BBK 11: ಧನರಾಜ್ ಬದುಕಿಗೆ ಹನುಮಂತು ಎಷ್ಟು ಮುಖ್ಯ ಗೊತ್ತಾ?
ಫಿನಾಲೆಗೂ ಮುನ್ನವೇ ಧನರಾಜ್ ಮನೆಯಿಂದ ಹೊರಗೆ ಬಂದಿದ್ದಾರೆ. ಮಂಜು ಹಾಗೂ ಧನರಾಜ್ ನಡುವೆ ಹಾರ್ಟ್ ಬೀಟ್ ಹೆಚ್ಚಾಗುವ ಸನ್ನಿವೇಶ ನಿರ್ಮಾಣವಾಗಿತ್ತು. ತಮ್ಮ ತಮ್ಮ ತಪ್ಪುಗಳನ್ನ ಸುದೀಪ್ ಮುಂದೆ ಹೇಳಿದರು. ಇಷ್ಟು ದಿನ ತಿದ್ದುಕೊಳ್ಳದೆ ಇದ್ದದ್ದೇ ಔಟ್ ಆಗುವುದಕ್ಕೆ ಕಾರಣವಾಗಿದೆ. ಮಂಜು ಸೇಫ್ ಆಗಿ ಬದುಕಿತು ಬಡಜೀವ ಎಂಬ ನಿಟ್ಟುಸಿರು ಬಿಟ್ಟರೆ, ನಿರೀಕ್ಷಿತ ಸೋಲು ಎಂಬಂತೆ ಮನೆಯಿಂದ ಹೊರಹೋಗುವುದಕ್ಕೆ ಧನರಾಜ್ ರೆಡಿಯಾದರು.
ಧನರಾಜ್ ಆರಂಭದಿಂದ ಇದ್ದ ಸ್ಪರ್ಧಿ. ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಂತ ಹನುಮಂತು ಜೊತೆಗೆ ಸಿಕ್ಕಾಪಟ್ಟೆ ಕ್ಲೋಸ್ ಆಗಿ ಬಿಟ್ಟರು. ಆಮೇಲೆ ಆ ಇಬ್ಬರು ಇಡೀ ವೀಕ್ಷಕರನ್ನ ನಕ್ಕು ನಲಿಸಿದ್ದರು. ಇಬ್ಬರ ಸ್ನೇಹಕ್ಕೆ ಹೊರಗಡೆಯ ಮಂದಿ ಕೂಡ ಅಭಿಮಾನಿಗಳಾಗಿಬಿಟ್ಟಿದ್ದರು. ಕುಂತರು ನಿಂತರು ಒಟ್ಟಿಗೆ ಇರ್ತಾ ಇದ್ರು. ಇದೀಗ ಹನುಮಂತುಗೆ ಒಂಟಿತನ ಕಾಡುತ್ತಿದೆ.

ಎಲ್ಲರೂ ಫ್ರೀಜ್
ಧನರಾಜ್ ಔಟ್ ಆಗಿ ಮನೆಯಿಂದ ಹೊರಗೆ ಬರುವಾಗ ಬಿಗ್ ಬಾಸ್ ಎಲ್ಲರನ್ನು ಫ್ರೀಜ್ ಮಾಡಿಸಿದ್ದರು. ಆದರೆ ಧನರಾಜ್ ಎಲ್ಲರಿಗೂ ತಮ್ಮ ಮನಸ್ಸಲ್ಲಿ ಇರುವುದನ್ನು ಹೇಳಿದ್ದರು. ಧನರಾಜ್ ಮಾತು ಕೇಳಿ ಭವ್ಯಾ ಹಾಗೂ ಮಂಜಣ್ಣ, ತ್ರಿವಿಕ್ರಂ ಕಣ್ಣೀರು ಹಾಕಿದರು. ಧನರಾಜ್ ಹೊರಗೆ ಬರುವ ತನಕವೂ ಯಾರನ್ನು ಬಿಗ್ ಬಾಸ್ ರಿಲೀಸ್ ಮಾಡಲೇ ಇಲ್ಲ. ಅದೊಂದಜ ಬೇಸರದ ಸಂಗತಿಯಾಗಿತ್ತು ಮನೆಯೊಳಗಿದ್ದವರಿಗೆ.
ಮಾತೇ ಬರ್ತಿಲ್ಲ ಹನುಮಂತುಗೆ
ಧನರಾಜ್ ಮನೆಯಿಂದ ಹೊರಗೆ ಬಂದು ಸುದೀಪ್ ಅವರ ಜೊತೆಗೆ ವೇದಿಕೆ ಸೇರಿದ ಮೇಲೆ ಎಲ್ಲರನ್ನು ರಿಲೀಸ್ ಮಾಡಿದರು. ಅಷ್ಟರಲ್ಲಿ ಧನು ಯಾರ ಕಣ್ಣಿಗೂ ಕಾಣಿಸಲಿಲ್ಲ. ಹನುಮಂತು ಓಡೋಡಿ ಬಂದರು, ಧನು ಇಲ್ಲ. ಬಾಗಿಲು ತೆಗೆದು ಹೋದರು ಎಂಬುದನ್ನು ಭವ್ಯಾ ಹೇಳಿದ ಕೂಡಲೇ ಹನುಮಂತುಗೆ ಮಾತೇ ಬರುತ್ತಿಲ್ಲ, ಮೌನಕ್ಕೆ ಜಾರಿದರು. ಇನ್ನು ಇರೋದು ಒಂದೇ ವಾರ ಯಾಕೆ ಬೇಜಾರು ಮಾಡ್ಕೊಳ್ತೀಯಾ. ಸಿಗ್ತಾರೆ ಬಿಡು. ನಾವೆಲ್ಲ ಇಲ್ವಾ ಅಂತ ಹೇಳಿದ್ರು ಹನುಮಂತು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸುಮ್ಮನೆ ಅಲ್ಲಿಂದ ನಡೆದುಬಿಟ್ಟರು.
ಧನರಾಜ್ ಹೊಗಳಿಕೆ
ಸುದೀಪ್ ಅವರೊಟ್ಟಿಗೆ ವೇದಿಕೆಗೆ ಬಂದ ಕೂಡಲೇ, ಫಿನಾಲೆಯಲ್ಲಿ ನಾನು ಇರಬೇಕಿತ್ತು ಸರ್. ತುಂಬಾ ಬೇಸರ ಆಗ್ತಾ ಇದೆ ಎಂದ ಧನು, ತಕ್ಷಣ ಹನುಮಂತು ಬಗ್ಗೆ ಮಾತನಾಡಿದರು. ದೋಸ್ತ ನನ್ನ ಜೀವನೆ.. ಹನುಮಂತಣ್ಣ ಒಂಥರ ನಂಗೆ ಒಂದು ರೀತಿಯ ಶಕ್ತಿನೆ ಸರ್. ಅವರು ಇರುವ ರೀತಿ ಅವರ ಜೊತೆಗೆ ಕಳೆದದ್ದು, ಮರೆಯಲಾರಂಥದ್ದು. ಫಿನಾಲೆವರೆಗೂ ಬಂದಿದ್ದೀನಿ ಅನ್ನೋದು ಖುಷಿ. ಇಬ್ಬರು ಅಲ್ಲಿ ಜೀವಿಸಿದ್ದೀವಿ ಸರ್. ಎಲ್ಲೂ ಕೂಡ ಅವೆ ಮುಗ್ಧತೆಯನ್ನ ಕಳೆದುಕೊಂಡಿಲ್ಲ ಅನ್ಸುತ್ತೆ. ಹನುಮಂತಣ್ಣನಿಂದ ಕಲಿತ ಪಾಠವನ್ನ ಜೀವನಕ್ಕೂ ರೂಢಿಸಿಕೊಳ್ಳುತ್ತೇನೆ
ಜನರ ಬಗ್ಗೆ ಹೇಳಿದ್ದೇನು ಧನು?
ನಾಳೆಯಿಂದ ಏನು ಸರ್ ಎಂದು ಸುದೀಪ್ ಅವರು ಕೇಳಿದಾಗ, ನಾಳೆಯಿಂದ ಮಗಳು, ನನ್ನ ಹೆಂಡತಿ ಎಂದಿದ್ದಾರೆ ಧನು. ಜೊತೆಗೆ ಒಂದಷ್ಟು ವಿಚಾರಕ್ಕೆ ಜನ ನನ್ನ ಇಷ್ಟ ಪಡುತ್ತಾರೆ. ಇಷ್ಟ ಪಡದೆ ಇದ್ದವರು ಇದ್ದಾರೆ. ಇಷ್ಟ ಆಗದೆ ಇದ್ದವರಿಗೆ ಇಷ್ಟ ಆಗುವ ರೀತಿ ಇರ್ತೇನೆ. ಬಿಗ್ ಬಾಸ್ ವೇದಿಕೆ ಕೊಟ್ಟ ಗೌರ ಉಳಿಸಿಕೊಳ್ತೇನೆ. ಜನರ ಪ್ರೀತಿ ಎಷ್ಟು ಇರುತ್ತೋ ಅಷ್ಟು ಶಕ್ತಿ ನನಗೆ. ನಿಮ್ಮ ಅಭಿಮಾನ, ಪ್ರೀತಿಯನ್ನ ಉಳಿಸಿಕೊಳ್ತೇನೆ. ಯಾವುದಕ್ಕೂ ಧಕ್ಕೆ ಮಾಡಲ್ಲ ಎಂದು ಭರವಸೆ ಕೊಟ್ಟ ಧನರಾಜ್, ಸುದೀಪ್ ಅವರಿಗೂ ಸಲಹೆಗಳನ್ನ ಕೊಡ್ತಾ ಇರಿ ಎಂದು ಮನವಿ ಮಾಡಿದ್ದಾರೆ.


Click it and Unblock the Notifications











