ಎದೆ ಸೀಳು ಪ್ರದರ್ಶಿಸಿ ಸಾನ್ಯಾ ಬೋಲ್ಡ್ ಫೋಟೊಶೂಟ್: ರೂಪೇಶ್ ಶೆಟ್ಟಿ ಹೆಸ್ರು ಎಳೆದುತಂದು ಟ್ರೋಲ್
ಬಿಗ್‌ಬಾಸ್ ಖ್ಯಾತಿಯ ಕಿರುತೆರೆ ನಟಿ ಸಾನ್ಯಾ ಅಯ್ಯರ್ ಹೊಸ ಫೋಟೋಶೂಟ್‌ನಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ದಬ್ಬೂ ರತ್ನಾನಿ ಕ್ಲಿಕ್ಕಿಸಿರುವ ಫೋಟೊಗಳನ್ನು ಬಿಂದಾಸ್ ಬೆಡಗಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಸ್ತಿದ್ದಾರೆ. ಕೆಲವರು ಮಾತ್ರ ಇದೆಲ್ಲಾ ತುಂಬಾ ಓವರ್ ಆಯಿತು, ಇದೆಲ್ಲಾ ಬೇಕಿತ್ತಾ? ಎಂದು ಕಾಮೆಂಟ್ ಮಾಡಿ ಚಕಾರ ಎತ್ತಿದ್ದಾರೆ.
ಸಾನ್ಯಾ ಅಯ್ಯರ್ ಒಂದಿಲ್ಲೊಂದು ಕಾರಣಕ್ಕೆ ಟ್ರೋಲ್ ಆಗುತ್ತಿರುತ್ತಾರೆ. ಆದರೆ ಈಗ ಹಾಟ್ ಫೋಟೋಶೂಟ್‌ನಿಂದ ಗಮನ ಸೆಳೆದಿದ್ದಾರೆ. ಇನ್ನು ನೆಟ್ಟಿಗರು ಕಾಮೆಂಟ್ ಬಾಕ್ಸ್‌ನಲ್ಲಿ ರೂಪೇಶ್ ಶೆಟ್ಟಿ ಹೆಸರನ್ನು ಎಳೆದು ತಂದು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ತುಂಡುಡುಗೆಯಲ್ಲಿ ಸಾನ್ಯಾ ಬೋಲ್ಡ್ ಅವತಾರ ಕಂಡು ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಸಖತ್ ಹಾಟ್ ಮಗಾ ಅಂತ ಕಾಮೆಂಟ್ ಮಾಡುತ್ತಿದ್ದಾರೆ. 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಬಾಲನಟಿಯಾಗಿ ಸಾನ್ಯಾ ಅಭಿಮಾನಿಗಳಿಗೆ ಹತ್ತಿರವಾಗಿದ್ದರು.

ಇತ್ತೀಚೆಗೆ ಸಾನ್ಯಾ ಬಿಟೌನ್‌ನ ಖ್ಯಾತ ಫೋಟೊಗ್ರಾಫರ್ ಡಬ್ಬೂ ರತ್ನಾನಿ ಕ್ಯಾಮರಾ ಮುಂದೆ ನಿಂತಿದ್ದರು. ಬೇರೆ ಬೇರೆ ಕಾಸ್ಟ್ಯೂಮ್‌ಗಳಲ್ಲಿ ಫೋಟೊಶೂಟ್ ಮಾಡಿಸಿದ್ದರು. ಆ ಫೋಟೊಗಳನ್ನು ಒಂದೊಂದಾಗಿ ಶೇರ್ ಮಾಡುತ್ತಿದ್ದಾರೆ. 3 ದಿನಗಳ ಹಿಂದೆ ಬಿಳಿ ಬಣ್ಣದ ಶಾರ್ಟ್ ಬಾಡಿಕಾನ್ ಡ್ರೆಸ್‌ನಲ್ಲಿ ಕ್ಲಿಕ್ಕಿಸಿದ್ದ ಫೋಟೊಗಳನ್ನು ತೇಲಿಬಿಟ್ಟಿದ್ದರು. ಅದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಕ್ರಾಪ್ ಟಾಪ್ ಹಾಗೂ ಮಿನಿ ಸ್ಕರ್ಟ್‌ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ದರ್ಶನ ಕೊಟ್ಟಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಎದೆಯ ಸೀಳು ತೆರೆದಿಟ್ಟು ಸಿಕ್ಕಾಪಟ್ಟೆ ಬೋಲ್ಡ್ ಲುಕ್‌ನಲ್ಲಿ ಸಾನ್ಯಾ ಮೋಡಿ ಮಾಡಿದ್ದಾರೆ. ಪ್ರಶಾಂತ್ ಮೇಕ್ ಓವರ್, ಜೀವಾ ಸ್ಟುಡಿಯೋ ಡಿಸೈನ್ಡ್ ಕಾಸ್ಟ್ಯೂಮ್‌ನಲ್ಲಿ ಬಿಂದಾಸ್ ಪೋಸ್‌ಗಳನ್ನು ಕೊಟ್ಟಿದ್ದಾರೆ. ಸದ್ಯ ಈ ಫೋಟೊಗಳನ್ನು ನೋಡಿ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಸಾನ್ಯಾಗೆ ಸಂಸ್ಕೃತಿಯ ಪಾಠ ಮಾಡುತ್ತಿದ್ದಾರೆ. ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ ಎಂದು ಕೇಳುತ್ತಿದ್ದಾರೆ. ಮತ್ತೆ ಕೆಲವರು ಸಾನ್ಯಾ ಸ್ನೇಹಿತ ನಟ ರೂಪೇಶ್ ಶೆಟ್ಟಿ ಹೆಸ್ರು ಎಳೆದು ತಂದು ಟ್ರೋಲ್ ಮಾಡುತ್ತಿದ್ದಾರೆ.

ಬಿಂದಾಸ್ ಬೆಡಗಿ ಸಾನ್ಯಾ ಕೆಲ ದಿನಗಳಿಂದ ಚಿತ್ರರಂಗಕ್ಕೆ ಬರುವ ಪ್ರಯತ್ನದಲ್ಲಿದ್ದಾರೆ. ಆದರೆ ಈವರೆಗೆ ದೊಡ್ಡ ಅವಕಾಶ ಮಾತ್ರ ಸಿಕ್ಕಿಲ್ಲ. ಇಂತಹ ಸಮಯದಲ್ಲೇ ಬಿಗ್‌ಬಾಸ್ ಕನ್ನಡ ಓಟಿಟಿ ಸೀಸನ್ 1 ಹಾಗೂ ಬಿಗ್‌ಬಾಸ್ ಕನ್ನಡ ಸೀಸನ್ 9ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ದೊಡ್ಮನೆಯಲ್ಲಿ ವೀಕ್ಷಕರ ಗಮನ ಸೆಳೆದಿದ್ದರು. ಬಿಗ್‌ಬಾಸ್ ಮನೆಯಲ್ಲೇ ಸಾನ್ಯಾ- ರೂಪೇಶ್ ಸ್ನೇಹಿತರಾಗಿದ್ದರು. ಮನೆಯಿಂದ ಹೊರ ಬಂದಮೇಲೂ ಸ್ನೇಹ ಮುಂದುವರೆದಿದೆ. ಇನ್ನು ಸಾನ್ಯಾ ಡ್ಯಾನ್ಸ್ ಕೂಡ ಕಲಿಯುತ್ತಿದ್ದಾರೆ. ಕಿರುತೆರೆ ಡ್ಯಾನ್ಸ್ ಶೋನಲ್ಲೂ ಈ ಹಿಂದೆ ಭಾಗಿ ಆಗಿದ್ದರು.
ಬಹಳ ದಿನಗಳಿಂದ ಸಾನ್ಯಾ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದಮೇಲೆ ಆ ಪ್ರಯತ್ನ ಹೆಚ್ಚಿಸಿದ್ದಾರೆ. ಆದರೆ ಚೆಲುವೆಗೆ ಈವರೆಗೆ ಒಳ್ಳೆ ಅವಕಾಶಗಳು ಸಿಕ್ಕಿಲ್ಲ. ಈ ಫೋಟೊಶೂಟ್ ಮೂಲಕ ಚಿತ್ರರಂಗದ ಮಂದಿಯನ್ನು ಸಾನ್ಯಾ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಸಿಕ್ಕಾಪಟ್ಟೆ ಟೀಕೆ ಎದುರಿಸುವಂತಾಗಿದೆ. "ಅವಕಾಶಗಳಿಗಾಗಿ ಹೀಗೆಲ್ಲಾ ಮಾಡ್ತಿದ್ದೀರಾ?", "ಇದು ಕರ್ನಾಟಕ ಎನ್ನುವುದನ್ನು ಮರೆಯಬೇಡಿ" ಹೀಗೆ ತರಹೇವಾರಿ ಕಾಮೆಂಟ್‌ಗಳು ಬರ್ತಿವೆ. ಆದರೆ ಇದಕ್ಕೆಲ್ಲಾ ಆಕೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಸಾನ್ಯಾ ಅಯ್ಯರ್, 9 ತರಗತಿಯವರೆಗೆ ಧಾರವಾಹಿಗಳಲ್ಲಿ ನಟಿಸಿದರು. ನಂತರ ನಟನೆ ಬಿಟ್ಟು ವಿದ್ಯಾಭ್ಯಾಸದತ್ತ ಗಮನ ಹರಿಸಿದ್ದರು. ಸಾನ್ಯಾಗೆ ನಿರ್ದೇಶಕಿ, ನಟಿ ರೂಪ ಅಯ್ಯರ್ ಚಿಕ್ಕಮ್ಮ ಆಗಬೇಕು. ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಇತ್ತೀಚೆಗೆ ಸಾನ್ಯಾ ಪದವಿ ಪಡೆದಿದ್ದರು.


Click it and Unblock the Notifications











