BBK 11: ಒಂದೇ ಫ್ರೇಮ್‌ನಲ್ಲಿ ಗೌತಮಿ, ಮಂಜು, ಮೋಕ್ಷಿತಾ; ಮತ್ತೆ ಫ್ರೆಂಡ್ಶಿಪ್?
ಬಿಗ್ ಬಾಸ್ ಮನೆಗೆ ಬಂದ ಆರಂಭದಲ್ಲಿ ಗೌತಮಿ ಹಾಗೂ ಮೋಕ್ಷಿತಾ ಬೆಸ್ಟ್ ಫ್ರೆಂಡ್ಸ್ ಆಗಿದ್ದವರು. ಎಷ್ಟರಮಟ್ಟಿಗೆ ಅಂದ್ರೆ ಒಂದೇ ರೀತಿಯ ಬಟ್ಟೆಗಳನ್ನ ಹಾಕಿಕೊಳ್ತಾ ಇದ್ರು. ಇಬ್ಬರ ಜೊತೆಗೆ ಮಂಜಣ್ಣ ಸೇರಿದಾಗ ಮೂವರು ಬೆಸ್ಟ್ ಫ್ರೆಂಡ್ಸ್ ರೀತಿ ಆದ್ರು. ಮೋಕ್ಷಿತಾ ಹಾಗೂ ಗೌತಮಿ ಬಿಗ್ ಬಾಸ್ ಮನೆಯೊಳಗೆ ಅಲ್ಲ.. ಮನೆಯಿಂದ ಹೊರಗಿದ್ದಾಗಲೇ ಫ್ರೆಂಡ್ಸ್ ಆಗಿದ್ದವರು. ಆದರೆ ಈಗ ಯಾರ್ಯಾರು ಕ್ಲೋಸ್ ಆಗಿಲ್ಲ.
ಮೋಕ್ಷಿತಾಗೆ ಅವರಿಬ್ಬರ ನಡೆ, ಪ್ರಭಾವ ಬಳಸುವುದು ಇಷ್ಟವಾಗಿಲ್ಲ. ಹೀಗಾಗಿ ದೂರ ಆದ್ರೂ. ಒಮ್ಮೆ ಗೌತಮಿಯೇ ಮತ್ತೆ ಫ್ರೆಂಡ್ಶಿಪ್ ಬೆಳೆಸೋಣ ಎಂದಾಗಲೂ ಮೋಕ್ಷಿತಾ ನೋ ಎಂದಿದ್ದರು. ಆದರೆ ಈಗ ಒಂದೇ ಫ್ರೇಮಿನಲ್ಲಿ ಮೂವರು ಇದ್ದು, ಆ ನಗು ಮತ್ತೆ ಮೂಡುವುದಕ್ಕೆ ಸಾಧ್ಯವಾ ಎಂದೇ ವೀಕ್ಷಕರು ಕಾಯುತ್ತಿದ್ದಾರೆ.

ಫೋಟೋ ಹಂಚಿಕೊಂಡ ಗೌತಮಿ
ಬಿಗ್ ಬಾಸ್ ಮನೆಯಲ್ಲಿ ಗೌತಮಿ ಆಟದಲ್ಲಿ ಬ್ಯುಸಿಯಾಗಿದ್ರು, ಅವರ ಸೋಷಿಯಲ್ ಮೀಡಿಯಾ ಕೂಡ ಸಿಕ್ಕಾಪಟ್ಟೆ ಆಕ್ಟೀವ್ ಆಗಿದೆ. ಪ್ರತಿದಿನ ಬಿಗ್ ಬಾಸ್‌ನಲ್ಲಿನ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಟಾಸ್ಕ್ ಆಡಿದ್ದು, ಬ್ಯೂಟಿಫುಲ್ ಆಗಿ ರೆಡಿಯಾದಂತ ಕ್ಯಾಂಡಿಡ್ ಪಿಕ್‌ಗಳನ್ನ ಹಾಕಿರುತ್ತಾರೆ. ಆದರೆ ಇವತ್ತು ಅವರು ಹಾಕಿರುವ ಫೋಟೋಗಳಿಗೆ ಬಹಳಷ್ಟು ಮೆಚ್ಚುಗೆ ಬಂದಿದೆ, ಕಮೆಂಟ್ ಕೂಡ ಬರ್ತಾ ಇದೆ. ಅದುವೇ ಒಂದೇ ಫ್ರೇಮ್‌ನಲ್ಲಿ ಗೆಳೆಯ, ಗೆಳತಿಯರು ಇರುವುದು.
ದೆವ್ವ ಕಾಣಿಸ್ತಾ ಐಶುಗೆ
ಈ ಫೋಟೋಗಳನ್ನ ಬಿಗ್ ಬಾಸ್ ಕ್ಲಿಕ್ಕಿಸಿರೋದು ದೆವ್ವದ ಸನ್ನಿವೇಶದಲ್ಲಿ. ಅಂದ್ರೆ ಎಲ್ಲರೂ ನಿಂತು ಗಾಜಿನ ಹಿಂದೆ ಯಾರೋ ಇದ್ದಂಗೆ ಇದೆ ಎಂದು ಕುತೂಹಲಕಾರಿಯಾಗಿ ನೋಡುತ್ತಾ ಇದ್ದಾಗ, ಐಶು ಕಣ್ಣಿಗೆ ದೆವ್ವ ಕಂಡಿದೆ. ತಕ್ಷಣ ಹೆದರಿದ್ದಾರೆ. ಆಗ ಎಲ್ಲರಿಗೂ ಆಶ್ಚರ್ಯ. ಅದುವೆ ಹನುಮಂತು ಹಾಗೂ ಧನರಾಜ್ ಕೂಡ ಕುತೂಹಲದಿಂದ ನೋಡಿದ್ರೆ ಮಂಜಣ್ಣ, ಗೌತಮಿ, ಮೋಕ್ಷಿತಾ ನಗುತ್ತಾ ಎಂಜಾಯ್ ಮಾಡ್ತಾ ಇದ್ರು. ಅರೆಕ್ಷಣ ಎಲ್ಲರು ಆ ಸಮಯದಲ್ಲಿ ಹೆದರಿದರು ಕೂಡ.
ಮೋಕ್ಷಿ, ಗೌತಮಿ ನಗುಗೆ ಫಿದಾ
ಮೋಕ್ಷಿತಾ ಈ ಮನೆಯಲ್ಲಿ ನಗು ಅಳು ಎಲ್ಲವನ್ನು ನೋಡಿದ್ದಾರೆ. ಅದರಲ್ಲೂ ಗೌತಮಿ ಹಾಗೂ ಮಂಜಣ್ಣ ಜೊತೆಗಿದ್ದಾಗ ಸಿಕ್ಕಾಪಟ್ಟೆ ನಗಾಡುತ್ತಾ ಇದ್ದರು. ಆದರೆ ಅವರಿಂದ ದೂರಾದ ಮೇಲೆ ಮಾನಸಿಕವಾಗಿ ಸ್ವಲ್ಪ ಕುಗ್ಗಿದ್ದರು. ಎಷ್ಟೋ ಸಲ ಕಣ್ಣೀರು ಹಾಕಿದ್ದರು. ಈಗ ಮೊದಲಿನಂತೆ ಆಗಿದ್ದಾರೆ. ನಗು ಮುಖದಲ್ಲಿಯೇ ಕಾಣಿಸುತ್ತಿದ್ದಾರೆ. ಆರಂಭದ ದಿನಗಳಲ್ಲಿ ಗೌತಮಿ ಹಾಗೂ ಮೋಕ್ಷಿತಾ ಮುಖದಲ್ಲಿ ಏನು ನಿಷ್ಕಲ್ಮಶ ನಗು ಇತ್ತೋ ಅದೇ ನಗು ಈ ಫೋಟೋದಲ್ಲಿ ಕಾಣಿಸ್ತಾ ಇದೆ.
ರೀ-ಕ್ರಿಯೇಟ್ ಆಗುತ್ತಾ ಆ ದಿನಗಳು
ಈಗಾಗಲೇ ಗೌತಮಿ ಜೊತೆಗೆ ಮತ್ತೆ ಫ್ರೆಂಡ್ಶಿಪ್ ಮುಂದುವರೆಸುವುದಕ್ಕೆ ಸಾಧ್ಯವಿಲ್ಲ ಅಂತ ಮೋಕ್ಷಿತಾ ಕ್ಲಾರಿಟಿ ಕೊಟ್ಟಾಗಿದೆ. ಆದರೆ ಫ್ಯಾನ್ಸ್‌ಗೆ ಅದೊಂದು ಆಸೆ. ಇಬ್ಬರ ನಗು ತುಂಬಾ ಚೆನ್ನಾಗಿ ಬಂದಿದೆ. ಇದೇ ಥರ ನಗ್ತಾ ನಗ್ತಾ ಮೊದಲಿನಂತೆ ಆಗಿ ಎಂದೇ ಕಮೆಂಟ್ ಮಾಡ್ತಾ ಇದಾರೆ. ಹೊರಗಡೆ ಇದ್ದಾಗ ಸ್ಟ್ರಾಂಗ್ ಆಗಿದ್ದ ಬಾಂಡಿಂಗ್ ಒಳಗಡೆ ಎನಿ ಟೈಮ್ ಒಟ್ಟಿಗೆ ಇದ್ದಾಗ, ಆಟ ಎಂದು ಬಂದಾಗ ಬಂದಿರುವ ಮನಸ್ತಾಪ ಕಡಿಮೆ ಆಗೋದು ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಅಥವಾ ಇದು ಮುಗಿದು ಹೋದ ಅಧ್ಯಾಯವ ಎಂದೇ ಪ್ರಶ್ನೆ ಮಾಡುತ್ತಿದ್ದಾರೆ.


Click it and Unblock the Notifications











