BBK10: ಬಿಗ್ ಬಾಸ್ ಮನೆಗೆ ದಿಢೀರ್ ವಾಪಸ್ ಬಂದ ಮೈಕಲ್..! ಆದರೆ ಕಾದಿತ್ತು ದೊಡ್ಡ ಶಾಕ್!
ಮೈಕಲ್ ಬಿಗ್ ಬಾಸ್ ಮನೆಯಲ್ಲಿ ಇರುವ ಉತ್ತಮ ಆಟಗಾರ ಎಂದರೆ ತಪ್ಪಾಗಲಾರದು. ಯಾಕೆಂದರೆ ಯಾವುದೇ ಟಾಸ್ಕ್ ಆಗಲಿ ಆಟವನ್ನು ಅಷ್ಟೇ ಚೆನ್ನಾಗಿ ಆಡುತ್ತಾರೆ. ಇನ್ನು ಈ ವಾರ ಮೈಕಲ್ ಮನೆಯಿಂದ ಹೊರಗೆ ಹೋಗೋದಿಲ್ಲ. ಅವಿನಾಶ್ ಶೆಟ್ಟಿ ಅಥವಾ ಸಿರಿಯವರು ಮನೆಯಿಂದ ಹೊರಗೆ ಹೋಗತ್ತಾರೆ ಎಂದು ಹೇಳಲಾಗಿತ್ತು. ಆದರೆ ಅವಿನಾಶ್ ಶೆಟ್ಟಿ ಜೊತೆಗೆ ಮೈಕಲ್ ಕೂಡ ಹೊರಗೆ ಹೋಗಿ ಎಲ್ಲರಿಗೂ ಕೂಡ ಶಾಕ್ ಕೊಟ್ಟಿದ್ದರು.
ಸ್ಪರ್ಧಿಗಳಿಗಂತೂ ಮೈಕಲ್ ಹೋಗಿದ್ದು ನಂಬಲು ಅಸಾಧ್ಯವಾಗಿತ್ತು. ಕೆಲವರು ಮೈಕಲ್ ಹೋಗಿದ್ದೆ ಒಳ್ಳೆಯದಾಯಿತು ಎಂದು ಅಂದುಕೊಂಡಿದ್ದರು. ಕಳೆದ ಎಪಿಸೋಡ್‌ನಲ್ಲಿ ಕೂಡ ಮೈಕಲ್ ಎಲಿಮಿನೇಟ್ ಆಗಿದ್ದಾರೆ ಎಂದೇ ತೋರಿಸಲಾಗಿತ್ತು. ಇನ್ನು ಬಿಗ್ ಬಾಸ್ ಮನೆಯಲ್ಲಿದ್ದ ಕೆಲವರು ಇಲ್ಲ ಅವರು ಬೇರೆ ಕಾರಿನಲ್ಲಿ ಬರಬಹುದು ನೋಡೋಣ ಎಂದಿದ್ದರು.

ಎಲ್ಲರ ನೀರಿಕ್ಷೆಯನ್ನು ಹುಸಿಗೊಳಿಸಿದ ಮೈಕಲ್ ವಾಪಸ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಮೈಕಲ್ ಮನೆಯಿಂದ ಹೊರಗೆ ಹೋಗುವಾಗ ವಿನಯ್ ಸಿಕ್ಕಾಪಟ್ಟೆ ಫೀಲ್ ಮಾಡಿಕೊಂಡವರಂತೆ ಕಾಣುತ್ತಾ ಇದ್ದರು. ಇನ್ನೂ ಮೈಕಲ್‌ನ ತಬ್ಬಿಕೊಂಡು ಶುಭ ಹಾರೈಸಿದ್ದರು. ಮೈಕಲ್ ಹೊರಗಡೆ ಹೋದಾಗ ನಮ್ರತಾ ಕೂಡ ತುಂಬಾನೇ ಫೀಲ್ ಮಾಡಿಕೊಂಡರು. ಬಿಗ್ ಬಾಸ್ ಮನೆಗೆ ಮೈಕಲ್ ಹೋದ ಕಾರಿನಲ್ಲಿ ವಾಪಸ್ ಬಾರದೆ ಬೇರೊಂದು ಕಾರಿನಲ್ಲಿ ವಾಪಸ್ ಬಂದಿದ್ದಾರೆ.
ಬಿಗ್ ಬಾಸ್ ಮನೆಗೆ ಮೈಕಲ್ ವಾಪಸ್
ಹೌದು. ಬಿಗ್ ಬಾಸ್ ಮನೆಗೆ ಮೈಕಲ್ ವಾಪಸ್ ಬಂದಿದ್ದಾರೆ. ಆದರೆ ಪ್ರೋಮೊದಲ್ಲಿ ಎಲ್ಲೂ ಕೂಡ ಮೈಕಲ್ ಸುಳಿವೇ ಇಲ್ಲದಂತೆ ಮಾಡಲಾಗಿತ್ತು. ಅಷ್ಟು ಕುತೂಹಲವನ್ನ ವೀಕ್ಷಕರಲ್ಲಿ ಉಳಿಸಲಾಗಿತ್ತು. ಕೊನೆಗೂ ಕೂಡ ಮೈಕಲ್ ವಾಪಸ್ ಬಂದಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. ಯಾಕೆಂದರೆ ಟಾಸ್ಕ್‌ಗಳಲ್ಲಿ ಚೆನ್ನಾಗಿ ಆಡುವ ಸ್ಪರ್ಧೆಯನ್ನು ವೀಕ್ಷಕರು ಉಳಿಸಿಕೊಂಡಿದ್ದಾರೆ. ಮೈಕಲ್ ಹಲವಾರು ಬಾರಿ ನಾಮಿನೇಟ್ ಆದಾಗಲು ಸಹ ವೀಕ್ಷಕರು ಕೈಹಿಡಿದಿದ್ದರು.
ಕನ್ನಡಿಗರಿಗೆ ಧನ್ಯವಾದ ತಿಳಿಸಿದ ಸ್ಪರ್ಧಿ..
ಮನೆಯಿಂದ ಹೊರಗೆ ಹೋದಾಗ ಮೈಕೆಲ್ ನಿರಾಸೆಗೊಂಡಿದ್ದರು. ಆದರೂ ಎಲ್ಲರಿಗೂ ಧನ್ಯವಾದಗಳು ಎಂಬ ಮಾತನ್ನು ಹೇಳಿದ್ದರು. ಬಿಗ್ ಬಾಸ್ ಮನೆಗೆ ಬಂದ ಮೇಲೆ ಮೈಕಲ್ ಕರ್ನಾಟಕದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ನೀವು ಕೊಡುತ್ತಿರುವ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ ಮುಂದಿನ ದಿನಗಳಲ್ಲೂ ಕೂಡ ನನ್ನನ್ನ ಬೆಳೆಸಿ ಎಂದು ಕೇಳಿಕೊಂಡಿದ್ದಾರೆ. ಆದರೆ ಮೈಕಲ್ ಮನೆಗೆ ಬಂದಿರುವುದು ಸಂಗೀತಾ- ಪ್ರತಾಪ್‌ಗೆ ಯಾಕೋ ಇಷ್ಟವಿಲ್ಲದಂತೆ ಕಾಣಿಸುತ್ತಿದೆ.
ನೇರವಾಗಿ ನಾಮಿನೇಟ್ ಮಾಡಿದ ಸಂಗೀತಾ
ಮನೆಗೆ ವಾಪಾಸ್ ಬಂದ ಮೈಕಲ್, ಸಂಗೀತಾರಿಂದ ಡೈರೆಕ್ಟಾಗಿ ನಾಮಿನೇಟ್ ಆಗಿದ್ದಾರೆ. ಒಂದು ವಾರ ಹೇಗೋ ಎಲಿಮಿನೇಷನ್ ಭೂತದಿಂದ ಪಾರಾದ ಮೈಕಲ್ ಈ ವಾರವು ಕೂಡ ನಾಮಿನೇಷನ್ ಲಿಸ್ಟ್‌ನಲ್ಲಿ ಇದ್ದು ಉಳಿದುಕೊಳ್ಳುತ್ತಾರಾ ನೋಡಬೇಕಾಗಿದೆ. ಸಂಗೀತಾ ಡೈರೆಕ್ಟ್ ಆಗಿ ನಾಮಿನೇಟ್ ಮಾಡಿರುವುದಾಗಿ ಹೇಳಿದಾಗ ಮೈಕಲ್ ಕೂಡ ಸಪ್ಪೆ ಮುಖ ಹಾಕಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿವಾರವೂ ಕೂಡ ಮೈಕಲ್ ನಾಮಿನೇಟ್ ಆಗುತ್ತಿದ್ದಾರೆ. ಇದೊಂದು ವಿಚಾರ ಮಾತ್ರ ಮೈಕಲ್ ಮನಸ್ಸಿನ ಮೇಲೆ ಬಹಳಷ್ಟು ಪರಿಣಾಮ ಬೀರಿದಂತೆ ಇದೆ. ಅದಕ್ಕಾಗಿ ನಾಮಿನೇಟ್ ಮಾಡಲಾಗಿದೆ ಎಂದಾಗ ಸಪ್ಪಗಾಗಿದ್ದಾರೆ.


Click it and Unblock the Notifications











