ಬಡವರ ಮಕ್ಳು ಬೆಳಿಬೇಕು ಅಂತ ಕಾರ್ತಿಕ್ ಗೆ ಟ್ರೋಫಿ ಕೊಟ್ಟರಾ ; ಆನೆ ವಿನಯ್ ಗೌಡ ಹೇಳಿದ್ದೇನು..?

ಬಡವರ ಮಕ್ಳು ಬೆಳಿಬೇಕು ಅನ್ನುವ ಕಾರಣಕ್ಕೆ, ಕಾರ್ತಿಕ್ ಮುಡಿಗೆ ಬಿಗ್ ಬಾಸ್ ಕಿರೀಟವನ್ನ ಹಾಕಲಾಯಿತಾ ? ಗೊತ್ತಿಲ್ಲ. ಆದರೆ ಈ ವಿಚಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ, ಬಿಗ್ ಬಾಸ್ ಮನೆಯ ಕಿರುಚಾಟ, ಕೂಗಾಟ, ಹಾರಾಟಗಳನ್ನೆಲ್ಲ 112 ದಿನ ಕಣ್ತುಂಬಿಕೊಂಡ ಬಿಗ್ ಬಾಸ್ ಅಭಿಮಾನಿಗಳಲ್ಲಿ ಚರ್ಚೆ ನಡಿತಾ ಇದೆ. ಬಿಗ್ ಬಾಸ್ ಟ್ರೋಪಿಗೆ ಮುತ್ತಿಕ್ಕುವಲ್ಲಿ ವಿಫಲವಾದ ಆನೆ ಯಾನೆ ವಿನಯ್ ಅವರ ಕಿವಿಗೆ ಕೂಡ ಈ ವಿಚಾರ ಬಿದ್ದಿದೆ. ಹೀಗಾಗಿ ಈ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ವಿನಯ್, ತನ್ನ ಸ್ನೇಹಿತ ಕಾರ್ತಿಕ್ ನ ಹೊಗಳಿದ್ದಾರೆ. ಬಿಗ್ ಬಾಸ್ ಗೆಲ್ಲುವ ಯೋಗ್ಯತೆ ಹಾಗೂ ಅರ್ಹತೆ ಎರಡು ಕಾರ್ತಿಕ್ ಗೆ ಇತ್ತು ಅದರಲ್ಲಿ ಯಾವುದೇ ಅನುಮಾನ ಬೇಡವೇ ಬೇಡ ಅಂದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಬಡವ- ಶ್ರೀಮಂತ ಎಂಬ ಭೇದ ಭಾವ ಇರಲ್ಲಎಂದಿರುವ ವಿನಯ್, 112 ದಿನ ಕಾಲು ಅಲ್ಲಾಡಿಸಿಕೊಂಡು, ಆಕಾಶ ನೋಡಿಕೊಂಡು ಕಾರ್ತಿಕ್‌ ಕೂತಿದ್ನಾ..? ಎಂದು ಪ್ರಶ್ನೆಯನ್ನೂ ಮಾಡಿದ್ದಾರೆ. ಪ್ರತಿ ದಿನ ಹಾಗೂ ಪ್ರತಿ ಕ್ಷಣವನ್ನೂ ಕಾರ್ತಿಕ್ ಕಷ್ಟ ಪಟ್ಟು ಸದುಪಯೋಗ ಪಡಿಸಿಕೊಂಡಿದ್ದರಿಂದ ಕಾರ್ತಿಕ್ ಗೆದ್ದಿದ್ದೇ ಹೊರತು ಬಡವ ಎಂಬ ಕಾರ್ಡ್ ನ ಪ್ಲೇ ಮಾಡಿ ಕಾರ್ತಿಕ್ ಗೆದ್ದಿಲ್ಲ ಎಂದಿದ್ದಾರೆ. ಯಾರಾದ್ರೂ ಆ ರೀತಿ ಅಂದುಕೊಂಡಿದ್ದರೆ ಅದು ಖಂಡಿತ ತಪ್ಪು ಎಂದಿದ್ದಾರೆ ವಿನಯ್.

Biggboss contestant vinay gowda says karthik deserve the tropy

ಇನ್ನೂ ಕಾರ್ತಿಕ್ ತುಂಬಾ ಒಳ್ಳೇಯ ಕಲಾವಿದ. ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾನೆ. ಇನ್ನೂ ಕಾರ್ತಿಕ್ ನಡೆದು ಬಂದ ದಾರಿಯನ್ನ ನಾನು ಹತ್ತಿರದಿಂದ ನೋಡಿದ್ದೇನೆ ಎಂದಿರುವ ವಿನಯ್, ಅವನ ಬೆಂಬಲಕ್ಕೆ ನಾನು ಸದಾ ಇದ್ದೇ ಇರುತ್ತೇನೆ ಎಂದಿದ್ದಾರೆ.

Biggboss contestant vinay gowda says karthik deserve the tropy

ಸದ್ಯಕ್ಕೆ ಕಾರ್ತಿಕ್ ಬಗ್ಗೆ ವಿನಯ್ ಮಾತನಾಡಿರುವ ಈ ಮಾತುಗಳು ಅನೇಕರ ಹೃದಯವನ್ನ ಗೆದ್ದಿವೆ. ವಿನಯ್ ಹೇಳಿದಂತೆ ಕಾರ್ತಿಕ್ ಗೆಲುವಿಗೆ ಅರ್ಹರಾದ ವ್ಯಕ್ತಿಯೆಂಬ ಅಭಿಪ್ರಾಯ ಕೂಡ ವ್ಯಕ್ತವಾಗ್ತಿದೆ. ನಿಮ್ಮ ಅಭಿಪ್ರಾಯವೇನು..?

More from Filmibeat

English summary
During an interview Bigg Boss 10 contestant Vinay Gowda says karthik deserve the tropy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X