BBK 11: ಒಂದಾಗೋಕೆ ಸಾಧ್ಯ ಇಲ್ಲ ಎಂದಿದ್ದ ಮೋಕ್ಷಿ ಎಳ್ಳು - ಬೆಲ್ಲ ತಿನ್ನಿಸಿ ಒಂದಾಗೋಣ ಅಂತಿದ್ದಾರೆ!
ಬಿಗ್ ಬಾಸ್ ಮನೆಗೆ ಬಂದ ಆರಂಭದಲ್ಲಿ ಗೌತಮಿ ಮತ್ತು ಮೋಕ್ಷಿತಾ ಕ್ಲೋಸ್ ಆದ್ರು. ಯಾಕಂದ್ರೆ ಹೊರಗಡೆಯೇ ಈ ಇಬ್ಬರಿಗೆ ಪರಿಚಯವಿದ್ದ ಕಾರಣಕ್ಕೆ. ಆಮೇಲೆ ಮಂಜಣ್ಣ ಕ್ಲೋಸ್ ಆದ್ರು. ಮೂವರು ಕೂಡ ತುಂಬಾ ಆತ್ಮೀಯರಾದ್ರು. ಒಟ್ಟಿಗೆ ಕೂರುವುದು, ತಿನ್ನುವುದು ಎಲ್ಲವನ್ನು ಜೊತೆಯಾಗಿಯೇ ಮಾಡುತ್ತಿದ್ದರು.
ಇದ್ದಕ್ಕಿದಂತೆ ಅದೇನಾಯ್ತೋ ಏನೋ ಭಿನ್ನಾಭಿಪ್ರಾಯಗಳಿಂದ ಗೌತಮಿ ಹಾಗೂ ಮಂಜಣ್ಣನಿಂದ ಮೋಕ್ಷಿತಾ ದೂರ ಆದ್ರು. ಗೌತಮಿ ಎಷ್ಟೇ ಸಲ ಕ್ಷಮೆ ಕೇಳಿ ಒಂದಾಗುವುದಕ್ಕೆ ಪ್ರಯತ್ನ ಪಟ್ಟರೂ ಅದು ಇನ್ಮೇಲೆ ಸಾಧ್ಯವೇ ಇಲ್ಲ ಎಂದೇ ಹೇಳಿದ್ದರು.

ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ ಜೋರಾಗಿತ್ತು. ಬಿಗ್ ಬಾಸ್ ನಲ್ಲಿ ಕೂಡ ಮನೆ ಮಂದಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿತ್ತು. ಜೊತೆಗೆ ತಾರಮ್ಮನನ್ನು ಕಳುಹಿಸಿ, ಮನೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.
ಮನೆ ಮಂದಿಗೆಲ್ಲ ಸಂಕ್ರಾಂತಿ ಸುಗ್ಗಿ
ಬಿಗ್ ಬಾಸ್ ಮನೆಗೆ ತಾರಾ ಅನುರಾಧ ಅವರು ಮತ್ತೆ ಬಂದಿದ್ದಾರೆ. ಮನಸ್ಸುಗಳು ದೂರ ದೂರ ಆದಾಗ, ಭಿನ್ನಾಭಿಪ್ರಾಯಗಳಿಂದ ಕೂಡಿದ್ದಾಗ ಅವುಗಳನ್ನು ಸರಿ ಮಾಡುವ ಕೆಲಸವನ್ನು ತಾರಾ ಅವರು ಮಾಡಿದ್ದಾರೆ. ಕಳೆದ ಸೀಸನ್ನಲ್ಲಿ ಕೂಡ ಮನೆಗೆ ಬಂದಿದ್ದರು. ಈ ಸೀಸನ್‌ನಲ್ಲಿ ಕೂಡ ಎಳ್ಳು ಬೆಲ್ಲದ ಸಮೇತ ಬಂದಿದ್ದಾರೆ. ಮನೆ ಮಂದಿಗೆ ಮತ್ತಷ್ಟು ಖುಷಿ ಹೆಚ್ಚಿಸಿದ್ದಾರೆ.
ಮಂಜಣ್ಣನ ಕ್ಷಮೆಗೆ ಗೌತಮಿ ಕಣ್ಣೀರು
ತಾರಾ ಅವರು ಮನೆ ಮಂದಿಗೆ ಕ್ಷಮೆ ಕೇಳಿ ಸಂಬಂಧ ಸರಿ ಮಾಡಿಕೊಳ್ಳುವ ಅವಕಾಶ ನೀಡಿದರು. ಮೊದಲಿಗೆ ಬಂದ ಮಂಜಣ್ಣ ನೇರವಾಗಿ ಗೌತಮಿ ಬಗ್ಗೆಯೇ ಮಾತನಾಡಿದರು. ಆರಂಭದ ದಿನಗಳಿಂದ ಗೌತಮಿ ಯಾಕೆ ಇಷ್ಟ ಆದ್ರು ಎಂಬ ಬಗ್ಗೆ. ಬಳಿಕ ಗೌತಮಿ ಕುಟುಂಬಸ್ಥರಿಗೆ ಕ್ಷಮೆ ಕೇಳಿದರು. ಗೌತಮಿ ಕೂಡ ಮಂಜಣ್ಣನ ಕುಟುಂಬಸ್ಥರಿಗೆ ಕ್ಷಮೆ ಕೇಳಿದರು. ಇದು ಭಾವನಾತ್ಮಕ ಸನ್ನಿವೇಶವನ್ನು ಸೃಷ್ಟಿ ಮಾಡಿತ್ತು.
ಮೋಕ್ಷಿತಾಗೂ ಮಂಜಣ್ಣ ಕ್ಷಮೆ
ತಾರಾ ಅವರು ಮತ್ತೊಂದು ಅವಕಾಶ ನೀಡಿದರು. ಗೌತಮಿ ಬಿಟ್ಟು ಹೇಳೋದಾದ್ರೆ ಎಂದಾಗ ಮೋಕ್ಷಿತಾ ಹೆಸರನ್ನು ತೆಗೆದುಕೊಂಡರು ಮಂಜಣ್ಣ. ಬಾಯ್ತುಂಬ ಅಣ್ಣ ಅಣ್ಣ ಅಂತ ಇದ್ರು. ನಾನು ಅವರಿಗೆ ಹರ್ಟ್ ಮಾಡಿದೆ ಅನ್ನಿಸ್ತಾ ಇದೆ. ಮಾಡಬಾರದಿತ್ತು. ಕ್ಷಮೆ ಇರಲಿ ಎಂದು ಕೇಳಿದರು. ಬಳಿಕ ಆಕಾಶದಲ್ಲಿ ಎಂಬ ಮೋಕ್ಷಿತಾ ಫೇವರಿಟ್ ಹಾಡನ್ನ ಹಾಡಿದರು. ಮೋಕ್ಷಿತಾ ಕಣ್ಣೀರು ಹೊರೆಸಿಕೊಂಡು ಬಂದು ಮಂಜಣ್ಣನಿಗೆ ಎಳ್ಳು ಬೆಲ್ಲ ತಿನ್ನಿಸಿದರು. ಇಬ್ಬರು ಕೋಪ ಮರೆತು ಒಂದಾದರು.
ಮತ್ತೆ ಒಂದಾಗೋಣಾ
ಈಗ ಮೋಕ್ಷಿತಾ ಸರದಿ. ಒಮ್ಮೆ ಎಲ್ಲಾ ಮರೆತು ಮತ್ತೆ ಒಂದಾಗೋಣ ಎಂದು ಗೌತಮಿ ಕೇಳಿದ್ದಾಗ ಸಾಧ್ಯವಿಲ್ಲ ಎಂದಿದ್ದರು. ಈಗ ಮೋಕ್ಷಿತಾ ಅವರೇ ಆ ಒಂದು ಮಾತನ್ನ ಹೇಳಿದ್ದಾರೆ. ಇಷ್ಟು ದಿನ ಹೇಗಾದರೂ ಇರಲಿ, ಇನ್ಮುಂದೆ ಹೊರಗೆ ಹೋದ ಮೇಲೂ ಎಲ್ಲರೂ ಮೊದಲಿನಂತೆ ಇರೋಣಾ ಎಂಬಂತೆ ಹೇಳಿದ್ದಾರೆ. ಮೂವರು ಕೂಡ ಒಬ್ಬರಿಗೊಬ್ಬರು ಎಳ್ಳು ಬೆಲ್ಲ ತಿನ್ನಿಸಿದ್ದಾರೆ. ಈ ಸಂಕ್ರಾಂತಿ ಹಬ್ಬ ಗೌತಮಿ, ಮಂಜು, ಮೋಕ್ಷಿತಾ ನಡುವೆ ಬಂದಿದ್ದ ಕತ್ತಲನ್ನು ಸರಿಸುವಂತೆ ಮಾಡಿದೆ. ತಾರಮ್ಮ ಬಂದ ಮೇಲೆ ಯಾವ ಮನಸ್ಥಾಪಗಳನ್ನು ಹಾಗೇ ಬಿಟ್ಟು ಹೋಗಲ್ಲ.


Click it and Unblock the Notifications











