BBK 11: ಭವ್ಯಾ - ತ್ರಿವಿಕ್ರಂ ದೂರ ಮಾಡ್ತೀನಿ ಎಂದಿದ್ದ ರಜತ್, ಸಿಗರೇಟ್‌ಗೆ ಕಾಂಪ್ರೂಮೈಸ್ ಆಗ್ಬಿಟ್ರಾ?
ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯ ಹಂತಕ್ಕೆ ತಲುಪಿದೆ. ಇಂದು ಸುದೀಪ್ ಅವರ ಕಟ್ಟ ಕಡೆಯ ಪಂಚಾಯತಿ. ಬರೀ ಸೀಸನ್ 11 ಮಾತ್ರವಲ್ಲ ಇಡೀ ಬಿಗ್ ಬಾಸ್ ಜರ್ನಿಯ ಕೊನೆಯ ಪಂಚಾಯತಿ ಇದಾಗಿದೆ. ಹೀಗಾಗಿ ಸಾಮಾನ್ಯವಾಗಿಯೇ ಬಿಗ್ ಬಾಸ್ ಅಭಿಮಾನಿಗಳಿಗೆ ಕುತೂಹಲವೂ ಇದೆ, ಬೇಸರವೂ ಇದೆ. ಇನ್ಯಾವ ಸೀಸನ್‌ನಲ್ಲೂ ಸುದೀಪ್ ಅವರನ್ನು ನೋಡುವುದಕ್ಕೆ ಆಗಲ್ಲ ಎಂಬ ನೋವು.
ಇದರ ನಡುವೆ ಕಿಚ್ಚ ಸುದೀಪ, 'ಸೂಪರ್ ಸಂಡೆ ವಿತ್ ಸುದೀಪ' ಪಂಚಾಯ್ತಿಯಲ್ಲಿ ನಗು ನಗುತ್ತಾ ಎಲ್ಲರ ಕಾಲು ಎಳೆಯುತ್ತಿದ್ದಾರೆ. ಮುಂದಿನ ವಾರ ಮನೆಯಲ್ಲಿ ಉಳಿದ ಐವರಿಗೆ ಢವಢವ ಎಂಬ ಸಮಯ. ಸುದೀಪ್ ಅವರು ನಡೆಸಿಕೊಡುವ ಫಿನಾಲೆಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇಂದು ಮಾತ್ರ ಕಿಚ್ಚನ ಕೈಗೆ ತ್ರಿವಿಕ್ರಂ - ಭವ್ಯಾ ತಗಲಾಕಿಕೊಂಡಿದ್ದಾರೆ.

ವೇದಿಕೆ ಮೇಲೆ ಪ್ರಪೋಸ್ ವಿಚಾರ
ಭವ್ಯಾಗೆ ತ್ರಿವಿಕ್ರಂ ಒಮ್ಮೆ ಪ್ರಪೋಸ್ ಮಾಡಿದ್ದರು. ನಾನು ನಿಜಕ್ಕೂ ನಿನ್ನನ್ನ ಪ್ರೀತಿಸ್ತೀನಿ ಅಂತ. ಇದು ಟೆಲಿಕ್ಯಾಸ್ಟ್ ಕೂಡ ಆಗಿತ್ತು. ಆದರೆ ಭವ್ಯಾ - ತ್ರಿವಿಕ್ರಂಗೆ ಗೊತ್ತಿರಲಿಲ್ಲ. ಈ ವಾರ ಹಳಬರೆಲ್ಲ ಒಂದು ರೌಂಡು ಬಿಗ್ ಬಾಸ್ ಮನೆಯೊಳಗೆ ಬಂದಿದ್ದಾಗ ಸುರೇಶ್ ಈ ವಿಚಾರವನ್ನ ಕೇಳಿದ್ದರು. ಇದೇ ವಿಡಿಯೋವನ್ನು ಸುದೀಪ್ ಅವರು ತಮ್ಮ ಪಂಚಾಯ್ತಿಯಲ್ಲಿ ಪ್ಲೇ ಮಾಡಿ ಕಾಲೆಳೆದರು. ವಿಡಿಯೋ ಪ್ರೂಫ್ ತೋರಿಸಿದರು ವಿಕ್ರಂ ಹಾಗೂ ಭವ್ಯಾ ಮಾತ್ರ ಒಪ್ಪಿಕೊಳ್ತಾ ಇಲ್ಲ.
ಇಬ್ಬರ ನಡುವೆ ನಲುಗಿದ ರಜತ್
ಸುದೀಪ್ ಅವರು ಮತ್ತೊಂದು ವಿಡಿಯೋ ಪ್ಲೇ ಮಾಡಿದರು. ಅದರಲ್ಲಿ ಭವ್ಯಾ ಹಾಗೂ ತ್ರಿವಿಕ್ರಂ ಕಿತ್ತಾಡುವಾಗ ಮಧ್ಯದಲ್ಲಿ ಸಿಲುಕಿ ರಜತ್ ನೊಂದು ಬೆಂದು ಹೋಗಿದ್ದರು. ಸಾಕು ಬಿಡ್ರಪ್ಪ ಅಂದ್ರಿ ಕಿತ್ತಾಡ್ತಾ ಇದ್ರು. ಮತ್ತೆ ಒಂದಾಗ್ತಾ ಇದ್ರು. ಇದೆಲ್ಲ ನೋಡಿ ನೋಡಿ ರೋಸೆದ್ದು ಹೋಗಿದ್ದ ರಜತ್ ಅವರನ್ನ ಸಖತ್ತಾಗಿ ಟ್ರೋಲ್ ಮಡಿದ್ದರು. ಅದೇ ವಿಡಿಯೋ ಫ್ಲೇ ಆಗಿತ್ತು.
ಭವ್ಯಾ ಮೇಲೆ ಗರಂ
ರಜತ್ ಮನೆಯ ಒಳಗೆ ಬಂದಾಗ ಒಂದು ಪ್ರಶ್ನೆ ಎದುರಾಗಿತ್ತು. ಯಾರ ಫ್ರೆಂಡ್ಶಿಪ್ ಬ್ರೇಕ್ ಮಾಡ್ತೀರಾ ಅಂತ. ಆಗ ಭವ್ಯಾ ಹಾಗೂ ತ್ರಿವಿಕ್ರಂ ಅಂತ ಹೇಳಿದ್ರು. ಈಗ ನೋಡಿದ್ರೆ ಅವರ ಕಾಟ ತಡೆದುಕೊಳ್ಳೋದೆ ದೊಡ್ಡ ಸಮಸ್ಯೆಯಾಗಿದೆ. ತ್ರಿವಿಕ್ರಂ ಪಾಪ ಎಂದು ರಜತ್ ಹೇಳುವಾಗ ಅರ್ಧ ಸಿಗರೇಟ್ ಗೋಸ್ಕರ ನನ್ನ ಕೆಟ್ಟವಳು ಮಾಡ್ತೀಯ ಎಂದು ಭವ್ಯಾ ಕೇಳಿದ್ರೆ, ತಕ್ಷಣವೇ ಸುದೀಪ್ ಅವರು, ಒಂದು ಪ್ಯಾಕ್ ಸಿಗರೇಟ್ ಕೊಡ್ತೀನಿ ಎಂದಿದ್ದಾರೆ. ಅದಕ್ಕೆ ಭವ್ಯಾ ಮೇಲೆ ತಮಾಷೆಯಾಗಿ ಆರೋಪಿಸಿದ್ದಾರೆ.
ಮುಂದಿನ ವಾರವೂ ಇರುವ ನಿರೀಕ್ಷೆ
ಇತ್ತ ಭವ್ಯಾ, ಧನರಾಜ್ ಇಬ್ಬರಲ್ಲಿ ಒಬ್ಬರು ಇಂದು ಲಗೇಜ್ ತಗೊಂಡು ಹೊರ ಹೋಗಲೇಬೇಕಾಗಿದೆ. ಹೀಗಾಗಿ ಭವ್ಯಾ ಅವರನ್ನ ಅಭಿಪ್ರಾಯ ಕೇಳಿದ್ರೆ ಧನರಾಜ್ ಹೋಗಲಿ, ನಾನು ಇರಬೇಕು ಎಂದಿದ್ದಾರೆ. ಇನ್ನೊಂದು ವಾರ ಫಿನಾಲೆಯಲ್ಲಿ ಇರಬೇಕು ಎಂಬುದು ಕನಸು. ಕೆಲವು ಕನಸುಗಳಯ ಆಗಾಗ ಈಡೇರುತ್ತವೆ ಅಂತ ತಮ್ಮ ಆಸೆಯನ್ನ ವ್ಯಕ್ತಪಡಿಸಿದ್ದಾರೆ.


Click it and Unblock the Notifications











