BBK 11: ಕ್ಯಾಪ್ಟನ್ ಹಂಸಾ ಬಳಿ ಒಳ ಉಡುಪಿನ ಬಗ್ಗೆ ಜಗದೀಶ್ ಕ್ವಾಟ್ಲೆ; ಏನಾಗ್ತಿದೆ ಬಿಗ್ ಬಾಸ್ ಮನೆಯಲ್ಲಿ!

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 11ನಲ್ಲಿ ಸ್ಪರ್ಧಿಗಳ ಕಿತ್ತಾಟ, ಜಗಳ, ಮುನಿಸು ಎಲ್ಲವೂ ಹೊರಗೆ ಬರುತ್ತಿದೆ. ಆಟಗಳು ಶುರುವಾಗಿವೆ, ಆಟದ ನಡುವೆ ಸ್ಪರ್ಧೆಯೂ ಹೆಚ್ಚಾಗಿದೆ. ಬಿಗ್ ಬಾಸ್ ಸೀಸನ್ 11ರ ಮೊದಲ ಕ್ಯಾಪ್ಟನ್ ಕೂಡ ಆಯ್ಕೆಯಾಗಿದ್ದಾರೆ. ಒಂದಷ್ಟು ಗಿಮಿಕ್ ಮಾಡಿಯೇ ಹಂಸ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದರೂ ಈಗ ಕ್ಯಾಪ್ಟನ್ ರೀತಿ ನಡೆದುಕೊಳ್ಳಬೇಕಾಗಿದೆ.

ಕ್ಯಾಪ್ಟನ್ ಆಗುವುದಕ್ಕೆ ಮಾಡಿದ ಪ್ಲ್ಯಾನ್‌ನಿಂದಾಗಿ ಹಂಸ ಈಗಾಗಲೇ ಪಶ್ಚತ್ತಾಪ ಕೂಡ ಪಟ್ಟಿದ್ದಾರೆ. ನರಕವಾಸಿಗಳಿಗೆ ನಂಬಿಸಿ ಗೆದ್ದಿದ್ದಾರೆ. ಈಗ ಜಗದೀಶ್ ಕೆಂಗಣ್ಣಿಗೆ ಹಂಸ ಗುರಿಯಾಗಿದ್ದಾರೆ. ಜಗದೀಶ್ ಹೇಗೆಲ್ಲಾ ಆಟ ಆಡಿಸ್ತಾ ಇದಾರೆ ಗೊತ್ತಾ..?

Bigg kannada 11 once again lawyer Jagadish talked about inner wear topic

ಸ್ವರ್ಗದಿಂದ ನರಕಕ್ಕೆ ಬಂದ ಜಗದೀಶ್

ಕಿಚ್ಚನ ಭಾನುವಾರದ ಪಂಚಾಯ್ತಿಯಲ್ಲಿ ಹಂಸ ಅವರಿಗೆ ಸ್ಪೆಷಲ್ ಅಧಿಕಾರ ಒಂದನ್ನ ನೀಡಲಾಗಿತ್ತು. ಒಬ್ಬ ನರಕವಾಸಿಯನ್ನು ಸ್ವರ್ಗಕ್ಕೆ ಕರೆಸಿಕೊಳ್ಳಬಹುದು. ಒಬ್ಬ ಸ್ವರ್ಗವಾಸಿಯನ್ನು ನರಕಕ್ಕೆ ಕಳುಹಿಸಬೇಕು ಎಂದಾಗ ಹಂಸ ಆಯ್ಕೆ ಮಾಡಿಕೊಂಡಿದ್ದು ರಂಜಿತ್ ಅವರನ್ನು. ತನಗಾಗಿ ಆಡಿದ ರಂಜಿತ್‌ರನ್ನು ಸ್ವರ್ಗಕ್ಕೆ ಕರೆಸಿಕೊಂಡು, ಜಗದೀಶ್ ಅವರನ್ನು ನರಕಕ್ಕೆ ಕಳುಹಿಸಿದ್ದಾರೆ. ನರಕಕ್ಕೆ ಹೋದಾಗಿನಿಂದ ಜಗದೀಶ್ 'ಮೋಸ ಮಾಡಲೆಂದು ನೀನು ಬಂದೆಯಾ' ಹಾಡನ್ನೇ ಹಾಡುತ್ತಿದ್ದಾರೆ.

ಹಂಸಾರಿಗೆ ಧಿಕ್ಕಾರ ಕೂಗಿದ ಜಗದೀಶ್

ನರಕದಲ್ಲಿ ನಿಂತುಕೊಂಡು ಜಗದೀಶ್ ಕ್ವಾಟ್ಲೆ ಕೊಡುವುದಕ್ಕೆ ಶುರು ಮಾಡಿದ್ದಾರೆ. ಹಂಸ ಅವರನ್ನು ಕಂಡಾಗಲೆಲ್ಲಾ ಧಿಕ್ಕಾರ ಕೂಗುತ್ತಿದ್ದಾರೆ. ಆದರೆ ಅದು ಸೀರಿಯಸ್ ಆಗಿ ಅಲ್ಲ ತಮಾಷೆಯಾಗಿ. ಹಂಸ ಅವರನ್ನು ರೇಗಿಸುತ್ತಲೇ ಇದ್ದಾರೆ. ಆದರೆ ಹಂಸ, ಜಗದೀಶ್ ಅವರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಿಚ್ಚನ ಪಂಚಾಯ್ತಿಯಲ್ಲಿ ಕೇಳುವ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದ ಜಗದೀಶ್ ಬ್ಲಶ್ ಆಗಿದ್ದನ್ನು ಗಮನಿಸಬಹುದು. ಹಂಸ ಬಗ್ಗೆ ಪಾಸಿಟಿವ್ ಉತ್ತರಗಳನ್ನೇ ನೀಡುತ್ತಿದ್ದರು. ಇದೀಗ ನರಕಕ್ಕೆ ಕಳುಹಿಸಿ ಬಿಟ್ಟರಲ್ಲಾ ಎಂಬ ಬೇಸರವಿದೆ. ಆದರೆ ಹಂಸಾಗೆ ತಾನೂ ಕ್ಯಾಪ್ಟನ್ ಆದೆ ಅಂತ ಬಕೆಟ್ ಹಿಡೀತಾ ಇದಾರೆ ಎಂಬ ಭಾವನೆ ಬಂದಿದೆ.

Bigg kannada 11 once again lawyer Jagadish talked about inner wear topic

ಒಳ ಉಡುಪು ತರದಂತೆ ಮನವಿ

ಇದೇ ವೇಳೆ ನರಕದಲ್ಲಿದ್ದ ಜಗದೀಶ್ ಅವರ ವಸ್ತುಗಳು ಸ್ವರ್ಗದಲ್ಲಿದ್ದ ಕಾರಣ ಅದನ್ನು ತಂದುಕೊಡುವ ಜವಾಬ್ದಾರಿಯನ್ನು ಹಂಸ ಅವರೇ ವಹಿಸಿಕೊಂಡಿದ್ದರು. ಶಾಂಪೂವಿನ ಕಲರ್ ಕೇಳಿದ ಹಂಸಾ, ಬರೀ ಶಾಂಪೂ ಅಲ್ವಾ. ಬೇರೆ ಏನಾದರೂ ನಿಮ್ಮ ವಸ್ತು ಇದೆಯಾ ಎಂದು ಕೇಳಿದರು. ಅದಕ್ಕೆ ಜಗದೀಶ್, ನನ್ನ ಒಳ ಉಡುಪು ಇದೆ. ಅದನ್ನ ತರಿಸಿಕೊಳ್ಳುವುದು ಚೆನ್ನಾಗಿರಲ್ಲ. ಪ್ಲೀಸ್ ಅದು ನನ್ನ ಮರ್ಯಾದೆ ಪ್ರಶ್ನೆ. ನನ್ನ ಒಳ ಉಡುಪನ್ನು ಮಾತ್ರ ತರಬೇಡಿ ಎಂದಿದ್ದಾರೆ.

ಪದೇ ಪದೇ ಜಗದೀಶ್ ಅದೇ ತಪ್ಪು

ಇತ್ತೀಚೆಗಷ್ಟೇ ಉಗ್ರಂ ಮಂಜು ಹಾಗೂ ಜಗದೀಶಗ ನಡುವೆ ಮಾತಿನ ವಾರ್ ನಡೆದಿತ್ತು. ಆಗ ಒಳ ಉಡುಪಿನ ಬಗ್ಗೆಯೇ ಮಾತನಾಡಿ ಹೆಣ್ಣು ಮಕ್ಕಳ ಕೆಂಗಣ್ಣಿಗೆ ಗುರಿಯಾಗಿದ್ದರು. ನನ್ನ ಹೆಂಡತಿ ಕೂಡ ಹಾಕುವುದು ಅದನ್ನೇ ಎಂದು ಕೆಟ್ಟದಾಗಿ ಮಾತನಾಡಿದ್ದರು ಜಗದೀಶ್. ಇದು ಮನೆಯಲ್ಲಿರುವ ಹೆಣ್ಣು ಮಕ್ಕಳಿಗೂ ಮುಜುಗರವನ್ನುಂಟು ಮಾಡಿತ್ತು. ಜಗದೀಶ್ ಅವರ ಮಿತಿಮೀರಿದ ವರ್ತನೆಗೆ ವಿರೋಧ ಕೂಡ ಶುರುವಾಗಿದೆ. ಇದೀಗ ಮತ್ತೆ ಒಳ ಉಡುಪಿನ ಬಗ್ಗೆ ಮಾತನಾಡಿ ಚರ್ಚೆ ಹುಟ್ಟಾಕ್ಕಿದ್ದಾರೆ.

More from Filmibeat

English summary
Colors kannada bigboss Written Update on Bigboss season 11 October 7th episode. Here is the details about Jagadish told Hamsa not to bring underwear;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X