For Quick Alerts
  ALLOW NOTIFICATIONS  
  For Daily Alerts

  ಸೋನುನಾ ಮರತೇ ಬಿಟ್ರಾ ರಾಕೇಶ್‌: ಮಯೂರಿ ಕೈಗೆ ಪಟ್ಟಿ ಕಟ್ಟಿ ಹೇಳಿದ್ದೇನು..?

  |

  ಕನ್ನಡ ಬಿಗ್ ಬಾಸ್ ಸೀಸನ್‌ 9 ಈಗಾಗಲೇ ಆರಂಭಗೊಂಡಿದ್ದು, ದಿನದಿಂದ ದಿನಕ್ಕೆ ಹೊಸ ಹೊಸ ಪ್ರಯೋಗಗಳ ಮೂಲಕ ಬಿಗ್‌ ಬಾಸ್ ಶೋ ಪ್ರೇಕ್ಷಕರಿಗೆ ಇಂಟ್ರಸ್ಟಿಂಗ್ ಎನಿಸುತ್ತಿದೆ. ಬಿಗ್‌ ಬಾಸ್‌ ಮನೆಯಲ್ಲಿ ಸ್ಫರ್ಧಿಗಳ ನಡುವೆ ಬಾಂಧವ್ಯ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದ ಜೊತೆಗೆ ಇರುವ 18 ಸ್ಫರ್ಧಿಗಳು ಒಬ್ಬರನೊಬ್ಬರು ಅರಿಯಲು ಪ್ರಯತ್ನಿಸುತ್ತಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಸದ್ಯ ಎಲ್ಲಾ ರೀತಿಯ ಬೆಳವಣಿಗೆಗಳಿದ್ದು, ಆಗಾಗ ಜಗಳ, ಮನಸ್ಥಾಪಗಳು ನಡೆಯುತ್ತಿದ್ದು, ಪ್ರತಿ ಎಪಿಸೋಡ್‌ನ್ಲಲೂ ಪ್ರಶಾಂತ್‌ ಸಂಬರ್ಗಿ ತಮ್ಮ ಏರುಧ್ವನಿ ಮೂಲಕ ಹೈಲೈಟ್‌ ಆಗುತ್ತಿದ್ದಾರೆ.

  ಬಿಗ್ ಬಾಸ್ ಮನೆಯಲ್ಲಿ ಸದ್ಯ ಹೊಸಬರು, ಹಳಬರು ಹಾಗೂ ಓಟಿಟಿಯಿಂದ ಬಂದವರು ಎನ್ನುವ ಮೂರು ಭಾಗಗಳಿವೆ. ಹೀಗಾಗಿ ಪ್ರತಿಯೊಂದು ಸ್ಫರ್ಧಿಯೂ ತಮ್ಮ ಕಂಫರ್ಟ್‌ಜೋನ್‌ ಅರಸಿಕೊಳ್ಳುತ್ತಿದ್ದಾರೆ. ಒಬ್ಬರ ಬಗ್ಗೆ ಒಬ್ಬರು ಕಮೆಂಟ್‌ ಮಾಡುತ್ತಾ, ಕಾಲು ಎಳೆಯುತ್ತಾ ಸಮಯ ಕಳೆಯುತ್ತಿರುವ ಸ್ಫರ್ಧಿಗಳಿಗೆ ಈಗಾಗಲೇ ಬಿಗ್‌ ಬಾಸ್‌ ಟಾಸ್ಕ್‌ ಕೂಡ ನೀಡಿದ್ದಾರೆ.

  BBK 9 Day 2: ಬಿಗ್‌ಬಾಸ್ ಮನೆಯಲ್ಲಿ ಎರಡನೇ ದಿನ ನಡೆದಿದ್ದೇನು?BBK 9 Day 2: ಬಿಗ್‌ಬಾಸ್ ಮನೆಯಲ್ಲಿ ಎರಡನೇ ದಿನ ನಡೆದಿದ್ದೇನು?

  ನಿನ್ನೆ(ಸಪ್ಟೆಂಬರ್ 27)ರ ಸಂಚಿಕೆಯ ವಿಡಿಯೋವೊಂದು ವೈರಲ್‌ ಆಗಿದೆ. ಸ್ಪರ್ಧಿಗಳ ನಡುವೆ ಸಂಬಂಧ ಬೆಸೆಯಲು ಬಿಗ್‌ ಬಾಸ್‌ ಕೈಗೆ ಪಟ್ಟಿ ಕಟ್ಟುವ ಟಾಸ್ಕ್‌ ನೀಡಿದ್ದಾರೆ. ಬಿಗ್‌ ಬಾಸ್‌ ನೀಡಿರುವ ಕೈಪಟ್ಟಿಯಲ್ಲಿ ಒಂದೊಂದು ಪದ ಬರೆಯಲಾಗಿದ್ದು, ಆ ಪದ ಸೂಕ್ತವೆನಿಸುವ ವ್ಯಕ್ತಿಗೆ ಸೂಕ್ತ ಕಾರಣ ನೀಡಿ ಕಟ್ಟ ಬೇಕು ಎಂದು ಬಿಗ್‌ ಬಾಸ್‌ ತಿಳಿಸುತ್ತಾರೆ. ಬಿಗ್ ಬಾಸ್‌ ಸ್ಫರ್ಧಿಗಳು ಒಬ್ಬೊಬ್ಬರಾಗಿಯೆ ಬಂದು ಪಟ್ಟಿ ಹಿಡಿದುಕೊಂಡು ಅದರಲ್ಲಿನ ಪದ ಓದಿ ತಮಗಿಷ್ಟವಾದ ವ್ಯಕ್ತಿಗೆ ಸೂಕ್ತ ಕಾರಣ ನೀಡಿ ಕಟ್ಟುತ್ತಾರೆ.

  ಮೊದಲಿಗೆ ಚಿಂತಾಕ್ರಾಂತ ಪಟ್ಟಿಯನ್ನು ರಾಕೇಶ್‌, ನಟಿ ಮಯೂರಿ ಅವರಿಗೆ ನೀಡುತ್ತಾರೆ. ಆಗ ಮಯೂರಿ ಇನ್ನು ಮುಂದೆ ನಾನು ನಿಮ್ಮ ಬಗ್ಗೆಯೇ ಚಿಂತೆ ಮಾಡುತ್ತೇನೆ ಎಂದು ಎಲ್ಲರನ್ನು ನಗಿಸುತ್ತಾರೆ. ಕಿಲಾಡಿ ಎನ್ನುವ ಪಟ್ಟಿಯನ್ನು ವಿನೋದ್‌ ಗೊಬ್ಬರಗಾಲ, ಪ್ರಶಾಂತ್‌ ಸಂಬರ್ಗಿಯವರಿಗೆ ನೀಡುತ್ತಾರೆ. ಕಳೆದ ಎರಡು ದಿನಗಳಿಂದ ನಾನು ಒಬ್ಬ ಕಿಲಾಡಿ ಜೊತೆಗಿದ್ದೇನೆ. ನೀವೆಲ್ಲಾ ಆಟ ಹೇಗೆ ಗೆಲ್ಲಬೇಕು ಎಂದು ಯೋಚಿಸಿದರೆ ಈ ಕಿಲಾಡಿ ಎಲ್ಲರನ್ನು ಹೇಗೆ ಬೀಳಿಸಬೇಕು ಎಂದು ಯೋಚಿಸುತ್ತಾರೆ ಎಂದು ಕಾರಣ ನೀಡಿದರು.

  ಬಿಗ್‌ ಬಾಸ್‌ನಲ್ಲಿ ಬೈಕರ್ ಐಶ್ವರ್ಯಾ ಪಿಸೆ: ಕಿಚ್ಚ ಸುದೀಪ್‌ ಕೂಡ ಮೆಚ್ಚಿರುವ ಇವರ ಸಾಧನೆಗಳೇನು..?ಬಿಗ್‌ ಬಾಸ್‌ನಲ್ಲಿ ಬೈಕರ್ ಐಶ್ವರ್ಯಾ ಪಿಸೆ: ಕಿಚ್ಚ ಸುದೀಪ್‌ ಕೂಡ ಮೆಚ್ಚಿರುವ ಇವರ ಸಾಧನೆಗಳೇನು..?

  ಬಳಿಕ ವೇದಿಕೆ ಬಂದ ಆರ್ಯವರ್ಧನ್‌ ಗುರೂಜಿ ಭಾವನಾತ್ಮಕ ಮಾತುಗಳನ್ನು ಆಡುತ್ತಾರೆ. ನನಗೆ ತುಂಬಾ ಇಷ್ಟ. ನನಗೆ ಟೆನ್ಷನ್‌ ಆಗಾದ ಸ್ವತಃ ಅವನೇ ಬಂದು ನನ್ನ ಪರ ಬ್ಯಾಟ್‌ ಬೀಸಿದ್ದಾನೆ. ಅವನು ನನಗೆ ಮಗನಿದ್ದಂತೆ ಎಂದು ಹೇಳುತ್ತಾರೆ. ಈ ವಿಚಾರಗಳನ್ನು ತನಗೆ ಹೇಳುತ್ತಿರುವುದು ಎಂದು ತಿಳಿದ ರೂಪೇಶ್‌ ಕೂಡ ಭಾವುಕರಾಗುತ್ತಾರೆ. ಆದರೆ ಎಲ್ಲಾ ವಿಚಾರ ಹೇಳಿದ ನಂತರ ಆರ್ಯವರ್ಧನ್‌ ಗುರೂಜಿ ಅವನೇ ರಾಕೇಶ್‌ ಎನ್ನುತ್ತಾರೆ. ಈ ವೇಳೆ ಎಲ್ಲರೂ ಶಾಕ್‌ ಆಗುತ್ತಾರೆ ಬಳಿಕ ಗುರೂಜಿ ಅಲ್ಲಲ್ಲಾ ರೂಪೇಶ್ ಎನ್ನುತ್ತಾರೆ.

  ಇನ್ನು ಊಟದ ವಿಚಾರಕ್ಕೆ ನೇಹ ಗೌಡ ಆಡಿರುವ ಮಾತುಗಳಿಗೆ ನಟಿ ಮಯೂರಿ ಕಣ್ಣೀರು ಹಾಕಿದರು. ಬಳಿಕ ಕೈಗೆ ಪಟ್ಟಿ ಕಟ್ಟುವ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಮಯೂರಿ, ನನ್ನ ಗೆಳತಿ ನೇಹಾ ಆ ಮಾತುಗಳನ್ನು ಉದ್ದೇಶ ಪೂರಕವಾಗಿ ಹೇಳಿಲ್ಲ ಎನ್ನುವುದು ನನಗೆ ಕಡಾ ಕಂಡಿತವಾಗಿಯೂ ಗೊತ್ತು. ನೀವು ನನ್ನ ಹೃದಯದಲ್ಲಿ ವಿಶೇಷ ಸ್ಥಾನದಲ್ಲಿದ್ದೀರಿ. ಹೆಸರಿಗೆ ತಕ್ಕಂತೆ ನೀವು ನೀವು ಗೊಂಬೆಯಾಗಿದ್ದಿರಿ. ಆ ಘಟನೆಯನ್ನು ಮರೆತು ನನಗೆ ಹಗ್ ಕೊಡಿ ಎಂದು ಕೈಗೆ ಪಟ್ಟಿ ಕಟ್ಟಿದರು. ಈ ವೇಳೆ ನೇಹಾ ಗೌಡ ಕೂಡ ಥ್ಯಾಂಕ್ಸ್‌ ಹೇಳಿದ್ದಾರೆ.

  ವೋಟಿಂಗ್ ಎಲ್ಲಾ ಬೋಗಸ್‌: ಬಿಗ್‌ ಬಾಸ್ ವಿರುದ್ಧ 'ಕರಿಯ' ಚಿತ್ರದ ನಾಯಕಿ ಗಂಭೀರ ಆರೋಪ!ವೋಟಿಂಗ್ ಎಲ್ಲಾ ಬೋಗಸ್‌: ಬಿಗ್‌ ಬಾಸ್ ವಿರುದ್ಧ 'ಕರಿಯ' ಚಿತ್ರದ ನಾಯಕಿ ಗಂಭೀರ ಆರೋಪ!

  English summary
  On the third day of Boss Season 9, Bigg Boss gave the task of tying a band and Rakesh tied a band to actress Mayuri.
  Wednesday, September 28, 2022, 13:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X