BBK 11: ನಂಬಿದ್ದ ಗೆಳೆಯನಿಂದಾನೇ ಗೌತಮಿಗೆ ಟಿಕೆಟ್ ಮಿಸ್ಸಾಯ್ತು, ಬಾತ್ ರೂಮಿನಲ್ಲಿ ಕಣ್ಣೀರಾಕಿದ ಗೆಳತಿ!
ಬಿಗ್ ಬಾಸ್ ಶುರುವಾದಾಗಿನಿಂದ ಗೌತಮಿ - ಮಂಜು ಒಬ್ಬರಿಗೊಬ್ಬರು ಬಿಟ್ಟು ಕೊಡದಂತೆ ಇದ್ದಾರೆ. ಸುದೀಪ್ ಅವರೇ ಸಾಕಷ್ಟು ಬಾರಿ ಪಂಚಾಯ್ತಿಯಲ್ಲಿ ಬುದ್ದಿವಾದ ಹೇಳಿದ್ದಾರೆ. ಆದರೆ ಈ ಮಾತು ಗೌತಮಿಗಾಗಲೀ, ಮಂಜುಗಾಗಲೀ ಮನಸ್ಸಿನ ಒಳಗೆ ಹೋಗಿಲ್ಲ. ಅಷ್ಟೇ ಯಾಕೇ ಉಗ್ರಂ ಮಂಜುಗೆ ಅವರ ಸಹೋದರಿ, ಗೌತಮಿಗೆ ಸ್ಚತಃ ಅವರ ಗಂಡನೇ ಬುದ್ದಿ ಮಾತು ಹೇಳಿ ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಈಗ ಟಾಸ್ಕ್ ಒಂದರಿಂದ ದೂರ ದೂರ ಆಗಿದ್ದಾರೆ.
ಈ ವಾರವೆಲ್ಲ ಟಿಕೆಟ್ ಟು ಫಿನಾಲೆ ರೌಂಡ್ ನಡೀತಾ ಇದೆ. ರಿಸ್ಕೀ ಟಾಸ್ಕ್‌ಗಳನ್ನ ನೀಡಲಾಗುತ್ತಿದೆ. ಇದರಲ್ಲಿ ಮಂಜು ಅಂಡ್ ಗೌತಮಿ ಒಂದು ಟೀಂ, ಭವ್ಯಾ ಹಾಗೂ ಮೋಕ್ಷಿತಾ ಒಂದು ಟೀಂ ಇತ್ತು. ಪೆಟ್ಟಿಗೆಯೊಳಗೆ ಮಲಗಿದ್ದವರನ್ನು ಮುಳುಗುತ್ತಿದ್ದ ನೀರನ್ನು ಇನ್ನೊಬ್ಬರು ತೆಗೆಯಬೇಕಿತ್ತು. ಆದರೆ ಗೌತಮಿ ನೀರು ತೆಗೆಯುವುದು ನಿಧಾನವಾಯ್ತು. ಪೆಟ್ಟಿಗೆಯೊಳಗೆ ನೀರು ತುಂಬಿತು. ಇದರ ಪರಿಣಾಮ ಮಂಜು ಆಟದಲ್ಲಿ ಸೋತರು. ಮೋಕ್ಷಿತಾ ಗೆದ್ದರು.

ಆಟ ಸೋತ ಗೌತಮಿ, ಮಂಜು
ಮಂಜು ಐಡಿಯಾ ಉಲ್ಟಾ ಹೊಡೆದಿದೆ. ಪೆಟ್ಟಿಗೆ ಹಾಗೂ ನೀರನ್ನು ಎತ್ತಿ ಹಾಕುವ ಆಟದಲ್ಲಿ ಮಂಜು ಹಾಗೂ ಗೌತಮಿ ಸೋತಿದ್ದಾರೆ. ಈ ಮೂಲಕ ಟಿಕೆಟ್ ಟು ಫಿನಾಲೆಯಿಂದ ಹೊರಗೆ ಉಳಿದಿದ್ದಾರೆ. ಇದು ಗೌತಮಿ ಹಾಗೂ ಮಂಜು ಇಬ್ಬರಿಗೂ ಶಾಕಿಂಗ್ ಅನಿಸಿದೆ. ಅಷ್ಟೇ ನೋವು ಕೊಟ್ಟಿದೆ. ಬಿಗ್ ಬಾಸ್ ಹೇಳಿದಾಗ ಅದನ್ನು ಸ್ವೀಕರಿಸಲು ಆಗದೆ ಸುಮ್ಮನೆ ಆಗಿದ್ದಾರೆ.
ಸೋಲಿನ ಬಗ್ಗೆ ಪರಮಾರ್ಶೆ
ಗೌತಮಿ ಮೊದಲೇ ಹೇಳಿದ್ದರು. ನಾನು ಪೆಟ್ಟಿಗೆಗೊಳಗೆ ಇರ್ತೀನಿ. ನೀವೂ ನೀರನ್ನು ಎತ್ತಿ ಅಂತ. ಆದರೆ ಮಂಜಣ್ಣ ಯೋಚನೆ ಮಾಡಿದ್ದೇ ಬೇರೆ ರೀತಿ. ನೀರಲ್ಲಿ ಗೌತಮಿ ಹೆಚ್ಚು ಸಮಯ ಇರೋದಕ್ಕೆ ಆಗಲ್ಲ ಅಂತ. ಆದರೆ ಗೌತಮಿಗೆ ನೀರನ್ನು ಎತ್ತಿ ಹಾಕುವುದಕ್ಕೂ ಕಷ್ಟ ಆಯ್ತು. ತನ್ನ ಮಾತನ್ನು ಕೇಳಲಿಲ್ಲ ಎಂದು ಗೌತಮಿ ಬೇಸರ ಮಾಡಿಕೊಂಡು ಕೂತರು.
ಮಂಜು ಸಮರ್ಥನೆ
ಮಂಜಣ್ಣ ಆದ ತಪ್ಪನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಬಂದಾಗ, ಗೌತಮಿ ಮನಸ್ಸಲ್ಲಿನ ಬೇಸರ ಹಾಗೇ ಇತ್ತು. ಈ ಮನೆಯಲ್ಲಿ ಇರುವ ತನಕ ಹೊಡೆಸಿಕೊಳ್ಳುತ್ತಾ ಇರೋದೆ. ಹೊಡೆಸಿಕೊಳ್ತಾನೆ ಇರ್ತೀನಿ ಎಂದು ಹೇಳಿ ಅಲ್ಲಿಂದ ಎದ್ದು ಹೋದರು. ಆಗ ಮಂಜಣ್ಣ, ಅಲ್ಲಿಯೇ ಇದ್ದ ಹನುಮಂತು ಹಾಗೂ ಧನರಾಜ್ ಬಳಿ ಸಮರ್ಥನೆ ಮಾಡಿಕೊಂಡರು. ಹೌ್ಉ ಗೌತಮಿ ಮೊದಲೇ ಹೇಳಿದ್ದರು ಎಂದು.
ಬಾತ್ ರೂಮಿನಲ್ಲಿ ಕಣ್ಣೀರು
ಮಂಜು ಬಿಗ್ ಬಾಸ್ ಮನೆಯಲ್ಲಿ ಗೌತಮಿಯನ್ನ ಇಂಪ್ರೆಸ್ ಮಾಡುವುದಕ್ಕೆ ನೋಡ್ತಾರೆ. ಈಗ ತನ್ನಿಂದಾದ ತಪ್ಪಿನಿಂದ ಗೌತಮಿಗೆ ನೋವಾಗಿದೆ ಎಂದು ತಿಳಿದು ಸಾರಿ ಕೇಳಿದ್ದಾರೆ, ಸಮಾಧಾನ ಮಾಡಿದ್ದಾರೆ, ಮಾತಾಡಿಸಲ್ವ ಅಂತ ಹಿಂದೆ ಬಿದ್ದಿದ್ದಾರೆ. ಇಲ್ಲಿ ಎಲ್ಲರೂ ಬರ್ತಾ ಇರ್ತಾರೆ. ನನ್ನ ಸ್ವಲ್ಪ ಹೊತ್ತು ಒಂಟಿಯಾಗಿ ಬಿಡಿ ಎಂದು ಬಾತ್ ರೂಮಿಗೆ ಹೋಗಿ ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಮನೆಯವರು ಕರ್ಮ ರಿಟರ್ನ್ ಬಗ್ಗೆ ಮಾತನಾಡಿದ್ದಾರೆ. ಧನರಾಜ್ ಅವರನ್ನ ಏನೇನೊ ಕಾರಣ ಹೇಳಿ ಫಿನಾಲೆ ಟಿಕೆಟ್‌ನಿಂದ ಹೊರಗುಳಿಯುವಂತೆ ಮಾಡಿದ್ದರ ಬಗ್ಗೆ ಮಾತಾಡಿಕೊಂಡಿದ್ದಾರೆ.


Click it and Unblock the Notifications











