BBK 11: ನಾನು ಗೋಮುಖ ವ್ಯಾಘ್ರ ಅಲ್ಲ, ಮೋಕ್ಷಿತಾ 2 ತಲೆ ಹಾವು : ಇನ್ಮೇಲೆ ಲವ್ ಕಟ್?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಲವ್ ಆಗೋದು ಸರ್ವೇ ಸಾಮಾನ್ಯ. ಆ ಪ್ರೀತಿ ಅಲ್ಲಿಗೆ ಮುಗಿಯಬಹುದು, ಮುಂದುವರೆಯಲು ಬಹುದು. ಅನೇಕ ಬಾರಿ ಒನ್ ಸೈಡ್ ಲವ್ ಆಗೋದೆ ಹೆಚ್ಚು.

ಈ ಬಾರಿಯೂ ಬಿಗ್ ಬಾಸ್ ನಲ್ಲಿ ಅಂಥಹದೊಂದು ಒನ್ ಸೈಡ್ ಲವ್ ಸ್ಟೋರಿಯ ಸುಳಿವು ಸಿಕ್ಕಿದೆ. ಅದು ಮೋಕ್ಷಿತಾ ಮೇಲೆ ತ್ರಿವಿಕ್ರಂಗೆ ಆದಂತ ಲವ್. ಅದು ಲವ್ವಾ..? ಕಂಪ್ಯಾನಿಯನ್ ಲೈಕ್ ಮಾಡ್ತಾ ಇದಾರಾ ಎಂಬ ಸ್ಪಷ್ಟ ಸಂದೇಶವಿಲ್ಲ.

Biggboss kannada 11 Trivikram Takes A Dig At Mokhitha During Nomination

ತ್ರಿವಿಕ್ರಂ ಕಣ್ ಕಣ್ ಸಲಿಗೆಯನ್ನು ಫ್ಯಾನ್ಸ್ ಅಂತು ತುಂಬಾನೇ ಎಂಜಾಯ್ ಮಾಡ್ತಾ ಇದಾರೆ. ಪದೇ ಪದೇ ವಿಡಿಯೋ ಮಾಡಿ ವೈರಲ್ ಮಾಡ್ತಾ ಇದಾರೆ. ತ್ರಿವಿಕ್ರಂ ಕೂಡ ಹಾಗೇ ಇರೋದು ಎಲ್ಲರೊಟ್ಟಿಗೆ ಜೋರಾಗಿ ಜಗಳವಾಡುತ್ತಾರೆ, ಆದರೆ ಮೋಕ್ಷಿತಾ ಕಣ್ಣೆದುರು ಬಂದಾಗ ಗಪ್ ಚಿಪ್ ಆಗಿ ಹೋಗ್ತಾರೆ. ಇದು ಅಭಿಮಾನಿಗಳಿಗೆ ಅನುಮಾನ ಮೂಡಿಸಿದೆ.

ನಾಮಿನೇಷನ್ ಪ್ರಕ್ರಿಯೆ ಶುರು

ವಾರದ ಆರಂಭದಲ್ಲಿ ನಾಮಿನೇಷನ್ ಪ್ರಕ್ರಿಯೆ ಇದ್ದೆ ಇರುತ್ತದೆ. ಹೆಚ್ಚು ವೋಟ್ ಬಂದವರು ನಾಮಿನೇಟ್ ಆಗುತ್ತಾರೆ. ವಾರಪೂರ್ತಿ ಜನರ ಮನಮೆಚ್ಚಿಸಿ ಪಾರಾಗುತ್ತಾರೆ. ಇದು ಸಹಜವೇ ಸರಿ. ನಾಮಿನೇಟ್ ಮಾಡೋದಕ್ಕೆ ಟಾಸ್ಕ್ ಕೂಡ ಕೊಡುತ್ತಾರೆ. ಈ ಬಾರಿ ಬಾಣಕ್ಕೆ ನಾಮಿನೇಟ್ ಮಾಡುವವರ ಫೋಟೋ ಅಂಟಿಸಿ ಮುಖ್ಯ ದ್ಚಾರದಿಂದ ಹೊರಕ್ಕೆ ಹೋಗುವಂತೆ ಹೊಡೆಯಬೇಕು. ಅದೇ ನಾಮಿನೇಷನ್ ಟಾಸ್ಕ್.

ಮಂಜಣ್ಣನ ಕಾರಣಕ್ಕೆ ನಾಮಿನೇಟ್

ಇ‌ನ್ನು ಈ ಬಾರಿ ಮೋಕ್ಷಿತಾ, ತ್ರಿವಿಕ್ರಂ ಹಾಗೂ ಭವ್ಯ ಅವರ ಹೆಸರನ್ನು ತೆಗೆದುಕೊಂಡಿದ್ದರು. ಬಾಣ ಬಿಡುವುದಕ್ಕೆ ಮಹಾರಾಜ ಮಂಜಣ್ಣನೇ ಸಹಾಯ ಮಾಡಿದ್ದಾರೆ. ಈ ವೇಳೆ ನಾಮಿನೇಟ್ ಮಾಡುವುದಕ್ಕೆ ಮೋಕ್ಷಿತಾ ಕೊಟ್ಟ ಕಾರಣ ಅಂದ್ರೆ ಮಂಜಣ್ಣ ಇಲ್ಲಷ್ಟೇ ಬಿಲ್ಡಪ್ ಕೊಡೋದು. ಹೊರಗಡೆ ಏನೇನು ಇಲ್ಲ ಎಂದು ಹೇಳುತ್ತಾರೆ ಎಂದಿದ್ದಾರೆ.

2 ತಲೆ ನಾಗರಹಾವು ಎಂದ ತ್ರಿವಿಕ್ರಂ

ಬಿಗ್ ಬಾಸ್ ಮನೆ ದೊಡ್ಡದು. ಆದರೆ ಈಗ ಜನ ಕಡಿಮೆ. ಇರುವವರೇ ಆ ಪ್ರಪಂಚದ ಒಡೆಯರು. ಹೀಗಾಗಿ ಕೆಲವೊಮ್ಮೆ ಅನ್ನಿಸಿದ್ದನ್ನು ಕೆಲವರ ಬಳಿ ಹೇಳಿಕೊಳ್ಳುತ್ತಾರೆ. ತ್ರಿವಿಕ್ರಂ ಕೂಡ ಮಂಜಣ್ಣನ ಬಗ್ಗೆ ಮೋಕ್ಷಿತಾ ಬಳಿ ಹೇಳಿಕೊಂಡಿದ್ದರು. ಇದೀಗ ನಾಮಿನೇಷನ್‌ನಲ್ಲಿ ಆ ಗುಟ್ಟನ್ನ ರಟ್ಟು ಮಾಡಿದ್ದು ಬೇಸರ ತರಿಸಿದೆ. ನನ್ನನ್ನ ಗೋಮುಖ ವ್ಯಾಘ್ರ ಎನ್ನುತ್ತಾರೆ, ಆದರೆ ಮೋಕ್ಷಿತಾ 2 ತಲೆ ನಾಗರಹಾವು ಎಂದು ಕೋಪ ಹೊರ ಹಾಕಿದ್ದಾರೆ.

ಓನ್ಲಿ ಆಟ.. ನೋ ಪ್ರೀತಿ?

ಇಷ್ಟು ದಿನ ತ್ರಿವಿಕ್ರಂ ತಾಳ್ಮೆಯಿಂದ ಎಲ್ಲವನ್ನು ಮಾಡುತ್ತಿದ್ದರು. ಹೇಗೆ ಅಂದ್ರೆ ಮೋಕ್ಷಿತಾ ಕೋಪ ಮಾಡಿಕೊಂಡರು, ಬೈದರು ತ್ರಿವಿಕ್ರಂ ಮಾತ್ರ ತಾಳ್ಮೆ ಕಳೆದುಕೊಂಡಿರಲಿಲ್ಲ. ಆದರೆ ಈಗ ತ್ರಿವಿಕ್ರಂ ತಾಳ್ಮೆ ಕಳೆದೋಗಿದೆ. ಮೋಕ್ಷಿತಾ ನಂಬಿಕೆ ದ್ರೋಹ ಮಾಡಿದರೂ ಎಂಬ ಬೇಸರ ಅವರಲ್ಲಿ ಕಾಣಿಸುತ್ತಿದೆ. ಮೋಕ್ಷಿತಾ ಹೇಳಿದ ಮಾತಿನಿನಿಂದ ತ್ರಿವಿಕ್ರಂ ಇನ್ಮುಂದೆ ಬದಲಾಗುವ ಸೂಚನೆ ಕಾಣಿಸುತ್ತಿದೆ. ಇಷ್ಟು ದಿನ ಮೋಕ್ಷಿತಾ ಅವರನ್ನ ಮಾತಾಡಿಸಬೇಕು, ಅವರ ಜೊತೆ ಸಮಯ ಕಳೆಯಬೇಕು ಎಂದು ಬಯಸುತ್ತಿದ್ದ ತ್ರಿವಿಕ್ರಂ ಇಂದು ಮೋಕ್ಷಿತಾಗೆ ಎರಡು ತಲೆ ನಾಗರಹಾವು ಎಂದಿದ್ದಾರೆ. ಮುಕ್ಕಾಲು ಭಾಗ ಜರ್ನಿ ಮುಗಿಸಿರುವ ತ್ರಿವಿಕ್ರಂ ಉಳಿದ ಕಡಿಮೆ ಸಮಯದಲ್ಲಿ ಕಪ್ ಕಡೆಗೆ ಮಾತ್ರ ಗಮನ ಕೊಡ್ತಾರಾ ಎಂಬುದನ್ನು ನೋಡಬೇಕಿದೆ.

More from Filmibeat

English summary
Colors kannada biggboss Written Update on Bigboss season 11 November 26th episode. Here is the details about Is Trivikram's one-sided love end?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X