬದಲಾದ ಕಾಲದಲ್ಲಿ ಬದುಕಿನ ವೆಚ್ಚ ಕೂಡ ಹೆಚ್ಚಾಯ್ತು. ಈ ಹಿನ್ನೆಲೆ ಒಂದೇ ಮಗು ಸಾಕು ಎನ್ನುವಂತಾಯ್ತು.

ಈಗ ಕಾಲ ಮತ್ತಷ್ಟೂ ಬದಲಾಗಿದೆ. ಈ 5G ಯುಗದಲ್ಲಿ ಹಲವರು ಮಗು ಬೇಡ ಎನ್ನುವ ತೀರ್ಮಾನಕ್ಕೆ ಬರುತ್ತಿದ್ಧಾರೆ. ಮನೆ, ಮಕ್ಕಳು ಸಂಸಾರ ಹೀಗೆ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವಷ್ಟರಲ್ಲಿ ಈ ಜೀವನವೇ ಸಾಕು ಎಂದೆನಿಸುತ್ತದೆ ಎಂಬ ಮಾತುಗಳನ್ನಾಡುತ್ತಿದ್ದಾರೆ.

Bigg Boss Youtuber Armaan Malik Set to Become Father for 5th Time

ಇಂತಹ ಕಾಲದಲ್ಲಿ ಇಲ್ಲೊಬ್ಬರು ತಮ್ಮದೇ ಆದ ಕ್ರಿಕೆಟ್ ತಂಡ ಕಟ್ಟಬೇಕು ಎನ್ನುವ ಆಲೋಚನೆಯಲ್ಲಿ ಇದ್ದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಈಗಾಗಲೇ ನಾಲ್ಕು ಮಕ್ಕಳ ತಂದೆಯಾಗಿರುವ ಇವರು ಈಗ ಐದನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವ್ಯಕ್ತಿ ಬೇರೆ ಯಾರು ಅಲ್ಲ ಬದಲಿಗೆ ಅರ್ಮಾನ್ ಮಲಿಕ್ ಎನ್ನುವುದೇ ಈ ಕ್ಷಣದ ವಿಶೇಷ.

ಹೌದು, ಅರ್ಮಾನ್ ಮಲ್ಲಿಕ್.. ಹೌದು, ಅರ್ಮಾನ್ ಮಲಿಕ್.. ತಮ್ಮ ಸಾಂಸಾರಿಕ ಬದುಕಿನ ಕಾರಣಕ್ಕೆ ಸದಾ ಸುದ್ದಿಯಾಗುವ ಹೈದರಾಬಾದ್ ಮೂಲದ ಯೂಟ್ಯೂಬರ್. 2011ರಲ್ಲಿ ಖಾಸಗಿ ಬ್ಯಾಂಕ್‌ ವೊಂದರಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಲೇ ಅದೇ ಬ್ಯಾಂಕ್‌ ನಲ್ಲಿ ಕೆಲಸ ಮಾಡುತ್ತಿದ್ದ ಪಾಯಲ್‌ ಅವರನ್ನು ಮದ್ವೆಯಾದ ಅರ್ಮಾನ್, ಆ ನಂತರ .. ತಮ್ಮ ಹೆಂಡ್ತಿ ಪಾಯಲ್ ಅವರ ಸ್ನೇಹಿತೆ ಕೃತಿಕಾ ಅವರನ್ನೂ ಪ್ರೀತಿಸಿದರು. ಮೊದಲ ಪತ್ನಿ ಪಾಯಲ್ ಅವರನ್ನು ಒಪ್ಪಿಸಿ ಅವರ ಸಮ್ಮುಖದಲ್ಲಿಯೇ ಕೃತಿಕಾ ಜೊತೆ ಮದುವೆಯೂ ಆದರು.

ಇಲ್ಲಿಂದಾಚೆ ಇಬ್ಬರು ಹೆಂಡ್ತಿಯರ ಮುದ್ದಿನ ಗಂಡ ಎಂಬ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಾ, ಆಗಾಗ ವಿವಾದಕ್ಕೀಡಾಗುತ್ತಾ ಬಂದ ಅರ್ಮಾನ್ ಮಲಿಕ್ ಹಿಂದಿಯ ''ಬಿಗ್ ಬಾಸ್'' ಓಟಿಟಿ ಸೀಸನ್‌ಗೆ ತಮ್ಮ ಇಬ್ಬರು ಹೆಂಡ್ತಿಯರ ಜೊತೆಯಲ್ಲಿಯೇ ತೆರಳಿದ್ದರು. ಆ ನಂತರ ಮೊದಲ ಪತ್ನಿ ಪಾಯಲ್ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ನಂತರ ಎರಡನೇ ಪತ್ನಿ ಕೃತಿಕಾ ಜೊತೆ ''ಬಿಗ್ ಬಾಸ್'' ಮನೆಯಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್ ಮಾಡಿ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು.

Bigg Boss Youtuber Armaan Malik Set to Become Father for 5th Time

ಇಂಥಾ ಅರ್ಮಾನ್ ಮಲಿಕ್-ಪಾಯಲ್ ಮತ್ತು ಕೃತಿಕಾ ಅವರ ಪ್ರೇಮ ಸಂಕೇತವಾಗಿ ಇವರಿಗೆ ನಾಲ್ಕು ಮಕ್ಕಳಿದ್ದಾರೆ. ಈ ನಾಲ್ಕು ಮಕ್ಕಳಲ್ಲಿ ಮೂವರು ಮಕ್ಕಳಿಗೆ ಪಾಯಲ್ ಜನ್ಮ ನೀಡಿದ್ದರೆ ಇನ್ನೊಂದು ಮಗುವಿಗೆ ಕೃತಿಕಾ ಜನ್ಮ ನೀಡಿದ್ದಾರೆ. ಇನ್ನು 2023ರಲ್ಲಿ ಪಾಯಲ್ ಮತ್ತು ಕೃತಿಕಾ ಒಟ್ಟಿಗೆ ಗರ್ಭಿಣಿಯಾಗಿದ್ದರು. ಆ ಸಮಯದಲ್ಲಿ ಈ ವಿಚಾರ ತುಂಬಾನೇ ಸದ್ದು ಮಾಡಿತ್ತು. ಅರ್ಮಾನ್ ಮಲಿಕ್ ಅವರನ್ನು ಟ್ರೋಲ್ ಕೂಡ ಮಾಡಲಾಗಿತ್ತು. ಆಗ ಪಾಯಲ್ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಕೃತಿಕಾ ಓರ್ವ ಮಗನಿಗೆ ಜನ್ಮ ನೀಡಿದ್ದರು.

ಇದೀಗ ಎರಡೂವರೆ ವರ್ಷದ ನಂತರ ಅರ್ಮಾನ್ ಮಲಿಕ್ ಅವರ ಮೊದಲ ಪತ್ನಿ ಪಾಯಲ್ ಈಗ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಈ ಮೂಲಕ ಐದನೇ ಮಗುವಿಗೆ ತಂದೆಯಾಗುತ್ತಿದ್ದಾರೆ ಅರ್ಮಾನ್ ಮಲಿಕ್. ಸದ್ಯ ಪಾಯಲ್ ಅವರ ಮೆಟರ್ನಿಟಿ ಫೋಟೋಶೂಟ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಲವರು ಅರ್ಮಾನ್- ಪಾಯಲ್ ಮತ್ತು ಕೃತಿಕಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ಇನ್ನೆಷ್ಟು ಮಕ್ಕಳಿಗೆ ಜನ್ಮ ನೀಡಬೇಕೆಂದುಕೊಂಡಿದ್ದೀರಾ, ಎನ್ನುವ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.ನಿಮ್ಮದೇ ಕ್ರಿಕೆಟ್ ಟೀಮ್ ರೆಡಿ ಮಾಡ್ತಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ.

More from Filmibeat

English summary
"Not Kritika!" Armaan Malik shocks fans by confirming first wife Payal Malik is expecting her 4th baby. Amid viral rumors and pregnancy confusion, find out the real story behind the Malik family’s newest addition. Click for exclusive details on the upcoming delivery!
Read more about: pregnency biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X