BBK 11: ಬಿಗ್ ಬಾಸ್ ಶಿಶಿರ್ ಮೊದಲ ಧಾರಾವಾಹಿ ಯಾವ್ದು? ಅಂದು ಭಾಗ್ಯ ಗಂಡ ಆಗಿದ್ರು..!
ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿಯಾಗಿ ಶಿಶಿರ್ ಶಾಸ್ತ್ರಿ ಕೂಡ ಇದ್ದಾರೆ. ತನ್ನ ಆಟ ಆಡುವುದಕ್ಕಿಂತ ಎಲ್ಲರೊಟ್ಟಿಗೂ ಒಳ್ಳೆಯವರಾಗಿಯೇ ಇರಬೇಕೆಂಬ ಬಯಕೆಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನ ಕಿಚ್ಚ ಸುದೀಪ್ ಅವರು ವಾರದ ಪಂಚಾಯ್ತಿಯಲ್ಲೂ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಟ್ಟಿಗೂ ಇರುತ್ತಾರೆ.
ಐಶ್ವರ್ಯಾ ಜೊತೆಗೆ ಶಿಶಿರ್ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಐಶ್ಚರ್ಯಾ ಹಾಗೂ ಶಿಶಿರ್ ಪ್ರೇಮಿಗಳು ಎಂಬಂತೆಯೇತಮಾಷೆ ಮಾಡುತ್ತಾ ಇರುತ್ತಾರೆ. ಜೊತೆಗೆ ಶಿಶಿರ್ ಕೂಡ ಐಶ್ವರ್ಯಾ ಅವರನ್ನು ತುಂಬಾನೇ ಕಾಳಜಿ ಮಾಡುತ್ತಾರೆ. ಕಳೆದ ವಾರ ಮನೆಯಿಂದ ಬರುವ ಪತ್ರ, ತಿಂಡಿ ವಿಚಾರದಲ್ಲಿ ಐಶ್ವರ್ಯಾ ಅಳುವಾಗಲೂ ಜೊತೆಯಾಗಿ ನಿಂತಿದ್ದರು. ಇಬ್ಬರು ಬೆಸ್ಟ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.

2012ರಲ್ಲಿ ಜರ್ನಿ ಶುರು ಮಾಡಿದ್ದ ಶಿಶಿರ್
ಶಿಶಿರ್ ಧಾರಾವಾಹಿ ಮೂಲಕವೇ ಎಲ್ಲರಿಗೂ ಪರಿಚಯ. ಉದಯ ಟಿವಿ, ಕಲರ್ಸ್ ಕನ್ನಡದ ಧಾರಾವಾಹಿಗಳಲ್ಲಿ ಮಿಂಚಿದವರು. ಶಿಶಿರ್ ಧಾರಾವಾಹಿಗೆ ಪರಿಪೂರ್ಣ ನಟನಾಗಿ ಎಂಟ್ರಿ ಕೊಟ್ಟಿದ್ದು 'ಸೊಸೆ ತಂದ ಸೌಭಾಗ್ಯ' ಎಂಬ ಧಾರಾವಾಹಿ ಮೂಲಕ. ಆ ಧಾರಾವಾಹಿಯಲ್ಲಿ ಇಬ್ಬರು ನಟಿಯರು. 2012ರಲ್ಲಿ ಬರ್ತಿದ್ದಂತ ಈ ಧಾರಾವಾಹಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದರು. ಈಗಲೂ ಆ ಧಾರಾವಾಹಿಯ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ.
ಭಾಗ್ಯಾ ಅಂದು ಹೆಂಡತಿಯಾಗಿದ್ದರು
ಕಲರ್ಸ್ ಕನ್ನಡದಲ್ಲಿ 'ಭಾಗ್ಯಲಕ್ಷ್ಮೀ' ಧಾರಾವಾಹಿ ಒಳ್ಳೆ ಟಿಆರ್ಪಿ ಇರುವಂಥದ್ದು. ಅತ್ತೆಗೆ ತಕ್ಕ ಸೊಸೆಯಾಗಿ, ಒಂದು ಕುಟುಂಬಕ್ಕೆ ಒಳ್ಳೆಯ ಮಗಳಾಗಿ ಭಾಗ್ಯ ಕಾಣಿಸಿಕೊಳ್ಳುತ್ತಿದ್ದಾಳೆ. ಇದೇ ಭಾಗ್ಯ ಶಿಶಿರ್ ಜೊತೆಗೆ 'ಸೊಸೆ ತಂದ ಸೌಭಾಗ್ಯ' ಧಾರಾವಾಹಿ ಮೂಲಕ ಬಂದಿದ್ದರು. ಶಿಶಿರ್‌ಗೆ ಹೆಂಡತಿಯಾಗಿ, ಮನೆಗೆ ಅಂದು ಕೂಡ ಒಳ್ಳೆಯ ಸೊಸೆಯಾಗಿ ಕಾಣಿಸಿಕೊಂಡಿದ್ದರು. ಆ ಹಳೆಯ ವಿಡಿಯೋ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶಿಶಿರ್ ಮತ್ತು ಭಾಗ್ಯಾ ಮದುವೆಯ ವಿಡಿಯೋ ವೈರಲ್ ಆಗುತ್ತಿದೆ. ಟೈಟಲ್ ಟ್ರ್ಯಾಕ್ ಕೂಡ ಎಲ್ಲರಿಗೂ ಇಷ್ಟವಾಗುತ್ತಿದೆ.
ಕೋಳಿ ರಮ್ಯಾ ಜೊತೆಗೆ ಮದುವೆ?
ಶಿಶಿರ್ ಶಾಸ್ತ್ರಿ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಅವರ ಮದುವೆಯ ಸುದ್ದಿ ವೈರಲ್ ಆಗ್ತಾ ಇದೆ. ತಮಗೆ ಮದುವೆಯೇ ಆಗಿಲ್ಲ ಎಂದು ಶಿಶಿರ್ ಶಾಸ್ತ್ರಿ ಹೇಳಿಕೊಂಡಿದ್ದಾರೆ. ಆದರೆ ಈ ಹಿಂದೆಯೇ ಕೋಳಿ ರಮ್ಯಾ ಜೊತೆಗೆ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸದ್ದಾಗಿತ್ತು. ಶಿಶಿರ್ ಹಾಗೂ ಕೋಳಿ ರಮ್ಯಾಗೆ ಮೊದಲೇ ಮದುವೆಯಾಗಿತ್ತು ಅಂತಾನೂ ಸುದ್ದಿ ಹಬ್ಬಿತ್ತು.
ಚೈತ್ರಾ ಜೊತೆಗೆ ಜಗಳ
ಇನ್ನು ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಆಡಿಸಿದ್ದ ಟಾಸ್ಕ್‌ನಲ್ಲಿ ಶಿಶಿರ್ ಹಾಗೂ ಚೈತ್ರಾ ನಡುವೆ ಜೋರು ಜಗಳವೇ ಆಗಿತ್ತು. ಇಬ್ಬರು ಮಾತಿನ ಯುದ್ದಕ್ಕೆ ನಿಂತಿದ್ದರು. ಆದರೆ ಚೈತ್ರಾ ಡೈಲಾಗ್ ಟ್ರೋಲ್ ಆಗಿದ್ದು ಗೊತ್ತೆ ಇದೆಯಲ್ಲ ಒಂದೇ ಡೈಲಾಗ್ ಅನ್ನ ಎದುರಾಳಿಗೆ ಬೇಸರ ತರಿಸುವಷ್ಟು ಸಲ ಹೇಳುತ್ತಾರೆ. ಶಿಶಿರ್ ವಿಚಾರದಲ್ಲೂ ಅದೇ ಆಗಿದ್ದು. ಜೊತೆಗೆ ಶಿಶಿರ್ ಶಾಸ್ತ್ರಿಗೆ ಕೋಪ ಬಂದ್ರೆ ಬಿಗ್ ಬಾಸ್ ಮನೆಯಲ್ಲೂ ಬೀಪ್ ಸೌಂಡ್ ಹಾಕುವಂತ ಮಾತುಗಳನ್ನೇ ಹಾಡುತ್ತಾರೆ. ಇತ್ತೀಚೆಗೆ ಅದೇ ರೀತಿಯ ಮಾತುಗಳನ್ನಾಡಿದ್ದರು.


Click it and Unblock the Notifications











