BBK 11: ಫುಡ್, ವಾಶ್ ರೂಂನಿಂದ ಇನ್ಫೆಕ್ಷನ್ ಆಯ್ತಾ : ಶೋಭಾ ಶೆಟ್ಟಿ ಹೊರಗೆ ಬರೋಕೆ ಇಲ್ಲಿದೆ ನೋಡಿ ರಿಯಲ್ ಕಾರಣ

By ಎಸ್ ಸುಮಂತ್

ತೆಲುಗು ಬಿಗ್ ಬಾಸ್‌ನಲ್ಲಿ ಅಬ್ಬರಿಸಿದ್ದ ಶೋಭಾ ಶೆಟ್ಟಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕನ್ನಡ ಬಿಗ್ ಬಾಸ್‌ಗೂ ಬಂದಿದ್ದರು. ಆರಂಭದಲ್ಲಿ ಎಲ್ಲರನ್ನು ನಡುಗಿಸಿದ್ದ ಶೋಭಾ ಶೆಟ್ಟಿ, ದಿನಕಳೆದಂತೆ ಕುಸಿದು ಹೋದರು. ಸೈಲೆಂಟ್ ಆಗಿ ಬಿಟ್ಟರು. ಆಟದಲ್ಲೂ ಅಷ್ಟೊಂದು ತೊಡಗಿಸಿಕೊಳ್ಳುತ್ತಿರಲಿಲ್ಲ. ಜೊತೆಗೆ ಮನೆಗೆ ಹೋಗುವುದಕ್ಕೆ ಹಠ ಮಾಡಿದರು.

ಕಿಚ್ಚ ಸುದೀಪ್ ಪಂಚಾಯ್ತಿಯಲ್ಲಿ ಸಾಕಷ್ಟು ಮನವರಿಕೆ ಮಾಡಿದರು, ಒಂದಷ್ಟು ಧೈರ್ಯ ತುಂಬಿದರು. ಆದರೂ ಶೋಭಾ ಶೆಟ್ಟಿ ಮನಸ್ಸು ಬದಲಾಗಲಿಲ್ಲ. ಹೊರಗೆ ಬಂದೇ ಬಿಟ್ಟರು. ಅವರು ಮನೆಯಿಂದ ಹೊರಗೆ ಬಂದ ಮೇಲೆ ನೇರವಾಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು. ಆದರೆ ಹಕವು ಗಾಸಿಪ್ ಹಬ್ಬಿತ್ತು. ಇದೀಗ ಅದಕ್ಕೆಲ್ಲ ಶೋಭಾ ಶೆಟ್ಟಿಯೇ ಉತ್ತರ ಕೊಟ್ಟಿದ್ದಾರೆ.

Biggboss Kannada 11 actual Season for shobha shetty Exit from house

ವದಂತಿಗೆ ತೆರೆ ಎಳೆದ ಶೋಬಾ

ಶೋಭಾ ಶೆಟ್ಟಿ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಅದರಲ್ಲಿ ತಮ್ಮ ಎಂಗೇಜ್ಮೆಂಟ್, ಹಬ್ಬ ಹರಿದಿನಗಳು, ತಮ್ಮ ರೊಟೀನ್ ಲೈಫ್ ಬಗ್ಗೆ ಎಲ್ಲಾ ವಿಡಿಯೋ ಮಾಡಿ ಹಾಕಿದ್ದಾರೆ. ಇದೀಗ ಬಿಗ್ ಬಾಸ್‌ನಿಂದ ಹೊರ ಬಂದಿದ್ದೇಕೆ ಎಂಬುದನ್ನು ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ. 'ಒಂದು ಇಂಟರ್ ವ್ಯೂ ಕೂಡ ಕೊಟ್ಟಿಲ್ಲ. ಅಷ್ಟು ಜೋಶ್ ಆಗಿ ಹೋದವರು ದಿಢೀರನೇ ಮನೆಯಿಂದ ಹೊರಗೆ ಬರೋದಕ್ಕೆ ಕಾರಣ ಏನು ಎಂಬುದು ಎಲ್ಲರಿಗೂ ಪ್ರಶ್ನೆಯಾಗಿರುತ್ತದೆ. ನಾನು ನನ್ನ ರಿಯಲ್ ಲೈಫ್ ಅಥವಾ ಪ್ರೊಫೆಷನಲ್ ಲೈಫ್‌ನಲ್ಲಿ ಸೋಲನ್ನ ಸುಲಭವಾಗಿ ಒಪ್ಪಿಕೊಳ್ಳಲ್ಲ. ಅಷ್ಟು ದೊಡ್ಡ ಶೋನಿಂದ ಹೊರಗೆ ಬಂದೆ ಅಂದ್ರೆ ಅದಕ್ಕೊಂದು ದೊಡ್ಡ ಕಾರಣವೇ ಇರುತ್ತದೆ' ಎಂದಿದ್ದಾರೆ.

ಮೊದಲೇ ಇನ್ಫೆಕ್ಷನ್ ಇತ್ತು

'ತೆಲುಗಿನಲ್ಲಿ ನನ್ನ ಬಿಗ್ ಬಾಸ್ ನೋಡಿದ್ದೀರಾ. ಅಲ್ಲಿ ಟಾಪ್ 5 ಆದ್ಮೇಲೆ ಕಳೆದುಕೊಂಡಿದ್ದೆ. ಇಲ್ಲಿ ಕಳೆದುಕೊಳ್ಳಬಾರದು ಅಂತ ಬಂದೆ‌. ಬಿಗ್ ಬಾಸ್‌ಗೆ ಬರೋದಕ್ಕೂ ಮುನ್ನ ಹೆಲ್ತ್ ಚೆಕಪ್ ಮಾಡ್ತಾರೆ. ಎಲ್ಲವೂ ನಾರ್ಮಲ್ ಇತ್ತು. ಆದರೆ ಒಂದು ಇನ್ಫೆಕ್ಷನ್ ಮಾತ್ರ ಇತ್ತು. ಟೀಂ ಡಾಕ್ಟರ್ ಅಂಡ್ ಪರ್ಸನಲ್ ಡಾಕ್ಟರ್ ಕೂಡ ಚರ್ಚೆ ಮಾಡಿದ್ರು. ಅದು ಹುಡುಗಿಯರಿಗೆ ಕಾಮನ್. ಅಷ್ಟೊಂದು ತೊಂದರೆ ಆಗಲ್ಲ. ಅದಕ್ಕೆ ಬೇಕಾದ ಮೆಡಿಸನ್ ಕೊಡೋಣಾ ಎಂದಾದ ಮೇಲೆ ನಾನು ಓಕೆ ಅಂದೆ.

ಇನ್ಫೆಕ್ಷನ್ ಜಾಸ್ತಿ ಆಯ್ತು

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ವಾಶ್ ರೂಂ ಸಪರೇಟ್ ಇಲ್ಲದೆ ಇದ್ದರೆ, ಸ್ವಚ್ಛವಾಗಿಲ್ಲದೆ ಇದ್ದರೆ ಇನ್ಫೆಕ್ಷನ್ ಆಗೋದು ಕಾಮನ್. ಹಾಗೇ ಕೆಲವೊಬ್ಬರು ಆಹಾರದಲ್ಲಿ ಪಥ್ಯವಾಗಿದ್ದಾಗಲೂ ಬಳಸುವ ಆಯಿಲ್, ಮಾಡುವ ರೀತಿಯಿಂದಲೂ ಇನ್ಫೆಕ್ಷನ್ ಆಗುತ್ತೆ. ಇದೀಗ ಶೋಭಾ ಶೆಟ್ಟಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅದರ ಬಗ್ಗೆ ಡಿಟೈಲ್ ಆಗಿ ಹೇಳದೆ ಹೋದರೂ, ಆ ಬಗ್ಗೆಯೇ ಮಾತಾಡಿದ್ದಾರೆ. 'ಮನೆಯೊಳಗೆ ಹೋದ ಮೇಲೆ ಜಾಸ್ತಿ ಆಯ್ತು. ನಾನು ಯಾರನ್ನು ಬ್ಲೇಮ್ ಮಾಡಲ್ಲ. ನನ್ನ ಆರೋಗ್ಯಕ್ಕೆ ಅಲ್ಲಿನ ಫುಡ್, ಬೇರೆಯದ್ದು ಸೆಟ್ ಆಗಿಲ್ಲ. ಹೀಗಾಗಿ ನಂಗೆ ಆಟ ಸರಿಗೆ ಆಡೋಕೆ ಆಗ್ಲಿಲ್ಲ. ಬಿಗ್ ಬಾಸ್ ಮನೆಯೊಳಗೆ ಎಲ್ಲಾ ರೀತಿಯಾದ ಮೆಡಿಸನ್‌ಗಳನ್ನು ಕೊಟ್ಟು ಕಾಳಜಿ ಮಾಡಿದ್ರು' ಎಂದು ತಿಳಿಸಿದ್ದಾರೆ.

ಆಟಕ್ಕಿಂತ ಆರೋಗ್ಯ ಮುಖ್ಯ

'ರೆಗ್ಯುಲರ್ ಆಗಿ ಮೆಡಿಸನ್ ತೆಗೆದುಕೊಳ್ಳಬೇಕಾಗಿದ್ದ ಕಾರಣ ಆಟದ ಕಡೆಗೆಲ್ಲ ಸರಿಯಾಗಿ ಗಮನ ಕೊಡೋಕೆ ಆಗಿಲ್ಲ. ಕೆಲಸ ಮುಖ್ಯ ಹೌದು. ಬದುಕ ಬೇಕು ಎಂದಾಗ ಕೆಲಸ ಮಾಡಬೇಕು. ಒಬ್ಬ ಕಲಾವಿದೆಯಾಗಿ ಕೆಲಸದ ಮೇಲೆ ಗೌರವ ಇದೆ. ಆದರೆ ಕೆಲಸ ಮಾಡಬೇಕು ಎಂದಾಗ ಆರೋಗ್ಯ ಬಹಳ ಮುಖ್ಯವಾಗಿ ಬೇಕು. ಎರಡನ್ನು ತೂಕ ಹಾಕಿ ನೋಡಿದಾಗ ಆರೋಗ್ಯವೇ ಮುಖ್ಯವಾಗಿತ್ತು. ಅದಕ್ಕೆ ಬಿಟ್ಟೆ' ಎಂದು ಸ್ಪಷ್ಟನೆ ನೀಡಿದ್ದಾರೆ.

More from Filmibeat

English summary
BBK 11: Here is the details about Shobha reveals the reason behind her exit from Bigg Boss;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X